ಗದಗ: ನಗರದ ಡಂಬಳ ನಾಕಾ ಬಳಿ ಗಾಳಿಪಟ(Kite)ದ “ಮಾಂಜಾ” ದಾರಕ್ಕೆ ಸಿಲುಕಿ ಯುವಕನ ಕತ್ತು ಕಟ್ ಆಗಿತ್ತು. ಬಳಿಕ ಗದಗ(Gadag)ನ ಜಿಮ್ಸ್ ಆಸ್ಪತ್ರೆಗೆ ಸೇರಿಸಲಾಗಿತ್ತು. ಕಳೆದ ಆರು ದಿನಗಳಿಂದ ಚಿಕಿತ್ಸೆ ಪಡೆಯುತ್ತಿದ್ದ ರವಿ ಎಂಬ ಯುವಕ ಇಂದು (ಜೂ.9) ಚಿಕಿತ್ಸೆ ಫಲಕಾರಿಯಾಗದೆ ಧಾರುಣ ಅಂತ್ಯ ಕಂಡಿದ್ದಾನೆ. ಪಿ.ರವಿ ಮೃತ ಯುವಕ. ವಿಜಯನಗರ ಜಿಲ್ಲೆಯ ಹಗರಿಬೊಮ್ಮನಹಳ್ಳಿ ತಾಲೂಕಿನ ನಾರಾಯಣ ದೇವರಕೆರೆ ನಿವಾಸಿಯಾದ ರವಿ. ಗದಗ ನಗರದ ಬಾರ್ವೊಂದರಲ್ಲಿ ಕೆಲಸ ಮಾಡುತ್ತಿದ್ದ. ಕಳೆದ ಭಾನುವಾರ(ಜೂ.4) ಕಾರ ಹುಣ್ಣಿಮೆಯಂದು ಅವಳಿ ನಗರದಲ್ಲಿ ಗಾಳಿಪಟ ಹಾರಾಡಿಸಲಾಗುತ್ತಿತ್ತು. ಈ ವೇಳೆ ಬೈಕ್ ಮೇಲೆ ಹೋಗುವಾಗ ಗಾಳಿಪಟದ ದಾರ ಆತನ ಕತ್ತು ಸೀಳಿತ್ತು. ಇದೀಗ ಯುವಕ ಸಾವನ್ನಪ್ಪಿದ್ದು, ಮಗನನ್ನು ಕಳೆದುಕೊಂಡು ತಾಯಿ ಕಣ್ಣೀರು ಹಾಕುತ್ತಿದ್ದಾಳೆ. ಈ ಕುರಿತು ಗದಗ ಶಹರ ಪೊಲೀಸ ಠಾಣಾ ವ್ಯಾಪ್ತಿಯಲ್ಲಿ ಘಟನೆ ನಡೆದಿದೆ.
ಗದಗ: ಗಾಳಿಪಟ ಹಾರಿಸಲು ಬಳಕೆ ಮಾಡುವ “ಮಾಂಜಾ” ದಾರ ನಿಷೇಧ ಕಾಗದದಲ್ಲಷ್ಟೇ ಉಳಿದಿದೆ. ಅಪಾಯಕಾರಿ ಮಾಂಜಾ ದಾರ ಮಾರಾಟ, ಬಳಕೆ ನಗರದಲ್ಲಿ ಎಗ್ಗಿಲ್ಲದೆ ನಡೆಯುತ್ತಿದ್ದು, ಫ್ಯಾನ್ಸಿ ಸ್ಟೋರ್ಗಳು, ಸಣ್ಣಪುಟ್ಟ ಅಂಗಡಿಗಳಲ್ಲಿ ಈ ದಾರವು ಸುಲಭವಾಗಿ ಸಿಗುತ್ತಿದೆ. ಇವುಗಳು ಪ್ರಾಣಿ-ಪಕ್ಷಿಗಳು ಮಾತ್ರವಲ್ಲದೆ ಮನುಷ್ಯರ ಪ್ರಾಣಕ್ಕೂ ಕಂಟಕವಾಗಿವೆ. ಗದಗ-ಬೆಟಗೇರಿ ಅವಳಿ ನಗರದ ರಸ್ತೆಯಲ್ಲಿ ಹರಿತವಾದ ಗಾಳಿಪಟ ದಾರದಿಂದ ಬೈಕ್ ಸವಾರರ ಕತ್ತು, ಕಾಲು, ಕೈಗೆ ಗಾಯವಾಗಿದೆ. ಕಾರಹುಣ್ಣಿಮೆ ಒಂದೇ ದಿನ ಓರ್ವ ರೈಲ್ವೇ ಪೊಲೀಸ್ ಸೇರಿ ನಾಲ್ಕೈದು ಜನರಿಗೆ ಗಾಯವಾಗಿದೆ.
ಇದನ್ನೂ ಓದಿ:ಬೆಳಗಾವಿಯಲ್ಲಿ ಗಾಳಿಪಟದ ಮಾಂಜಾ ದಾರ ಕುತ್ತಿಗೆಗೆ ಸಿಲುಕಿ 6 ವರ್ಷದ ಬಾಲಕ ಸಾವು
ಇನ್ನು ಬ್ಯಾನ್ ಆದ ಮಾಂಝಾ ದಾರದಿಂದ ಗಾಳಿಪಟ ಹಾರಾಟ ಮಾಡಲಾಗುತ್ತಿದೆ. ಇದರಿಂದ ಪಕ್ಷಿಗಳಿಗೆ ಮತ್ತು ಮನುಷ್ಯರ ಜೀವಕ್ಕೆ ಕುತ್ತು ಇದೆ. ಇದನ್ನು ಮಾರಾಟ ಮತ್ತು ಬಳಕೆ ಮಾಡದಂತೆ ತಡೆಗಟ್ಟಬೇಕೆಂದು ಸಂಘಟನೆಗಳು 15 ದಿನಗಳ ಹಿಂದೆಯೇ ಜಿಲ್ಲಾಧಿಕಾರಿಗಳಿಗೆ ಮನವಿ ಸಲ್ಲಿಸಿದ್ದಾರೆ. ಆದರೂ ಕೂಡ ಜಿಲ್ಲಾಡಳಿತ ಡೋಂಟ್ ಕೇರ್ ಎಂದಿದೆ. ಆದರೀಗ ಗಾಳಿಪಟದ ದಾರಕ್ಕೆ ಅಮಾಯಕ ಯುವಕ ಬಲಿಯಾಗಿದ್ದು ಮಾತ್ರ ಶೋಚನೀಯ.
ಇನ್ನಷ್ಟು ರಾಜ್ಯಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ
Published On - 2:48 pm, Fri, 9 June 23