ವನ್ಯಜೀವಿ ಧಾಮ ಕಪ್ಪತ್ತಗುಡ್ಡದ ಮೇಲೆ ಅದೊಂದು ಕಂಪನಿಯ ಕಣ್ಣು: ಚಿನ್ನದ ಗಣಿ ಕಂಪನಿಗೆ ಶುರುವಾಯ್ತು ಢವಢವ!

ಉತ್ತರ ಕರ್ನಾಟಕದ ಸಹ್ಯಾದ್ರಿ ಕಪ್ಪತ್ತಗುಡ್ಡ ಒಡಲಲ್ಲಿ ಪಂಚ ಖನಿಜ ಸಂಪತ್ತು ಇದೆ. ಅಪಾರ ಚಿನ್ನದ ಖನಿಜವೇ ತನ್ನೊಡಲಿನಲ್ಲಿಕೊಟ್ಟಿಂಡಿದೆ. ಹೀಗಾಗಿ ಶತಾಗತಾಯ ಕಪ್ಪತ್ತಗುಡ್ಡ ಬಗೆದು ಬರಿದು ಮಾಡಲು ಅದೊಂದು ಕಂಪನಿ ನಿರಂತ ದುಂಬಾಲು ಬಿಂದಿದೆ.

ವನ್ಯಜೀವಿ ಧಾಮ ಕಪ್ಪತ್ತಗುಡ್ಡದ ಮೇಲೆ ಅದೊಂದು ಕಂಪನಿಯ ಕಣ್ಣು: ಚಿನ್ನದ ಗಣಿ ಕಂಪನಿಗೆ ಶುರುವಾಯ್ತು ಢವಢವ!
ಕಪ್ಪತ್ತಗುಡ್ಡ
Follow us
ಸಂಜೀವ ಕುಮಾರ್​ ಪಾಂಡ್ರೆ, ಗದಗ
| Updated By: ಗಂಗಾಧರ​ ಬ. ಸಾಬೋಜಿ

Updated on: Aug 20, 2023 | 8:33 PM

ಗದಗ, ಆಗಸ್ಟ್​ 20: ಅದು ಚಿನ್ನವೇ ಒಡಲಲ್ಲಿ ಇಟ್ಟುಕೊಂಡು ಸಂಪತ್ತಿನ ಗುಡ್ಡ (Kappatagudda). ಆ ಗುಡ್ಡ ಸತಾಯಗತಾಯ ಲೂಟಿ ಮಾಡಲೇಬೇಕು ಅಂತ ಚಿನ್ನದ ಗಣಿ ಕಂಪನಿಯೊಂದು ಸಂಚು ರೂಪಿಸ್ತಾನೇ ಇದೆ. ಹೀಗಾಗಿ ಆ ಜಿಲ್ಲೆ ಜನರು ಆ ಸಂಪತ್ತು ಉಳಿಸಿಕೊಳ್ಳು ಹೋರಾಟ ಮಾಡಿದ್ದರು. ಹೀಗಾಗಿ ಸರ್ಕಾರ ವನ್ಯಜೀವಿ ಧಾಮ ಅಂತ ಘೋಷಣೆ ಮಾಡಿತ್ತು. ಆದರೂ ಆ ಕಂಪನಿ ಮಾತ್ರ ತನ್ನ ಹಠ ಬಿಟ್ಟಿಲ್ಲ. ನಿರಂತರ ಸರ್ಕಾರಕ್ಕೆ ಒತ್ತಡ ಹಾಕ್ತಾನೆ ಇದೆ. ಅಷ್ಟೇ ಅಲ್ಲ ಈ ಅರಣ್ಯ ಪ್ರದೇಶದಲ್ಲಿ ವನ್ಯಜೀವಿಗಳೇ ಇಲ್ಲ. ಹೀಗಾಗಿ ವನ್ಯಜೀವಿ ಧಾಮ ಘೋಷಣೆ ರದ್ದು ಮಾಡುವಂತೆ ಕೋರ್ಟ್​ಗೆ ಹೋಗಿದೆ. ಆದರೆ ಈಗ ಆ ಕಂಪನಿಗೆ ಢವಢವ ಶರುವಾಗಿದೆ. ಯಾಕೇ ಅಂತಿರಾ ಮುಂದೆ ಓದಿ.

ಉತ್ತರ ಕರ್ನಾಟಕದ ಸಹ್ಯಾದ್ರಿ ಕಪ್ಪತ್ತಗುಡ್ಡ ಒಡಲಲ್ಲಿ ಪಂಚ ಖನಿಜ ಸಂಪತ್ತು ಇದೆ. ಅಪಾರ ಚಿನ್ನದ ಖನಿಜವೇ ತನ್ನೊಡಲಿನಲ್ಲಿಕೊಟ್ಟಿಂಡಿದೆ. ಹೀಗಾಗಿ ಶತಾಗತಾಯ ಕಪ್ಪತ್ತಗುಡ್ಡ ಬಗೆದು ಬರಿದು ಮಾಡಲು ಅದೊಂದು ಕಂಪನಿ ನಿರಂತ ದುಂಬಾಲು ಬಿಂದಿದೆ. 2018ರಲ್ಲಿ ಸರ್ಕಾರ ವನ್ಯಜೀವಿ ಧಾಮ ಅಂತ ಘೋಷಣೆ ಮಾಡುವ ಮೂಲಕ ಚಿನ್ನದ ಗಣಿ ಕಂಪನಿಗೆ ಶಾಕ್ ನೀಡಿದೆ. ಆದರೂ ಬಲ್ದೊಟಾ ಚಿನ್ನದ ಗಣಿ ಕಂಪನಿ ತನ್ನ ಮೊಂಡುತನ ಮಾತ್ರ ಬಿಡ್ತಾಯಿಲ್ಲ. ಕಪ್ಪತ್ತಗುಡ್ಡ ಪ್ರದೇಶದಲ್ಲಿ ವನ್ಯಜೀವಿಗಳು ಇಲ್ಲ. ಪ್ರಾಣಿ ಪಕ್ಷಗಳು ಇಲ್ಲ. ಕಪ್ಪತ್ತಗುಡ್ಡ ವನ್ಯಜೀವಿ ಧಾಮ ಘೋಷಣೆ ಯೋಗ್ಯತೆ ಇಲ್ಲ ಅಂತ ಮೊಂಡು ವಾದ ಮಾಡುತ್ತಿದೆ.

ಇದನ್ನೂ ಓದಿ: ಪರಸ್ತ್ರೀ ವ್ಯಾಮೋಹ, ಪ್ರಶ್ನಿಸಿದ್ದಕ್ಕೆ ಪತ್ನಿಯನ್ನೇ ಹತ್ಯೆಗೈದ ಸದ್ದಾಂ, ಎರಡು ಮಕ್ಕಳು ಅನಾಥ

ರದ್ದು ಮಾಡಬೇಕು ಅಂತ ನಿರಂತರ ಕೋರ್ಟ್​ನಲ್ಲಿ ವಾದ ಮಾಡ್ತಾಯಿದೆ. ಆದರೆ ಈಗ ಮೊಂಡುತನ ಕಂಪನಿಗೆ ತಕ್ಕಪಾಠ ಕಲಿಸೋಕೆ ಗದಗ ಅರಣ್ಯ ಇಲಾಖೆ ಅಧಿಕಾರಿಗಳು ಮಾಸ್ಟರ್ ಪ್ಲಾನ್ ಮಾಡಿದ್ದು, ಚಿನ್ನ ಕಂಪನಿಗೆ ಢವಢವ ಶುರುವಾಗಿದೆ.

ಗದಗ ಜಿಲ್ಲೆಯ ಸಸ್ಯಕಾಶಿ, ಪಂಚಖನಿಜಗಳ ಸಂಪತ್ತು ಕಪ್ಪತ್ತಗುಡ್ಡ ಕಥೆ. ಕಪ್ಪತ್ತಗುಡ್ಡದಲ್ಲಿ ಚಿನ್ನದ ಗಣಿಗಾರಿಕೆಗೆ ಅನುಮತಿ ನಿರಾಕರಿಸಿದ್ರೂ ಪದೇ ಪದೇ ವ್ಯರ್ಥ ಪ್ರಯತ್ನ ನಡೆಸಿದೆ. ಆದರೆ ಗದಗ ಅರಣ್ಯ ಇಲಾಖೆ ಮಾಸ್ಟರ್ ಪ್ಲಾನ್ ಗೆ ಬಲ್ದೊಟಾ ಕಂಪನಿಗೆ ಢವಢವ ಶುರುವಾಗಿದೆ. ಹೌದು ಕಪ್ಪತ್ತಗುಡ್ಡ ಪ್ರದೇಶದಲ್ಲಿ ಅರಣ್ಯ ಇಲಾಖೆ ಅಧಿಕಾರಿಗಳು ಪ್ರಾಣಿ, ಪಕ್ಷಿಗಳ ಸರ್ವೇ ಮಾಡಿದ್ದಾರೆ.

ಕಪ್ಪತ್ತಗುಡ್ಡ ವಿವಿಧ ಪ್ರದೇಶಗಳಲ್ಲಿ ಕ್ಯಾಮರಾ ಫಿಕ್ಸ್ ಮಾಡಿ ವನ್ಯಮೃಗಳ ಸರ್ವೇ ಮಾಡಿದ್ದಾರೆ. ಸರ್ವೇಯಲ್ಲಿ 5-6ಚಿರತೆಗಳು, ತೋಳ, ಹೈನಾ, ನರಿಗಳು, ನವಿಲುಗಳು ಸೇರಿದಂತೆ ಹಲವಾರು ಅಪರೂಪದ ಪ್ರಾಣಿ, ಪಕ್ಷಿಗಳು ಪತ್ತೆಯಾಗಿವೆ. ಈ ಎಲ್ಲ ದಾಖಲೆಗಳು ಅರಣ್ಯ ಇಲಾಖೆ ನ್ಯಾಯಾಲಯಕ್ಕೆ ಸಲ್ಲಿಸಲು ಸಜ್ಜಾಗಿದೆ.

ಇದನ್ನೂ ಓದಿ: ಗದಗ: ರೈತನಿಗೆ ಗೊತ್ತಿಲ್ಲದೆ ಭೂ ಪರಿವರ್ತನೆ, ಕಂದಾಯ ಇಲಾಖೆ ಅಧಿಕಾರಿಗಳ ಎಡವಟ್ಟಿಗೆ ರೈತ ಕಂಗಾಲು

ಕಪ್ಪತ್ತಗುಡ್ಡದಲ್ಲಿ ಚಿನ್ನ, ಕಬ್ಬಿಣ ಅದಿರು, ತಾಮ್ರ, ಹಿತ್ತಾಳೆ ಸೇರಿ ಪಂಚ ಖನಿಜವಿದೆ. ಹೀಗಾಗಿ ಗಣಿ ಕಂಪನಿಗಳು ಶತಾಯಗತಾಯಿ ಲೂಟಿ ಮಾಡಬೇಕು ಅಂತ ಪ್ಲಾನ್ ಮಾಡಿವೆ. ಹೀಗಾಗಿ 2018-19ರಲ್ಲಿ ಗದಗ ತೋಂಟದಾರ್ಯ ಶ್ರೀಗಳ ನೇತೃತ್ವದಲ್ಲಿ ಕಪ್ಪತ್ತಗುಡ್ಡ ಉಳಿಸಿ ಹೋರಾಟ ಹಿನ್ನಲೆಯಲ್ಲಿ ಅಂದಿನ ಕಾಂಗ್ರೆಸ್ ಸರ್ಕಾರ ವನ್ಯಜೀವಿ ಧಾಮ ಅಂತ ಘೋಷಣೆ ಮಾಡಿದೆ. ಆದರೂ ಬಲ್ದೊಟಾ ಕಂಪನಿ ಪದೇ ಪದೇ ಕಪ್ಪತ್ತಗುಡ್ಡ ದಲ್ಲಿ ಗಣಿಗಾರಿಕೆಗೆ ಅವಕಾಶ ನೀಡುವಂತೆ ಸರ್ಕಾರಕ್ಕೆ ಅರ್ಜಿ ಸಲ್ಲಿಸುತ್ತಿದೆ. ಸರ್ಕಾರ ಗದಗ ಅರಣ್ಯ ಇಲಾಖೆಗೆ ಪ್ರಸ್ತಾವನೆ ಕಳಿಸಿತ್ತು. ಆದ್ರೆ, ಗದಗ ಅರಣ್ಯ ಇಲಾಖೆ ಅಧಿಕಾರಿಗಳು ಬಲ್ದೊಟಾ ಪ್ರಸ್ತಾವನೆ ನಿರಾಕಸಿ ಸರ್ಕಾರಕ್ಕೆ ಫೈಲ್ ವಾಪಸ್ ಕಳಿಸಲಾಗಿದೆ ಅಂತ ಅಧಿಕಾರಿಗಳು ಹೇಳಿದ್ದಾರೆ.

ಶತಾಯಗತಾಯ ಕಪ್ಪತ್ತಗುಡ್ಡದಲ್ಲಿ ಚಿನ್ನ ಬಗೆಯಬೇಕು ಅನ್ನೋ ಬಲ್ದೊಟಾ ಕಂಪನಿ ಕನಸಿಗೆ ಅರಣ್ಯ ಇಲಾಖೆ ಭಗ್ನ ಮಾಡುವ ಎಲ್ಲ ಪ್ಲಾನ್ ಮಾಡಿದೆ. ವನ್ಯಜೀವಿಗಳೇ ಇಲ್ಲ ಅಂತ ವಾದ ಮಾಡಿದ ಕಂಪನಿಗೆ ವನ್ಯಜೀವಿಗಳು ಕಪ್ಪತ್ತಗುಡ್ಡದಲ್ಲಿ ಇವೆ ಅಂತ ದಾಖಲೆ ಸಮೇತ ನೀಡಲು ಅರಣ್ಯ ಇಲಾಖೆ ಸಜ್ಜಾಗಿದ್ದು, ಚಿನ್ನದ ಕಂಪನಿ ಈಗ ಥಂಡಾ ಹೊಡೆದಿದೆ. ಉತ್ತರ ಕರ್ನಾಟಕದ ಸಹ್ಯಾದ್ರಿ ಸಂಪತ್ತು ಯಾವುದೇ ಕಾರಣಕ್ಕೂ ಬಿಟ್ಟು ಕೊಡಲ್ಲ ಅನ್ನೋ ಮಠಾಧೀಶರು, ಪರಿಸವಾದಿಗಳು, ಜನರ ಕೂಗಿಗೆ ಅರಣ್ಯ ಇಲಾಖೆ ಪೂರೈಕವಾಗಿ ಸ್ಪಂದಿಸಿದ್ದು ಸಂತಸ.

ರಾಜ್ಯದ ಮತ್ತಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ.

ಮ್ಯಾಕ್ಸ್ 25 ದಿನ ಪೂರೈಸಿದ್ದಕ್ಕೆ ಅಭಿಮಾನಿಗಳಿಗೆ ಸುದೀಪ್ ಸ್ಪೆಷಲ್ ವಿಡಿಯೋ
ಮ್ಯಾಕ್ಸ್ 25 ದಿನ ಪೂರೈಸಿದ್ದಕ್ಕೆ ಅಭಿಮಾನಿಗಳಿಗೆ ಸುದೀಪ್ ಸ್ಪೆಷಲ್ ವಿಡಿಯೋ
ಖೋ- ಖೋ ವಿಶ್ವಕಪ್ ಗೆದ್ದು ಬೀಗಿದ ಭಾರತ ಮಹಿಳಾ ಪಡೆ
ಖೋ- ಖೋ ವಿಶ್ವಕಪ್ ಗೆದ್ದು ಬೀಗಿದ ಭಾರತ ಮಹಿಳಾ ಪಡೆ
ಪ್ರಯಾಗ್​ರಾಜ್ ಕುಂಭಮೇಳದ ಹಲವು ಟೆಂಟ್​ಗಳಲ್ಲಿ ಅಗ್ನಿ ಜ್ವಾಲೆ ನರ್ತನ
ಪ್ರಯಾಗ್​ರಾಜ್ ಕುಂಭಮೇಳದ ಹಲವು ಟೆಂಟ್​ಗಳಲ್ಲಿ ಅಗ್ನಿ ಜ್ವಾಲೆ ನರ್ತನ
ನಂಜನಗೂಡು ನಂಜುಂಡೇಶ್ವರನ ಆಶೀರ್ವಾದ ಪಡೆದ ಡಾಲಿ ಧನಂಜಯ್
ನಂಜನಗೂಡು ನಂಜುಂಡೇಶ್ವರನ ಆಶೀರ್ವಾದ ಪಡೆದ ಡಾಲಿ ಧನಂಜಯ್
ಹನುಮಂತ ಕೊಟ್ಟ ತಿರುಗೇಟಿಗೆ ರಜತ್ ಕಂಗಾಲು; ಸುದೀಪ್ ಪ್ರತಿಕ್ರಿಯೆ ನೋಡಿ..
ಹನುಮಂತ ಕೊಟ್ಟ ತಿರುಗೇಟಿಗೆ ರಜತ್ ಕಂಗಾಲು; ಸುದೀಪ್ ಪ್ರತಿಕ್ರಿಯೆ ನೋಡಿ..
ಮಹಾಕುಂಭದಲ್ಲಿ ಸ್ನೇಹಿತರೊಂದಿಗೆ ಭಜನೆ ಹಾಡಿದ ಪ್ರಧಾನಿ ಸಹೋದರನ ಮಗ ಸಚಿನ್
ಮಹಾಕುಂಭದಲ್ಲಿ ಸ್ನೇಹಿತರೊಂದಿಗೆ ಭಜನೆ ಹಾಡಿದ ಪ್ರಧಾನಿ ಸಹೋದರನ ಮಗ ಸಚಿನ್
ಭವ್ಯಾ-ತ್ರಿವಿಕ್ರಮ್ ಪ್ರೇಮಕತೆ, ಬಹಿರಂಗ ಮಾಡಿದ ಸುದೀಪ್
ಭವ್ಯಾ-ತ್ರಿವಿಕ್ರಮ್ ಪ್ರೇಮಕತೆ, ಬಹಿರಂಗ ಮಾಡಿದ ಸುದೀಪ್
ಶಿವಲಿಂಗಕ್ಕೆ ಪೂಜೆ ಸಲ್ಲಿಸಿದ ಡಿಕೆಶಿ, ರುದ್ರಾಕ್ಷಿಮಾಲೆ ಹಿಡ್ದು ಜಪ
ಶಿವಲಿಂಗಕ್ಕೆ ಪೂಜೆ ಸಲ್ಲಿಸಿದ ಡಿಕೆಶಿ, ರುದ್ರಾಕ್ಷಿಮಾಲೆ ಹಿಡ್ದು ಜಪ
ನೈಜೀರಿಯಾದಲ್ಲಿ ಗ್ಯಾಸೋಲಿನ್ ಟ್ಯಾಂಕರ್ ಸ್ಫೋಟ, 70 ಮಂದಿ ಸಾವು
ನೈಜೀರಿಯಾದಲ್ಲಿ ಗ್ಯಾಸೋಲಿನ್ ಟ್ಯಾಂಕರ್ ಸ್ಫೋಟ, 70 ಮಂದಿ ಸಾವು
ಜನವರಿ 20 ರಿಂದ 26ರವರೆಗಿನ ವಾರ ಭವಿಷ್ಯ ಮತ್ತು ಗ್ರಹಗಳ ಸಂಚಾರ ತಿಳಿಯಿರಿ
ಜನವರಿ 20 ರಿಂದ 26ರವರೆಗಿನ ವಾರ ಭವಿಷ್ಯ ಮತ್ತು ಗ್ರಹಗಳ ಸಂಚಾರ ತಿಳಿಯಿರಿ