ಗದಗ ಹೆದ್ದಾರಿಯಲ್ಲಿ ಸಿಕ್ತು ಯುವಕನ ಶವ, ಯುವ ಜೋಡಿಯೊಂದು ಅವನನ್ನು ಹತ್ಯೆ ಮಾಡಿತ್ತು? ಕಾರಣ ಏನು ಗೊತ್ತಾ?
ಯುವಕನೋರ್ವ ಏಪ್ರಿಲ್ 1 ರಂದು ಹೆದ್ದಾರಿಯಲ್ಲಿ ಹೆಣವಾಗಿದ್ದ. ಈ ಕೊಲೆಗೆ ಬಿಗ್ ಟ್ವಿಸ್ಟ್ ಸಿಕ್ಕಿದೆ. ಜೋಡಿ ಹಕ್ಕಿಗಳು ಯವಕನ ಕೊಂದು ಅಪಘಾತ ಅಂತ ಕಥೆ ಕಟ್ಟಿದ್ದರು.
ಗದಗ: ಆತ ಆ ಮನೆಯ ಮುದ್ದಿನ ಮಗ, ಇನ್ನೆರಡು ವರ್ಷದಲ್ಲಿ ಮದುವೆ ಮಾಡಬೇಕು ಅಂತ ಮನೆಯವರು ಹತ್ತಾರು ಕನಸು ಕಂಡಿದ್ದರು. ಆತನು ಕೂಡಾ ಇಡೀ ಕುಟುಂಬದ ಜವಾಬ್ದಾರಿ ತೆಗೆದುಕೊಂಡು ಜೀವನ ನಡೆಸುತ್ತಿದ್ದ. ಆದರೆ ಆತ ಏಪ್ರಿಲ್ 1 ರಂದು ಹೆದ್ದಾರಿಯಲ್ಲಿ ಹೆಣವಾಗಿದ್ದ. ಈ ಕೊಲೆಗೆ ಬಿಗ್ ಟ್ವಿಸ್ಟ್ ಸಿಕ್ಕಿದೆ. ಜೋಡಿ ಹಕ್ಕಿಗಳು ಯವಕನ ಕೊಂದು ಅಪಘಾತ ಅಂತ ಕಥೆ ಕಟ್ಟಿದ್ದರು. ಈಗ ಕೊಂದ ಕಿರಾತಕರೇ ಸತ್ಯ ಒಪ್ಪಿಕೊಂಡಿದ್ದು, ಹಂತಕ ಜೋಡಿ ಪ್ರೇಮಿಗಳನ್ನು ಈಗ ಪೊಲೀಸರು ಹೆಡೆಮುರಿ ಕಟ್ಟಿದ್ದಾರೆ.
ಏಪ್ರಿಲ್ 1 ರಂದು ಗದಗ ತಾಲೂಕಿನ ಕಳಸಾಪುರ ಗ್ರಾಮದ ಯುವಕನ ಭೀಕರ ಹತ್ಯೆಯಾಗಿತ್ತು. ಅಂದಹಾಗೇ ಕಳಸಾಪುರ ಗ್ರಾಮದ ನಿವಾಸಿಯಾದ ಸುನೀಲ್ ಚಲವಾದಿ ರಾಷ್ಟ್ರೀಯ ಹೆದ್ದಾರಿಯಲ್ಲಿ ಹೆಣವಾಗಿ ಬಿದ್ದದ್ದ. ಭೀಕರ ಅಪಘಾತವಾಗಿ ಮೃತ ಪಟ್ಟಿದ್ದಾನೆ ಅಂತ ಎಲ್ಲರೂ ಅಂದ್ಕೊಂಡಿದ್ರು. ಆದ್ರೆ, ಕುಟುಂಬಸ್ಥರು ಮಾತ್ರ ಇದು ಅಪಘಾತ ಅಲ್ಲ ಕೊಲೆ ಅಂತ ಆವತ್ತೆ ಹೇಳಿದ್ರು. ಗದಗ ಗ್ರಾಮೀಣ ಪೊಲೀಸ್ ಠಾಣೆಯಲ್ಲಿ ದೂರು ನೀಡಲಾಯಿತು. ಪೊಲೀಸರಿಗೂ ಈ ಪ್ರಕರಣ ತೀವ್ರ ತಲೆನೋವಾಗಿತ್ತು. ಯಾವುದೇ ಸುಳಿವು ಬಿಡದೇ ಹಂತಕರು ಎಸ್ಕೇಪ್ ಆಗಿದ್ರು. ಆದ್ರೆ, ಕೊಲೆಯಾದ ಸುನಿಲ್ ಮೊಬೈಲ್ ಗೆ ಬಂದ ಕಾಲ್ ರಿಕಾರ್ಡ್ ಪರಿಶೀಲನೆ ಮಾಡಲಾಗಿದ್ದು ಇದೇ ಒಂದು ಸಣ್ಣ ಕ್ಲ್ಯೂ ಹಿಡ್ಕೊಂಡ ತನಿಖೆಗೆ ಇಳಿದ ಪೊಲೀಸರಿಗೆ ಬಿಕ್ ಶಾಕ್ ಆಗಿದೆ.
ಇದನ್ನೂ ಓದಿ: Gadag: 2 ಬೈಕ್ಗೆ ಕಾರು ಡಿಕ್ಕಿ: ಬೈಕ್ನಲ್ಲಿ ತೆರಳುತ್ತಿದ್ದ ಮೂವರು ಸಾವು
ಹೌದು ಸುನಿಲ್ ಚಲವಾದಿಯನ್ನು ಕೊಂದವ್ರು ಜೋಡಿ ಹಕ್ಕಿಗಳು. ಅಂದ್ರೆ ಯುವ ಪ್ರೇಮಿಗಳು. ಕಳಸಾಪೂರ ಗ್ರಾಮದ ರೇಷ್ಮಾ ಚಲವಾದಿ, ಜಗದೀಶ ಚವ್ಹಾಣ ಎಂಬುವವರಿ ಸುನಿಲ್ ಕೊಂದ ಕೊಲೆಗಾರರು. ಕೊಲೆಯಾದ ಸುನೀಲ್ ರೇಷ್ಮಾ ಚಲವಾದಿಗೆ ಚುಡಾಯಿಸುತ್ತಿದ್ದಂತೆ. ಹೀಗಾಗಿ ರೋಸಿಹೋದ ರೇಷ್ಮಾ, ತನ್ನ ಲವರ್ ಜಗದೀಶ್ ಗೆ ಹೇಳಿದ್ದಾರೆ. ಇಬ್ಬರು ಸೇರಿ ಸುನಿಲ್ ಮುಗಿಸಲು ಪ್ಲಾನ್ ಮಾಡಿ ಅಡವಿಸೋಮಾರು ಹೆದ್ದಾರಿಗೆ ಕರೆಸಿ ಮಾರಕಾಸ್ತ್ರದಿಂದ ಹೊಡೆದು ಕೊಂದಿದ್ದಾರೆ.
ಏಪ್ರಿಲ್1 ರಂದು ರಾತ್ರಿ ಆರೋಪಿಗಳಾದ ರೇಷ್ಮಾ, ಜಗದೀಶ್ ಬೇರೆಯವ್ರ ಮೊಬೈಲ್ ಮೂಲಕ ಸುನೀಲ್ ಗೆ ಕಾಲ್ ಮಾಡಿ ಕರೆಸಿ ಕೊಂದಿದ್ದಾರೆ ಅನ್ನೋದು ಪೊಲೀಸ್ ತನಿಖೆಯಲ್ಲಿ ಗೋತ್ತಾಗಿದೆ. ಹಾಗೂ ಆರೋಪಿಗಳು ನಾವೇ ಕೊಂದಿದ್ದು, ಅಂತ ತನಿಖೆಯಲ್ಲಿ ಬಾಯಿಬಿಟ್ಟಿದ್ದಾರೆ. ಗದಗ ತಾಲೂಕಿನ ಅಡಿವಿಸೋಮಾಪುರ ಗ್ರಾಮದ ಬಳಿ ಹೆದ್ದಾರಿಯಲ್ಲಿ ಸುನೀಲ್ನನ್ನು ಕೊಂದು ಬಳಿಕ ಬೈಕ್ ಅಪಘಾತವಾಗಿದೆ ಅಂತ ಕಥೆ ಸೃಷ್ಠಿ ಮಾಡಿದ್ದರು. ಕೊಲೆಯಾದ ಸುನೀಲ್ ಕುಟುಂಬ ಕೂಡ ಇದು ಅಪಘಾತ ಅಲ್ಲ ಕೊಲೆ ಅಂತ ಹಠ ಹಿಡಿದು ದೂರು ನೀಡಿತ್ತು. ಅಲರ್ಟ್ ಆದ ಗ್ರಾಮೀಣ ಪೊಲೀಸ್ರು ತನಿಖೆ ಮಾಡಿ ಆರೋಪಿಗಳ ಹೆಡೆಮುರಿ ಕಟ್ಟಿದ್ದಾರೆ. ಮಾಡಬಾರದ್ದು ಮಾಡಿ ಆರೋಪಿಗಳು ಈ ಜೈಲು ಸೇರಿದ್ದಾರೆ. ಕೊಲೆಯಾದ ಸುನಿಲ್ ಕುಟುಂಬ ಕೂಡ ಕೊಲೆಗಾರರಿಗೆ ತಕ್ಕ ಶಿಕ್ಷೆ ಆಗಬೇಕು ಅಂತ ಒತ್ತಾಯಿಸಿದ್ದಾರೆ.
ಬಾಳಿ ಬದುಕಬೇಕಾದ ಹದಿಹರೆಯದ ಸುನೀಲ್ನನ್ನು ಕಳೆದುಕೊಂಡು ಇಡೀ ಕುಟುಂಬ ಕಣ್ಣೀರು ಹಾಕುತ್ತಿದೆ. ಗದಗ ಗ್ರಾಮೀಣ ಪೊಲೀಸರು ಪ್ರಕರಣ ಭೇದಿಸಿ ಹಂತಕರನ್ನು ಜೈಲಿಗಟ್ಟಿದ್ದಾರೆ. ಮಾಡಬಾರದ್ದು ಮಾಡಿದ ಜೋಡಿ ಹಕ್ಕಿಗಳು ಜೈಲಿನಲ್ಲಿ ಮುದ್ದೆ ಮುರಿಯುತ್ತಿದ್ದಾರೆ.
ಮತ್ತಷ್ಟು ಅಪರಾಧ ಸುದ್ದಿಗಳನ್ನು ಓದಲು ಇದರ ಮೇಲೆ ಕ್ಲಿಕ್ ಮಾಡಿ