ಗದಗ: ಲವ್ ಪ್ರಕರಣದಲ್ಲಿ ನಿರ್ಲಕ್ಷ್ಯ, ಪಿಎಸ್ಐ ಅಮಾನತು
ಪ್ರೇಮ ಪ್ರಕರಣವೊಂದರಲ್ಲಿ ನಿರ್ಲಕ್ಷ್ಯ ತೋರಿದ ನರೇಗಲ್ ಠಾಣೆಯ ಪಿಎಸ್ಐಯನ್ನು ಅಮಾನತುಗೊಳಿಸಿ ಗದಗ ಎಸ್ಪಿ ಆದೇಶ ಹೊರಡಿಸಿದ್ದಾರೆ. ಅದೇ ರೀತಿ, ಇಸ್ಪೀಟ್ ದಂಧೆಯಲ್ಲಿ ಸಿಕ್ಕಿ ಬಿದ್ದ ಪೊಲೀಸ್ ಕಾನ್ಸ್‌ಟೇಬಲ್ ಚಂದ್ರಶೇಖರ್ ಅವರನ್ನು ಅಮಾನತುಗೊಳಿಸಿ ಚಿಕ್ಕಮಗಳೂರು ಎಸ್ಪಿ ಆದೇಶ ಹೊರಡಿಸಿದ್ದಾರೆ.
ಗದಗ, ಆಗಸ್ಟ್ 28: ಪ್ರೇಮ ಪ್ರಕರಣವೊಂದರಲ್ಲಿ ನಿರ್ಲಕ್ಷ್ಯ ತೋರಿದ ನರೇಗಲ್ ಠಾಣೆಯ ಪಿಎಸ್ಐಯನ್ನು ಅಮಾನತುಗೊಳಿಸಿ ಗದಗ (Gadag) ಎಸ್ಪಿ ಆದೇಶ ಹೊರಡಿಸಿದ್ದಾರೆ. ಅದೇ ರೀತಿ, ಇಸ್ಪೀಟ್ ದಂಧೆಯಲ್ಲಿ ಸಿಕ್ಕಿ ಬಿದ್ದ ಪೊಲೀಸ್ ಕಾನ್ಸ್‌ಟೇಬಲ್ ಚಂದ್ರಶೇಖರ್ ಅವರನ್ನು ಅಮಾನತುಗೊಳಿಸಿ ಚಿಕ್ಕಮಗಳೂರು (Chikkamagaluru) ಎಸ್ಪಿ ಆದೇಶ ಹೊರಡಿಸಿದ್ದಾರೆ.
ಗದಗ ಜಿಲ್ಲೆಯ ಗಜೇಂದ್ರಗಡ ತಾಲೂಕಿನ ನರೇಗಲ್ ಪಟ್ಟಣ ಪೊಲೀಸ್ ಠಾಣೆಯ ಪಿಎಸ್ಐ ನಿಖೀಲ್ ಅವರು ಪ್ರೇಮ ಪ್ರಕರಣವೊಂದರಲ್ಲಿ ಮೇಲಾಧಿಕಾರಿಗಳ ಜೊತೆ ಸರಿಯಾದ ವರ್ತನೆ ತೋರಿಲ್ಲ. ಆದೇಶ ಪಾಲನೆಯಲ್ಲಿ ನಿರ್ಲಕ್ಷ್ಯ ತೋರಿದ ಹಿನ್ನೆಲೆ ಗದಗ ಎಸ್ಪಿ ಬಿ.ಎಸ್. ನೇಮಗೌಡ ಆದೇಶ ಹೊರಡಿಸಿದ್ದಾರೆ. ಈ ಬಗ್ಗೆ ಟಿವಿ9ಗೆ ನೇಮಗೌಡ ಅವರು ಮಾಹಿತಿ ನೀಡಿದ್ದಾರೆ.
ಇಸ್ಪೀಟ್ ದಂಧೆಯಲ್ಲಿ ಸಿಕ್ಕಿ ಬಿದ್ದ ಪೊಲೀಸ್ ಕಾನ್ಸ್‌ಟೇಬಲ್ ಅಮಾನತು
ಚಿಕ್ಕಮಗಳೂರು: ಇಸ್ಪೀಟ್ ದಂಧೆಯಲ್ಲಿ ಸಿಕ್ಕಿ ಬಿದ್ದ ಚಂದ್ರಶೇಖರ್ ಬಣಕಲ್ ಪೊಲೀಸ್ ಠಾಣೆಯ ಕಾನ್ಸ್‌ಟೇಬಲ್ ಚಂದ್ರಶೇಖರ್ ಅವರನ್ನು ಅಮಾನತುಗೊಳಿಸಿ ಎಸ್ಪಿ ವಿಕ್ರಂ ಅಮಾಟೆ ಆದೇಶ ಹೊರಡಿಸಿದ್ದಾರೆ.
ಇದನ್ನೂ ಓದಿ: ಪಂಜಾಬ್: ಗ್ಯಾಂಗ್ ಸ್ಟರ್ ಆಯೋಜಿಸಿದ ಪಾರ್ಟಿಯಲ್ಲಿ ಭಾಗಿಯಾದ 7 ಪೊಲೀಸರು ಅಮಾನತು
ಚಿಕ್ಕಮಗಳೂರು ತಾಲೂಕಿನ ಕಾಡುಮಲ್ಲಿಗೆ ಎಸ್ಟೇಟ್ನಲ್ಲಿ ನಡೆಯುತ್ತಿದ್ದ ಇಸ್ಪೀಟ್ ಅಡ್ಡೆ ಮೇಲೆ ಸೆನ್ ಪೊಲೀಸ್ ಠಾಣೆಯ ಪೊಲೀಸರು ಭಾನುವಾರ ರಾತ್ರಿ ದಾಳಿ ನಡೆಸಲಾಗಿತ್ತು. ಈ ವೇಳೆ ಕಾನ್ಸ್‌ಟೇಬಲ್ ಚಂದ್ರಶೇಖರ್ ಸಿಕ್ಕಿಬಿದ್ದಿದ್ದಾರೆ. ಸದ್ಯ ಚಂದ್ರಶೇಖರ್ ಸೇರಿದಂತೆ ದಾಳಿ ವೇಳೆ ಸಿಕ್ಕಿಬಿದ್ದ 13 ಜನರ ಮೇಲೆ ಪ್ರಕರಣ ದಾಖಲಾಗಿದೆ.
ರಾಜ್ಯದ ಮತ್ತಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ