ಗದಗ: ತೋಂಟದಾರ್ಯ ಮಠದ ಜಾತ್ರೆಯಲ್ಲಿ ಅನ್ಯಧರ್ಮದ ವ್ಯಾಪಾರಸ್ಥರಿಗೆ ನಿರ್ಬಂಧಿಸಲು ಒತ್ತಾಯ
ಹಿಜಾಬ್ ವಿಚಾರದ ಹೈಕೋರ್ಟ್ ತೀರ್ಪು ಪಾಲಿಸದ ಕಾರಣ ಮುಸ್ಲಿಂ ವ್ಯಾಪಾರಸ್ಥರಿಗೆ ಅವಕಾಶ ಬೇಡ ಎಂದು ತೋಂಟದಾರ್ಯ ಜಾತ್ರಾ ಕಮಿಟಿಗೆ ಶ್ರೀರಾಮಸೇನೆ ಸಂಘಟನೆ ಒತ್ತಾಯಿಸಿದ್ದಾರೆ.
ಗದಗ: ಧರ್ಮ ಅಸಹಕಾರ ಚಳುವಳಿ ಉತ್ತರ ಕರ್ನಾಟಕಕ್ಕೂ ಕಾಲಿಟ್ಟಿದೆ. ತೋಂಟದಾರ್ಯ ಮಠದ ಜಾತ್ರೆಯಲ್ಲಿ(Fair) ಅನ್ಯಧರ್ಮದ ವ್ಯಾಪಾರಸ್ಥರಿಗೆ ನಿರ್ಬಂಧಕ್ಕೆ ಒತ್ತಾಯಿಸಿದ್ದಾರೆ. ಜಾತ್ರೆಯಲ್ಲಿ ಮುಸ್ಲಿಂ (Muslim) ವ್ಯಾಪಾರಸ್ಥರಿಗೆ ಅವಕಾಶ ನೀಡದಂತೆ ಹಿಂದೂಪರ ಸಂಘಟನೆಗಳು ಒತ್ತಾಯಿಸಿದ್ದಾರೆ. ಸಾಮಾಜಿಕ ಜಾಲತಾಣದಲ್ಲಿ (Social Media) ಪೋಸ್ಟ್ ಮಾಡುವ ಮೂಲಕ ಒತ್ತಾಯಯಿಸಿದ್ದಾರೆ.
ಏಪ್ರಿಲ್ 15 ರಿಂದ ಆರಂಭವಾಗಲಿರೋ ತೋಂಟರ್ಯ ಮಠದ ಜಾತ್ರೆ ಒಂದು ತಿಂಗಳ ಕಾಲ ಅದ್ಧೂರಿಯಾಗಿ ನಡೆಯಲಿದೆ. ಜಾತ್ರೆಯಲ್ಲಿ ನೂರಾರು ವ್ಯಾಪಾರಸ್ಥರು ಭಾಗಿಯಾಗಲಿದ್ದಾರೆ. ಹಿಜಾಬ್ ವಿಚಾರದ ಹೈಕೋರ್ಟ್ ತೀರ್ಪು ಪಾಲಿಸದ ಕಾರಣ ಮುಸ್ಲಿಂ ವ್ಯಾಪಾರಸ್ಥರಿಗೆ ಅವಕಾಶ ಬೇಡ ಎಂದು ತೋಂಟದಾರ್ಯ ಜಾತ್ರಾ ಕಮಿಟಿಗೆ ಶ್ರೀರಾಮಸೇನೆ ಸಂಘಟನೆ ಒತ್ತಾಯಿಸಿದ್ದಾರೆ.
ಹಾಸನ: ಬೇಲೂರು ಐತಿಹಾಸಿಕ ದೇಗುಲದಲ್ಲಿ ಹಿಂದುಯೇತರರಿಗೆ ವ್ಯಾಪಾರಕ್ಕೆ ನಿರ್ಬಂಧಕ್ಕೆ ಮನವಿ
ಬೇಲೂರು ಐತಿಹಾಸಿಕ ದೇಗುಲದಲ್ಲಿ ಹಿಂದುಯೇತರರಿಗೆ ವ್ಯಾಪಾರಕ್ಕೆ ನಿರ್ಬಂಧಕ್ಕೆ ಮನವಿ ವಿಚಾರಕ್ಕೆ ಸಂಬಂಧಪಟ್ಟಂತೆ ಬೀದಿ ಬದಿ ವ್ಯಾಪಾರಿಗಳು ಅಳಲು ತೋಡಿಕೊಂಡಿದ್ದಾರೆ. ತಮಗೆ ವ್ಯಾಪಾರಕ್ಕೆ ಅವಕಾಶ ನೀಡುತ್ತಿಲ್ಲ ಎಂದು ಬೀದಿ ಬದಿ ವ್ಯಾಪಾರಿಗಳು ಬೇಸರ ವ್ಯಕ್ತಪಡಿಸಿದ್ದಾರೆ. ಕಳೆದ ನಾಲ್ಕು ದಶಕದಿಂದ ವ್ಯಾಪಾರ ಮಾಡುತ್ತಿದ್ದೆವು. ಈಗ ಏಕಾ ಏಕಿ ವ್ಯಾಪಾರ ಮಾಡದಂತೆ ತಾಕೀತು ಮಾಡಿದ್ದಾರೆ ವ್ಯಾಪಾರ ನಡೆಯದಿದ್ದರೆ ನಮಗೆ ಬದುಕೇ ಇಲ್ಲ. ನಮಗೆ ವ್ಯಾಪಾರಕ್ಕೆ ಅವಕಾಶ ನೀಡಿ ಎಂದು ಕೊಳಲು ಊದಿ ಗಿಟಾರ್ ಭಾರಿಸಿ ಡಿಸಿ ಕಛೇರಿ ಎದುರು ವರ್ತಕರು ಹೋರಾಟ ಮಾಡಿದ್ದಾರೆ.
ದೇಗುಲ ವ್ಯಾಪ್ತಿಯಲ್ಲಿ ಹಿಂದುಯೇತರರಿಗೆ ನಿರ್ಬಂಧಕ್ಕೆ ವಿರೋಧ
ಹಾಸನದಲ್ಲಿ ವಿವಿಧ ರಾಜಕೀಯ ಪಕ್ಷಗಳ ಮುಖಂಡರು ಹಾಗೂ ಪ್ರಗತಿಪರ ಸಂಘಟನೆಗಳ ನೇತೃತ್ವದಲ್ಲಿ ಪ್ರತಿಭಟನೆ ನಡೆಸಲಾಗುತ್ತಿದೆ. ದೇಗುಲ ವ್ಯಾಪ್ತಿಯಲ್ಲಿ ಹಿಂದುಯೇತರರಿಗೆ ನಿರ್ಬಂಧಕ್ಕೆ ವಿರೋಧ ವ್ಯಕ್ತಪಡಿಸಿದ್ದು, ಈ ಹಿಂದಿನಂತೆ ಜಾತ್ರೆ ನಡೆಸಿಕೊಂಡು ಹೋಗಲು ಹಾಸನ ಡಿಸಿ ಆರ್.ಗಿರೀಶ್‌ಗೆ ಮನವಿ ಧರಣಿ ನಿರತರು ಸಲ್ಲಿಸಿದ್ದಾರೆ.
ವಿಜಯನಗರ: ಹಿಂದೂಯೇತರರ ವ್ಯಾಪಾರಕ್ಕೆ ಅನುಮತಿ ನೀಡದಂತೆ ಮನವಿ
ದೇಗುಲ ವ್ಯಾಪ್ತಿಯಲ್ಲಿ ಹಿಂದುಯೇತರರ ವ್ಯಾಪಾರ ವಿಚಾರಕ್ಕೆ ಸಂಬಂಧಪಟ್ಟಂತೆ ವಿಜಯನಗರ ಜಿಲ್ಲೆಯ ಜಾತ್ರೆಗಳಲ್ಲಿ ಮುಸ್ಲಿಂ ವ್ಯಾಪಾರಸ್ಥರಿಗೆ ಅವಕಾಶ ನೀಡದಂತೆ ಹಿಂದು ಸಂಘಟನೆಗಳ ಪಟ್ಟು ಹಿಡಿದ್ದಾರೆ. ಭಜರಂಗದಳ ಹಾಗೂ ವಿಶ್ವ ಹಿಂದು ಪರಿಷತ್ ಪಟ್ಟು ಹಿಡಿದಿದೆ. ಜಾತ್ರೆಗಳಲ್ಲಿ ಮುಸ್ಲಿಂ ವ್ಯಾಪಾರಸ್ಥರಿಗೆ ಅವಕಾಶ ನೀಡದಂತೆ ಡಿಸಿ ಮನವಿ ಸಲ್ಲಿಸಲು ಹಿಂದು ಸಂಘಟನೆಗಳು ಮುಂದಾಗಿವೆ. ಹಂಪಿ ಜಾತ್ರೆ. ಒಡಕರಾಯನ ಜಾತ್ರೆ. ಸಣ್ಣಕ್ಕಿ ವೀರಭದ್ರೇಶ್ವರ ಜಾತ್ರೆ ಸೇರಿದಂತೆ ಹಲವು ಜಾತ್ರೆಗಳಲ್ಲಿ ಅವಕಾಶ ನೀಡದಂತೆ ಕೂಡ ಮನವಿ ಸಲ್ಲಿಸಿದ್ದಾರೆ.
ಇದನ್ನೂ ಓದಿ:
ಸ್ವಾಮೀಜಿಗಳ ಬಟ್ಟೆ ಹಿಜಾಬ್ಗೆ ಹೋಲಿಸಿ ಹೇಳಿಕೆ ವಿಚಾರ: ಟ್ವೀಟ್ ಮಾಡಿ, ಅಪಪ್ರಚಾರವೆಂದ ವಿಪಕ್ಷ ನಾಯಕ ಸಿದ್ದರಾಮಯ್ಯ!
Published On - 2:07 pm, Mon, 28 March 22