AQI
Sign In

By signing in or creating an account, you agree with Associated Broadcasting Company's Terms & Conditions and Privacy Policy.

Laxmeshwar Bund: ಕೈಗಾ-ಇಳಕಲ್ ಹೆದ್ದಾರಿ ದುರಸ್ತಿಗೆ ಆಗ್ರಹಿಸಿ ಲಕ್ಷ್ಮೇಶ್ವರ ಬಂದ್; ಟೈರ್​ಗೆ ಬೆಂಕಿ ಹಚ್ಚಿ ಆಕ್ರೋಶ

ವಿವಿಧ ಕನ್ನಡ ಪರ ಸಂಘಟನೆಗಳ ಕಾರ್ಯಕರ್ತರು ಎರಡು ದಿನಗಳಿಂದ ನಿರಂತರವಾಗಿ ಪ್ರತಿಭಟನೆ ನಡೆಸುತ್ತಿದ್ದಾರೆ. ಹೋರಾಟಕ್ಕೆ ತೀವ್ರ ಸ್ವರೂಪ ಕೊಡಲು ಇವತ್ತು ಲಕ್ಷ್ಮೇಶ್ವರ ಪಟ್ಟಣ ಬಂದ್ ಗೆ ಕರೆ ನೀಡಲಾಗಿದೆ.

Laxmeshwar Bund: ಕೈಗಾ-ಇಳಕಲ್ ಹೆದ್ದಾರಿ ದುರಸ್ತಿಗೆ ಆಗ್ರಹಿಸಿ ಲಕ್ಷ್ಮೇಶ್ವರ ಬಂದ್; ಟೈರ್​ಗೆ ಬೆಂಕಿ ಹಚ್ಚಿ ಆಕ್ರೋಶ
ಕೈಗಾ-ಇಳಕಲ್ ಹೆದ್ದಾರಿ ದುರಸ್ತಿಗೆ ಆಗ್ರಹಿಸಿ ಲಕ್ಷ್ಮೇಶ್ವರ ಬಂದ್
TV9 Web
| Edited By: |

Updated on: Dec 21, 2022 | 11:27 AM

Share

ಗದಗ: ಜಿಲ್ಲೆಯ ಲಕ್ಷ್ಮೇಶ್ವರ ಸಂಪರ್ಕ ಕಲ್ಪಿಸುವ ರಾಜ್ಯ ಹೆದ್ದಾರಿ ಕಳೆದ ಆರು ತಿಂಗಳಿಂದ ಹದಗೆಟ್ಟದೆ. ಕೈಗಾ-ಇಳಕಲ್ಲ ರಸ್ತೆ ದುರಸ್ತಿಗಾಗಿ ಕಳೆದ ಎರಡು ದಿನಗಳಿಂದ ವಿವಿಧ ಕನ್ನಡ ಪರ ಸಂಘಟನೆಗಳ ಕಾರ್ಯಕರ್ತರು ಪ್ರತಿಭಟನೆ ನಡೆಸುತ್ತಿದ್ದು, ಇಂದು ಲಕ್ಷ್ಮೇಶ್ವರ ಪಟ್ಟಣ ಬಂದ್ ಗೆ ಕರೆ ನೀಡಿದ್ದಾರೆ. ಲಕ್ಷ್ಮೇಶ್ವರ ಪಟ್ಟಣ ಸಂಪೂರ್ಣ ಸ್ತಬ್ಧ ಆಗಿದ್ದು, ಅಂಗಡಿ-ಮುಗ್ಗಟ್ಟುಗಳು ಬಂದಾಗಿವೆ. ವ್ಯಾಪಾರಸ್ಥರು ಸ್ವಯಂ ಪ್ರೇರಿತವಾಗಿ ವ್ಯಾಪಾರ-ವಹಿವಾಟು ಸ್ಥಗಿತಗೊಳಿಸಿ ಬಂದ್​ಗೆ ಬೆಂಬಲ ವ್ಯಕ್ತಪಡಿಸಿದ್ದಾರೆ.

ಮುಂಜಾನೆಯಿಂದ ಬಸ್ ಸಂಚಾರ ಸ್ಥಗಿತಗೊಳಿಸಿ ಹೋರಾಟ ಮಾಡುತ್ತಿರುವ ಕಾರ್ಯಕರ್ತರು, ಟೈರ್​ಗೆ ಬೆಂಕಿ ಹಚ್ಚಿ ಆಕ್ರೋಶ ವ್ಯಕ್ತಪಡಿಸಿದರು. ಈ ವೇಳೆ ಪ್ರತಿಭಟನಾಕಾರರು ಟೈರ್​ಗೆ ಬೆಂಕಿ ಹಚ್ಚಲು ಮುಂದಾಗುತ್ತಿದ್ದಂತೆಯೇ ಪೊಲೀಸರು ತಡೆಯೊಡ್ಡಿದರು. ಈ ಸಂದರ್ಭದಲ್ಲಿ ಪ್ರತಿಭಟನಾಕಾರರು ಹಾಗೂ ಪೊಲೀಸರ ಜೊತೆಗೆ ಮಾತಿನ ಚಕಮಕಿ ನಡೆದಿದೆ. ಕಳೆದ ಆರು ತಿಂಗಳಿಂದ ಕೈಗಾ-ಇಳಕಲ್ಲ್ ರಾಜ್ಯ ಹೆದ್ದಾರಿ ಹದಗೆಟ್ಟಿದ್ದು, ಸಾಕಷ್ಟು ಬಾರಿ ದುರಸ್ತಿಗಾಗಿ ಮನವಿ ಮಾಡಿದರೂ ಅಧಿಕಾರಿಗಳು ಸ್ಪಂದಿಸುತ್ತಿಲ್ಲ. ಹೀಗಾಗಿ ವಿವಿಧ ಕನ್ನಡ ಪರ ಸಂಘಟನೆಗಳ ಕಾರ್ಯಕರ್ತರು ಎರಡು ದಿನಗಳಿಂದ ನಿರಂತರವಾಗಿ ಪ್ರತಿಭಟನೆ ನಡೆಸುತ್ತಿದ್ದಾರೆ.

ಹೋರಾಟಕ್ಕೆ ತೀವ್ರ ಸ್ವರೂಪ ಕೊಡಲು ಇವತ್ತು ಲಕ್ಷ್ಮೇಶ್ವರ ಪಟ್ಟಣ ಬಂದ್ ಗೆ ಕರೆ ನೀಡಲಾಗಿದೆ. ಯಾವುದೇ ಅಹಿತಕರ ಘಟನೆಗಳು ನಡೆಯದಂತೆ ಸಿಪಿಐ ವಿಕಾಸ ಲಮಾಣಿ ನೇತೃತ್ವದಲ್ಲಿ ಪೊಲೀಸ್ ಬಂದೋಬಸ್ತ್ ಕೈಗೊಳ್ಳಲಾಗಿದೆ.

ಪ್ರಮುಖ ಸುದ್ದಿಗಳನ್ನು ಓದಲು ಇದರ ಮೇಲೆ ಕ್ಲಿಕ್ ಮಾಡಿ

Follow Us
ವೇಗ ಅತೀ ವೇಗ... ಅತ್ಯಂತ ವೇಗದಲ್ಲಿ ಚೆಂಡೆಸದ 23 ವರ್ಷದ ಯುವ ವೇಗಿ
ವೇಗ ಅತೀ ವೇಗ... ಅತ್ಯಂತ ವೇಗದಲ್ಲಿ ಚೆಂಡೆಸದ 23 ವರ್ಷದ ಯುವ ವೇಗಿ
ವಿದ್ಯಾರ್ಥಿಗಳು ತಾಂಬೂಲ ಸೇವನೆ ಮಾಡಬಾರದು ಯಾಕೆ?
ವಿದ್ಯಾರ್ಥಿಗಳು ತಾಂಬೂಲ ಸೇವನೆ ಮಾಡಬಾರದು ಯಾಕೆ?
ಇಂದು ಈ ರಾಶಿಯವರಿಗೆ ಪ್ರೀತಿಪಾತ್ರರೊಂದಿಗೆ ಭಿನ್ನಾಭಿಪ್ರಾಯಗಳು ಬರಬಹುದು
ಇಂದು ಈ ರಾಶಿಯವರಿಗೆ ಪ್ರೀತಿಪಾತ್ರರೊಂದಿಗೆ ಭಿನ್ನಾಭಿಪ್ರಾಯಗಳು ಬರಬಹುದು
ಪೆಟ್ರೋಲ್ ಬಂಕ್​ನಲ್ಲಿ ಡೀಸೆಲ್​ನಿಂದ ಗಾಡಿ ತೊಳೆದ ಯುವಕ!
ಪೆಟ್ರೋಲ್ ಬಂಕ್​ನಲ್ಲಿ ಡೀಸೆಲ್​ನಿಂದ ಗಾಡಿ ತೊಳೆದ ಯುವಕ!
ಬಾಗಲಕೋಟೆ ಬೈ ಎಲೆಕ್ಷನ್​​: ಬಿಜೆಪಿ, ಕಾಂಗ್ರೆಸ್​​ ನಡುವೆ ಕರಪತ್ರ ಫೈಟ್
ಬಾಗಲಕೋಟೆ ಬೈ ಎಲೆಕ್ಷನ್​​: ಬಿಜೆಪಿ, ಕಾಂಗ್ರೆಸ್​​ ನಡುವೆ ಕರಪತ್ರ ಫೈಟ್
ವೃದ್ಧನ ತಳ್ಳಿದ ಭದ್ರತಾ ಸಿಬ್ಬಂದಿ ಮೇಲೆ ಸಿಟ್ಟಾದ ದಳಪತಿ ವಿಜಯ್: ವಿಡಿಯೋ
ವೃದ್ಧನ ತಳ್ಳಿದ ಭದ್ರತಾ ಸಿಬ್ಬಂದಿ ಮೇಲೆ ಸಿಟ್ಟಾದ ದಳಪತಿ ವಿಜಯ್: ವಿಡಿಯೋ
ಲವ್ ಜಿಹಾದ್ ಕೇಸ್​: 50ಕ್ಕೂ ಹೆಚ್ಚು ಜನರಿಂದ ಸಮೀರ್​ಗೆ ಮನಸೋ ಇಚ್ಛೆ ಥಳಿತ
ಲವ್ ಜಿಹಾದ್ ಕೇಸ್​: 50ಕ್ಕೂ ಹೆಚ್ಚು ಜನರಿಂದ ಸಮೀರ್​ಗೆ ಮನಸೋ ಇಚ್ಛೆ ಥಳಿತ
ಕೇರಳದಲ್ಲಿ ಪ್ರಧಾನಿ ಮೋದಿ ಮೆಗಾ ರೋಡ್ ಶೋ
ಕೇರಳದಲ್ಲಿ ಪ್ರಧಾನಿ ಮೋದಿ ಮೆಗಾ ರೋಡ್ ಶೋ
ಸಿಎಂ ಮಮತಾ ಬ್ಯಾನರ್ಜಿ ಅವರ ಹೆಲಿಕಾಪ್ಟರ್ ಬಳಿ ಅನುಮಾನಾಸ್ಪದ ಡ್ರೋನ್ ಹಾರಾಟ
ಸಿಎಂ ಮಮತಾ ಬ್ಯಾನರ್ಜಿ ಅವರ ಹೆಲಿಕಾಪ್ಟರ್ ಬಳಿ ಅನುಮಾನಾಸ್ಪದ ಡ್ರೋನ್ ಹಾರಾಟ
ಬಿಜೆಪಿಗರಿಗೆ ನಾನೇ ಟಾರ್ಗೆಟ್​​ ಎಂದ ಸಿಎಂ: ಕಾರಣವನ್ನೂ ಕೊಟ್ಟ ಸಿದ್ದರಾಮಯ್ಯ
ಬಿಜೆಪಿಗರಿಗೆ ನಾನೇ ಟಾರ್ಗೆಟ್​​ ಎಂದ ಸಿಎಂ: ಕಾರಣವನ್ನೂ ಕೊಟ್ಟ ಸಿದ್ದರಾಮಯ್ಯ