ಗದಗ, ಜು.13: ಮುಡಾ ಸೈಟ್ ಹಂಚಿಕೆಯಲ್ಲಿ ಯಾವ ಹಗರಣವೂ ಆಗಿಲ್ಲ ಎಂದು ಟಿವಿ9 ನಡೆಸಿದ ಸಂದರ್ಶನವೊಂದರಲ್ಲಿ ಮುಖ್ಯಮಂತ್ರಿ ಸಿದ್ದರಾಮಯ್ಯ(Siddaramaiah) ಅವರು ಹೇಳಿದ್ದಾರೆ. ಇದಕ್ಕೆ ಗದಗನಲ್ಲಿ ಪ್ರತಿಕ್ರಿಯಿಸಿದ ಸಂಸದ ಬಸವರಾಜ್ ಬೊಮ್ಮಾಯಿ(Basavaraj Bommai), ‘ಮುಡಾ ಹಗರಣದಲ್ಲಿ ಯಾವುದೇ ಸತ್ಯಾಂಶ ಇಲ್ಲವೆಂದರೆ ಇಷ್ಟು ದೊಡ್ಡ ಚರ್ಚೆ ಆಗುತ್ತಿರಲಿಲ್ಲ ಎಂದು ಸಿಎಂ ಹೇಳಿಕೆಗೆ ಟಾಂಗ್ ಕೊಟ್ಟಿದ್ದಾರೆ.
ಈ ಹಗರಣದಲ್ಲಿ ಏನೂ ಇಲ್ಲ ಅಂದರೆ ಸ್ವತಂತ್ರವಾಗಿ ಯಾಕೆ ತನಿಖೆಗೆ ಹಿಂಜರಿಕೆ. ವಿಚಾರಣೆ ಮಾಡೋದು ಬೇರೆ, ತನಿಖೆ ಮಾಡುವುದು ಬೇರೆ. ಮುಡಾ ಹಗರಣದ ತನಿಖೆಗೆ ಒಪ್ಪಿಸಬೇಕು. ಸಂಪೂರ್ಣವಾಗಿ ಮುಡಾದಲ್ಲಿ ಎಕ್ಸೆಂಜ್ ಸೈಟ್ಗಳು ಯಾವ್ಯಾವು ಇವೆ. ಯಾವ ಸಂದರ್ಭದಲ್ಲಿ, ಯಾರಿಗೆ ನೀಡಿದ್ದೀರಿ ಸಂಪೂರ್ಣ ತನಿಖೆ ಆಗಬೇಕು. ಹೀಗಾಗಿ ಸಿಬಿಐ ತನಿಖೆಗೆ ನೀಡಲಿ. ಯಾವುದೇ ಹಗರಣ ಇಲ್ಲವೆಂದ ಮೇಲೆ ಯಾಕೆ ಭಯ ಪಡಬೇಕು ಎಂದರು ಪ್ರಶ್ನಿಸಿದ್ದಾರೆ.
ಇದನ್ನೂ ಓದಿ:ಸಿದ್ದರಾಮಯ್ಯ ಪತ್ನಿಗೆ ಬಂದ ಜಮೀನು ಸರ್ಕಾರಿ ಭೂಮಿ -ಹೆಚ್ಡಿ ಕುಮಾರಸ್ವಾಮಿ
ಇನ್ನು ಬಹಳ ಸ್ಪಷ್ಟವಾಗಿ ಮಾಧ್ಯಮಗಳು ತೋರಿಸಿಕೊಟ್ಟಿದ್ದೀರಿ. ಸಿಎಂ ಸಿದ್ದರಾಮಯ್ಯ ಬೇಕಾದದ್ದು ಹೇಳಲಿ. ಎಕ್ಸೆಂಜ್ ಸೈಟ್ ಯಾವ ಯಾವ ಲೇಔಟ್ನಲ್ಲಿ ಪಡೆದುಕೊಳ್ಳಬೇಕು ಎನ್ನುವ ಕಾನೂನು ಸ್ಪಷ್ಟವಾಗಿ ಉಲ್ಲಂಘನೆ ಆಗಿದೆ. ಯಾವ ಕಾನೂನು ಉಲ್ಲಂಘನೆ ಆಗಿದೆ ಎಂದು ನಮ್ಮ ಪಕ್ಷದ ನಾಯಕರು ಓದಿ ಹೇಳಿದ್ದಾರೆ. 50/50 ಯಾವ ಲೇಔಟ್ನಲ್ಲಿ ನೀಡಬೇಕು ಅಲ್ಲಿ ನೀಡಿಲ್ಲ.
ಮೇಲ್ನೋಟಕ್ಕೆ ಉಲ್ಲಂಘನೆ ಆಗಿದ್ದು ಸ್ಪಷ್ಟವಾಗಿದೆ. ಯಾವ ಸಂದರ್ಭದಲ್ಲಿ ಸೈಟ್ ಪಡೆದುಕೊಂಡ್ರು, ಯಾವ ರೀತಿ ಪಡೆದುಕೊಂಡರು ಎನ್ನುವ ಪ್ರಶ್ನೆ ಇದೆ ಎಂದರು.
ರಾಜ್ಯದ ಮತ್ತಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ