ಇನ್ನೂ ರೈತನ ಕೈ ಸೇರದ ಕೋಟ್ಯಂತರ ರೂ ಬೆಳೆ ವಿಮೆ ಪರಿಹಾರ! ಬೆಳೆ ವಿಮೆಯಲ್ಲಿ ಕೋಟ್ಯಂತರ ರೂಪಾಯಿ ಗೋಲ್ಮಾಲ್ ನಡೆದಿದೆಯಾ?

ಇನ್ನೂ ರೈತನ ಕೈ ಸೇರದ ಕೋಟ್ಯಂತರ ರೂ ಬೆಳೆ ವಿಮೆ ಪರಿಹಾರ! ಬೆಳೆ ವಿಮೆಯಲ್ಲಿ ಕೋಟ್ಯಂತರ ರೂಪಾಯಿ ಗೋಲ್ಮಾಲ್ ನಡೆದಿದೆಯಾ?
ಇನ್ನೂ ರೈತನ ಕೈ ಸೇರದ ಕೋಟ್ಯಂತರ ರೂ ಬೆಳೆ ವಿಮೆ ಪರಿಹಾರ! ಬೆಳೆ ವಿಮೆಯಲ್ಲಿ ಕೋಟ್ಯಂತರ ರೂಪಾಯಿ ಗೋಲ್ಮಾಲ್ ನಡೆದಿದೆಯಾ?

ರೈತರು ಒಂದು ಹೆಕ್ಟೇರ್ ಪ್ರದೇಶಕ್ಕೆ 15 ರಿಂದ 20 ಸಾವಿರ ರೂಪಾಯಿ ಬೆಳೆ ವಿಮೆಯನ್ನು ಕಟ್ಟಿದ್ದಾರೆ. ಕಳೆದ ವರ್ಷ ಅತಿಯಾದ ಮಳೆಯಿಂದ ಬೆಳೆಯನ್ನು ಕಳೆದುಕೊಂಡು ರೈತರು ಕಂಗಾಲಾಗಿದ್ದಾರೆ. ಆದ್ರೆ ಬೆಳೆ ವಿಮೆ ಮಾತ್ರ ಬಂದಿಲ್ಲಾ ಅಂತಾರೆ.

TV9kannada Web Team

| Edited By: sadhu srinath

Jun 23, 2022 | 7:46 PM

ಗದಗ ಜಿಲ್ಲೆಗೆ ರಾಜ್ಯದಲ್ಲೇ ಅತೀ ಹೆಚ್ಚು ಸಂಖ್ಯೆಯಲ್ಲಿ ಕೋಟ್ಯಂತರ ರೂಪಾಯಿ ಬೆಳೆ ವಿಮೆ ಪರಿಹಾರ ಹಣ ಬಂದಿದೆ. ಆದ್ರೆ, ಶೇಕಡಾ 60ರಷ್ಟು ರೈತರಿಗೆ ಇನ್ನೂ ನೈಯಾ ಪೈಸೆ ವಿಮೆ ಹಣ ಬಂದಿಲ್ಲ! ಹೀಗಾಗಿ ನಿತ್ಯವೂ ರೈತರು ಬೆಳೆ ವಿಮೆ ಹಣಕ್ಕಾಗಿ ಜಿಲ್ಲಾಧಿಕಾರಿಗಳ ಕಚೇರಿ ಮೆಟ್ಟಿಲೇರುವಂತೆ ಮಾಡಿದೆ. ಕಳೆದ ವರ್ಷ ಅತಿಯಾದ ಮಳೆಯಿಂದ ಅಪಾರ ಪ್ರಮಾಣದ ಬೆಳೆ ನಾಶವಾಗಿದೆ. ಆದ್ರೂ ಬೆಳೆ ಚೆನ್ನಾಗಿದೆ ಅಂತ ರೈತರಿಗೆ ವಿಮೆ ಕಂಪನಿಯು ವಿಮೆ ಹಣ ನೀಡಿಲ್ಲ. ಇದು ಅನ್ನದಾತರ ಆಕ್ರೋಶಕ್ಕೆ ಕಾರಣವಾಗಿದೆ. ಜಿಲ್ಲೆಗೆ ಅತೀ ಹೆಚ್ಚು ಬೆಳೆ ವಿಮೆ ಹಣ ಬಂದ್ರೂ ಹಣ ಎಲ್ಲಿಗೆ ಹೋಯ್ತು ಅನ್ನೋ ಯಕ್ಷ ಪ್ರಶ್ನೆ ರೈತರನ್ನು ಕಾಡುತ್ತಿದೆ. ಹೀಗಾಗಿ ಬೆಳೆ ವಿಮೆಯಲ್ಲಿ ಗೋಲ್ಮಾಲ್ ನಡೆದಿದೆಯಾ ಅನ್ನೋ ಅನುಮಾನ ಕಾಡ್ತಾಯಿದೆ.

ಗದಗ ಜಿಲ್ಲೆಗೆ ಬರೊಬ್ಬರಿ 82.82 ಕೋಟಿ ರೂಪಾಯಿ ಬೆಳೆ ವಿಮೆ ಹಣ ಬಂದಿದೆ. ವಿಪರ್ಯಾಸ ಅಂದ್ರೆ ಶೇಕಡಾ 60 ರೈತರಿಗೆ ಬೆಳೆ ವಿಮೆಯೇ ಸಿಕ್ಕಿಲ್ಲಾ ಅನ್ನೋ ಗಂಭೀರ ಆರೋಪ ಕೇಳಿ ಬಂದಿದೆ. ಬೆಳೆ ವಿಮೆ ಸಮರ್ಪಕವಾಗಿ ಸಿಕ್ಕಿಲ್ಲಾ ಎನ್ನುವುದು ರೈತರ ಗಂಭೀರ ವಾದ. ಅಂದಹಾಗೇ ಕಳೆದ ವರ್ಷ ಗದಗ ಜಿಲ್ಲೆಯಲ್ಲಿ ಅತಿಯಾದ ಮಳೆಯಿಂದ ಅಪಾರ ಪ್ರಮಾಣದ ಬೆಳೆ ನಾಶವಾಗಿದೆ. ಅತಿವೃಷ್ಠಿಯಿಂದ ಈರುಳ್ಳಿ, ಮೆಣಸಿನಕಾಯಿ, ಶೇಂಗಾ, ಹೆಸರು, ಕಡಲೆ, ಹತ್ತಿ, ಸೇರಿದಂತೆ ಹಲವು ಬೆಳೆಗಳು ಮಳೆಯಿಂದ ಸರ್ವನಾಶವಾಗಿದೆ.

ಹಾನಿಯಾದ ಪ್ರದೇಶಗಳಿಗೆ ಖುದ್ದಾಗಿ ಕೃಷಿ ಅಧಿಕಾರಿಗಳು ಹಾಗೂ ಕಂದಾಯ ಇಲಾಖೆ ಅಧಿಕಾರಿಗಳು ಹಾನಿಯಾದ ಪ್ರದೇಶಗಳಿಗೆ ಭೇಟಿ ಮಾಡಿ ಪರಿಶೀಲನೆ ಮಾಡಿದ್ದರು. ಆದ್ರೆ ಈವಾಗ 2021-22ರ ಬೆಳೆ ವಿಮೆ ಹಣ ಪ್ರಕಟವಾಗಿದ್ದು, ಬಹುತೇಕ ರೈತರಿಗೆ ಮಾತ್ರ ಬೆಳೆ ವಿಮೆ ಬಂದಿಲ್ವಂತೆ. ಗದಗ ತಾಲೂಕಿನ ತಿಮ್ಮಾಪುರ, ಹರ್ಲಾಪುರ, ಲಕ್ಕುಂಡಿ ಸೇರಿದಂತೆ ಜಿಲ್ಲೆಯ ಹಲವಾರು ಗ್ರಾಮಗಳ ರೈತರಿಗೆ ಬೆಳೆ ವಿಮೆ ಬಂದಿಲ್ಲಾ ಅಂತ ರೈತರು ಆರೋಪಿಸಿದ್ದಾರೆ.

ಹೀಗಾಗಿ ರೈತರು ಅಧಿಕಾರಿಗಳ ವಿರುದ್ಧ ಆಕ್ರೋಶ ವ್ಯಕ್ತಪಡಿಸಿದ್ದಾರೆ. ನಾವು ಸಾಲ ಸೂಲ ಮಾಡಿ ಬೆಳೆ ವಿಮೆಯನ್ನು ಕಟ್ಟಿದ್ದೇವೆ, ಅಧಿಕಾರಿಗಳು ಹಾನಿಯನ್ನು ಪರಿಶೀಲನೆ ಮಾಡಿದ್ದಾರೆ. ಶೇಕಡಾ 90 ರಷ್ಟು ಹಾನಿಯಾಗಿದೆ ಎಂದು ವರದಿ ನೀಡುತ್ತೇನೆ ಅಂತಾ ಹೇಳಿದ್ದರು, ಆದ್ರೆ ಕೇವಲ ಶೇಕಡಾ 3 ರಷ್ಟು ಹಾನಿಯಾಗಿದೆ ಎಂದು ವರದಿ ನೀಡಿದ್ದು, ಬೆಟಗೇರಿ ಹೊಂಬಳಿಗೆ ನಯಾ ಪೈಸೆ ಬೆಳೆ ವಿಮೆ ಬಂದಿಲ್ಲಾ ಎಂದು ರೈತರಾದ ಯಲ್ಲಪ್ಪ ಬಾಬರಿ, ಆನಂದ ಗರಂ ಆಗಿದ್ದಾರೆ.

ಇನ್ನು ರೈತರು ಒಂದು ಹೆಕ್ಟೇರ್ ಪ್ರದೇಶಕ್ಕೆ 15 ರಿಂದ 20 ಸಾವಿರ ರೂಪಾಯಿ ಬೆಳೆ ವಿಮೆಯನ್ನು ಕಟ್ಟಿದ್ದಾರೆ. ಕಳೆದ ವರ್ಷ ಅತಿಯಾದ ಮಳೆಯಿಂದ ಬೆಳೆಯನ್ನು ಕಳೆದುಕೊಂಡು ರೈತರು ಕಂಗಾಲಾಗಿದ್ದಾರೆ. ಆದ್ರೆ ಬೆಳೆ ವಿಮೆ ಮಾತ್ರ ಬಂದಿಲ್ಲಾ ಅಂತಾರೆ. ಇನ್ನೂ ಇಡೀ ರಾಜ್ಯದಲ್ಲಿ ಅತಿ ಹೆಚ್ಚು ಬೆಳೆ ವಿಮೆ ಗದಗ ಜಿಲ್ಲೆಗೆ ಬಂದಿದೆ. 82 .82 ಕೋಟಿ ರೂಪಾಯಿ ಜಿಲ್ಲೆಗೆ ಹರಿದು ಬಂದಿದೆ.

ಜಿಲ್ಲೆಯಾದ್ಯಂತ 1.37.412 ಹೆಕ್ಟೇರ್ ಪ್ರದೇಶಕ್ಕೆ ಬೆಳೆದ ಬೆಳೆಗೆ ಬೆಳೆ ವಿಮೆ ಮಾಡಲಾಗಿದೆ. 1 ಲಕ್ಷ 17 ಸಾವಿರ 249 ರೈತರು ಬೆಳೆ ವಿಮೆಯನ್ನು ಕಟ್ಟಿದ್ದಾರೆ. ಆ ಪೈಕಿ 42 ಸಾವಿರ 787 ರೈತರಿಗೆ ಬೆಳೆ ವಿಮೆ ಬಂದಿದೆ. ಆದ್ರೆ ಇನ್ನೂ 74 ಸಾವಿರ 462 ರೈತರಿಗೆ ಬೆಳೆ ವಿಮೆ ಬಂದಿಲ್ಲಾ ಎನ್ನುವದು ಅಧಿಕಾರಿಗಳ ಮಾತು. ಮಾರ್ಗಸೂಚಿ ಅನುಗುಣವಾಗಿ ಬೆಳೆ ವಿಮೆಯನ್ನು ಬರುತ್ತದೆ. ಕೆಲವು ಕಡೇ ರೈತರಿಗೆ ಬೆಳೆ ಬಂದಿಲ್ಲಾ ಎನ್ನುವ ಆರೋಪ ಕೇಳಿ ಬಂದಿದೆ. ಬೆಳೆ ವಿಮೆ ಬಂದಿರದ ರೈತರ ಮಾಹಿತಿ ಸಂಗ್ರಹಣೆ ಮಾಡಿ, ಪರಿಶೀಲನೆ ಮಾಡಲಾಗುವದು ಅಂತಾರೆ ಕೃಷಿ ಇಲಾಖೆ ಜಂಟಿ ನಿರ್ದೇಶಕ ಜಿಯಾವುಲ್ಲಾ..

ಗದಗ ಜಿಲ್ಲೆಯ ಬೆಳೆ ವಿಮೆಯಲ್ಲಿ ಭಾರಿ ಗೋಲ್ಮಾಲ್ ನಡೆದಿದೆ ಅನ್ನೋ ಆರೋಪ ಕೇಳಿ ಬಂದಿದೆ. ರೈತರ ಹೆಸರಿನಲ್ಲಿ ಬೇರೆಯವ್ರು ಹಣ ತುಂಬಿ ಲೂಟಿ ಮಾಡಿರೋ ಪ್ರಕರಣಗಳು ಪತ್ತೆಯಾಗಿವೆ. ಹೀಗಾಗಿ ವಿಮೆ ಕಂಪನಿ ಅಧಿಕಾರಿಗಳು ಶಾಮೀಲಾಗಿದ್ದೇ ನಿಜವಾದ ರೈತರಿಗೆ ಬೆಳೆ ವಿಮೆ ಬಂದಿಲ್ಲಾ ಅನ್ನೋ ಆರೋಪವಿದೆ.

ಹೀಗಾಗಿ ಇಡೀ ರಾಜ್ಯದಲ್ಲಿ ಅತಿ ಹೆಚ್ಚು ಬೆಳೆ ವಿಮೆ ಹಣ ಬಂದ್ರೂ ರೈತರಿಗೆ ಮಾತ್ರ ಬಂದಿಲ್ಲಾ ಅಂತಾರೆ. ಆದ್ರೆ ಕೋಟ್ಯಾಂತರ ರೂಪಾಯಿ ಹಣ ಹೋಗಿದ್ರಾ ಎಲ್ಲಿಗೆ ಎನ್ನುವ ಸಂಶಯ ಕಾಡ್ತಾಯಿದೆ. ಅಧಿಕಾರಿಗಳು ಮಾತ್ರ ಹಣ ನೇರವಾಗಿ ರೈತರ ಅಕೌಂಟ್ ಗೆ ಹೋಗುತ್ತದೆ ಅಂತಾರೆ. ರೈತರು ಬಂದಿಲ್ಲಾ ಅಂತಾರೆ. ಹೀಗಾಗಿ ಕೃಷಿ ಅಧಿಕಾರಿಗಳು ಬೆಳೆ ವಿಮೆ ಸಮಗ್ರವಾದ ತನಿಖೆ ಮಾಡಿ, ಸಮರ್ಪಕವಾಗಿ ಬೆಳೆ ವಿಮೆ ಸಿಗುವಂತೆ ಮಾಡಬೇಕಾಗಿದೆ…

-ಸಂಜೀವ ಪಾಂಡ್ರೆ, ಟಿವಿ 9, ಗದಗ

Also Read:

Shocking: 45 ವರ್ಷದ ಭಕ್ತನ ಗಂಟಲಲ್ಲಿ ಪತ್ತೆಯಾಯ್ತು ಪುಟ್ಟ ಬಾಲ ಕೃಷ್ಣನ ವಿಗ್ರಹ, ಶಸ್ತ್ರಚಿಕಿತ್ಸೆ ಮೂಲಕ ವಿಗ್ರಹ ಹೊರತೆಗೆದ ವೈದ್ಯರು

ಕೃಷಿ ಸಚಿವ ಬಿ.ಸಿ. ಪಾಟೀಲ್ ಕ್ಷೇತ್ರದ ರೈತರಿಗೆ ಮಹಾ ಮೋಸ; ಲಕ್ಷಾಂತರ ಮೌಲ್ಯದ ಟೊಮೆಟೊ ಸೀಡ್ಸ್ ಖರೀದಿಸಿ ರೈತರಿಗೆ ಹಣ ನೀಡದೆ ಎಸ್ಕೇಪ್ ಆದ ಕಂಪನಿ ಮಾಲೀಕರು

 

Follow us on

Related Stories

Most Read Stories

Click on your DTH Provider to Add TV9 Kannada