Gujarat Assembly Elections: ದಾಖಲೆ ಬರೆಯುತ್ತಿದೆ ಬಿಜೆಪಿ, ಆಪ್​ ಶುಭಾರಂಭ, ನೆಲಕಚ್ಚಿದ ಕಾಂಗ್ರೆಸ್

ಗುಜರಾತ್​ನಲ್ಲಿ 150ಕ್ಕೂ ಹೆಚ್ಚು ಸ್ಥಾನಗಳಲ್ಲಿ ಮುನ್ನಡೆ ಸಾಧಿಸಿರುವ ಬಿಜೆಪಿ ಒಂದು ವೇಳೆ ಎಲ್ಲ ಸ್ಥಾನಗಳಲ್ಲಿ ಗೆಲುವು ಸಾಧಿಸಿದರೆ ಹೊಸ ದಾಖಲೆ ಬರೆದಂತೆ ಆಗುತ್ತದೆ. ಬಿಜೆಪಿಯ ಮುನ್ನಡೆ ಮತ್ತು ಕಾಂಗ್ರೆಸ್​ನ ಹಿನ್ನಡೆಗೆ ಕಾರಣಗಳೇನು?

Gujarat Assembly Elections: ದಾಖಲೆ ಬರೆಯುತ್ತಿದೆ ಬಿಜೆಪಿ, ಆಪ್​ ಶುಭಾರಂಭ, ನೆಲಕಚ್ಚಿದ ಕಾಂಗ್ರೆಸ್
ಅಮಿತ್ ಶಾ ಮತ್ತು ನರೇಂದ್ರ ಮೋದಿ
Follow us
TV9 Web
| Updated By: Ghanashyam D M | ಡಿ.ಎಂ.ಘನಶ್ಯಾಮ

Updated on:Dec 08, 2022 | 12:08 PM

ದೆಹಲಿ: ಗುಜರಾತ್ ಮತ್ತು ಹಿಮಾಚಲ ಪ್ರದೇಶ ರಾಜ್ಯಗಳಲ್ಲಿ ವಿಧಾನಸಭಾ ಚುನಾವಣೆಯ ಮತಎಣಿಕೆ ಚುರುಕಾಗಿ ಸಾಗಿದೆ. ಗುಜರಾತ್​ನಲ್ಲಿ 150ಕ್ಕೂ ಹೆಚ್ಚು ಸ್ಥಾನಗಳಲ್ಲಿ ಮುನ್ನಡೆ ಸಾಧಿಸಿರುವ ಬಿಜೆಪಿ ಒಂದು ವೇಳೆ ಎಲ್ಲ ಸ್ಥಾನಗಳಲ್ಲಿ ಗೆಲುವು ಸಾಧಿಸಿದರೆ ಹೊಸ ದಾಖಲೆ ಬರೆದಂತೆ ಆಗುತ್ತದೆ. ಹಿಮಾಚಲ ಪ್ರದೇಶದಲ್ಲಿ ಅಂತತ್ರ ವಿಧಾನಸಭೆಯ ಸಾಧ್ಯತೆಯೊಂದಿಗೆ ಶಾಸಕರ ಕುದುರೆ ವ್ಯಾಪಾರ ನಡೆಯುವ ಭೀತಿ ಎದುರಾಗಿದೆ. ಗುಜರಾತ್​ನಲ್ಲಿ ಬಿಜೆಪಿಯು ಲೆಕ್ಕಾಚಾರಗಳನ್ನು ಮೀರಿ ಮತ ಗಳಿಸಲು ಇರುವ ಮುಖ್ಯ ಕಾರಣಗಳೇನಿರಬಹುದು ಎಂಬ ವಿಶ್ಲೇಷಣೆ ಇದೀಗ ಆರಂಭವಾಗಿದೆ. ಚುನಾವಣೆಯನ್ನು ಕಾಂಗ್ರೆಸ್​ ಹಗುರವಾಗಿ ಪರಿಗಣಿಸಿದ್ದು, ಆಮ್ ಆದ್ಮಿ ಪಕ್ಷವು ಕಾಂಗ್ರೆಸ್ ಪಕ್ಷದ ಪಾರಂಪರಿಕ ಕ್ಷೇತ್ರಗಳಲ್ಲಿ ಒಳದಾರಿಗಳನ್ನು ಕಂಡುಕೊಂಡಿದ್ದು ಸಹ ಕಾಂಗ್ರೆಸ್ ಹಿನ್ನಡೆಗೆ ಮುಖ್ಯ ಕಾರಣ ಎಂದು ಹೇಳಲಾಗುತ್ತಿದೆ. ಬಿಜೆಪಿ ಭದ್ರಕೋಟೆಯಲ್ಲಿ ಅಸ್ತಿತ್ವ ಕಂಡುಕೊಳ್ಳಲು ಆಪ್ ಯಶಸ್ವಿಯಾಗಿದೆಯಾದರೂ, ಅಧಿಕಾರ ಹಿಡಿಯಬಹುದು ಎಂದುಕೊಂಡಿದ್ದ ಹಿಮಾಚಲ ಪ್ರದೇಶದಲ್ಲಿ ಕಾಂಗ್ರೆಸ್ ಹಿನ್ನಡೆ ಅನುಭವಿಸಿರುವುದು ಪಕ್ಷದ ಭವಿಷ್ಯದ ಮೇಲೆ ಪರಿಣಾಮ ಬೀರಬಹುದು ಎಂದು ವಿಶ್ಲೇಷಿಸಲಾಗಿದೆ.

ಹಿಮಾಚಲ ಪ್ರದೇಶದಲ್ಲಿ ಪ್ರತಿ ಬಾರಿಯೂ ಅಧಿಕಾರದಲ್ಲಿರುವ ಪಕ್ಷವನ್ನು ಬದಲಿಸುವುದು ಅಲ್ಲಿನ ಮತದಾರರ ಪ್ರವೃತ್ತಿ. ಇಲ್ಲಿ ಬಿಜೆಪಿ ಮತ್ತು ಕಾಂಗ್ರೆಸ್ ನಡುವೆ ನೇರ ಹಣಾಹಣಿಯಿತ್ತು. ಆದರೆ ಕಾಂಗ್ರೆಸ್​ಗೆ ನಿರೀಕ್ಷೆಯಿಂದ ಕಾಂಗ್ರೆಸ್ ಸ್ಪಷ್ಟ ಬಹುಮತದತ್ತ ಮುಂದಡಿಯಿಡಲು ವಿಫಲವಾಗಿರುವ ಹಿನ್ನೆಲೆಯಲ್ಲಿ ಬಿಜೆಪಿಯು ತನ್ನ ಅಗಾಧ ‘ಸಂಪನ್ಮೂಲ’ಗಳ ನೆರವಿನಿಂದ ಅಲ್ಲಿಯೂ ಸರ್ಕಾರ ರಚಿಸಬಹುದು ಎಂದು ಹೇಳಲಾಗುತ್ತಿದೆ. ಪ್ರಧಾನ ಕಾರ್ಯದರ್ಶಿ ವಿನೋದ್ ತಾವ್​ಡೆ ಅವರನ್ನು ಬಿಜೆಪಿಯು ಈಗಾಗಲೇ ಹಿಮಾಚಲ ಪ್ರದೇಶದ ರಾಜಧಾನಿ ಶಿಮ್ಲಾಕ್ಕೆ ಕಳುಹಿಸಿಕೊಟ್ಟಿದೆ. ಪಕ್ಷದ ಯಾವುದೇ ಶಾಸಕ ಕುದುರೆ ವ್ಯಾಪಾರದ ಆಮಿಷಕ್ಕೆ ಒಳಗಾಗಿ ಪಕ್ಷಾಂತರವಾಗದಂತೆ ತಡೆಗಟ್ಟುವುದು ಹಾಗೂ ಒಂದು ವೇಳೆ ಅಧಿಕಾರ ರಚನೆಗೆ ಬೇಕಾಗುವಷ್ಟು ಸದಸ್ಯ ಬಲ ದೊರೆಯದಿದ್ದರೆ ಲಭ್ಯ ಅವಕಾಶಗಳನ್ನು ಬಳಸಿಕೊಂಡು ಸರ್ಕಾರ ರಚಿಸುವ ತಂತ್ರ ರೂಪಿಸುವ ಅಧಿಕಾರವನ್ನು ವಿನೋದ್ ತಾವ್​ಡೆ ಅವರಿಗೆ ನೀಡಲಾಗಿದೆ.

ಗುಜರಾತ್​ನಲ್ಲಿ ಬಿಜೆಪಿಯ ಮುನ್ನಡೆಯ ಜೊತೆಜೊತೆಗೆ ಆಮ್ ಆದ್ಮಿ ಪಕ್ಷವು ಖಾತೆ ತೆರೆದಿರುವ ವಿದ್ಯಮಾನವೂ ಹಲವರ ಗಮನ ಸೆಳೆದಿದೆ. ಡಿಸೆಂಬರ್ 7ರಂದು ದೆಹಲಿ ಮುನಿಸಿಪಲ್ ಕಾರ್ಪೊರೇಷನ್ ಚುನಾವಣೆಯಲ್ಲಿ ಗೆಲುವು ಸಾಧಿಸಿದ್ದ ಆಪ್ ಇದೀಗ ಗುಜರಾತ್​ನಲ್ಲಿ 10 ಸ್ಥಾನಗಳಲ್ಲಿ ಮುನ್ನಡೆ ದಾಖಲಿಸಿದೆ. ಒಂದು ಈ ಎಲ್ಲ 10 ಕ್ಷೇತ್ರಗಳಲ್ಲಿ ಗೆಲುವು ಸಾಧಿಸಲು ಆಪ್​ಗೆ ಸಾಧ್ಯವಾದರೆ ಅದು ಆಪ್ ಪಕ್ಷದ ಭವಿಷ್ಯಕ್ಕೆ ಒಳ್ಳೆಯದು. ದೆಹಲಿ ಮತ್ತು ಪಂಜಾಬ್​ನೊಂದಿಗೆ ಉತ್ತರ ಭಾರತದಲ್ಲಿ ಛಾಪು ಮೂಡಿಸಲು ಗುಜರಾತ್ ಅತ್ಯುತ್ತಮ ರಾಜ್ಯವಾಗಿದೆ. ಕಾಂಗ್ರೆಸ್ ಮತದಾರರ ಗಮನ ಸೆಳೆಯುವಲ್ಲಿ ವಿಫಲವಾಗಿರುವುದು ಈ ಚುನಾವಣೆಯಲ್ಲಿ ಬೆಳಕಿಗೆ ಬಂದ ಮತ್ತೊಂದು ಪ್ರಮುಖ ಅಂಶವಾಗಿದೆ.

ಕಾಂಗ್ರೆಸ್​ನ ವೈಫಲ್ಯದ ನೇರ ಲಾಭವನ್ನು ಆಪ್ ಪಡೆದುಕೊಳ್ಳುತ್ತಿದೆ ಎನ್ನುವುದು ಗುಜರಾತ್​ನಲ್ಲಿ ಮತ್ತೊಮ್ಮೆ ಸಾಬೀತಾಗಿದೆ. ಕಾಂಗ್ರೆಸ್​ನ ಪಾರಂಪರಿಕ ಮತ ಬ್ಯಾಂಕ್​ ಇದೀಗ ವಿಭಜನೆಯಾಗಿದೆ. ಅಲ್ಪಸಂಖ್ಯಾತರು ಮತ್ತು ಬುಡಕಟ್ಟು ಜನಾಂಗದವರ ಮತಗಳನ್ನು ಉಳಿಸಿಕೊಳ್ಳಲೂ ಕಾಂಗ್ರೆಸ್​ಗೆ ಸಾಧ್ಯವಾಗುತ್ತಿಲ್ಲ. ಈ ಎರಡೂ ಸಮುದಾಯಗಳು ಗುಜರಾತ್​ನಲ್ಲಿ ಕಾಂಗ್ರೆಸ್​ನಿಂದ ದೂರ ಸರಿದು ಆಡಳಿತಾರೂಢ ಬಿಜೆಪಿಯತ್ತ ಒಲವು ತೋರಿರುವುದು ಈ ಬಾರಿಯ ಚುನಾವಣೆಯಲ್ಲಿ ಎದ್ದುಕಂಡಿರುವ ಮತ್ತೊಂದು ಪ್ರಮುಖ ಅಂಶವಾಗಿದೆ.

ಭಾರತ್ ಜೋಡೋ ಯಾತ್ರಾ, ಎಐಸಿಸಿ ಅಧ್ಯಕ್ಷ ಸ್ಥಾನದ ಚುನಾವಣೆ ಚಟುವಟಿಕೆಗಳಲ್ಲಿ ಕಾಂಗ್ರೆಸ್ ವರಿಷ್ಠರು ಹೆಚ್ಚು ಗಮನ ನೀಡುತ್ತಿದ್ದರು. ಕಾಂಗ್ರೆಸ್​ನ ಗುಜರಾತ್ ಉಸ್ತುವಾರಿಯಾಗಿದ್ದ ಹಿರಿಯ ನಾಯಕ ಅಶೋಕ್ ಗೆಹ್ಲೋಟ್, ರಾಜಸ್ಥಾನದಲ್ಲಿ ತಮ್ಮ ಮುಖ್ಯಮಂತ್ರಿ ಗಾದಿ ಉಳಿಸಿಕೊಳ್ಳಲು ಅನುಸರಿಸಬೇಕಾದ ಕಾರ್ಯತಂತ್ರಕ್ಕೇ ಹೆಚ್ಚು ಗಮನ ಕೊಟ್ಟರು. ಸುಲಭವಾಗಿ ಗೆಲುವು ಸಾಧಿಸಬಹುದಾಗಿದ್ದ, ಕಾಂಗ್ರೆಸ್​ಗೆ ಪ್ರಬಲ ಬೆಂಬಲ ಸಿಗುತ್ತಿದ್ದ ಕ್ಷೇತ್ರಗಳನ್ನೂ ಈ ಬಾರಿ ಕಾಂಗ್ರೆಸ್​ ಬಿಜೆಪಿಗೆ ಬಿಟ್ಟುಕೊಟ್ಟಿದೆ. ಮಧ್ಯಾಹ್ನ 12 ಗಂಟೆ ಅವಧಿಯಲ್ಲಿ ಗುಜರಾತ್​ 18 ಕ್ಷೇತ್ರಘಳಲ್ಲಿ ಮಾತ್ರ ಕಾಂಗ್ರೆಸ್ ಮುನ್ನಡೆ ಸಾಧಿಸಿತ್ತು. ಈ ಅವಧಿಯಲ್ಲಿ ಬಿಜೆಪಿಯು 154, ಆಪ್ 6 ಮತ್ತು ಪಕ್ಷೇತರರು 4 ಕ್ಷೇತ್ರಗಳಲ್ಲಿ ಮುನ್ನಡೆ ಸಾಧಿಸಿದ್ದರು.

ಆಮ್ ಆದ್ಮಿ ಪಕ್ಷವು ಗುಜರಾತ್​ನಲ್ಲಿ ಅನುಸರಿಸಿದ ಕಾರ್ಯತಂತ್ರದ ಕಾರಣಕ್ಕೆ ಎಲ್ಲರ ಗಮನ ಸೆಳೆಯುತ್ತಿದೆ. ಚುನಾವಣೆ ಘೋಷಣೆಗೆ ಹೆಚ್ಚೂಕಡಿಮೆ ವರ್ಷ ಮೊದಲಿನಿಂದಲೇ ಆಪ್ ಗುಜರಾತ್​ನಲ್ಲಿ ಸಿದ್ಧತೆ ಆರಂಭಿಸಿತ್ತು. ತಳಮಟ್ಟದಲ್ಲಿ ಸಕ್ರಿಯವಾಗಿರುವವರನ್ನೇ ಗುರುತಿಸಿ ಟಿಕೆಟ್ ನೀಡಲು ಮುಂದಾಯಿತು. ನಮ್ಮ ಕಾರ್ಯಕರ್ತರು ಚುನಾವಣೆಯಲ್ಲಿ ಗೆಲುವು ಸಾಧಿಸಿದರೆ ಪಕ್ಷಾಂತರ ಮಾಡುವುದಿಲ್ಲ ಎಂದು ಆಪ್ ಘೋಷಿಸಿತ್ತು. ಕಳೆದ ಐದು ವರ್ಷಗಳ ಅವಧಿಯಲ್ಲಿ ಕಾಂಗ್ರೆಸ್​ನ 19 ಶಾಸಕರು ಬಿಜೆಪಿಗೆ ಸೇರ್ಪಡೆಯಾಗಿದ್ದ ಹಿನ್ನೆಲೆಯಲ್ಲಿ ಆಪ್​ನ ಈ ಹೇಳಿಕೆಯು ಮತದಾರರಲ್ಲಿ ವಿಶ್ವಾಸ ಮೂಡಿಸುವಲ್ಲಿ ಯಶಸ್ವಿಯಾಯಿತು.

2017ರ ವಿಧಾನಸಭೆ ಚುನಾವಣೆಯಲ್ಲಿ ಬಿಜೆಪಿಯು 99 ಸ್ಥಾನ ಗಳಿಸಿತ್ತು. ಅಂದಿನ ಚುನಾವಣೆಯಲ್ಲಿ ನರೇಂದ್ರ ಮೋದಿ ಈ ಬಾರಿಗಿಂತಲೂ ಹೆಚ್ಚು ಸಕ್ರಿಯರಾಗಿ ಪ್ರಚಾರದಲ್ಲಿ ತೊಡಗಿಸಿಕೊಂಡಿದ್ದರು. ಒಂದು ಹಂತದಲ್ಲಿ ಬಿಜೆಪಿಯು ಸೋಲಬಹುದು ಎಂಬ ವಿಶ್ಲೇಷಣೆಗಳೂ ಪ್ರಕಟವಾಗಿದ್ದವು. ಆದರೆ ಇದಕ್ಕೆ ಪ್ರತಿಯಾಗಿ ಬಿಜೆಪಿಯು 99 ಸ್ಥಾನಗಳಲ್ಲಿ ಜಯಗಳಿಸಿ ಅಧಿಕಾರಕ್ಕೆ ಮರಳಿತು. ಈ ಬಾರಿ ಮತ ಎಣಿಕೆಯು ಪ್ರಗತಿಯಲ್ಲಿರುವಾಗಲೇ, ಡಿ 8ರ ಮಧ್ಯಾಹ್ನ 12 ಗಂಟೆ ಅವಧಿಯಲ್ಲಿ ಬಿಜೆಪಿಯು 154 ಸ್ಥಾನಗಳಲ್ಲಿ ಮುನ್ನಡೆ ಸಾಧಿಸಿದೆ. ಈ ಗೆಲುವಿಗೆ ಪ್ರಧಾನಿ ನರೇಂದ್ರ ಮೋದಿ ಅವರ ಜನಪ್ರಿಯತೆ ಮತ್ತು ಅಮಿತ್ ಶಾ ಕಾರ್ಯತಂತ್ರವೇ ಮುಖ್ಯ ಕಾರಣ ಎಂದು ಹೇಳಲಾಗುತ್ತಿದೆ.

ಗೋಧ್ರಾ ಹತ್ಯಾಕಾಂಡದ ನಂತರ ನಡೆದಿದ್ದ ಚುನಾವಣೆಯಲ್ಲಿ ಬಿಜೆಪಿ 127 ಸ್ಥಾನಗಳಲ್ಲಿ ಜಯಗಳಿಸಿತ್ತು. ಇದು ಗುಜರಾತ್​ನಲ್ಲಿ ಬಿಜೆಪಿಯ ಈವರೆಗಿನ ಅತ್ಯುತ್ತಮ ಸಾಧನೆಯಾಗಿತ್ತು. ಈ ಬಾರಿಯ ಚುನಾವಣೆಯಲ್ಲಿ ಬಿಜೆಪಿಯು ತನ್ನದೇ ದಾಖಲೆಯನ್ನು ಮುರಿಯುವತ್ತ ದಾಪುಗಾಲು ಹಾಕುತ್ತಿದೆ. ಗುಜರಾತ್ ಚುನಾವಣೆಯ ಪ್ರಚಾರ ಮತ್ತು ಕಾರ್ಯತಂತ್ರವನ್ನು ಮೋದಿ-ಶಾ ಇಬ್ಬರೂ ಸೇರಿ ರೂಪಿಸಿದ್ದರು. ಮತದಾರರೊಂದಿಗೆ ಮೋದಿ ನೇರವಾಗಿ ಬೆರೆತು ವಿಶ್ವಾಸ ಗಳಿಸಲು ಯತ್ನಿಸಿದರು.

ಕಳೆದ 8 ತಿಂಗಳಲ್ಲಿ ಮೋದಿ ಹಲವು ಬಾರಿ ಗುಜರಾತ್​ಗೆ ಭೇಟಿ ನೀಡಿದ್ದರು. ಗುಜರಾತ್​ನ ಬಹುತೇಕ ಎಲ್ಲ ಭಾಗಗಳಲ್ಲಿ ಮೋದಿ ಪ್ರವಾಸ ನಡೆಸಿದ್ದರು. ಬೂತ್​ ಮಟ್ಟದ ಸಂಘಟನೆಗೆ ಒತ್ತು ನೀಡಿದ್ದ ಅಮಿತ್​ ಶಾ ನಿದ್ದೆಗೆಟ್ಟು ಕೆಲಸ ಮಾಡಿದ್ದರು. ಚುನಾವಣೆ ಸಮೀಪಿಸುತ್ತಿದ್ದ ಸಂದರ್ಭದಲ್ಲಿ ಈ ಜೋಡಿ ದಿನಕ್ಕೆ 20 ಗಂಟೆ ಕೆಲಸ ಮಾಡಿದ್ದೂ ಉಂಟು ಎಂದು ಬಿಜೆಪಿಯ ಉನ್ನತ ಮೂಲಗಳು ಹೇಳಿವೆ. ಈ ಪರಿಶ್ರಮಕ್ಕೆ ಇದೀಗ ಫಲ ಸಿಗುತ್ತಿದೆ. ಗುಜರಾತ್​ನಲ್ಲಿ ಬಿಜೆಪಿ ಅಭೂತಪೂರ್ವ ಜಯ ದಾಖಲಿಸಿದೆ.

ಇದನ್ನೂ ಓದಿ: Assembly Elections 2022: ಗುಜರಾತ್, ಹಿಮಾಚಲ ಪ್ರದೇಶದಲ್ಲಿ ಹೊಸ ದಾಖಲೆ ಬರೆಯಲು ಸಜ್ಜಾದ ಬಿಜೆಪಿ

ಗುಜರಾತ್ ಮತ್ತು ಹಿಮಾಚಲ ಪ್ರದೇಶ ಚುನಾವಣೆಗೆ ಸಂಬಂಧಿಸಿದ ಮತ್ತಷ್ಟು ಮಾಹಿತಿಗೆ ಇಲ್ಲಿ ಕ್ಲಿಕ್ ಮಾಡಿ

Published On - 12:07 pm, Thu, 8 December 22

ಹೈ ಡ್ರಾಮಾ... ಕಾಲಲ್ಲಿ ಕ್ಯಾಚ್ ಹಿಡಿದ ಕೆಎಲ್ ರಾಹುಲ್, ಗೆರೆ ದಾಟಿದ ಬುಮ್ರಾ
ಹೈ ಡ್ರಾಮಾ... ಕಾಲಲ್ಲಿ ಕ್ಯಾಚ್ ಹಿಡಿದ ಕೆಎಲ್ ರಾಹುಲ್, ಗೆರೆ ದಾಟಿದ ಬುಮ್ರಾ
ಸರ್ಕಾರಿ ಶಾಲೆಯ ಮಕ್ಕಳಿಗೆ ವಿಮಾನ ಪ್ರಯಾಣ ಭಾಗ್ಯ, ಪಾಲಕರ ಖುಷಿ ನೋಡಿ
ಸರ್ಕಾರಿ ಶಾಲೆಯ ಮಕ್ಕಳಿಗೆ ವಿಮಾನ ಪ್ರಯಾಣ ಭಾಗ್ಯ, ಪಾಲಕರ ಖುಷಿ ನೋಡಿ
Video: ಭೀಕರ ಅಪಘಾತ, ಅಗ್ನಿಶಾಮಕ ವಾಹನಕ್ಕೆ ಡಿಕ್ಕಿ ಹೊಡೆದ ಹೈಸ್ಪೀಡ್ ರೈಲು
Video: ಭೀಕರ ಅಪಘಾತ, ಅಗ್ನಿಶಾಮಕ ವಾಹನಕ್ಕೆ ಡಿಕ್ಕಿ ಹೊಡೆದ ಹೈಸ್ಪೀಡ್ ರೈಲು
ಬೆಳ್ಳಂಬೆಳಗ್ಗೆ ಬಾರ್​ಗಳ ಮೇಲೆ ದಾಳಿ, ಮಾಲೀಕರ ಕಿಕ್ ಇಳಿಸಿದ ಪೊಲೀಸರು
ಬೆಳ್ಳಂಬೆಳಗ್ಗೆ ಬಾರ್​ಗಳ ಮೇಲೆ ದಾಳಿ, ಮಾಲೀಕರ ಕಿಕ್ ಇಳಿಸಿದ ಪೊಲೀಸರು
ತ್ರಿವಿಕ್ರಮ್​ ಬಗ್ಗೆ ಭವ್ಯಾ ಹೇಳಿದ ಮಾತು ಕೇಳಿ ನಕ್ಕ ಕಿಚ್ಚ
ತ್ರಿವಿಕ್ರಮ್​ ಬಗ್ಗೆ ಭವ್ಯಾ ಹೇಳಿದ ಮಾತು ಕೇಳಿ ನಕ್ಕ ಕಿಚ್ಚ
3 ಸುಲಭ ಕ್ಯಾಚ್ ಕೈಚೆಲ್ಲಿದ ಜೈಸ್ವಾಲ್: ಆಕ್ರೋಶ ಹೊರಹಾಕಿದ ರೋಹಿತ್ ಶರ್ಮಾ
3 ಸುಲಭ ಕ್ಯಾಚ್ ಕೈಚೆಲ್ಲಿದ ಜೈಸ್ವಾಲ್: ಆಕ್ರೋಶ ಹೊರಹಾಕಿದ ರೋಹಿತ್ ಶರ್ಮಾ
Video: ದಕ್ಷಿಣ ಕೊರಿಯಾದಲ್ಲಿ 170 ಪ್ರಯಾಣಿಕರಿದ್ದ ವಿಮಾನ ಪತನ
Video: ದಕ್ಷಿಣ ಕೊರಿಯಾದಲ್ಲಿ 170 ಪ್ರಯಾಣಿಕರಿದ್ದ ವಿಮಾನ ಪತನ
ಖ್ವಾಜಾ ಕ್ಲೀನ್ ಬೌಲ್ಡ್... ಸ್ಟೇಡಿಯಂನಲ್ಲಿ ಮೊಳಗಿದ DSP, DSP ಘೋಷಣೆ..!
ಖ್ವಾಜಾ ಕ್ಲೀನ್ ಬೌಲ್ಡ್... ಸ್ಟೇಡಿಯಂನಲ್ಲಿ ಮೊಳಗಿದ DSP, DSP ಘೋಷಣೆ..!
Daily Devotional: ಮಾಂಗಲ್ಯ ಸರ ತುಂಡಾದರೆ ಏನು ಮಾಡಬೇಕು? ವಿಡಿಯೋ ನೋಡಿ
Daily Devotional: ಮಾಂಗಲ್ಯ ಸರ ತುಂಡಾದರೆ ಏನು ಮಾಡಬೇಕು? ವಿಡಿಯೋ ನೋಡಿ
Weekly horoscope: ಡಿಸೆಂಬರ್ 30 ರಿಂದ ಜನವರಿ 5ರವರೆಗಿನ ವಾರ ಭವಿಷ್ಯ
Weekly horoscope: ಡಿಸೆಂಬರ್ 30 ರಿಂದ ಜನವರಿ 5ರವರೆಗಿನ ವಾರ ಭವಿಷ್ಯ