ಗದಗ ಬಯಲು ಬಹಿರ್ದೆಸೆ ಮುಕ್ತ ಜಿಲ್ಲೆಯಂತೆ! ಆದರೆ ಪರಿಸ್ಥಿತಿ ಹಾಗಿಲ್ಲ, ಜಿಪಂ ಅಧಿಕಾರಿಗಳು ಕಣ್ಮುಚ್ಚಿ ಕುಳಿತಿದ್ದಾರೆ
2018ರಲ್ಲೇ ಗದಗ ಜಿಲ್ಲೆ ಬಯಲು ಬಹಿರ್ದೆಸೆ ಮುಕ್ತ ಜಿಲ್ಲೆ ಅಂತ ಘೋಷಣೆ ಆಗಿದೆ. ಆದ್ರೆ, ಇನ್ನೂ ಗದಗ ಜಿಲ್ಲೆಯಲ್ಲಿ ಬಯಲು ಬಹಿರ್ದೆಸೆಯೇ ಜನ್ರಿಗೆ ಗತಿಯಾಗಿದೆ.
ಗದಗ: ಜಿಲ್ಲೆಯ ಬಯಲು ಬಹಿರ್ದೆಸೆ ಮುಕ್ತ ಅಂತ ಘೋಷಣೆ ಆಗಿ ನಾಲ್ಕು ವರ್ಷಗಳು ಕಳೆದಿದೆ. ಅದು ದಾಖಲೆಯಲ್ಲಿ ಮಾತ್ರ. ಗದಗ ಜಿಲ್ಲೆ ಜಿಲ್ಲಾ ಪಂಚಾಯತ್ ನಿರ್ಲಕ್ಷ್ಯಕ್ಕೆ ಗ್ರಾಮೀಣ ಭಾಗದ ಮಹಿಳೆಯರು ರೋಸಿ ಹೋಗಿದ್ದಾರೆ. ಸಾರ್ವಜನಿಕ ಶೌಚಾಲಯ ನಿರ್ಮಾಣ ಮಾಡಿ ಅಂತ ಸಾಕಷ್ಟು ಮನವಿ ಮಾಡಿದ್ರೂ ಅಧಿಕಾರಿಗಳು ಮಾತ್ರ ಕುಂಭ ಕರ್ಣ ನಿದ್ದೆಗೆ ಜಾರಿದ್ದಾರೆ. ಜಿಲ್ಲಾ ಪಂಚಾಯತ್ ಆಡಳಿತಕ್ಕೆ ನಾರಿಯರು ಬಿಸಿ ಮುಟ್ಟಿಸಿದ್ದಾರೆ.
ಗ್ರಾಮೀಣ ಭಾಗದಲ್ಲಿ ಮಹಿಳೆಯರಿಗೆ ಇನ್ನೂ ಬಯಲು ಬಹಿರ್ದೆಸೆಯೇ ಗತಿಯಾಗಿದೆ. 2018ರಲ್ಲೇ ಗದಗ ಜಿಲ್ಲೆ ಬಯಲು ಬಹಿರ್ದೆಸೆ ಮುಕ್ತ ಜಿಲ್ಲೆ ಅಂತ ಘೋಷಣೆ ಆಗಿದೆ. ಆದ್ರೆ, ಇನ್ನೂ ಗದಗ ಜಿಲ್ಲೆಯಲ್ಲಿ ಬಯಲು ಬಹಿರ್ದೆಸೆಯೇ ಜನ್ರಿಗೆ ಗತಿಯಾಗಿದೆ. ಗ್ರಾಮ ಪಂಚಾಯತ್ ಗಳು ಸಾರ್ವಜನಿಕ ಶೌಚಾಲಯ ನಿರ್ಮಾಣ ಮಾಡದ ಕಾರಣ ಮಹಿಳೆಯ ಅನಿವಾರ್ಯವಾಗಿ ಬಯಲು ಶೌಚಕ್ಕೆ ಹೋಗುವಂತಾಗಿದೆ.
ಕುಂಭ ಕರ್ಣ ನಿದ್ದೆಗೆ ಜಾರಿದ ಜಿಲ್ಲಾ ಪಂಚಾಯತ್
ಗದಗ ಜಿಲ್ಲೆಯ ಗ್ರಾಮೀಣ ಭಾಗದಲ್ಲಿ ಮಹಿಳೆಯರು ಶೌಚಕ್ಕಾಗಿ ನಿತ್ಯವೂ ಪರದಾಡುವಂತಾಗಿದೆ. ಮಹಿಳೆಯರು ಸಾರ್ವಜನಿಕ ಶೌಚಾಲಯಕ್ಕೆ ಸಾಕಷ್ಟು ಮನವಿ ಮಾಡಿದ್ರು ಗ್ರಾಮ ಪಂಚಾಯತ್ ಕ್ಯಾರೇ ಎನ್ನುತ್ತಿಲ್ಲ. ಇನ್ನೂ ಜಿಲ್ಲಾ ಪಂಚಾಯತ್ ಅಧಿಕಾರಿಗಳು ಕೂಡ ಗ್ರಾಮೀಣ ಭಾಗದ ಮಹಿಳೆಯರು ಸಮಸ್ಯೆಗೆ ಸ್ಪಂದಿಸುತ್ತಿಲ್ಲ. ಹೀಗಾಗಿ ಗದಗ ಜಿಲ್ಲೆಯಲ್ಲಿ ಜಿಲ್ಲಾ ಪಂಚಾಯತ್ ಗೆ ಹೇಳೋರೋ ಕೇಳೋರು ಇಲ್ಲದಂತಾಗಿದೆ.
ಗದಗ ಜಿಲ್ಲೆಯ ಮುಂಡರಗಿ ತಾಲೂಕಿನ ಡಂಬಳ ಗ್ರಾಮದಲ್ಲಿ ಶೌಚಾಲಯ ನಿರ್ಮಾಣಕ್ಕೆ ಒತ್ತಾಯಿಸಿ ಮಹಿಳೆಯರು ಗ್ರಾಮ ಪಂಚಾಯತಿ ಕಚೇರಿಗೆ ಬೀಗ ಜಡಿದು ಆಕ್ರೋಶ ವ್ಯಕ್ತಪಡಿಸಿದ್ರು. ಗ್ರಾಮದ ವಾರ್ಡ್ ನಂಬರ್ 3, 4, 5, 6 ಹಾಗೂ 7 ನೇ ವಾರ್ಡ್ ನಲ್ಲಿ ಶೌಚಾಲಯ ಇಲ್ಲದೇ ಶೌಚಕ್ಕಾಗಿ ಮಹಿಳೆಯರು ನಿತ್ಯ ಪರದಾಡುವಂತಾಗಿದೆ. ಹೀಗಾಗಿ ರೊಚ್ಚಿಗೆದ್ದ ಮಹಿಳೆಯರು ಜಿಲ್ಲಾ ಪಂಚಾಯತ್ ಆಡಳಿತ ವಿರುದ್ಧ ಸಿಡಿದೆದ್ದಿದ್ದರು. ಗ್ರಾಮದಲ್ಲಿ ಮೆರವಣಿಗೆ ಮೂಲಕ ಪಂಚಾಯತ್ ಗೆ ಆಗಮಿಸಿದ ಮಹಿಳೆಯರು ಆಕ್ರೋಶ ವ್ಯಕ್ತಪಡಿಸಿದ್ರು. ಜಿಲ್ಲಾ ಪಂಚಾಯತ ಸಿಇಒ ಗಮನಕ್ಕೂ ತಂದ್ರೂ ಕ್ಯಾರೇ ಎಂದಿಲ್ಲ. ಜಿಲ್ಲಾ ಪಂಚಾಯತ ಸಿಇಒ ಸೇರಿದಂತೆ ಅಧಿಕಾರಿಗಳ ವಿರುದ್ಧ ಮಹಿಳೆಯರ ಆಕ್ರೋಶ ವ್ಯಕ್ತಪಡಿಸಿದ್ರು. ಬೇಕೇ ಬೇಕು ಶೌಚಾಲಯ ಬೇಕು ಅಂತ ಘೋಷಣೆ ಕೂಗಿದ್ರು.
ವರದಿ: ಸಂಜೀವ ಪಾಂಡ್ರೆ, ಟಿವಿ9 ಗದಗ
Published On - 2:53 pm, Fri, 20 January 23