ಗದಗ: ವಿಜ್ಞಾನ ಪ್ರಯೋಗಾಲಯ ಇಲ್ಲದೆ ಮೊರಾರ್ಜಿ ವಸತಿ ಪಿಯುಸಿ ವಿದ್ಯಾರ್ಥಿಗಳ ಗೋಳಾಟ
ಮೊರಾರ್ಜಿ ದೇಸಾಯಿ ವಸತಿ ಕಾಲೇಜು ಅಂದ್ರೆ ಹೈಟೆಕ್ ಆಗಿರುತ್ತೆ. ಎಲ್ಲ ಸೌಕರ್ಯ ಇರುತ್ತೆ. ಅಲ್ಲಿ ನಾವು ಓದಿ ಡಾಕ್ಟರ್, ಇಂಜಿನೀಯರ್ ಆಗಬೇಕು ಅಂತ ಕನಸು ಕಟ್ಟಿಕೊಂಡು ವಿದ್ಯಾರ್ಥಿಗಳು ಪ್ರವೇಶ ಪಡೆದಿದ್ದರು. ಆದರೆ, ಯಾಕಪ್ಪಾ ಈ ಕಾಲೇಜಿಗೆ ದಾಖಲಾಗಿದ್ದೇವೆ ಅಂತ ಪಶ್ಚಾತಾಪ ಪಡುವಂತಾಗಿದೆ. ಎರಡು ವರ್ಷವಾದರೂ ವಿಜ್ಞಾನ ವಿಭಾಗದ ವಿದ್ಯಾರ್ಥಿಗಳಿಗೆ ಪ್ರಯೋಗಾಲಯದ ಭಾಗ್ಯ ಸಿಕ್ಕಿಲ್ಲ.

ಗದಗ, ಜುಲೈ 26: ಬೆಟಗೇರಿಯಲ್ಲಿರುವ (Betageri) ಅಲ್ಪಸಂಖ್ಯಾತ ಇಲಾಖೆಯ ಮೊರಾರ್ಜಿ ದೇಸಾಯಿ ವಸತಿ ಕಾಲೇಜಿಗೆ ಹತ್ತಾರು ಕನಸು ಹೊತ್ತು ನೂರಾರು ವಿದ್ಯಾರ್ಥಿಗಳು (Students) ಪ್ರವೇಶ ಪಡೆದಿದ್ದಾರೆ. ಆದರೆ, ಈಗ ಯಾಕಪ್ಪಾ ಈ ಕಾಲೇಜಿಗೆ ಪ್ರವೇಶ ಪಡೆದಿದ್ದೇವೆ ಅಂತ ಪಶ್ಚಾತಾಪ ಪಡುತ್ತಿದ್ದಾರೆ. ಹೌದು, ಕಾಲೇಜಿನಲ್ಲಿ ವಿಜ್ಞಾನ ಪ್ರಯೋಗಾಲಯವಿಲ್ಲ. ಇದರಿಂದ ವಿಜ್ಞಾನ ವಿಭಾಗದ ವಿದ್ಯಾರ್ಥಿಗಳು ಪರದಾಡುತ್ತಿದ್ದಾರೆ. ಈ ವರ್ಷ ಬೋರ್ಡ್ ಪರೀಕ್ಷೆ ಇದೆ. ಪ್ರಾಕ್ಟಿಕಲ್ಪರೀಕ್ಷೆ ಬರೆಯಬೇಕು. ಪ್ರಾಕ್ಟಿಕಲ್ ಪಾಠ ಇಲ್ಲದೆ, ನಾವು ಪರೀಕ್ಷೆ ಬರೆಯುವುದು ಹೇಗೆ ಅಂತ ವಿದ್ಯಾರ್ಥಿಗಳು ಪ್ರಶ್ನೆ ಮಾಡಿದ್ದಾರೆ. ಕೂಡಲೇ ಸಮಸ್ಯೆ ಬಗೆಹರಿಸಬೇಕು ಅಂತ ಒತ್ತಾಯಿಸಿದ್ದಾರೆ.
ಪ್ರಾಚಾರ್ಯರು ಅಪರೂಪಕ್ಕೊಮ್ಮೆ ಕಾಲೇಜಿಗೆ ಬರುತ್ತಾರಂತೆ. ಹೀಗಾಗಿ, ವಿದ್ಯಾರ್ಥಿಗಳು ಗೋಳು ಕೇಳುವರು ಯಾರೂ ಇಲ್ಲದಂತಾಗಿದೆ. ಅವ್ಯವಸ್ಥೆ ಆಗರದಲ್ಲಿ ಬಡ ವಿದ್ಯಾರ್ಥಿಗಳ ಪಾಠ ಕಲಿಯುವಂತಾಗಿದೆ. ಡಾಕ್ಟರ್, ಇಂಜಿನಿಯರ್ ಕನಸು ಹೊತ್ತುಕೊಂಡು ಬಂದ ವಿದ್ಯಾರ್ಥಿಗಳಿಗೆ ಶಾಕ್ ನೀಡಿದಂತಾಗಿದೆ. ಕಾಲೇಜು ಆರಂಭವಾದ ತಿಂಗಳು ಕಳೆದ ಬಳಿಕ ಪುಸ್ತಕಗಳನ್ನು ವಿತರಿಸಲಾಗಿದೆ. ಕಾಲೇಜು ಆರಂಭವಾಗಿ ಎರಡು ತಿಂಗಳಾದರೂ ಪ್ರಾಕ್ಟಿಕಲ್ ಪಾಠ ಆರಂಭವಾಗಿಲ್ಲ. ಪ್ರಯೋಗಾಲಯಗಳು ಧೂಳು ತಿನ್ನುತ್ತಿವೆ ಅಂತ ವಿದ್ಯಾರ್ಥಿಗಳು ಕಿಡಿಕಾರಿದ್ದಾರೆ.
ಇದನ್ನೂ ಓದಿ: ಎಲೆ ಜತೆಗೆ ಅಡಿಕೆ ತಿಂದು ಉಗಿಯುವವರು ಈ ಸುದ್ದಿ ಓದಲೇಬೇಕು..!
ಈ ವರ್ಷ ಬೋರ್ಡ್ ಪರೀಕ್ಷೆ ಬರುತ್ತದೆ. ಪರೀಕ್ಷೆಯಲ್ಲಿ ನಾವು ಏನು ಬರೆಯಬೇಕು? ಪ್ರಾಚಾರ್ಯರನ್ನು ಕೇಳಿದರೆ ಶೀಘ್ರದಲ್ಲೇ ಆರಂಭಿಸುತ್ತೇವೆ ಅಂತ ದಿನಗಳನ್ನು ಮುಂದೂಡುತ್ತಿದ್ದಾರೆ. ಆದರೆ, ಎರಡು ವರ್ಷ ಕಳೆದರೂ ಇನ್ನೂ ಪ್ರಯೋಗಾಲಯ ಆರಂಭವಾಗಿಲ್ಲ. ಕೊಠಡಿಗಳು ಸರಿಯಾಗಿ ಇಲ್ಲ ಎಂದು ಅಳಲು ತೋಡಿಕೊಂಡರು.
ಕರ್ನಾಟಕದ ಇನ್ನಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ
Published On - 8:05 pm, Sat, 26 July 25



