ನಾಗರ ಪಂಚಮಿ ವಿಶೇಷ: ಸಗಣಿಯಲ್ಲಿ ಮಿಂದೆದ್ದ ಯುವಕರು, ಗದಗಿನಲ್ಲೊಂದು ವಿಶಿಷ್ಟ ಆರಚಣೆ
ಗದಗದ ಗಂಗಾಪೂರ ಪೇಟೆಯಲ್ಲಿ ಸಗಣಿ ಎರಚಾಡಿಕೊಳ್ಳುವ ವಿಶಿಷ್ಟ ಹಬ್ಬ ನಡೆಯುತ್ತಿದೆ. ನೂರಾರು ವರ್ಷಗಳ ಇತಿಹಾಸ ಹೊಂದಿರುವ ಈ ಆಚರಣೆಯಲ್ಲಿ ಯುವಕರು ಪರಸ್ಪರ ಸಗಣಿ ಎರಚಿಕೊಳ್ಳುತ್ತಾರೆ. ಮಳೆ, ಬೆಳೆ ಚೆನ್ನಾಗಿ ಆಗಲಿ ಎಂಬ ಆಶಯದೊಂದಿಗೆ ಈ ಆಚರಣೆಯನ್ನು ಮಾಡಲಾಗುತ್ತದೆ. ಸಗಣಿ ಎರಚಿಕೊಳ್ಳುವ ದೃಶ್ಯ ನೋಡೋದೆ ಕಣ್ಣಿಗೆ ಹಬ್ಬ.

ಗದಗ, ಜುಲೈ 31: ಜನರು ರಂಗು ರಂಗಿನ ಬಣ್ಣದಲ್ಲಿ ಮಿಂದೆಳುವುದನ್ನು ನೋಡಿದ್ದಿರಿ. ಆದರೆ ಗದಗಿನಲ್ಲಿ (gadag) ಮಾತ್ರ ಸಗಣಿಯಲ್ಲಿ (dung) ಮಿಂದೆಳುತ್ತಾರೆ. ವಿಚಿತ್ರವೆನಿಸಿದರೂ ಇದು ಸತ್ಯ. ನೂರಾರು ವರ್ಷಗಳಿಂದ ನಡೆದುಕೊಂಡು ಬಂದಿರುವ ಈ ಸಂಪ್ರದಾಯವನ್ನು ಇಂದಿಗೂ ಆಚರಣೆ ಮಾಡಲಾಗುತ್ತದೆ. ಸಗಣಿಯನ್ನು ಪರಸ್ಪರ ಎರಚಾಡಿಕೊಂಡು ಸಕ್ಕತ್ ಎಂಜಾಯ ಮಾಡಲಾಗುತ್ತದೆ. ಅಷ್ಟಕ್ಕೂ ಈ ಸಗಣಿ ಎರಚಾಟ ಎಲ್ಲಿ ನಡೆಯುತ್ತದೆ ಎಂದು ತಿಳಿಯಲು ಮುಂದೆ ಓದಿ.
ಗದಗ ನಗರದ ಗಂಗಾಪೂರ ಪೇಟೆಯಲ್ಲಿ ಸಗಣಿ ಆಟವನ್ನು ಆಚರಣೆ ಮಾಡಲಾಗುತ್ತದೆ. ನಾಗರಪಂಚಮಿಯ ಬಳಿಕ ಶ್ರಾವಣ ಮಾಸದಲ್ಲಿ ಈ ಹಬ್ಬವನ್ನು ವಿಶಿಷ್ಠವಾಗಿ ಆಚರಿಸಲಾಗುತ್ತದೆ. ಪಂಚಮಿ ಹಬ್ಬದ ಬಳಿಕ ಕೆರಿಕಟಾಂಬ್ಲಿ ಎಂತಲೆ ಈ ಹಬ್ಬವನ್ನು ಆಚರಿಸಲಾಗುತ್ತದೆ. ಹಬ್ಬದ ಪ್ರಯುಕ್ತ ಯುವಕರು ಸಗಣಿ ಎರಚಾಡಿಕೊಂಡರು.
ಇದನ್ನೂ ಓದಿ: ಹಸಿರು ಗುಡ್ಡಗಳ ನಡುವೆ ಮೋಡಗಳ ಜುಗಲ್ ಬಂದಿ: ಉತ್ತರ ಕರ್ನಾಟಕದ ಸಹ್ಯಾದ್ರಿ ಸೌಂದರ್ಯ ಕಣ್ತುಂಬಿಕೊಳ್ಳಿ
ಸಂಜೆ ವೇಳೆ ಗಂಗಾಪೂರ ಪೇಟೆಯಲ್ಲಿರುವ ದೇವಸ್ಥಾನದ ಮುಂದೆ ನೂರಾರು ಜನ ಜಮಾಯಿಸ್ತಾರೆ. ಕೂಡಿಟ್ಟ ಸಗಣಿಯನ್ನು ರಸ್ತೆಯಲ್ಲಿ ಗುಡ್ಡೆ ಹಾಕ್ತಾರೆ. ಗುಡ್ಡೆಗಳಿಗೆ ಕೆಂಪು, ಗುಲಾಬಿ, ಕೇಸರಿ, ಹಳದಿ ಬಣ್ಣಗಳಿಂದ ಶೃಂಗರಿಸುತ್ತಾರೆ. ನಂತರ ಗುಡ್ಡೆಗಳಿಗೆ ಪೂಜೆ ಮಾಡ್ತಾರೆ. ಬಳಿಕ ಆರಂಭವಾಗೋದೆ ಸಗಣಿ ಯುದ್ಧ. ಪರಸ್ಪರ ಸಗಣಿ ಎರಚಿಕೊಳ್ಳುವ ದೃಶ್ಯ ನೋಡೋದೆ ಕಣ್ಣಿಗೆ ಹಬ್ಬ. ಸುಮಾರು ಒಂದು ಗಂಟೆಗೂ ಅಧಿಕ ಕಾಲ ಈ ಸಗಣಿ ಫೈಟ್ ನಡೆಯಿತು. ಯುವಕರು ಪರಸ್ಪರ ನಾ ಮುಂದು ತಾ ಮುಂದು ಅಂತಾ ಸಗಣಿ ಎರಚಾಡಿದರು. ಮಳೆ, ಬೆಳೆ ಚೆನ್ನಾಗಿ ಬರಲಿ ಎನ್ನುವ ಉದ್ದೇಶದಿಂದ ಆಚರಣೆ ಮಾಡಲಾಗುತ್ತದೆ ಅಂತಾರೆ.
ಸಗಣಿ ಎರಚಾಟದ ಹಬ್ಬಕ್ಕಿದೆ ಇತಿಹಾಸ
ಸಗಣಿ ಎರಚಾಟಕ್ಕೆ ಅಂತಾ ಕಳೆದ ಮೂರ್ನಾಲ್ಕು ದಿನಗಳಿಂದ ರೈತರ ಮನೆಯಲ್ಲಿನ ಸಗಣಿಯನ್ನು ಶೇಖರಣೆ ಮಾಡಿ ಇಟ್ಟಿರುತ್ತಾರೆ. ಈ ಸಗಣಿ ಎರಚಾಟದ ಹಬ್ಬಕ್ಕೆ ಇತಿಹಾಸವಿದೆ. ಯಾವುದೇ ಜಾತಿ ಬೇಧವೆನಿಸದೆ ಪೇಟೆಯ ಎಲ್ಲ ಯುವಕರು ಸಗಣಿ ಎರಚಾಟದಲ್ಲಿ ಪಾಲ್ಗೊಳ್ಳುತ್ತಾರೆ. ಸಗಣಿ ಎರಚಾಟದಿಂದ ಯಾವುದೇ ರೀತಿಯ ತೊಂದರೆಗಳು ಆಗುವುದಿಲ್ಲ. ಸಗಣಿಗೆ ಔಷಧೀಯ ಗುಣವಿದೆ.
ಸಗಣಿಯನ್ನು ಪರಸ್ಪರ ದೇಹದ ಮೇಲೆ ಎರಚಿಕೊಳ್ಳುವುದದ ಚರ್ಮ ರೋಗಗಳು ಸೇರಿದಂತೆ ಹಲವು ಕಾಯಿಲೆಗಳು ವಾಸಿ ಆಗುತ್ತವೆ ಎನ್ನುವುದು ಇಲ್ಲಿನ ಜನರ ನಂಬಿಕೆ ಆಗಿದೆ. ಹೀಗಾಗಿ ಪೇಟೆಯಲ್ಲಿ ಈ ಆಚರಣೆಗೆ ನೂರಾರು ವರ್ಷಗಳ ಇತಿಹಾಸವಿದೆ. ಹಿಂದಿನ ಸಂಪ್ರದಾಯ ನಶಿಸಿ ಹೋಗುತ್ತಿದ್ದು, ಅದರಲ್ಲೂ ನಮ್ಮಲ್ಲಿ ಇಂದಿಗೂ ಈ ಸಗಣಿ ಎರಚಾಟ ನಡೆಸಿಕೊಂಡು ಬರಲಾಗುತ್ತಿದೆ ಎಂದು ಸ್ಥಳೀಯರು ಹೇಳುತ್ತಾರೆ.
ಇದನ್ನೂ ಓದಿ: ಗದಗ: ವಿಜ್ಞಾನ ಪ್ರಯೋಗಾಲಯ ಇಲ್ಲದೆ ಮೊರಾರ್ಜಿ ವಸತಿ ಪಿಯುಸಿ ವಿದ್ಯಾರ್ಥಿಗಳ ಗೋಳಾಟ
ಬಣ್ಣದೋಕುಳಿಯಂತೆ ಸಂಭ್ರಮದಿಂದ ನಡೆಯುವ ಯುವಕರ ಸಗಣಿ ಎರಚಾಟದಲ್ಲಿ ರೈತಾಪಿ ವರ್ಗದ ಯುವಕರು ಹೆಚ್ಚಿನ ಸಂಖ್ಯೆಯಲ್ಲಿ ಭಾಗವಹಿಸುತ್ತಾರೆ. ವರ್ಷಕ್ಕೆ ಒಂದು ಭಾರಿ ಸಗಣಿ ಎರಚಾಟದ ಆಟವನ್ನು ನೋಡುವುದೇ ಒಂದು ಸಂಭ್ರಮ. ಹೆಣ್ಣು ಮಕ್ಕಳ ವೇಷಧಾರಿಗಳ ಆಟವನ್ನು ನೋಡಿ ಮುದ್ರಣ ಕಾಶಿ ಜನರು ಮಸ್ತ್ ಎಂಜಾಯ್ ಮಾಡಿದರು.
ಕರ್ನಾಟಕದ ಮತ್ತಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ.
Published On - 8:17 am, Thu, 31 July 25



