ಜಿಮ್ಸ್ ಆಸ್ಪತ್ರೆಯ ಔಷಧಿಗಳಲ್ಲಿ ಧೂಳು; ಅಧಿಕಾರಿಗಳ ನಿರ್ಲಕ್ಷ್ಯದ ವಿರುದ್ಧ ಸಾರ್ವಜನಿಕರ ಆಕ್ರೋಶ
ನಿರ್ದೇಶಕರೇ ಸರಿಯಾಗಿ ಕಚೇರಿಗೆ ಬರಲ್ಲ ಅಂದರೆ. ಇನ್ನೂ ಸಿಬ್ಬಂದಿಗಳು, ಅಧಿಕಾರಿಗಳು, ವೈದ್ಯರು ನಿರ್ಲಕ್ಷ್ಯ ವಹಿಸುವುದಿಲ್ಲವ ಸರ್ಕಾರದ ಹಣ ಹಾಳಾದರೆ ನಮಗೇನೂ ಎಂದು ಅಪಾರ ಔಷಧಿಗಳು ಹಾಳಾದರೂ ಯಾರೂ ನೋಡುತ್ತಿಲ್ಲ. ಜಿಲ್ಲಾಡಳಿತ, ಸರ್ಕಾರದ ಭಯವೂ ಇಲ್ಲಿನ ಜಿಮ್ಸ್ ಆಡಳಿತಕ್ಕೆ ಇಲ್ಲದಂತಾಗಿದೆ ಎಂದು ಸ್ಥಳೀಯರು ದೂರಿದ್ದಾರೆ.
ಗದಗ: ಜಿಲ್ಲೆಯ ಜಿಮ್ಸ್ ಆಡಳಿತಕ್ಕೆ ಹೇಳೋರು ಕೇಳೋರು ಯಾರೂ ಇಲ್ಲದಂತಾಗಿದೆ. ಒಂದಿಲ್ಲೊಂದು ಅದ್ವಾನ, ಯಡವಟ್ಟುಗಳ ಮೂಲಕ ಸರ್ಕಾರಕ್ಕೆ ಮುಜಗುರ ತರುವಂತ ಕೆಲಸ ಮಾಡುತ್ತಿದೆ. ಟಿವಿ9 ರಿಯಾಲಿಟಿ ಚೆಕ್ನಲ್ಲಿ ಈ ವಿಚಾರ ಬಹಿರಂಗವಾಗಿದೆ. 2ನೇ ಅಲೆಯಲ್ಲಿ ಅಗತ್ಯ ಇಂಜಕ್ಷನ್, ಔಷಧಿ ಇಲ್ಲದೆ ಎಷ್ಟೋ ಜನರು ಉಸಿರು ಚೆಲ್ಲಿದ್ದಾರೆ. ಹೀಗಿರುವಾಗಲೇ ಈಗ ಜಿಮ್ಸ್ ( Gims) ಆಸ್ಪತ್ರೆಯಿಂದ ಮತ್ತೊಂದು ಯಡುವಟ್ಟಾಗಿದೆ. ಕೊವಿಡ್ ವಾರ್ಡ್ಗಳಲ್ಲಿ ಲಕ್ಷಾಂತರ ಮೌಲ್ಯದ ಔಷಧಿ ಧೂಳು ಹಿಡಿಯುತ್ತಿದ್ದರೂ ಜಿಮ್ಸ್ ಆಡಳಿತ ನಿರ್ಲಕ್ಷ್ಯ ವಹಿಸಿದೆ. ಇದು ಸಹಜವಾಗಿಯೇ ಈ ಭಾಗದ ಜನರ ಆಕ್ರೋಶಕ್ಕೆ ಕಾರಣವಾಗಿದೆ.
ಬಡವರಿಗಾಗಿ ಸರ್ಕಾರ ನೀಡಿದ ಅಮೂಲ್ಯ ಔಷಧಿಗಳು, ಇಂಜಕ್ಷನ್ ಧೂಳು ತಿನ್ನುವಂತೆ ಆಗಿದೆ. ಕೊವಿಡ್ ವಾರ್ಡ್ಗಳಲ್ಲಿ ಅಪಾರ ಪ್ರಮಾಣದ ಇಂಜಕ್ಷನ್, ಮಾತ್ರೆಗಳು , ಡ್ರಿಪ್ಗಳು ಸೇರಿ ಹಲವು ಔಷಧಿಗಳು ಧೂಳು ಹಿಡಿದಿವೆ. ಆದರೆ ಜಿಲ್ಲಾಡಳಿತ ಮಾತ್ರ ಈ ಬಗ್ಗೆ ನಿರ್ಲಕ್ಷ್ಯ ತೋರಿದೆ. ಜಿಮ್ಸ್ ಆಡಳಿತದ ಬೇಜವಾಬ್ದಾರಿಯೇ ಅಪಾರ ಔಷಧಿಗಳು ಧೂಳು ತಿನ್ನುವುದಕ್ಕೆ ಕಾರಣ. ಹೀಗಾಗಿ ತಪ್ಪಿತಸ್ಥರ ವಿರುದ್ಧ ಕ್ರಮ ಕೈಗೊಳ್ಳಬೇಕು ಎಂದು ಸ್ಥಳೀಯರಾದ ಚಂದ್ರಕಾಂತ ಚವ್ಹಾಣ ಒತ್ತಾಯಿಸಿದ್ದಾರೆ.
ಆನೆ ನಡೆದಿದ್ದೇ ದಾರಿ ಅನ್ನೋ ರೀತಿಯಲ್ಲಿ ಗದಗ ಜಿಮ್ಸ್ ಆಡಳಿತ ವರ್ತನೆ ಮಾಡುತ್ತಿದೆ. ಸಾಕಷ್ಟು ಅವ್ಯವಸ್ಥೆ ಇದ್ದರು ಜಿಮ್ಸ್ ನಿರ್ದೇಶಕ ಡಾ. ಪಿ. ಎಸ್. ಭೂಸರೆಡ್ಡಿ ಮಾತ್ರ ಪ್ರತಿಕ್ರಿಯೆ ನೀಡುತ್ತಿಲ್ಲ. ಕಚೇರಿಗೆ ವಾರಕ್ಕೊಮ್ಮೆ ಆಗಮಿಸುವ ನಿರ್ದೇಶಕರು ಆಸ್ಪತ್ರೆ ಕಡೆ ಸುಳಿಯುವುದಿಲ್ಲ. ಆಸ್ಪತ್ರೆ ಆಗುಹೋಗುಗಳ ಬಗ್ಗೆ ಎಚ್ಚರ ವಹಿಸಿಲ್ಲ ಎಂದು ಸಿಬ್ಬಂದಿಗಳು ದೂರಿದ್ದಾರೆ.
ಹೀಗಾಗಿ ನಿರ್ದೇಶಕರೇ ಸರಿಯಾಗಿ ಕಚೇರಿಗೆ ಬರಲ್ಲ ಅಂದರೆ. ಇನ್ನೂ ಸಿಬ್ಬಂದಿಗಳು, ಅಧಿಕಾರಿಗಳು, ವೈದ್ಯರು ನಿರ್ಲಕ್ಷ್ಯ ವಹಿಸುವುದಿಲ್ಲವ ಸರ್ಕಾರದ ಹಣ ಹಾಳಾದರೆ ನಮಗೇನೂ ಎಂದು ಅಪಾರ ಔಷಧಿಗಳು ಹಾಳಾದರೂ ಯಾರೂ ನೋಡುತ್ತಿಲ್ಲ. ಜಿಲ್ಲಾಡಳಿತ, ಸರ್ಕಾರದ ಭಯವೂ ಇಲ್ಲಿನ ಜಿಮ್ಸ್ ಆಡಳಿತಕ್ಕೆ ಇಲ್ಲದಂತಾಗಿದೆ ಎಂದು ಸ್ಥಳೀಯರು ದೂರಿದ್ದಾರೆ.
ಈ ಬಗ್ಗೆ ಮೆಡಿಕಲ್ ಸೂಪರಿಟೆಂಡೆಂಟ್ ಡಾ. ರಾಜಶೇಖರ್ ಮ್ಯಾಗೇರಿ ಅವರನ್ನು ಕೇಳಿದರೆ ಇನ್ನೂ ಅಲ್ಲಿ ಕೊವಿಡ್ ರೋಗಿಗಳಿಗೆ ಚಿಕಿತ್ಸೆ ನೀಡಲಾಗುತ್ತಿದೆ. ಹೀಗಾಗಿ ಬೇಕಾದ ಔಷಧಿಗಳು ಅಲ್ಲಿ ಇಡಲಾಗಿದೆ. ಈಗ ನನ್ನ ಗಮನಕ್ಕೆ ಬಂದಿದೆ. ಪರಿಶೀಲನೆ ಮಾಡಿ ತಪ್ಪಿತಸ್ಥರ ವಿರುದ್ಧ ಕ್ರಮ ಕೈಗೊಳ್ಳುತ್ತೇನೆ ಎಂದು ಹೇಳಿದ್ದಾರೆ.
ವರದಿ: ಸಂಜೀವ ಪಾಂಡ್ರೆ
ಇದನ್ನೂ ಓದಿ:
ಅಧ್ಯಯನ ವರದಿ: ಧೂಳು ಹೆಚ್ಚಿರುವ ನಗರಗಳಲ್ಲಿ ಕೊರೊನಾ ಸೋಂಕು ಹರಡುವ ಸಾಧ್ಯತೆ ಹೆಚ್ಚು, ಬೆಂಗಳೂರಿಗೆ ಆತಂಕ?
ಗದಗದಲ್ಲೂ ಶುರುವಾಗಿದೆ ಬೆಡ್ಗಾಗಿ ಹಾಹಾಕಾರ.. ಜಿಮ್ಸ್ ಆಸ್ಪತ್ರೆಯಲ್ಲಿ ಡಿಸ್ಚಾರ್ಜ್ ಆದ್ರೆ ಮಾತ್ರ ಸೋಂಕಿತರಿಗೆ ಬೆಡ್