ವೋಟ್​​ ಹಾಕುವ ವೇಳೆ ಪ್ರಧಾನಿ ರೋಡ್ ಶೋ ಮಾಡ್ತಾರೆ, ಚುನಾವಣಾ ಆಯೋಗದ ವಿರುದ್ಧ ಎಚ್​.ಕೆ ಪಾಟೀಲ್ ಅಸಮಾಧಾನ

| Updated By: ಗಂಗಾಧರ​ ಬ. ಸಾಬೋಜಿ

Updated on: Dec 08, 2022 | 3:46 PM

ಚುನಾವಣಾ ಆಯೋಗ ಏನ್ನು ಮಾಡುತ್ತಿತ್ತು. ಚುನಾವಣಾ ಆಯೋಗಕ್ಕೆ ನಾಚಿಕೆ ಬರೋದಿಲ್ವಾ ಎಂದು ಚುನಾವಣೆ ಆಯೋಗದ ವಿರುದ್ಧ ಎಚ್​.ಕೆ ಪಾಟೀಲ್ ಅಸಮಾಧಾನ ವ್ಯಕ್ತಪಡಿಸಿದ್ದಾರೆ.

ವೋಟ್​​ ಹಾಕುವ ವೇಳೆ ಪ್ರಧಾನಿ ರೋಡ್ ಶೋ ಮಾಡ್ತಾರೆ, ಚುನಾವಣಾ ಆಯೋಗದ ವಿರುದ್ಧ ಎಚ್​.ಕೆ ಪಾಟೀಲ್ ಅಸಮಾಧಾನ
H K Patil
Follow us on

ಗದಗ: ಪ್ರಧಾನಿ ನರೇಂದ್ರ ಮೋದಿ (PM Modi) ಯವರು ಚುನಾವಣೆ ನಡೆಯುವಾಗ ರೋಡ್ ಶೋ ಮಾಡಿದ್ದಾರೆ. ವೋಟ್ ಹಾಕಲು ಹೋದಾಗ ರೋಡ್ ಶೋ ಮಾಡಿದ್ದಾರೆ. ಚುನಾವಣಾ ಆಯೋಗ (Election Commission) ಏನ್ನು ಮಾಡುತ್ತಿತ್ತು. ಚುನಾವಣಾ ಆಯೋಗಕ್ಕೆ ನಾಚಿಕೆ ಬರೋದಿಲ್ವಾ ಎಂದು ಚುನಾವಣೆ ಆಯೋಗದ ವಿರುದ್ಧ ಕಾಂಗ್ರೆಸ್​ ಹಿರಿಯ ನಾಯಕ ಎಚ್​.ಕೆ ಪಾಟೀಲ್ ಅಸಮಾಧಾನ ವ್ಯಕ್ತಪಡಿಸಿದ್ದಾರೆ. ಚುನಾವಣಾ ಆಯೋಗ ಸಂಪೂರ್ಣವಾಗಿ ಪೇಲ್ ಆಗಿದೆ. ನಾವೇನಾದರೂ ಕಾರು ತೆಗೆದುಕೊಂಡು ಹೋದರೆ ಪೊಲೀಸರು ಬಿಡೋದಿಲ್ಲಾ. ಆದರೆ ಪ್ರಧಾನಿ ನರೇಂದ್ರ ಮೋದಿಯವರು ರೋಡ್ ಶೋ ಮಾಡಬಹುದು. ಇದಕ್ಕೆ ಉತ್ತರ ಕೊಡದೆ ಚುನಾವಣಾ ಆಯೋಗ ಮೌನವಾಗಿದೆ. ಇವರು ಪ್ರಧಾನಿಯವರ ಸೇವಕರಾ ಎಂದು ಎಚ್​.ಕೆ ಪಾಟೀಲ್ ಪ್ರಶ್ನಿಸಿದರು.

ಈ ಫಲಿತಾಂಶದಿಂದ ನಾವು ಆತ್ಮಾವಲೋಕನ ಮಾಡಿಕೊಳ್ಳುತ್ತೇವೆ

ಗುಜರಾತ್ ಹಿಮಾಚಲ ಪ್ರದೇಶ ಚುನಾವಣೆ ಫಲಿತಾಂಶ ಹಿನ್ನೆಲೆ ನಮ್ಮ ನೀರಿಕ್ಷೆಗೆ ಮೀರಿ ಸೋಲು ಆಗುತ್ತದೆ ಎಂದು ಅನಿಸಿರಲಿಲ್ಲ. ಈ ಫಲಿತಾಂಶದಿಂದ ನಾವು ಆತ್ಮಾವಲೋಕನ ಮಾಡಿಕೊಳ್ಳುತ್ತೇವೆ. ಸಮೀಕ್ಷೆಗಿಂತ ಕಡಿಮೆ ಸ್ಥಾನಗಳು ಬಂದಿವೆ. ಇದು ಹೇಗೆ ಆಯ್ತು ಎಂದು ಪ್ರಜಾಪ್ರಭುತ್ವದ ಬಗ್ಗೆ ವಿಶ್ವಾಸ ಇರುವವರು ವಿಚಾರ ಮಾಡಬೇಕು. ಹಿಮಾಚಲ ಪ್ರದೇಶದಲ್ಲಿ ಜನರು ನಮಗೆ ಆಶಿರ್ವಾದ ಮಾಡಿದ್ದಾರೆ. ಗುಜರಾತ್ ಚುನಾವಣೆ ಕರ್ನಾಟಕದ ಮೇಲೆ ಯಾವುದೇ ಪರಿಣಾಮ ಬಿರುವುದಿಲ್ಲ ಎಂದು ಹೇಳಿದರು.

ಇದನ್ನೂ ಓದಿ: Gujarat Election Results 2022: ‘ಗುಜರಾತ್‌ ಮಾಡೆಲ್‌’ಗೆ ಜನರಿಂದ ಅಧಿಕೃತ ಮುದ್ರೆ: ಕೇಂದ್ರ ಸಚಿವ ಪ್ರಲ್ಹಾದ್‌ ಜೋಶಿ ಅಭಿಮತ

ಗುಜರಾತ್​ ಜನ ಏನನ್ನು ಗಮನಿಸಿ ಬಿಜೆಪಿಗೆ ಮತ ಹಾಕಿದ್ರೋ ಗೊತ್ತಿಲ್ಲ: ಆರ್​.ಧ್ರುವನಾರಾಯಣ 

ಗುಜರಾತ್​ ಜನ ಏನನ್ನು ಗಮನಿಸಿ ಬಿಜೆಪಿಗೆ ಮತ ಹಾಕಿದ್ರೋ ಗೊತ್ತಿಲ್ಲ ಎಂದು ಮೈಸೂರಿನಲ್ಲಿ ಕೆಪಿಸಿಸಿ ಕಾರ್ಯಾಧ್ಯಕ್ಷ ಆರ್​.ಧ್ರುವನಾರಾಯಣ ಹೇಳಿಕೆ ನೀಡಿದರು. ಗುಜರಾತ್​​ನಲ್ಲಿ ಬಿಜೆಪಿ ಯಾವುದೇ ಅಭಿವೃದ್ಧಿ ಕೆಲಸ ಕಾರ್ಯ ಮಾಡಿಲ್ಲ. ಆದರೂ ಬಿಜೆಪಿಗೆ ಹೇಗೆ ಅಷ್ಟು ಸ್ಥಾನ ಬಂತು ಎಂಬುದು ತಿಳಿಯುತ್ತಿಲ್ಲ. ಗುಜರಾತ್​ನಲ್ಲಿ ನಾವು ಇನ್ನೂ ಹೆಚ್ಚಿನ ಸ್ಥಾನ ಗೆಲ್ಲುವ ನಿರೀಕ್ಷೆಯಲ್ಲಿದ್ದೆವು. ಗುಜರಾತ್​ನಲ್ಲಿ ಕಾಂಗ್ರೆಸ್​ ಶಾಸಕರನ್ನು ಪಕ್ಷಾಂತರ ಮಾಡಲಾಗಿದೆ. ಕರ್ನಾಟಕದಲ್ಲಿ ಇರೋದು ಅತ್ಯಂತ ಭ್ರಷ್ಟ ಸರ್ಕಾರ. ಗುಜರಾತ್​ ರಾಜ್ಯದಲ್ಲಿ ನಮ್ಮ ಸಂಘಟನೆ ಮತ್ತಷ್ಟು ಸದೃಢವಾಗಬೇಕಿದೆ. ಗುಜರಾತ್ ಫಲಿತಾಂಶ ಕರ್ನಾಟಕದ ಮೇಲೆ ಪರಿಣಾಮ ಬೀರುವುದಿಲ್ಲ ಎಂದು ಹೇಳಿದರು.

ಇದು ಇಲ್ಲಿಯ ಸರ್ಕಾರ ಅತ್ಯಂತ ಭ್ರಷ್ಟ ಸರ್ಕಾರ. ಜನರಿಗೆ ಕೊಟ್ಟ ಭರವಸೆ ಈಡೇರಿಸಿಲ್ಲ. ಜನ ನಮಗೆ ಮತ ಹಾಕುತ್ತಾರೆ ಎಂಬ ವಿಶ್ವಾಸ ಇದೆ. ಆಫ್ ಪಡೆದ ಮತಗಳು ಅದು ಕಾಂಗ್ರೆಸ್ ಮತಗಳು. ಗುಜರಾತ್​ನಲ್ಲಿ ನಮ್ಮ ಸಂಘಟನೆ ಸದೃಢವಾಗಬೇಕಿದೆ. ಆ ನಿಟ್ಟಿನಲ್ಲಿ ಎಐಸಿಸಿ ಅಧ್ಯಕ್ಷರು ಗಮನಹರಿಸುತ್ತಾರೆ ಎಂದರು.

ವರುಣಾ ಕ್ಷೇತ್ರ ಸಿದ್ದರಾಮಯ್ಯರಿಗೆ ಬಹಳ ಸೇಫ್ ಕ್ಷೇತ್ರ

ವರುಣಾ ಕ್ಷೇತ್ರದಲ್ಲಿ ಸಿದ್ದರಾಮಯ್ಯ ಪ್ರವಾಸ ವಿಚಾರವಾಗಿ ಪ್ರತಿಕ್ರಿಯೆ ನೀಡಿದ್ದು, ವರುಣಾ ಕ್ಷೇತ್ರ ಸಿದ್ದರಾಮಯ್ಯರಿಗೆ ಬಹಳ ಸೇಫ್ ಕ್ಷೇತ್ರ. ಅವರು ಇಲ್ಲಿಯೆ ಸ್ಪರ್ಧೆ ಮಾಡಬೇಕು ಎಂದು ನಾನು ವೈಯುಕ್ತಿವಾಗಿ ಹೇಳಿದ್ದೇನೆ‌. ಕ್ಷೇತ್ರದಲ್ಲಿ ಎಲ್ಲಾ ಸಮುದಾಯದ ಜನ ಅವರನ್ನ ವೈಯುಕ್ತಿಕವಾಗಿ ಇಷ್ಟಪಡುತ್ತಾರೆ. ಈ ಕಾರಣದಿಂದ ಅವರು ಇಲ್ಲೆ ಸ್ಪರ್ಧೆ ಮಾಡಲಿ. ಅವರ ಮಗನು ಕೂಡ ವರುಣಾದಲ್ಲಿ ನಿಲ್ಲುವಂತೆ ಹೇಳಿದ್ದಾರೆ. ನಾನು‌ ನಂಜಗೂಡಿನ‌ ಟಿಕೆಟ್ ಆಕಾಂಕ್ಷಿ ಎಂದು ಆರ್​.ಧ್ರುವನಾರಾಯಣ ಹೇಳಿದರು.

ರಾಜ್ಯದ ಮತ್ತಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ.

Published On - 3:34 pm, Thu, 8 December 22