ವಾಟ್ಸಪ್ ಗ್ರೂಪ್​ನಲ್ಲಿ ಬಂದ ಲಿಂಕ್ ಮೇಲೆ ಕ್ಲಿಕ್ ಮಾಡಿದ, ಅಕೌಂಟ್​ನಲ್ಲಿದ್ದ ಲಕ್ಷ ಲಕ್ಷ ಹಣ ಮಾಯ

ಗದಗ(Gadag) ನಗರದ ರಾಜೀವ್​ ಗಾಂಧಿ ಬಡಾವಣೆ ಪೊಲೀಸ್ ಠಾಣೆ ವ್ಯಾಪ್ತಿಯಲ್ಲಿ ವಾಟ್ಸಪ್ ಗ್ರೂಪ್‌ಗೆ ಬಂದ ಮೆಸೇಜ್​ವೊಂದನ್ನು ಓಪನ್ ಮಾಡಿ ನೋಡಿದ್ದಕ್ಕೆ ಬ್ಯಾಂಕ್​ ಖಾತೆಯಲ್ಲಿದ್ದ ಮೂರುವರೆ ಲಕ್ಷ ಹಣ ಮಾಯವಾಗಿರುವ ಘಟನೆ ನಡೆದಿದೆ. ಸಧ್ಯ ರಾಜೀವ್ ಗಾಂಧಿ ಬಡಾವಣೆ ಪೊಲೀಸ್ ಠಾಣೆಯಲ್ಲಿ‌ ಪ್ರಕರಣ‌ ದಾಖಲಾಗಿದೆ.

ವಾಟ್ಸಪ್ ಗ್ರೂಪ್​ನಲ್ಲಿ ಬಂದ ಲಿಂಕ್ ಮೇಲೆ ಕ್ಲಿಕ್ ಮಾಡಿದ, ಅಕೌಂಟ್​ನಲ್ಲಿದ್ದ ಲಕ್ಷ ಲಕ್ಷ ಹಣ ಮಾಯ
ಗದಗ
Follow us
| Updated By: ಕಿರಣ್ ಹನುಮಂತ್​ ಮಾದಾರ್

Updated on:Jun 07, 2024 | 9:31 PM

ಗದಗ, ಜೂ.07: ವಾಟ್ಸಪ್ ಗ್ರೂಪ್‌ಗೆ ಬಂದ ಮೆಸೇಜ್​ವೊಂದನ್ನು ಓಪನ್ ಮಾಡಿ ನೋಡಿದ್ದಕ್ಕೆ ಬ್ಯಾಂಕ್​ ಖಾತೆಯಲ್ಲಿದ್ದ ಮೂರುವರೆ ಲಕ್ಷ ಹಣ ಮಾಯವಾಗಿರುವ ಘಟನೆ ಗದಗ(Gadag) ನಗರದ ರಾಜೀವ್​ ಗಾಂಧಿ ಬಡಾವಣೆ ಪೊಲೀಸ್ ಠಾಣೆ ವ್ಯಾಪ್ತಿಯಲ್ಲಿ ನಡೆದಿದೆ. ರೋಣ ಶಾಸಕ ಜಿಎಸ್ ಪಾಟೀಲ್​​  ಲೇಔಟ್‌ನಲ್ಲಿ ವಾಸವಾಗಿರುವ ಅನಿಲ್ ಮಲ್ಲಪ್ಪ ಚಿನ್ನಾಪುರ ಎಂಬ ವ್ಯಾಪಾರಿಯೊಬ್ಬರಿಗೆ ಮೊದಲು ವಾಟ್ಸಪ್ ಗ್ರೂಪ್​ನಲ್ಲಿ ಯುನಿಯನ್ ಬ್ಯಾಂಕ್ ಹೆಸರಿನಲ್ಲಿ APK ಲಿಂಕ್ ಮೆಸೇಜ್​ ಬಂದಿದೆ. ಅದನ್ನು ಒಂದು ಬಾರಿ ಅನಿಲ್​ ನೋಡಿ‌ಬಿಟ್ಟಿದ್ದ‌ರು.

ಮರುದಿನವೇ ಯುನಿಯನ್ ಬ್ಯಾಂಕ್ ಹೆಡ್‌ ಎಂದು ಅನಿಲ್​ಗೆ ಓರ್ವ ಫೋನ್​ ಕರೆ ಮಾಡಿದ್ದಾನೆ. ಬಳಿಕ ನಿಮ್ಮ ಬ್ಯಾಂಕ್ ಖಾತೆ ಡಿವ್ ಆಗಿದೆ ಎಂದು ಕೆಲವು ನಿಮಿಷಗಳ ಮಾತುಕತೆ ನಡೆಸಿದ್ದಾರೆ. ನಂತರ ಅರ್ಧಗಂಟೆಯಲ್ಲಿ ಮೊದಲ ಹಂತದಲ್ಲಿ 50 ಸಾವಿರ, 2ನೇ ಹಂತದಲ್ಲಿ 2,25,000 ಹೀಗೆ ಒಟ್ಟು 3,74,998 ರೂಪಾಯಿಯನ್ನು ವಂಚಕರು ಅವರ ಬ್ಯಾಂಕ್​ ಖಾತೆಯಿಂದ ಎಗರಿಸಿದ್ದಾರೆ. ಇದರಿಂದ ಸೈಬರ್ ಕ್ರೈಂ ಠಾಣೆಗೆ ದೂರು‌‌ ನೀಡಲು ಮುಂದಾದಾಗ ತಾಂತ್ರಿಕ ತೊಂದರೆ ಅನುಭವಿಸಿ, ತಡವಾಗಿ ರಾಜೀವ್ ಗಾಂಧಿ ಬಡಾವಣೆ ಪೊಲೀಸ್ ಠಾಣೆಗೆ ದೂರು ನೀಡಿದ್ದಾರೆ.

ಇದನ್ನೂ ಓದಿ:Cyber Crime: ಸೈಬರ್​ ವಂಚನೆಯಲ್ಲಿ 2 ಕೋಟಿ ರೂ. ಕಳೆದುಕೊಂಡ ಕಾಫಿ ಬೆಳಗಾರ

ಈ ಕುರಿತು ಪೊಲೀಸರು ನೀಡಿರುವ ಮಾಹಿತಿ ಪ್ರಕಾರ ಅನಿಲ್ ಅವರ ಖಾತೆಯಿಂದ ಎಗರಿಸಿದ ಮೊತ್ತ,‌ ತಮಿಳುನಾಡು ಹಾಗೂ ಬಾಂಗ್ಲಾದೇಶದಲ್ಲಿರುವ ಖಾತೆಗಳಿಗೆ‌ ಜಮೆ ಆಗಿದೆ ಎಂದು ಮಾಹಿತಿ ನೀಡಿದ್ದಾರೆ. ಇನ್ನು ನಾಗರಿಕರು ಪದೇ ಪದೇ ಸೈಬರ್ ವಂಚನೆಗಳಿಗೆ ಮೋಸ ಹೋಗಿ,‌ ಲಕ್ಷಗಟ್ಟಲೇ ಹಣ ಕಳೆದುಕೊಳ್ಳುತ್ತಿದ್ದು, ಸೈಬರ್ ಕ್ರೈಂ ಪೊಲೀಸ್‌ ಠಾಣೆ ಇದ್ದರೂ ಹಣ‌ ಕಳೆದುಕೊಂಡವರಿಗೆ ನೋ ಯೂಸ್ ಎಂಬಂತಾಗಿದೆ. ಸಧ್ಯ ಬಡಾವಣೆ ಪೊಲೀಸ್ ಠಾಣೆಯಲ್ಲಿ‌ ಪ್ರಕರಣ‌ ದಾಖಲಾಗಿದೆ.

ರಾಜ್ಯದ ಮತ್ತಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ

Published On - 9:10 pm, Fri, 7 June 24

ತಾಜಾ ಸುದ್ದಿ
ರೇಣುಕಾ ಸ್ವಾಮಿ ಕೊಲೆ ಕೇಸ್​ನ ಆರೋಪಿ ದರ್ಶನ್​ ಬಗ್ಗೆ ಸುದೀಪ್​ ಮೊದಲ ಮಾತು
ರೇಣುಕಾ ಸ್ವಾಮಿ ಕೊಲೆ ಕೇಸ್​ನ ಆರೋಪಿ ದರ್ಶನ್​ ಬಗ್ಗೆ ಸುದೀಪ್​ ಮೊದಲ ಮಾತು
ರೇಣುಕಾ ಸ್ವಾಮಿ ಪ್ರಕರಣ: ಕಾರು ಚಾಲಕನ ಕುಟುಂಬದ ಗೋಳು ಕೇಳೋರ್ಯಾರು?
ರೇಣುಕಾ ಸ್ವಾಮಿ ಪ್ರಕರಣ: ಕಾರು ಚಾಲಕನ ಕುಟುಂಬದ ಗೋಳು ಕೇಳೋರ್ಯಾರು?
ಪೆಟ್ರೋಲ್ -ಡೀಸೆಲ್ ದರ ಏರಿಕೆ ವಿರುದ್ಧ ನಾರಿಯರು ಕಿಡಿ
ಪೆಟ್ರೋಲ್ -ಡೀಸೆಲ್ ದರ ಏರಿಕೆ ವಿರುದ್ಧ ನಾರಿಯರು ಕಿಡಿ
ರೇಣುಕಾ ಸ್ವಾಮಿ ಅಪಹರಣಕ್ಕೆ ಬಳಕೆ ಆಗಿದ್ದ ಕಾರು ಜಪ್ತಿ; ಇಲ್ಲಿದೆ ವಿಡಿಯೋ..
ರೇಣುಕಾ ಸ್ವಾಮಿ ಅಪಹರಣಕ್ಕೆ ಬಳಕೆ ಆಗಿದ್ದ ಕಾರು ಜಪ್ತಿ; ಇಲ್ಲಿದೆ ವಿಡಿಯೋ..
ಬಳ್ಳಾರಿ: ನೋಬಲ್ ಬುಕ್ ಆಫ್ ರೆಕಾರ್ಡ್ಸ್​​​ಗೆ ಸೇರಿದ 4 ತಿಂಗಳ ಮಗು ಸಾಯಿರಾ
ಬಳ್ಳಾರಿ: ನೋಬಲ್ ಬುಕ್ ಆಫ್ ರೆಕಾರ್ಡ್ಸ್​​​ಗೆ ಸೇರಿದ 4 ತಿಂಗಳ ಮಗು ಸಾಯಿರಾ
ಶ್ವಾಸಕೋಶದ ಸಾಮರ್ಥ್ಯ ಹೆಚ್ಚಿಸುವ ಆಸನ ಅರ್ಧ ಚಕ್ರಾಸನ
ಶ್ವಾಸಕೋಶದ ಸಾಮರ್ಥ್ಯ ಹೆಚ್ಚಿಸುವ ಆಸನ ಅರ್ಧ ಚಕ್ರಾಸನ
ಪವಿತ್ರಾ ಗೌಡ ಮನೆಯಲ್ಲಿ ಮಹಜರು; ಹೇಗಿದೆ ಕೊಲೆ ಆರೋಪಿಯ ಬಂಗಲೆ?
ಪವಿತ್ರಾ ಗೌಡ ಮನೆಯಲ್ಲಿ ಮಹಜರು; ಹೇಗಿದೆ ಕೊಲೆ ಆರೋಪಿಯ ಬಂಗಲೆ?
ವಿಡಿಯೋ: ಆದಿಚುಂಚನಗಿರಿಗೆ ಸೆಂಟ್ರಲ್ ಮಿನಿಸ್ಟರ್ ಕುಮಾರಣ್ಣ ಖಡಕ್​ ಎಂಟ್ರಿ
ವಿಡಿಯೋ: ಆದಿಚುಂಚನಗಿರಿಗೆ ಸೆಂಟ್ರಲ್ ಮಿನಿಸ್ಟರ್ ಕುಮಾರಣ್ಣ ಖಡಕ್​ ಎಂಟ್ರಿ
ತೈಲ ​​​ದರ ಏರಿಕೆ: ಕಿವಿಗೆ ಹೂ, ಕೈಯಲ್ಲಿ ಚಿಪ್ಪು ಹಿಡಿದು ಸಿಟಿ ರವಿ ಧರಣಿ
ತೈಲ ​​​ದರ ಏರಿಕೆ: ಕಿವಿಗೆ ಹೂ, ಕೈಯಲ್ಲಿ ಚಿಪ್ಪು ಹಿಡಿದು ಸಿಟಿ ರವಿ ಧರಣಿ
ರೇಣುಕಾ ಸ್ವಾಮಿ ಕೊಲೆ ಕೇಸ್​; ಆರೋಪಿಗಳನ್ನು ನೋಡಲು ಮುಗಿಬಿದ್ದ ಜನ
ರೇಣುಕಾ ಸ್ವಾಮಿ ಕೊಲೆ ಕೇಸ್​; ಆರೋಪಿಗಳನ್ನು ನೋಡಲು ಮುಗಿಬಿದ್ದ ಜನ