Gadag: ಏಷ್ಯಾದಲ್ಲೇ ಅತಿ ಹೆಚ್ಚು ಗಾಳಿ ಬೀಸುವ ಪ್ರದೇಶ, ಪವನ ವಿದ್ಯುತ್ ಉತ್ಪಾದನೆಯಲ್ಲಿ ನಂಬರ್​ 1, ಹೇಗಿದೆ ಈಗಿನ ಪರಿಸ್ಥಿತಿ

wind power generation: ಪವನ ವಿದ್ಯುತ್ ಉತ್ಪಾದನೆಯಲ್ಲಿ ಗದಗ ಜಿಲ್ಲೆ ಪ್ರಥಮ ಸ್ಥಾನಕ್ಕೆ ಏರಿದೆ. ಇಲ್ಲಿಯೇ ವಿದ್ಯುತ್ ಉತ್ಪಾದನೆ ಮಾಡಿದ್ರು ಯಾಕೆ ದುಬಾರಿ ಬಿಲ್ ಬರ್ತಾಯಿದೆ ಎನ್ನುವ ಪ್ರಶ್ನೆ ಜನರನ್ನು ಕಾಡ್ತಾಯಿದೆ.

Gadag: ಏಷ್ಯಾದಲ್ಲೇ ಅತಿ ಹೆಚ್ಚು ಗಾಳಿ ಬೀಸುವ ಪ್ರದೇಶ, ಪವನ ವಿದ್ಯುತ್ ಉತ್ಪಾದನೆಯಲ್ಲಿ ನಂಬರ್​ 1, ಹೇಗಿದೆ ಈಗಿನ ಪರಿಸ್ಥಿತಿ
ಪವನ ವಿದ್ಯುತ್ ಉತ್ಪಾದನೆಯಲ್ಲಿ ನಂಬರ್​ 1, ಹೇಗಿದೆ ಈಗಿನ ಪರಿಸ್ಥಿತಿ
Follow us
ಸಂಜೀವ ಕುಮಾರ್​ ಪಾಂಡ್ರೆ, ಗದಗ
| Updated By: ಸಾಧು ಶ್ರೀನಾಥ್​

Updated on:Jul 11, 2023 | 3:40 PM

ಅದು ಏಷ್ಯಾ (Asia) ಖಂಡದಲ್ಲೇ ಅತೀ ಹೆಚ್ಚು ಗಾಳಿ ಬೀಸುವ ಪ್ರದೇಶ. ಹೀಗಾಗಿ ಆ ಜಿಲ್ಲೆಯಲ್ಲಿ ಎಲ್ಲಿ ನೋಡಿದ್ರೂ ಪವನ ವಿದ್ಯುತ್ ಯಂತ್ರಗಳು ತಲೆ ಎತ್ತಿವೆ. ಭರ್ ಭರ್ ಅಂತ ತಿರುಗುತ್ತಿವೆ. ಹೀಗಾಗಿ ಆ ಜಿಲ್ಲೆ ರಾಜ್ಯದಲ್ಲೇ ಅತಿ ಹೆಚ್ಚು ವಿದ್ಯುತ್ ಉತ್ಪಾದನೆ ಮಾಡುವ ಜಿಲ್ಲೆ ಎಂಬ ಹೆಗ್ಗಳಿಕೆಗೆ ಪಾತ್ರವಾಗಿದೆ. ಹೌದು ಮುದ್ರಣ ಕಾಶಿ ಎಂದೂ ಪ್ರಸಿದ್ಧಿಯಾಗಿರುವ ಈ ಜಿಲ್ಲೆ ಇಡೀ ರಾಜ್ಯಕ್ಕೆ ಹೆಚ್ಚು ಪವನ ವಿದ್ಯುತ್ ಉತ್ಪಾದನೆ (Wind Power) ಮಾಡುವ ಮೂಲಕ ಮೈಲಿಗಲ್ಲು ಸಾಧಿಸಿದೆ. ಅದು ಯಾವುದು ಪವರ್ ನಂಬರ್ ಒನ್ ಜಿಲ್ಲೆ ಅಂತೀರಾ ಈ ಸ್ಟೋರಿ ಓದಿ… ರಾಜ್ಯದ ನಂಬರ್ ಒನ್ ಪವರ್ ಜಿಲ್ಲೆ ಹೆಗ್ಗಳಿಗೆ ಪಡೆದ ಮುದ್ರಣ ಕಾಶಿ…! ಎಲ್ಲಿ ನೋಡಿದ್ರೂ ಪವನ ವಿದ್ಯುತ್ ಯಂತ್ರಗಳ ಭರಾಟೆ…! ಏಷ್ಯಾ ಖಂಡದಲ್ಲೇ ಅತೀ ವೇಗವಾಗಿ ಗಾಳಿ ಬಿಸೋ ಕಪ್ಪತ್ತಗುಡ್ಡ ಪ್ರದೇಶ ಹೆಗ್ಗಳಿಕೆಗೆ ಪಾತ್ರವಾಗಿದೆ! ಇಡೀ ರಾಜ್ಯದಲ್ಲಿ ಪವನ ವಿದ್ಯುತ್ ಉತ್ಪಾದನೆ ಮಾಡುವಲ್ಲಿ ಮುದ್ರಣಕಾಶಿ ಫಸ್ಟ್..! ದೇಶದಲ್ಲಿ ವಪರ್ ಉತ್ಪಾದನೆಯಲ್ಲಿ ಕರ್ನಾಟಕ ನಾಲ್ಕನೇ ಸ್ಥಾನ, ರಾಜ್ಯದಲ್ಲಿ ಗದಗ ಪ್ರಥಮ (Gadag District)!

ಎಲ್ಲಿ ಕಣ್ಣು ಹಾಯಿಸಿದ್ರೂ ಪವನ ಯಂತ್ರಗಳ ಕಲರವ. ಭರ್ ಭರ್ ಅಂತ ಸದ್ದು ಮಾಡಿ ಭರ್ಜರಿ ವಿದ್ಯುತ್ ಉತ್ಪಾದನೆ ಮಾಡ್ತಾಯಿರೋ ಯಂತ್ರಗಳು. ಹೀಗಾಗಿ ರಾಜ್ಯದಲ್ಲೇ ಅತೀ ಹೆಚ್ಚು ವಿದ್ಯುತ್ ಉತ್ಪಾದನೆ ಮಾಡುವ ಜಿಲ್ಲೆ ಎಂಬ ಹೆಗ್ಗಳಿಕೆ. ಹೌದು ಮುದ್ರಣ ಕಾಶಿ ಗದಗ ಜಿಲ್ಲೆ ಇಡೀ ಏಷ್ಯಾ ಖಂಡದಲ್ಲೇ ಅತೀ ಹೆಚ್ಚು ಗಾಳಿ ಬಿಸುವ ಪ್ರದೇಶ. ಈ ಗಾಳಿ ಇವಾಗ ಜಿಲ್ಲೆಗೆ ಭಾರಿ ವರದಾನವಾಗಿದೆ.

ಹೌದು ಗದಗ ಜಿಲ್ಲೆಯಲ್ಲಿ ಅತೀ ಹೆಚ್ಚು ಪವನ್ ಯಂತ್ರಗಳನ್ನು ಆಳವಡಿಸಲಾಗಿದೆ. ಹೀಗಾಗಿ ಇಡೀ ರಾಜ್ಯದಲ್ಲಿ ಅತೀ ಹೆಚ್ಚು ಪವನ್ ವಿದ್ಯುತ್ ಉತ್ಪಾದನೆ ಮಾಡಲಾಗುತ್ತಿದೆ. ಗದಗ ಜಿಲ್ಲೆಯ, ಕಪ್ಪತ್ತಗುಡ್ಡ ಹಾಗೂ ಗಜೇಂದ್ರಗಡ ಬೆಟ್ಟ, ಲಕ್ಕುಂಡಿ, ಹರ್ತಿ, ನರೇಗಲ್, ಸೇರಿದಂತೆ ಜಿಲ್ಲೆಯಾದ್ಯಂತ 687 ಕ್ಕೂ ಹೆಚ್ಚು ಪವನ ಯಂತ್ರಗಳನ್ನು ಅಳವಡಿಸಲಾಗಿದೆ. ಇನ್ನೂ ಅಳವಡಿಸುವ ಕಾರ್ಯವೂ ನಡೆದಿದೆ. ಹೀಗಾಗಿ ರಾಜ್ಯದಲ್ಲೇ ಅತೀ ಹೆಚ್ಚು ವಿದ್ಯುತ್ ಉತ್ಪಾದನೆ ಮಾಡುವ ಜಿಲ್ಲೆಯ ಹೆಗ್ಗಳಿಕೆಗೆ ಗದಗ ಜಿಲ್ಲೆ ಪಾತ್ರವಾಗಿದೆ.

ಪ್ರತಿ ತಿಂಗಳು 50 ರಿಂದ‌ 60 ಮಿಲಿಯನ್ ಯೂನಿಟ್ ವಿದ್ಯುತ್ ಉತ್ಪಾದನೆ ಮಾಡಲಾಗುತ್ತಿದೆ. 50 ರಿಂದ 60 ಮಿಲಿಯನ್ ಯೂನಿಟ್ ವಿದ್ಯುತ್ ರಾಜ್ಯಕ್ಕೆ ಸರಬರಾಜು ಮಾಡಲಾಗುತ್ತಿದೆ. ಭಾರತ ದೇಶದಲ್ಲಿ ಕರ್ನಾಟಕ ನಾಲ್ಕನೇ ಸ್ಥಾನದಲ್ಲಿದ್ರೆ, ರಾಜ್ಯದಲ್ಲಿ ವಿಂಡ್ ಪ್ಯಾನ್ ಗಳಿಂದ ಗದಗ ಜಿಲ್ಲೆ ಅತೀ ಹೆಚ್ಚು ವಿದ್ಯುತ್ ಉತ್ಪಾದನೆ ಮಾಡುತ್ತಿದೆ.‌ ಹೀಗಾಗಿ ರಾಜ್ಯಕ್ಕೆ ಇದರಿಂದ ಸಾಕಷ್ಟು ಅನಕೂಲವಾಗುತ್ತಿದೆ. ಇನ್ನೂ ಹೆಚ್ವಿನ ವಿದ್ಯುತ್ ಯಂತ್ರಗಳನ್ನು ಅಳವಡಿಸಲಾಗುತ್ತಿದೆ. ಗದಗ ಜಿಲ್ಲೆ ಪವನ ಯಂತ್ರಗಳ ಅಳವಡಿಕೆಗೆ ಹೇಳಿ ಮಾಡಿಸಿದ ಪ್ರದೇಶವಾಗಿದೆ. ಉತ್ತಮವಾದ ಗಾಳಿ ಇರೋದಿರಿಂದ ಪವನ್ ಯಂತ್ರಗಳಿಂದ ವಿದ್ಯುತ್ ಉತ್ಪಾದನೆ ಮಾಡಲು ಸಹಕಾರಿಯಾಗಿದೆ ಅಂತಾರೆ ಅಧಿಕಾರಿಗಳು.

ಇನ್ನು ಗದಗ ಜಿಲ್ಲೆಯಲ್ಲಿ ಸರ್ಕಾರದ ಹಾಗೂ ಖಾಸಗಿ ಮಾಲಿಕತ್ವದ ನೂರಾರು ವಿಂಡ್ ಫ್ಯಾನ್ ‌ಗಳಿವೆ. ಸರ್ಕಾರಕ್ಕೆ ಹಾಗೂ ಖಾಸಗಿಯಾಗಿ ಕೂಡಾ ವಿದ್ಯುತ್ ಮಾರಾಟ ಮಾಡಲಾಗುತ್ತಿದೆ. ವಿಂಡ ಫ್ಯಾನ್ ನಿಂದ ವಿದ್ಯುತ್ ಉತ್ಪಾದನೆ ಮಾಡಲು ಸಾಕಷ್ಟು ಅನುಕೂಲತೆ ಇರೋದರಿಂದ ವಿಂಡ್ ಕಂಪನಿಗಳು ಕೋಟ್ಯಾಂತರ ರೂಪಾಯಿ ವೆಚ್ಚ ಮಾಡಿ ಪವನ ವಿದ್ಯುಂತ್ ಯಂತ್ರಗಳು ಅಳವಡಿಸುತ್ತಿವೆ.

ಈ ಮೂಲಕ ಭರ್ಜರಿ ವಿದ್ಯುತ್ ಉತ್ಪಾದನೆ ‌ಮಾಡ್ತಾಯಿವೆ. ಇದರಿಂದ ಕೆಲ ಸ್ಥಳೀಯ ರೈತರಿಗೆ ಅನುಕೂಲವಾದ್ರೆ, ಇನ್ನೂ ಕೆಲ ರೈತರಿಗೆ ಅನಾನಕೂಲವೂ ಆಗಿದೆ.. ಹೀಗಾಗಿ ಹೆಚ್ಚು ಹೆಚ್ಚು ರೈತರು ತಮ್ಮ ಜಮೀನಿನಲ್ಲಿ ವಿಂಡ್ ಪ್ಯಾನ್ ಅಳವಡಿಕೆ ಮಾಡಲು ಪರವಾನಗಿ ನೀಡ್ತಾಯಿದ್ದಾರೆ. ‌ಪ್ರತಿ ತಿಂಗಳು ಮಿಲಿಯನ್ ಲೆಕ್ಕದಲ್ಲಿ ವಿದ್ಯುತ್ ಉತ್ಪಾದನೆ ಮಾಡಿ, ಇಡೀ ರಾಜ್ಯದಲ್ಲಿ ಗದಗ ಜಿಲ್ಲೆ ನಂಬರ್ ಬಂದಿರುವುದಕ್ಕೆ ಜನ ಕೂಡಾ ಹರ್ಷ ವ್ಯಕ್ತಪಡಿಸಿದ್ದಾರೆ.

ರಾಜ್ಯದಲ್ಲಿ ವಿದ್ಯುತ್ ಬಿಲ್ ಹೆಚ್ಚಳವಾಗಿದ್ದು, ಉದ್ಯಮ ಹಾಗೂ ಗ್ರಾಹಕರು ಸಂಕಷ್ಟ ಎದರಿಸುತ್ತಿದ್ದಾರೆ. ಆದ್ರೆ, ಪವನ ವಿದ್ಯುತ್ ಉತ್ಪಾದನೆಯಲ್ಲಿ ಗದಗ ಜಿಲ್ಲೆ ಪ್ರಥಮ ಸ್ಥಾನಕ್ಕೆ ಏರಿದೆ. ಇಲ್ಲಿಯೇ ವಿದ್ಯುತ್ ಉತ್ಪಾದನೆ ಮಾಡಿದ್ರು ಯಾಕೆ ದುಬಾರಿ ಬಿಲ್ ಬರ್ತಾಯಿದೆ ಎನ್ನುವ ಪ್ರಶ್ನೆ ಜನರನ್ನು ಕಾಡ್ತಾಯಿದೆ. ಹೀಗಾಗಿ ದುಬಾರಿ ವಿದ್ಯುತ್ ಬಿಲ್ ಕಡಿಮೆ ಮಾಡಿ, ಸ್ಥಳೀಯ ವಿದ್ಯುತ್ ಬಳಿಕೆ ಮಾಡಿಕೊಂಡು, ಕಡಿಮೆ ದರದಲ್ಲಿ ವಿದ್ಯುತ್ ಪೂರೈಕೆ ಮಾಡಲು ಸರ್ಕಾರ ಸೂಕ್ತವಾದ ಕ್ರಮ ಕೈಗೊಳ್ಳಬೇಕಾಗಿದೆ.

ಗದಗ ಜಿಲ್ಲಾ ವರದಿಗಳನ್ನು ಓದಲು ಇಲ್ಲಿ ಕ್ಲಿಕ್  ಮಾಡಿ

Published On - 3:36 pm, Tue, 11 July 23