AQI
Sign In

By signing in or creating an account, you agree with Associated Broadcasting Company's Terms & Conditions and Privacy Policy.

ಹುಡುಗಿಯರನ್ನ ಚುಡಾಯಿಸಿದ ಆರೋಪ: ಕುಟುಂಬಗಳ ನಡುವೆ ಮಾರಾಮಾರಿ

ಹುಡುಗಿಯರನ್ನ ಚುಡಾಯಿಸಿದ ಆರೋಪ ವಿಚಾರವಾಗಿ ಗದಗ ಜಿಲ್ಲೆ ನರಗುಂದ ಪಟ್ಟಣದ ಕೊರವರ ಓಣಿಯಲ್ಲಿ  2 ಕುಟುಂಬಗಳ ನಡುವೆ ಮಾರಾಮಾರಿಯೇ ನಡೆದಿದೆ. ಸುಮಾರು 80 ಜನರು ದೊಣ್ಣೆ, ಕಟ್ಟಿಗೆ, ಕಲ್ಲುಗಳಿಂದ ಪರಸ್ಪರ  ಬಡಿದಾಡಿಕೊಂಡಿದ್ದಾರೆ. ಈ ವೇಳೆ ಮನೆ ಮೇಲೆಯೂ ಕಲ್ಲು ತೂರಿರುವ ಪರಿಣಾಮ, ಗಾಜುಗಳು ಪುಡಿ ಪುಡಿಯಾಗಿವೆ. 

ಹುಡುಗಿಯರನ್ನ ಚುಡಾಯಿಸಿದ ಆರೋಪ: ಕುಟುಂಬಗಳ ನಡುವೆ ಮಾರಾಮಾರಿ
2 ಕುಟುಂಬಗಳ ನಡುವೆ ಹೊಡೆದಾಟ
ಸಂಜೀವ ಕುಮಾರ್​ ಪಾಂಡ್ರೆ, ಗದಗ
| Updated By: ಪ್ರಸನ್ನ ಹೆಗಡೆ|

Updated on:Sep 30, 2025 | 7:39 PM

Share

ಗದಗ, ಸೆಪ್ಟೆಂಬರ್​ 30: ಹುಡುಗಿಯರನ್ನು ಚುಡಾಯಿಸಿದ (Ragging) ಆರೋಪ ವಿಚಾರವಾಗಿ ಎರಡು ಕುಟುಂಬಗಳ ನಡುವೆ ಥೇಟ್ ಸಿನಿಮೀಯ ರೀತಿಯಲ್ಲಿ ಗಲಾಟೆ ನಡೆದಿದೆ. ಗದಗ ಜಿಲ್ಲೆ ನರಗುಂದ ಪಟ್ಟಣದ ಕೊರವರ ಓಣಿಯಲ್ಲಿ ಘಟನೆ ನಡೆದಿದ್ದು, ಮಾರಾಮಾರಿ ವೇಳೆ 15ಕ್ಕೂ ಹೆಚ್ಚು ಜನರು ಗಾಯಗೊಂಡಿದ್ದಾರೆ. ಪರಸ್ಪರ ದೂರು ಆಧರಿಸಿ 75ಕ್ಕೂ ಹೆಚ್ಚು ಜನರ ಮೇಲೆ ಎಫ್​ಐಆರ್​ ದಾಖಲಾಗಿದೆ. ಘಟನೆ ಸಂಬಂಧ ಎರಡೂ ಕಡೆಯವರು ಸೇರಿ 6 ಜನರನ್ನ ಪೊಲೀಸರು ಬಂಧಿಸಿದ್ದಾರೆ.

ಜಮಖಂಡಿ ಕುಟುಂಬ‌ ಹಾಗೂ ಗಾಳೇಪ್ಪನವರ ಕುಟುಂಬಸ್ಥರ ನಡುವೆ ಗಲಾಟೆ ನಡೆದಿದ್ದು, ಗಾಳೇಪ್ಪನವರ ಕುಟುಂಬದ ಕೆಲವು ಯುವಕರು ಜಮಖಂಡಿ ಕುಟುಂಬದ ಹೆಣ್ಣು ಮಕ್ಕಳನ್ನು ಚುಡಾಯಿಸಿದ್ದಾರೆ ಎನ್ನಲಾಗಿದೆ. ಇದನ್ನು ಪ್ರಶ್ನೆ ಮಾಡಲು ಹೋದಾಗ ಎರಡೂ ಕುಟುಂಬಸ್ಥರು ನಡುವೆ ಮಾತಿಗೆ ಮಾತು ಬೆಳೆದು ಹೊಡೆದಾಟ ನಡೆದಿದೆ. ಸುಮಾರು 80 ಜನರು ದೊಣ್ಣೆ, ಕಟ್ಟಿಗೆ, ಕಲ್ಲುಗಳಿಂದ ಪರಸ್ಪರ  ಬಡಿದಾಡಿಕೊಂಡಿದ್ದಾರೆ. ಈ ವೇಳೆ ಮನೆ ಮೇಲೆಯೂ ಕಲ್ಲು ತೂರಿರುವ ಪರಿಣಾಮ, ಗಾಜುಗಳು ಪುಡಿ ಪುಡಿಯಾಗಿವೆ.

ಇದನ್ನೂ ಓದಿ: ಮಹಿಳೆಯರ ಒಳ ಉಡುಪು ಕದ್ದು ವಿಕೃತಾನಂದ: ಹುಬ್ಬಳ್ಳಿಯಲ್ಲಿ ಸೈಕೋ ವ್ಯಕ್ತಿ ಅಂದರ್​

‘ಚುಡಾಯಿಸಿರೋ ಆರೋಪ ಸುಳ್ಳು’

ಜಮಖಂಡಿ ಕುಟುಂಬದ ಸದಸ್ಯ ಯೂಟ್ಯೂಬರ್ ಅಂತ ಹಫ್ತಾ ವಸೂಲಿ ಮಾಡ್ತಿದ್ದ. ನಾವು ದುಡಿದ  ಹಣದಲ್ಲಿ ಆತನಿಗೆ ಕೊಡಬೇಕಂತೆ. ನಮಗೆ ಹಲವು ವರ್ಷಗಳಿಂದ ಹಣ ಕೊಡುವಂತೆ ಧಮ್ಕಿ, ಕಿರುಕುಳ ನೀಡುತ್ತಿದ್ದ. ನಾವು ಕೊಡದಿದ್ದಕ್ಕೆ ನಮ್ಮ ಮೇಲೆ ಹಲ್ಲೆ ಮಾಡಿದ್ದಾರೆ. ಜಮಖಂಡಿ ಕುಟುಂಬದ ಹೆಣ್ಣು ಮಕ್ಕಳನ್ನು ನಾವು ಚುಡಾಯಿಸಿಲ್ಲ. ಅದೆಲ್ಲ ಸುಳ್ಳು ಆರೋಪ  ಎಂದು ಗಾಳೇಪ್ಪನವರ ಕುಟುಂಬ ಹೇಳುತ್ತಿದೆ. ಒಟ್ಟಿನಲ್ಲಿ ಎರಡು ಕುಟುಂಬಗಳ ನಡುವಿನ ಮಾರಾಮಾರಿ ನರಗುಂದ ಪಟ್ಟಣವನ್ನು ಬೆಚ್ಚಿಬೀಳಿಸಿದೆ. ಘಟನೆ ಸಂಬಂಧ ಈವರೆಗೆ 6 ಜನರ ಬಂಧನವಾಗಿದ್ದು, ಉಳಿದ ಆರೋಪಿಗಳಿಗಾಗಿ ಪೊಲೀಸರು ಶೋಧ ನಡೆಸ್ತಿದ್ದಾರೆ.

ಮತ್ತಷ್ಟು ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್​ ಮಾಡಿ.

Published On - 7:26 pm, Tue, 30 September 25