AQI
Sign In

By signing in or creating an account, you agree with Associated Broadcasting Company's Terms & Conditions and Privacy Policy.

ಕೂಡ್ಲಿ ಮಠದ ಕೋಟ್ಯಂತರ ರೂ ಆಸ್ತಿ ಅಕ್ರಮ ಮಾರಾಟಕ್ಕೆ ಪ್ಲ್ಯಾನ್: ಕಾಂಗ್ರೆಸ್ ನಾಯಕಿ ಹೆಸರಿಗೆ ಹಕ್ಕು ಬದಲಾವಣೆ

ಗದಗ ಜಿಲ್ಲೆಯಲ್ಲಿ ಕೂಡ್ಲಿ ಶ್ರೀಂಗೇರಿ ಮಠದ ಕೋಟ್ಯಂತರ ರೂ ಮೌಲ್ಯದ ಆಸ್ತಿಯನ್ನು ಕಾನೂನುಬಾಹಿರವಾಗಿ ಮಾರಾಟ ಮಾಡಿರುವ ಘಟನೆ ಬೆಳಕಿಗೆ ಬಂದಿದೆ. ಕಾಂಗ್ರೆಸ್ ನಾಯಕಿ ಹಾಗೂ ತಹಶೀಲ್ದಾರ್​, ಸಬ್-ರಿಜಿಸ್ಟರ್ ಲಂಚ ಪಡೆದಿದ್ದು, ಅಕ್ರಮದಲ್ಲಿ ಭಾಗಿಯಾಗಿದ್ದಾರೆ ಎಂದು ಆರೋಪಿಸಲಾಗಿದೆ. ಪೋಕಳಾ ಹಕ್ಕುದಾರರು ಸೇರಿದಂತೆ ಗ್ರಾಮಸ್ಥರು ಈ ಬಗ್ಗೆ ಆಕ್ರೋಶ ವ್ಯಕ್ತಪಡಿಸಿದ್ದಾರೆ.

ಕೂಡ್ಲಿ ಮಠದ ಕೋಟ್ಯಂತರ ರೂ ಆಸ್ತಿ ಅಕ್ರಮ ಮಾರಾಟಕ್ಕೆ ಪ್ಲ್ಯಾನ್: ಕಾಂಗ್ರೆಸ್ ನಾಯಕಿ ಹೆಸರಿಗೆ ಹಕ್ಕು ಬದಲಾವಣೆ
21 ಎಕರೆ ಜಮೀನು ಮಾರಾಟಕ್ಕೆ ಪ್ಲ್ಯಾನ್
ಸಂಜೀವ ಕುಮಾರ್​ ಪಾಂಡ್ರೆ, ಗದಗ
| Edited By: |

Updated on:Jun 27, 2025 | 10:16 AM

Share

ಗದಗ, ಜೂನ್​ 27: ಶಿವಮೊಗ್ಗ ಜಿಲ್ಲೆಯ ಕೂಡ್ಲಿ‌ ಶ್ರೀಂಗೇರಿ ಮಠದ (Kudali Sringeri Mata) ಆಸ್ತಿ (property) ರಾಜ್ಯದ ಹಲವು ಜಿಲ್ಲೆಗಳಲ್ಲಿ ಇವೆ. ಗದಗ ಜಿಲ್ಲೆಯಲ್ಲೂ ಈ ಮಠದ ಕೋಟ್ಯಂತರ ಮೌಲ್ಯದ ಆಸ್ತಿ ಇದೆ. ಈ ಮಠದ ಆಸ್ತಿ ಲೂಟಿಗೆ ಪ್ಲ್ಯಾನ್​ ಮಾಡಿದ್ದು ಇದೀಗ ಬಯಲಾಗಿದೆ. ಕವಡೆಕಾಸಿಗೆ ಮಠದ ಆಸ್ತಿ ಕಾನೂನು ಉಲ್ಲಂಘಿಸಿ ಆಸ್ತಿ ಪರಭಾರೆ ಮಾಡಲಾಗಿದೆ. ಪೋಕಳಾ ವಾರಸುದಾರರು ಇದರೆ, ಕಾನೂನು ಪ್ರಕಾರ ಆಸ್ತಿ ಹಕ್ಕು ಬದಲಾವಣೆ ಮಾಡಲು ಬರಲ್ಲ. ಆದರೆ ಕಾಂಗ್ರೆಸ್ ನಾಯಕಿಯ ಲಂಚದ ಆಸೆಗೊಳಗಾಗಿ ಶಿರಹಟ್ಟಿ ತಹಶಿಲ್ದಾರ, ಸಬ್ ರಿಜಿಸ್ಟರ್ ಆಸ್ತಿ ಹಕ್ಕು ಬದಲಾವಣೆ ಮಾಡಿ ಸಿಕ್ಕಾಕಿಕೊಂಡು ಒದ್ದಾಡುತ್ತಿದ್ದಾರೆ. ಗದಗ ಎಸಿ ಈಗಾಗಲೇ ತಹಶೀಲ್ದಾರ ವಿರುದ್ಧ ಸೂಕ್ತ ಕ್ರಮಕ್ಕಾಗಿ ಡಿಸಿಗೆ ವರದಿ ನೀಡಿದ್ದಾರೆ.

ಆಸ್ತಿ ಲೂಟಿ ಪ್ಲ್ಯಾನ್ ಬಯಲು

ಶಿವಮೊಗ್ಗ ಜಿಲ್ಲೆಯ ಕೂಡ್ಲಿ ಶ್ರಿಂಗೇರಿ ಮಠದ ಕೋಟ್ಯಂತರ ಮೌಲ್ಯದ ಆಸ್ತಿ ಲೂಟಿ ಪ್ಲ್ಯಾನ್ ಬಯಲಾಗಿದೆ. ಕಪ್ಪತ್ತಗುಡ್ಡದ ಸೆರಗಿನಲ್ಲಿರೋ ಬಂಗಾರದಂತ ಭೂಮಿ ಕವಡೆ ಕಾಸಿಗಾಗಿ ಗದಗ ಜಿಲ್ಲೆಯ ಕಾಂಗ್ರೆಸ್ ನಾಯಕಿ ಸುಜಾತಾ ದೊಡ್ಡಮನಿಗೆ ಮಾರಾಟ ಮಾಡಲಾಗಿದೆ. ಕಾನೂನು ಉಲ್ಲಂಘಸಿ ತಹಶೀಲ್ದಾರ ಹಾಗೂ ಸಬ್ ರಿಜಿಸ್ಟರ್​, ಮಠದ ಆಸ್ತಿ ಪರಭಾರೆ ಮಾಡಿದ್ದಾರೆ. ಈ ಭೂ ಅಕ್ರಮದಲ್ಲಿ ಈ ಇಬ್ಬರು ಅಧಿಕಾರಿಗಳು ಸಿಕ್ಕಾಕಿಕೊಂಡು ಒದ್ದಾಡುತ್ತಿದ್ದಾರೆ.

ಇದನ್ನೂ ಓದಿ: Karnataka Rains: ಕರ್ನಾಟಕದ ಈ ಜಿಲ್ಲೆಗಳಲ್ಲಿ ಜುಲೈ 3ರವರೆಗೆ ಭಾರಿ ಮಳೆ, ಎಲ್ಲೆಲ್ಲಿ ರೆಡ್, ಆರೆಂಜ್​ ಅಲರ್ಟ್​?

ಇದನ್ನೂ ಓದಿ
Image
ಕರ್ನಾಟಕದ ಈ ಜಿಲ್ಲೆಗಳಲ್ಲಿ ಜುಲೈ 3ರವರೆಗೆ ಭಾರಿ ಮಳೆ
Image
ಬಿಜೆಪಿ ರಾಜ್ಯಾಧ್ಯಕ್ಷ ಸ್ಥಾನ: ಮುಂಚೂಣಿಯಲ್ಲಿ ಈ ನಾಯಕರ ಹೆಸರು!
Image
ಕಾಂಗ್ರೆಸ್ ಶಾಸಕರ ಅಸಮಾಧಾನದ ಬೆಂಕಿಗೆ ತುಪ್ಪ ಸುರಿದ ಕೆಎನ್ ರಾಜಣ್ಣ
Image
5 ಹುಲಿಗಳ ಸಾವಿನ ಸುತ್ತ ಹಸು: ಸ್ಫೋಟಕ ಅಂಶ ಬಿಚ್ಚಿಟ್ಟ ಡಿಸಿಎಫ್

ಹೌದು.. ಈ ಭೂಹಗರಣ ನಡೆದಿದ್ದು, ಗದಗ ಜಿಲ್ಲೆಯ ಶಿರಹಟ್ಟಿ ತಾಲೂಕಿನ ತೆಗ್ಗಿನಭಾನೂರ ಗ್ರಾಮದಲ್ಲಿ. ತೆಗ್ಗಿನಭಾವನೂರ ಗ್ರಾಮದ ಸರ್ವೇ ನಂಬರ್ 63 ಮತ್ತು 64 ರಲ್ಲಿ ಕೂಡ್ಲಿ ಶ್ರೀಂಗೇರಿ ಮಠಕ್ಕೆ ಸೇರಿದ ಒಟ್ಟು 21 ಎಕರೆ ಜಮೀನು ಇದೆ. ಈ ಜಮೀನು ಇದೆ ಅಂತ ಮಠದ ಆಡಳಿತ ಮಂಡಳಿಗೂ ಗೊತ್ತಿಲ್ಲ. ಮಹಿಳಾ ಘಟಕದ ಕಾಂಗ್ರೆಸ್ ರಾಜ್ಯ ಪ್ರಧಾನ ಕಾರ್ಯದರ್ಶಿ, ಶಿರಹಟ್ಟಿ ಕ್ಷೇತ್ರದ ಕಾಂಗ್ರೆಸ್ ಪರಾಜಿತ ಅಭ್ಯರ್ಥಿ ಸುಜಾತಾ ದೊಡ್ಡಮನಿ ಪತಿ ನಿಂಗಪ್ಪ ದೊಡ್ಡಮನಿ ಶಿರಹಟ್ಟಿಯಲ್ಲಿ ಉಪ ತಹಶೀಲ್ದಾರ ಆಗಿ ಸೇವೆ ಮಾಡುತ್ತಿದ್ದರು. ಆಗ ಈ ಜಮೀನು ಪತ್ತೆ ಮಾಡಿದ್ದಾರಂತೆ. ಹೀಗಾಗಿ ಕವಡೆಕಾಸಿಗೆ ಈ ಜಮೀನನ್ನು ನುಂಗಲು ಪ್ಲ್ಯಾನ್ ಮಾಡಿದ್ದೇ ಉಪತಹಶೀಲ್ದಾರ ನಿಂಗಪ್ಪ ಅಂತ ಪೋಕಳಾ ವಾರಸುದಾರರು ಆರೋಪಿಸಿದ್ದಾರೆ.

ಕಾಂಗ್ರೆಸ್ ನಾಯಕಿ ಹೆಸರಿಗೆ ಹಕ್ಕು ಬದಲಾವಣೆ

ಪೋಕಳಾ ಹಕ್ಕುದಾರರು ಇದ್ದಾಗ ಯಾವುದೇ ಕಾರಣಕ್ಕೆ ಆಸ್ತಿ ಖರೀದಿ ಅಥವಾ ಹಕ್ಕು ಬದಲಾವಣೆ ಮಾಡಲು ಬರಲ್ಲ. ಆದರೆ ಲಂಚದ ಆಸೆಗಾಗಿ ಶಿರಹಟ್ಟಿ ತಹಶೀಲ್ದಾರ ಹಾಗೂ ಸಬ್ ರಿಜಿಸ್ಟರ್ ಶರಣಪ್ಪ ಪವಾರ್ ಕಾನೂನು ಉಲ್ಲಂಘಿಸಿ ಕಾಂಗ್ರೆಸ್ ನಾಯಕಿ ಸುಜಾತಾ ದೊಡ್ಡಮನಿ ಹೆಸರಿಗೆ ಹಕ್ಕು ಬದಲಾವಣೆ ಮಾಡಿದ್ದಾರೆ. ಇನ್ನೂ ಶಿರಹಟ್ಟಿ ತಹಶಿಲ್ದಾರ ಅನಿಲ್ ಬಡಿಗೇರಗೆ ಕೂಡ ಮ್ಯೂಟೆಷನ್​​ನಲ್ಲಿ ಹಕ್ಕು ಬದಲಾವಣೆ ಮಾಡಿ ಸಿಕ್ಕಾಕಿಕೊಂಡಿದ್ದಾರೆ. ತಹಶೀಲ್ದಾರ ಅನಿಲ್ ಬಡಿಗೇರಿ ಹಾಗೂ ಸಬ್ ರಿಜಿಸ್ಟರ್ ಶರಣಪ್ಪ ಪವಾರ ಕಾನೂನು ಉಲ್ಲಂಘಿಸಿ ಸಾಕಷ್ಟು ಲೋಪದೋಷಗಳು ಮಾಡಿದ್ದು, ಮೇಲ್ನೋಟಕ್ಕೆ ಬಯಲಾಗಿದೆ. ಈಗಾಗಲೇ ಪೋಕಳಾ ವಾರಸುದಾರರಾದ ರಾಮದಾಸ್ ಮತ್ತು ಲೀಲಾಬಾಯಿ, ಯಾವುದೇ ಕಾರಣಕ್ಕೂ ಮಠದ ಆಸ್ತಿ ಬಿಟ್ಟುಕೊಡಲ್ಲ ಅಂತ ಜಮೀನಿನಲ್ಲೇ ಠಿಕಾಣಿ ಹೂಡಿದ್ದಾರೆ. ಇನ್ನೂ ಗ್ರಾಮಸ್ಥರು ಕೂಡ ಮಠದ ಆಸ್ತಿ ಕಂಡೋರ ಪಾಲಾಗಲು ಬಿಡಲ್ಲ ಅಂತ ಎಚ್ಚರಿಕೆ ನಿಡಿದ್ದಾರೆ.

ಖರೀದಿ ಪತ್ರದಲ್ಲಿ ಕೂಡ್ಲಿ ಮಠದ ಸ್ವಾಮೀಜಿ ಎನ್ನಲಾದ ವಿದ್ಯಾಭಿನವ ವಿದ್ಯಾರಣ್ಯ ಭಾರತಿ ಶ್ರೀಗಳು ಖರೀದಿ ವೇಳೆ ಸಬ್ ರಿಜಿಸ್ಟರ್ ಕಚೇರಿಗೆ ಆಗಮಿಸಿಲ್ಲ. ಆನ್​​ಲೈನ್​ ಫೋಟೋ ಥಂಬ್ ಇಲ್ಲದೇ ಹಕ್ಕು ಬದಲಾವಣೆ ಮಾಡಿದ್ದಾರೆ. ಶ್ರೀಗಳು ಸ್ಥಾನಿಕವಾಗಿ ಕಚೇರಿ ಬಂದಿಲ್ಲ. ಕೇವಲ ಶ್ರೀಗಳ ಫೋಟೋ ಹಚ್ಚಿ, ಥಂಬ್ ಒತ್ತಿಸಿ ಪರಭಾರೆ ಮಾಡಿದ್ದು, ದಾಖಲೆ ಸಮೇತ ಆರೋಪ ಮಾಡಿದ್ದಾರೆ. ಸಬ್ ರಿಜಿಸ್ಟರ್ ಕಚೇರಿ ಅಧಿಕಾರಿಗಳು ಶ್ರೀಗಳು ಇದ್ದಲ್ಲೇ ಹೋಗಿ ಹೆಬ್ಬೆಟ್ಟು ಹಾಗೂ ಸಹಿ ಹಾಕಿಸಿಕೊಂಡು ಬಂದಿದ್ದಾರೆ ಅಂತ ಅನ್ನೋದು ದಾಖಲೆಗಳು ಹೇಳುತ್ತಿವೆ.

ಪಹಣಿ ಪತ್ರದ ಕಾಲಂ ನಂಬರ್‌ 11 ರಲ್ಲಿ ಹಕ್ಕುದಾರ ಅಂತ ಲಮಾಣಿ ಶಿವರಾಮ ಭಗವಾನದಾಸ ಹೆಸರು ಇದೆ. ಪೋಕಳಾ ಹಕ್ಕುದಾರ ಇದ್ದರೆ ಯಾವುದೇ ರೀತಿಯ ಆಸ್ತಿ ಖರೀದಿ, ಬದಲಾವಣೆ ಮಾಡಲು ಬರಲ್ಲ. ಆದರೂ ಶಿರಹಟ್ಟಿ ಸಬ್ ರಿಜಿಸ್ಟರ್ ಕಾನೂನು ಗಾಳಿಗೆ ತೂರಿ ಆಸ್ತಿ ಬದಲಾವಣೆ ಮಾಡಿದ್ದಾರೆ. ನಂತರ ತಹಶಿಲ್ದಾರ ಅನಿಲ್ ಬಡಿಗೇರ ಶ್ರೀಗಳ ಹೆಸರು ತೆಗೆದು ಸುಜಾತಾ ದೊಡ್ಡಮನಿ ಹೆಸರಲ್ಲಿ ಮ್ಯೂಟೆಷನ್ ಮಾಡಿದ್ದಾರೆ ಅಂತ ಗ್ರಾಮಸ್ಥರು ಆಕ್ರೋಶ ವ್ಯಕ್ತಪಡಿಸಿದ್ದಾರೆ. ಲಂಚ ಪಡೆದು ಅಧಿಕಾರಿಗಳು ಮಠದ ಕೋಟ್ಯಂತರ ಮೌಲ್ಯದ ಆಸ್ತಿ ಕಾನೂನು ಬಾಹಿರ ವರ್ಗಾವಣೆ ಮಾಡಿದ್ದಾರೆ ಅಂತ ಗ್ರಾಮಸ್ಥರಾದ ಶಂಕರ್ ಮರಾಠೆ ಆರೋಪಿಸಿದ್ದಾರೆ.

ಪೋಕಳಾ ಎಂಟ್ರಿ ಇದ್ದಾಗ ಆಸ್ತಿ ಖರೀದಿ, ಬದಲಾವಣೆ ಮಾಡಲು ಬರಲ್ಲ: ಎಸಿ ಗಂಗಪ್ಪ ಸ್ಪಷ್ಟನೆ

ಕೂಡ್ಲಿ ಶ್ರೀಂಗೇರಿ‌ ಮಠದ ಆಸ್ತಿ ಖರೀದಿ ಪ್ರಕರಣ ವಿರುದ್ಧ ಪೋಕಳಾ ಹಕ್ಕುದಾರರು ಹಾಗೂ ತೆಗ್ಗಿನಭಾವನೂರ ಗ್ರಾಮಸ್ಥರು ಗದಗ ಉಪ ವಿಭಾಗಾಧಿಕಾರಿ ಗಂಗಪ್ಪ ಅವರಿಗೆ ದಾಖಲೆ ಸಮೇತ ದೂರು ನೀಡಿದ್ದಾರೆ. ದಾಖಲೆ ಪರಿಶೀಲನೆ ಮಾಡಿದ ಎಸಿ ಸದ್ಯಕ್ಕೆ ಮಠದ ಆಸ್ತಿ ಖರೀದಿ ಪ್ರಕರಣಕ್ಕೆ ತಡೆಯಾಜ್ಞೆ ನೀಡಿರುವುದಾಗಿ ಟಿರ್ವಿಗೆ  ತಿಳಿಸಿದ್ದಾರೆ. ಈ ಪ್ರಕರಣ ನಮ್ಮಲ್ಲಿ 136 ಅಡಿಯಲ್ಲಿ ತನಿಖೆ ನಡೆಯುತ್ತಿದೆ. ಸದ್ಯಕ್ಕೆ ತಡೆಯಾಜ್ಞೆ ನೀಡಿದ್ದೇನೆ ಎಂದಿದ್ದಾರೆ.

ಈ ಪ್ರಕಣದ ಬಗ್ಗೆ ಮೂರು ಪ್ರಶ್ನೆಗಳು ಉದ್ಭವಿಸಿವೆ. ಒಂದು ಪೋಕಳಾ ಎಂಟ್ರಿ ಇದ್ದಾಗ ಹೇಗೆ ರಿಜಿಸ್ಟ್ರೇಷನ್ ಆಯ್ತು ಅನ್ನೋದು. ಎರಡನೇಯದಾಗಿ ಪೋಕಳಾ ಎಂಟ್ರಿ ಇದ್ದಾಗ ಮ್ಯೂಟೆಷನ್ ಹೇಗೆ ಆಯ್ತು ಅನ್ನೋದು. ಮೂರನೇಯದು ಆಸ್ತಿ ಅದಲು ಬದಲು ಪ್ರಶ್ನೆ ಕೂಡ ಇದೆ. ಈ ಮೂರು ವಿಷಯ ಕುರಿತು ಈಗಾಗಲೇ ತಹಶೀಲ್ದಾರ್ ಕಡೆಯಿಂದ ವರದಿ ಪಡೆದಿದ್ದಾನೆ. ತಹಶೀಲ್ದಾರ್​ ವಿರುದ್ಧ ಲಂಚ ಪಡೆದು ಮಾಡಿರುವ ಆರೋಪ ಹಿನ್ನೆಯಲ್ಲಿ ವರದಿ ಕೇಳಿದ್ದು, ಅದು ನೀಡಿದ್ದಾರೆ. ಆದರೆ ವರದಿ ತೃಪ್ತಿಕರ ಇಲ್ಲ. ತಹಶೀಲ್ದಾರ್​ ಏನು ತಪ್ಪು ಮಾಡಿದ್ದಾರೆ ಅಂತ ನಮ್ಮ ಕೋರ್ಟ್​ನಲ್ಲಿ ಗೊತ್ತಾಗುತ್ತೆ. ಆ ಮೇಲೆ ಕ್ರಮದ ಬಗ್ಗೆ ತೀರ್ಮಾನ ಅಂತ ಎಸಿ ಗಂಗಪ್ಪ ಟಿವಿ9ಗೆ ಹೇಳಿದ್ದಾರೆ.

ಇದನ್ನೂ ಓದಿ: ಬಿಜೆಪಿ ರಾಜ್ಯಾಧ್ಯಕ್ಷ ಸ್ಥಾನದಿಂದ ವಿಜಯೇಂದ್ರಗೆ ಕೊಕ್? ಮುಂಚೂಣಿಯಲ್ಲಿ ಕೇಳಿಬರುತ್ತಿದೆ ಈ ನಾಯಕರ ಹೆಸರು!

ಆಸ್ತಿ ಮಾರಾಟ ಮಾಡಿದ ಮಠದ ಶ್ರೀ ವಿದ್ಯಾಭಿನವ ವಿದ್ಯಾರಣ್ಯ ಭಾರತಿ ಸ್ವಾಮೀಜಿ ವಿರುದ್ಧವೂ ಹಲವು ಆರೋಪಗಳು ಕೇಳಿ ಬರುತ್ತಿವೆ. ಮಠದ ಆಸ್ತಿಗಳು ಇದೇ ರೀತಿ ಮಾರಾಟ ಮಾಡುತ್ತಿದ್ದರು. ಹೀಗಾಗಿ ಈ ಸ್ವಾಮೀಜಿಯನ್ನು ತೆಗೆದುಹಾಕಲಾಗಿದೆ ಎನ್ನಲಾಗಿದೆ. ಆದರೆ ಕೂಡ್ಲಿ ಶ್ರೀಂಗೇರಿ ಮಠದ ಆಡಳಿತ ಈ ಬಗ್ಗೆ ಸ್ಪಷ್ಟನೆ ನೀಡಬೇಕಿದೆ. ಏನೇ ಇರಲಿ ಮಠದ ಕೋಟ್ಯಂತರ ಮೌಲ್ಯದ ಆಸ್ತಿ ಕವಡೆಕಾಸಿಗೆ ಕಾನೂನು ಬಾಹಿರ ಪರಭಾರೆ ಮಾಡಿದ ತಹಶೀಲ್ದಾರ್​ ಹಾಗೂ ಸಬ್ ರಿಜಿಸ್ಟರ್​ಗೆ ಈಗ ಢವಢವ ಶುರುವಾಗಿದೆ.

ಕರ್ನಾಟಕದ ಮತ್ತಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ.

Published On - 8:11 am, Fri, 27 June 25

ಬಾಲಿವುಡ್ ಬಿದ್ದೋಯ್ತು, ಇದು ಸ್ಯಾಂಡಲ್​​ವುಡ್ ಸಮಯ: ಡಿಕೆಶಿ
ಬಾಲಿವುಡ್ ಬಿದ್ದೋಯ್ತು, ಇದು ಸ್ಯಾಂಡಲ್​​ವುಡ್ ಸಮಯ: ಡಿಕೆಶಿ
ರಜತ್-ಗಿಲ್ಲಿ ಕಣ್ಣಿಗೆ ಬಟ್ಟೆ: ನಕ್ಕು ಸುಸ್ತಾದ ಸುದೀಪ್
ರಜತ್-ಗಿಲ್ಲಿ ಕಣ್ಣಿಗೆ ಬಟ್ಟೆ: ನಕ್ಕು ಸುಸ್ತಾದ ಸುದೀಪ್
ಆತನಿಗೆ 68, ಆಕೆಗೆ 58 ವರ್ಷ: ಹಾಸನದಲ್ಲಿ ವೃದ್ದರಿಬ್ಬರ ಮದುವೆ ಸಂಘರ್ಷ
ಆತನಿಗೆ 68, ಆಕೆಗೆ 58 ವರ್ಷ: ಹಾಸನದಲ್ಲಿ ವೃದ್ದರಿಬ್ಬರ ಮದುವೆ ಸಂಘರ್ಷ
ಕೋಗಿಲು ಬಳಿ 150ಕ್ಕೂ ಹೆಚ್ಚು ಅಕ್ರಮ ಮನೆಗಳು ನೆಲಸಮ: ಭುಗಿಲೆದ್ದ ಆಕ್ರೋಶ
ಕೋಗಿಲು ಬಳಿ 150ಕ್ಕೂ ಹೆಚ್ಚು ಅಕ್ರಮ ಮನೆಗಳು ನೆಲಸಮ: ಭುಗಿಲೆದ್ದ ಆಕ್ರೋಶ
ಸಿಎಂ ಕುರ್ಚಿ ಕಿತ್ತಾಟ: ಅಂತೂ ನಾಯಕರಿಗೆ ಮಹತ್ವದ ಸಂದೇಶ ಕೊಟ್ಟ ಖರ್ಗೆ
ಸಿಎಂ ಕುರ್ಚಿ ಕಿತ್ತಾಟ: ಅಂತೂ ನಾಯಕರಿಗೆ ಮಹತ್ವದ ಸಂದೇಶ ಕೊಟ್ಟ ಖರ್ಗೆ
ಮದ್ಯದ ಅಮಲಿನಲ್ಲಿ ಲಾರಿ ಚಾಲಕ 20ಕ್ಕೂ ಹೆಚ್ಚು ವಾಹನಗಳಿಗೆ ಡಿಕ್ಕಿ
ಮದ್ಯದ ಅಮಲಿನಲ್ಲಿ ಲಾರಿ ಚಾಲಕ 20ಕ್ಕೂ ಹೆಚ್ಚು ವಾಹನಗಳಿಗೆ ಡಿಕ್ಕಿ
ಗಿಲ್ಲಿಯನ್ನೇ ಹೊರಗೆ ಕಳಿಸುವ ಭ್ರಮೆಯಲ್ಲಿ ರಕ್ಷಿತಾ: ಕಾವ್ಯಾ ಖಡಕ್ ತಿರುಗೇಟು
ಗಿಲ್ಲಿಯನ್ನೇ ಹೊರಗೆ ಕಳಿಸುವ ಭ್ರಮೆಯಲ್ಲಿ ರಕ್ಷಿತಾ: ಕಾವ್ಯಾ ಖಡಕ್ ತಿರುಗೇಟು
ಟೀಮ್ ಇಂಡಿಯಾ ವಿರುದ್ಧ ಭರ್ಜರಿ ಸೆಂಚುರಿ ಸಿಡಿಸಿದ ಸಮೀರ್
ಟೀಮ್ ಇಂಡಿಯಾ ವಿರುದ್ಧ ಭರ್ಜರಿ ಸೆಂಚುರಿ ಸಿಡಿಸಿದ ಸಮೀರ್
ಮನ್ರೇಗಾ ಯೋಜನೆ ಹೆಸ್ರು ಬದಲಾವಣೆ: ಕೇಂದ್ರದ ಕ್ರಮಕ್ಕೆ AICC ಅಧ್ಯಕ್ಷ ಕಿಡಿ
ಮನ್ರೇಗಾ ಯೋಜನೆ ಹೆಸ್ರು ಬದಲಾವಣೆ: ಕೇಂದ್ರದ ಕ್ರಮಕ್ಕೆ AICC ಅಧ್ಯಕ್ಷ ಕಿಡಿ
2026 ಸಿಂಹ ರಾಶಿಯವರಿಗೆ ಹಲವು ಮಹತ್ವದ ಬದಲಾವಣೆಗಳನ್ನು ತರುವ ವರ್ಷ
2026 ಸಿಂಹ ರಾಶಿಯವರಿಗೆ ಹಲವು ಮಹತ್ವದ ಬದಲಾವಣೆಗಳನ್ನು ತರುವ ವರ್ಷ