ಗದಗ: ಪತ್ನಿ, ಮಗುವನ್ನು ಕೊಂದು ಪತಿ ಆತ್ಮಹತ್ಯೆಗೆ ಶರಣು
Crime News: 2 ವರ್ಷಗಳ ಹಿಂದೆ ಮದುವೆಯಾಗಿದ್ದ ಸುಧಾ, ಮಲ್ಲಪ್ಪ ನಡುವೆ ಕೌಟುಂಬಿಕ ಕಲಹ ಏರ್ಪಟ್ಟಿತ್ತು. ಕೌಟುಂಬಿಕ ಕಲಹದಿಂದ ಪತ್ನಿ, ಮಗು ಕೊಂದು ಆತ್ಮಹತ್ಯೆ ಶಂಕೆ ವ್ಯಕ್ತವಾಗಿದೆ. ಸ್ಥಳಕ್ಕೆ ಗಜೇಂದ್ರಗಡ ಠಾಣೆ ಪೊಲೀಸರು ಭೇಟಿ ನೀಡಿ, ಪರಿಶೀಲನೆ ನಡೆಸಿದ್ದಾರೆ.
ಗದಗ: ಪತ್ನಿ, ಮಗುವನ್ನು ಕೊಂದು ಪತಿಯೂ ಆತ್ಮಹತ್ಯೆಗೆ ಶರಣಾದ ದುರ್ಘಟನೆ ಗದಗ ಜಿಲ್ಲೆಯ ಗಜೇಂದ್ರಗಡ ತಾಲೂಕಿನ ನಾಗೇಂದ್ರಗಡದ ಜಮೀನಿನಲ್ಲಿದ್ದ ಮನೆಯಲ್ಲಿ ನಡೆದಿದೆ. ಪತ್ನಿ ಮೊದಲು ಪತ್ನಿ ಸುಧಾ (24) ಹಾಗೂ 3 ತಿಂಗಳ ಮಗುವನ್ನು ಕೊಲೆ ಮಾಡಲಾಗಿದೆ. ಬಳಿಕ ಪತಿ ಮಲ್ಲಪ್ಪ ಗಡಾದ (30) ನೇಣಿಗೆ ಶರಣಾಗಿದ್ದಾರೆ. 2 ವರ್ಷಗಳ ಹಿಂದೆ ಮದುವೆಯಾಗಿದ್ದ ಸುಧಾ, ಮಲ್ಲಪ್ಪ ನಡುವೆ ಕೌಟುಂಬಿಕ ಕಲಹ ಏರ್ಪಟ್ಟಿತ್ತು. ಕೌಟುಂಬಿಕ ಕಲಹದಿಂದ ಪತ್ನಿ, ಮಗು ಕೊಂದು ಆತ್ಮಹತ್ಯೆ ಶಂಕೆ ವ್ಯಕ್ತವಾಗಿದೆ. ಸ್ಥಳಕ್ಕೆ ಗಜೇಂದ್ರಗಡ ಠಾಣೆ ಪೊಲೀಸರು ಭೇಟಿ ನೀಡಿ, ಪರಿಶೀಲನೆ ನಡೆಸಿದ್ದಾರೆ.
ದಾವಣಗೆರೆ: ಚಿಪ್ಪುಹಂದಿ ಸಾಗಿಸುತ್ತಿದ್ದ 18 ಅಂತರಾಜ್ಯ ಕಳ್ಳರ ಬಂಧನ ಚಿಪ್ಪುಹಂದಿ ಸಾಗಿಸುತ್ತಿದ್ದ 18 ಅಂತರಾಜ್ಯ ಕಳ್ಳರ ಬಂಧನ ಮಾಡಲಾಗಿದೆ. ಅಂತರಾಜ್ಯ ಕಳ್ಳರನ್ನ ದಾವಣಗೆರೆ ಪೊಲೀಸರು ಬಂಧಿಸಿದ್ದಾರೆ. ಹರಿಹರ ತಾಲೂಕಿನ ಹಣಗವಾಡಿ ಡಾಬಾ ಬಳಿ ದಾಳಿ ನಡೆಸಿ ಕಳ್ಳರನ್ನು ಬಂಧಿಸಲಾಗಿದೆ. ಬಂಧಿತರಿಂದ 67 ಕೆಜಿ ಚಿಪ್ಪು, 2 ಓಮ್ನಿ, ಒಂದು ಕಾರು ಜಪ್ತಿ ಮಾಡಲಾಗಿದೆ. ದಾವಣಗೆರೆ ಸಿಇಎನ್ ಠಾಣೆಯಲ್ಲಿ ಪ್ರಕರಣ ದಾಖಲು ಮಾಡಲಾಗಿದೆ.
ಶಿರಸಿ: 1 ಲಕ್ಷ ಬೆಲೆಬಾಳುವ ಚಿನ್ನದ ಸರ ಕಳ್ಳತನ ಖದೀಮರು ನಡೆದುಕೊಂಡು ಹೋಗುತ್ತಿದ್ದ ಮಹಿಳೆ ಸರ ಕದ್ದ ಘಟನೆ ಶಿರಸಿಯ ಭತ್ತದ ಓಣಿಯಲ್ಲಿ ನಡೆದಿದೆ. ಉತ್ತರಕನ್ನಡ ಜಿಲ್ಲೆ ಶಿರಸಿ ನಗರದ ಭತ್ತದ ಓಣಿಯಲ್ಲಿ ಘಟನೆ ಕಳ್ಳರು ಮಹಿಳೆ ಸರ ಎಗರಿಸಿದ್ದಾರೆ. ಕಾರಿನಲ್ಲಿ ಬಂದಿದ್ದ ದುಷ್ಕರ್ಮಿಗಳಿಂದ ಮಹಿಳೆಯ ಸರಗಳ್ಳತನ ಆಗಿದೆ. ಉಷಾ ದಾಮೋದರ ಪೈ ಎಂಬುವವರ ಸರ ಕಳ್ಳತನ ಆಗಿದೆ. 1,10,000 ಲಕ್ಷ ಮೌಲ್ಯದ ಸರವನ್ನು ಖದೀಮರು ಎಗರಿಸಿದ್ದಾರೆ. ಶಿರಸಿ ನಗರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲು ಮಾಡಲಾಗಿದೆ.
ಇದನ್ನೂ ಓದಿ: ಪ್ರತಿದಿನ 31 ಮಕ್ಕಳ ಆತ್ಮಹತ್ಯೆ: ಮಕ್ಕಳ ಮೇಲೇಕೆ ಇಷ್ಟು ಮಾನಸಿಕ ಒತ್ತಡ? ಎನ್ಸಿಆರ್ಬಿ ವರದಿಯ ವಿಶ್ಲೇಷಣೆ ಇಲ್ಲಿದೆ
ಇದನ್ನೂ ಓದಿ: ಹಾಸನ: ಎಟಿಎಂಗೆ ಹಾಕಲು ಕೊಂಡೊಯ್ಯುತ್ತಿದ್ದ ಹಣವನ್ನೇ ಎಗರಿಸಿದ ಕಳ್ಳರು; 42 ಲಕ್ಷ ರೂಪಾಯಿ ಕಳ್ಳತನ!