Gadag News: ಗಾಳಿಪಟದ ಮಾಂಜಾ ದಾರಕ್ಕೆ ಯುವಕನ ಕತ್ತು ಕಟ್; ಚಿಕಿತ್ಸೆ ಫಲಕಾರಿಯಾಗದೇ ಸಾವು

ನಗರದ ಡಂಬಳ ನಾಕಾ ಬಳಿ ಗಾಳಿಪಟ(Kite)ದ "ಮಾಂಜಾ" ದಾರಕ್ಕೆ ಸಿಲುಕಿ ಯುವಕನ ಕತ್ತು ಕಟ್ ಆಗಿತ್ತು. ಬಳಿಕ ಗದಗನ ಜಿಮ್ಸ್ ಆಸ್ಪತ್ರೆಗೆ ಸೇರಿಸಲಾಗಿತ್ತು. ಕಳೆದ ಆರು ದಿನಗಳಿಂದ ಚಿಕಿತ್ಸೆ ಪಡೆಯುತ್ತಿದ್ದ ರವಿ ಎಂಬ ಯುವಕ ಇಂದು (ಜೂ.9) ಚಿಕಿತ್ಸೆ ಫಲಕಾರಿಯಾಗದೆ ಧಾರುಣ ಅಂತ್ಯ ಕಂಡಿದ್ದಾನೆ.

Gadag News: ಗಾಳಿಪಟದ ಮಾಂಜಾ ದಾರಕ್ಕೆ ಯುವಕನ ಕತ್ತು ಕಟ್; ಚಿಕಿತ್ಸೆ ಫಲಕಾರಿಯಾಗದೇ ಸಾವು
ಗಾಳಿಪಟದ ದಾರಕ್ಕೆ ಸಿಲುಕಿ ಯುವಕ ಸಾವು
Follow us
ಕಿರಣ್ ಹನುಮಂತ್​ ಮಾದಾರ್
|

Updated on:Jun 09, 2023 | 2:49 PM

ಗದಗ: ನಗರದ ಡಂಬಳ ನಾಕಾ ಬಳಿ ಗಾಳಿಪಟ(Kite)ದ “ಮಾಂಜಾ” ದಾರಕ್ಕೆ ಸಿಲುಕಿ ಯುವಕನ ಕತ್ತು ಕಟ್ ಆಗಿತ್ತು. ಬಳಿಕ ಗದಗ(Gadag)ನ ಜಿಮ್ಸ್ ಆಸ್ಪತ್ರೆಗೆ ಸೇರಿಸಲಾಗಿತ್ತು. ಕಳೆದ ಆರು ದಿನಗಳಿಂದ ಚಿಕಿತ್ಸೆ ಪಡೆಯುತ್ತಿದ್ದ ರವಿ ಎಂಬ ಯುವಕ ಇಂದು (ಜೂ.9) ಚಿಕಿತ್ಸೆ ಫಲಕಾರಿಯಾಗದೆ ಧಾರುಣ ಅಂತ್ಯ ಕಂಡಿದ್ದಾನೆ. ಪಿ.ರವಿ ಮೃತ ಯುವಕ. ವಿಜಯನಗರ ಜಿಲ್ಲೆಯ ಹಗರಿಬೊಮ್ಮನಹಳ್ಳಿ ತಾಲೂಕಿನ ನಾರಾಯಣ ದೇವರಕೆರೆ ನಿವಾಸಿಯಾದ ರವಿ. ಗದಗ ನಗರದ ಬಾರ್​ವೊಂದರಲ್ಲಿ ಕೆಲಸ ಮಾಡುತ್ತಿದ್ದ. ಕಳೆದ ಭಾನುವಾರ(ಜೂ.4) ಕಾರ ಹುಣ್ಣಿಮೆಯಂದು ಅವಳಿ ನಗರದಲ್ಲಿ ಗಾಳಿಪಟ ಹಾರಾಡಿಸಲಾಗುತ್ತಿತ್ತು. ಈ ವೇಳೆ ಬೈಕ್ ಮೇಲೆ ಹೋಗುವಾಗ ಗಾಳಿಪಟದ ದಾರ ಆತನ ಕತ್ತು ಸೀಳಿತ್ತು. ಇದೀಗ ಯುವಕ ಸಾವನ್ನಪ್ಪಿದ್ದು, ಮಗನನ್ನು ಕಳೆದುಕೊಂಡು ತಾಯಿ ಕಣ್ಣೀರು ಹಾಕುತ್ತಿದ್ದಾಳೆ. ಈ ಕುರಿತು ಗದಗ ಶಹರ ಪೊಲೀಸ ಠಾಣಾ ವ್ಯಾಪ್ತಿಯಲ್ಲಿ ಘಟನೆ ನಡೆದಿದೆ.

ನಾಲ್ಕೈದು‌ ಜನರ ಜೀವಕ್ಕೆ ಕುತ್ತು ತಂದ ನಿಷೇಧಿತ ಗಾಳಿಪಟ ಮಾಂಜಾ ದಾರ

ಗದಗ: ಗಾಳಿಪಟ ಹಾರಿಸಲು ಬಳಕೆ ಮಾಡುವ “ಮಾಂಜಾ” ದಾರ ನಿಷೇಧ ಕಾಗದದಲ್ಲಷ್ಟೇ ಉಳಿದಿದೆ. ಅಪಾಯಕಾರಿ ಮಾಂಜಾ ದಾರ ಮಾರಾಟ, ಬಳಕೆ ನಗರದಲ್ಲಿ ಎಗ್ಗಿಲ್ಲದೆ ನಡೆಯುತ್ತಿದ್ದು, ಫ್ಯಾನ್ಸಿ ಸ್ಟೋರ್‌ಗಳು, ಸಣ್ಣಪುಟ್ಟ ಅಂಗಡಿಗಳಲ್ಲಿ ಈ ದಾರವು ಸುಲಭವಾಗಿ ಸಿಗುತ್ತಿದೆ. ಇವುಗಳು ಪ್ರಾಣಿ-ಪಕ್ಷಿಗಳು ಮಾತ್ರವಲ್ಲದೆ ಮನುಷ್ಯರ ಪ್ರಾಣಕ್ಕೂ ಕಂಟಕವಾಗಿವೆ. ಗದಗ-ಬೆಟಗೇರಿ ಅವಳಿ ನಗರದ ರಸ್ತೆಯಲ್ಲಿ ಹರಿತವಾದ ಗಾಳಿಪಟ ದಾರದಿಂದ ಬೈಕ್ ಸವಾರರ ಕತ್ತು, ಕಾಲು, ಕೈಗೆ ಗಾಯವಾಗಿದೆ. ಕಾರಹುಣ್ಣಿಮೆ ಒಂದೇ ದಿನ ಓರ್ವ ರೈಲ್ವೇ ಪೊಲೀಸ್ ಸೇರಿ ನಾಲ್ಕೈದು‌ ಜನರಿಗೆ ಗಾಯವಾಗಿದೆ.

ಇದನ್ನೂ ಓದಿ:ಬೆಳಗಾವಿಯಲ್ಲಿ ಗಾಳಿಪಟದ ಮಾಂಜಾ ದಾರ ಕುತ್ತಿಗೆಗೆ ಸಿಲುಕಿ 6 ವರ್ಷದ ಬಾಲಕ ಸಾವು

ಇನ್ನು ಬ್ಯಾನ್ ಆದ ಮಾಂಝಾ ದಾರದಿಂದ ಗಾಳಿಪಟ ಹಾರಾಟ ಮಾಡಲಾಗುತ್ತಿದೆ. ಇದರಿಂದ ಪಕ್ಷಿಗಳಿಗೆ ಮತ್ತು ಮನುಷ್ಯರ ಜೀವಕ್ಕೆ ಕುತ್ತು ಇದೆ. ಇದನ್ನು ಮಾರಾಟ ಮತ್ತು ಬಳಕೆ ಮಾಡದಂತೆ ತಡೆಗಟ್ಟಬೇಕೆಂದು ಸಂಘಟನೆಗಳು 15 ದಿನಗಳ ಹಿಂದೆಯೇ ಜಿಲ್ಲಾಧಿಕಾರಿಗಳಿಗೆ ಮನವಿ ಸಲ್ಲಿಸಿದ್ದಾರೆ. ಆದರೂ ಕೂಡ ಜಿಲ್ಲಾಡಳಿತ ಡೋಂಟ್​ ಕೇರ್​ ಎಂದಿದೆ. ಆದರೀಗ ಗಾಳಿಪಟದ ದಾರಕ್ಕೆ ಅಮಾಯಕ ಯುವಕ ಬಲಿಯಾಗಿದ್ದು ಮಾತ್ರ ಶೋಚನೀಯ.

ಇನ್ನಷ್ಟು ರಾಜ್ಯಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ

Published On - 2:48 pm, Fri, 9 June 23

ವಿಶಾಖಪಟ್ಟಣದ ದಾರಿಯುದ್ಧಕ್ಕೂ ಮೋದಿಗೆ ಹೂವಿನ ಸುರಿಮಳೆ
ವಿಶಾಖಪಟ್ಟಣದ ದಾರಿಯುದ್ಧಕ್ಕೂ ಮೋದಿಗೆ ಹೂವಿನ ಸುರಿಮಳೆ
ಮಹಾಕುಂಭದ ವಿಶೇಷ ಹಾಡು ಬಿಡುಗಡೆ ಮಾಡಿದ ಕೇಂದ್ರ ಸಚಿವ ಅಶ್ವಿನಿ ವೈಷ್ಣವ್
ಮಹಾಕುಂಭದ ವಿಶೇಷ ಹಾಡು ಬಿಡುಗಡೆ ಮಾಡಿದ ಕೇಂದ್ರ ಸಚಿವ ಅಶ್ವಿನಿ ವೈಷ್ಣವ್
ಪೊಲೀಸ್ ಠಾಣೆಯ ಚಪಲಚೆನ್ನಿಗರಾಯ ರಾಮಚಂದ್ರಪ್ಪನ ಕರಾಳ ಮುಖ ಬಿಚ್ಚಿಟ್ಟ ಮಹಿಳೆ
ಪೊಲೀಸ್ ಠಾಣೆಯ ಚಪಲಚೆನ್ನಿಗರಾಯ ರಾಮಚಂದ್ರಪ್ಪನ ಕರಾಳ ಮುಖ ಬಿಚ್ಚಿಟ್ಟ ಮಹಿಳೆ
ಸಿಎಂ ಮುಂದೆ ಶರಣಾದ ಬಳಿಕ ನಕ್ಸಲ್​ ನಾಯಕಿ ಹೇಳಿದ್ದೇನು?
ಸಿಎಂ ಮುಂದೆ ಶರಣಾದ ಬಳಿಕ ನಕ್ಸಲ್​ ನಾಯಕಿ ಹೇಳಿದ್ದೇನು?
ಗಾಂಧಿ ಭಾರತ ಸಮಾವೇಶ ನಿಂತ ಹಂತದಿಂದಲೇ ಪುನರಾರಂಭ: ಶಿವಕುಮಾರ್
ಗಾಂಧಿ ಭಾರತ ಸಮಾವೇಶ ನಿಂತ ಹಂತದಿಂದಲೇ ಪುನರಾರಂಭ: ಶಿವಕುಮಾರ್
ಕಾಡಿಗೆ ಗುಡ್​ಬೈ ಹೇಳಿ ಶರಣಾಗತಿಯಾದ ನಕ್ಸಲರಿಗೆ ಸಂವಿಧಾನ ಪುಸ್ತಕ ನೀಡಿದ CM
ಕಾಡಿಗೆ ಗುಡ್​ಬೈ ಹೇಳಿ ಶರಣಾಗತಿಯಾದ ನಕ್ಸಲರಿಗೆ ಸಂವಿಧಾನ ಪುಸ್ತಕ ನೀಡಿದ CM
ಗಾಂಧಿ ಎಐಸಿಸಿ ನಾಯಕತ್ವ: ಶತಮಾನೋತ್ಸವ ಕಾರ್ಯಕ್ರಮ ಬಗ್ಗೆ ಶಿವಕುಮಾರ್ ಮಾತು
ಗಾಂಧಿ ಎಐಸಿಸಿ ನಾಯಕತ್ವ: ಶತಮಾನೋತ್ಸವ ಕಾರ್ಯಕ್ರಮ ಬಗ್ಗೆ ಶಿವಕುಮಾರ್ ಮಾತು
ಆಂಧ್ರದ ವಿಶಾಖಪಟ್ಟಣದಲ್ಲಿ ಪ್ರಧಾನಿ ಮೋದಿ ರೋಡ್ ಶೋ
ಆಂಧ್ರದ ವಿಶಾಖಪಟ್ಟಣದಲ್ಲಿ ಪ್ರಧಾನಿ ಮೋದಿ ರೋಡ್ ಶೋ
ಚನ್ನಪಟ್ಟಣದಲ್ಲಿ ಬಿಜೆಪಿಯೇ ಕುಮಾರಸ್ವಾಮಿಗೆ ಮೋಸ ಮಾಡಿದೆ: ಕೃಷ್ಣ ಭೈರೇಗೌಡ
ಚನ್ನಪಟ್ಟಣದಲ್ಲಿ ಬಿಜೆಪಿಯೇ ಕುಮಾರಸ್ವಾಮಿಗೆ ಮೋಸ ಮಾಡಿದೆ: ಕೃಷ್ಣ ಭೈರೇಗೌಡ
ಸೂಪರ್‌ಮ್ಯಾನ್‌ನಂತೆ ಗಾಳಿಯಲ್ಲಿ ಹಾರಿ ಅದ್ಭುತ ಕ್ಯಾಚ್ ಹಿಡಿದ ಕಿವೀಸ್ ವೇಗಿ
ಸೂಪರ್‌ಮ್ಯಾನ್‌ನಂತೆ ಗಾಳಿಯಲ್ಲಿ ಹಾರಿ ಅದ್ಭುತ ಕ್ಯಾಚ್ ಹಿಡಿದ ಕಿವೀಸ್ ವೇಗಿ