ಪ್ರಗತಿಪರ ವಿಚಾರವಾದಿಗಳನ್ನು ಆವಾಚ್ಯ ಪದಗಳಿಂದ ಬೈದ ಶ್ರೀರಾಮಸೇನೆ ಸಂಸ್ಥಾಪಕ ಪ್ರಮೋದ್ ಮುತಾಲಿಕ್
ಮುಸ್ಲಿಂರ ಬಗ್ಗೆ ಮಾತನಾಡುವ ಧೈರ್ಯ ಇವರಿಗಿಲ್ಲ ಎಂದು ಪ್ರಗತಿಪರ ಹೋರಾಟಗಾರನ್ನು ಮುತಾಲಿಕ್ ನಾಯಿಗಳಿಗೆ ಹೋಲಿಸಿದ್ದಾರೆ. ಪ್ರಗತಿಪರ ವಿಚಾರವಾದಿ ಬಸವರಾಜ ಸೂಳಿಭಾವಿ ವಿರುದ್ಧ ಪ್ರಮೋದ್ ಮುತಾಲಿಕ್ ಆಕ್ರೋಶ ಹೊರ ಹಾಕಿದ್ದಾರೆ.
ಗದಗ: ಲಿಂಗಾಯತ ವಿರೋಧಿ ಬಂಡಾಯ ಸಾಹಿತಿ ಬಸವರಾಜ ಸೂಳಿಭಾವಿ ಹೇಳಿಕೆ ವಿಚಾರಕ್ಕೆ ಸಂಬಂಧಿಸಿ ಪ್ರಗತಿಪರರು, ವಿಚಾರವಾದಿಗಳ ವಿರುದ್ಧ ಶ್ರೀರಾಮಸೇನೆ ಸಂಸ್ಥಾಪಕ ಮುತಾಲಿಕ್ ಕಿಡಿ ಕಾರಿದ್ದಾರೆ. ಆವಾಚ್ಯ ಪದಗಳಿಂದ ಆಕ್ರೋಶ ವ್ಯಕ್ತಪಡಿಸಿದ್ದಾರೆ.
ಪ್ರಗತಿಪರ ವಿಚಾರವಾದಿ ಬಸವರಾಜ ಸೂಳಿಭಾವಿ ವಿರುದ್ಧ ಪ್ರಮೋದ್ ಮುತಾಲಿಕ್ ಆಕ್ರೋಶ ಹೊರ ಹಾಕಿದ್ದಾರೆ. ನಾಯಿಗಳು ಬೊಗಳ್ತಾವೆ, ಯಾಕೆ ಬೊಗಳ್ತಿಯಪ್ಪಾ ಅಂತ ಕೇಳೋದಕ್ಕಾಗಲ್ಲ. ಇವರೆಲ್ಲ ನಾಯಿಗಳು, ಹಿಂದೂ ವಿರೋಧಿ ನಾಯಿಗಳು ಎಂದು ಮುತಾಲಿಕ್ ಕಿಡಿಕಾರಿದ್ದಾರೆ. ಪ್ರಗತಿಪರರು ಮುಸ್ಲಿಂ, ಕ್ರಿಶ್ಚಿಯನ್ ಏಜೆಂಟ್ರು, ದೇಶದ್ರೋಹಿಗಳು. ಈ ನಾಯಿಗಳಿಗೆ ಪ್ರತಿಸಾರಿ ಹಚಾತೂ ಹಚಾತೂ ಅನ್ನೋದಕ್ಕಾಗಲ್ಲ. ನಾವು ನಮ್ಮ ಪಾಡಿಗೆ ಹಿಂದೂ ಸಂಘಟನೆ ಜಾಗೃತಿ ಕೆಲಸ ಮುಂದುವರೆಸ್ತೇವೆ. ಮುಸ್ಲಿಂರ ಬಗ್ಗೆ ಮಾತನಾಡುವ ಧೈರ್ಯ ಇವರಿಗಿಲ್ಲ ಎಂದು ಪ್ರಗತಿಪರ ಹೋರಾಟಗಾರನ್ನು ಮುತಾಲಿಕ್ ನಾಯಿಗಳಿಗೆ ಹೋಲಿಸಿದ್ದಾರೆ. ತೋಂಟದಾರ್ಯ ಮಠದ ಜಾತ್ರೆಯ ವಿಚಾರವಾಗಿ ಪ್ರಮೋದ್ ಮುತಾಲಿಕ್ ಲಿಂಗಾಯತರನ್ನ ಮುಂದೆ ಬಿಟ್ಟು ಸಾಮರಸ್ಯ ಕದಡುತ್ತಿದ್ದಾರೆ ಎಂದು ಬಸವರಾಜ ಸೂಳಿಭಾವಿ ಹೇಳಿಕೆ ನೀಡಿದ್ದರು. ಇದಕ್ಕೆ ಮುತಾಲಿಕ್ ಪ್ರತಿಕ್ರಿಯಿಸಿದ್ದಾರೆ.
ಬುದ್ಧಿಜೀವಿಗಳ ವಿರುದ್ಧ ಹರಿಹಾಯ್ದ ಪ್ರಮೋದ್ ಮುತಾಲಿಕ್ ಇನ್ನು ಕೆಲ ದಿನಗಳ ಹಿಂದೆ ಧಾರವಾಡದಲ್ಲಿ ಬುದ್ಧಿಜೀವಿಗಳು ಮುಸ್ಲಿಂ, ಕ್ರಿಶ್ಚಿಯನ್‌ರಿಗಾಗಿ ಹೊರಗೆ ಬರುತ್ತಾರೆ. ಹಿಂದೂಗಳ ವಿಷಯದಲ್ಲಿ ಬರುವುದಿಲ್ಲ. ಹರ್ಷ ಕೊಲೆ, ಚಂದ್ರು ಕೊಲೆ ಇವರಿಗೆ ಗೊತ್ತಾಗಲಿಲ್ಲ. ಕರ್ನಾಟಕದಲ್ಲಿ 40 ಹಿಂದೂಗಳ ಕೊಲೆಯಾದಾಗ ಎಲ್ಲಿ ಮಲಗಿದ್ರು. ಕ್ರಿಶ್ಚಿಯನ್, ಮಸ್ಲಿಮರ ಏಜೆಂಟರಾಗಿ ಕೆಲಸ ಮಾಡುತ್ತಿದ್ದಾರೆ. ಇವರು ಬುದ್ಧಿಜೀವಿಗಳಲ್ಲ, ಬುದ್ಧಿಗೇಡಿಗಳು ಎಂದು ಶ್ರೀರಾಮಸೇನೆ ಸಂಸ್ಥಾಪಕ ಪ್ರಮೋದ್ ಮುತಾಲಿಕ್ ವಾಗ್ದಾಳಿ ನಡೆಸಿದ್ದರು.
ನುಗ್ಗಿಕೇರಿಯಲ್ಲಿ ಮುಸ್ಲಿಂ ವ್ಯಾಪಾರಿ ಮೇಲೆ ದೌರ್ಜನ್ಯ ಪ್ರಕರಣಕ್ಕೆ ಸಂಬಂಧಿಸಿ ಮಾತನಾಡಿರುವ ಮುತಾಲಿಕ್, ಬುದ್ಧಿಜೀವಿಗಳ ಮೇಲೆ ವಾಗ್ದಾಳಿ ನಡೆಸಿದ್ದಾರೆ. ಇನ್ನು ಇದೇ ವೇಳೆ ತಮ್ಮ ಗಡಿಪಾರು ಆಗ್ರಹ ವಿಚಾರಕ್ಕೆ ಸಂಬಂಧಿಸಿ ಮುತಾಲಿಕ್ ಪ್ರತಿಕ್ರಿಯಿಸಿದ್ದು, ನನ್ನ ಗಡಿಪಾರು ಮಾಡುವುದು 10-15 ವರ್ಷದಿಂದ ನಡೆಯುತ್ತಿದೆ. ನಾನು ಹಿಂದುತ್ವಕ್ಕಾಗಿ ಹೋರಾಟ ಮಾಡುತ್ತಿದ್ದೇನೆ. ದೇಶದ ಹಿತಕ್ಕಾಗಿ ಹೋರಾಟ ಮಾಡುತ್ತ ಬಂದಿದ್ದೇನೆ. ಈಗಾಗಲೇ 17-18 ಸಲ ಜಿಲ್ಲೆಗಳಿಂದ ಗಡಿಪಾರು ಮಾಡಿದ್ದಾರೆ. ಇದೇನೂ ಬಹಳ ದೊಡ್ಡ ವಿಷಯವಲ್ಲ. ಗಡಿಪಾರು ಎಲ್ಲಿಗೆ ಮಾಡುವವರಿದ್ದೀರಿ? ಎಲ್ಲಿಗೆ ಕಳುಹಿಸುತ್ತೀರಿ ನನ್ನ? ನನ್ನ ಗಡಿಪಾರು ಮಾಡಲು ನೀವು ಯಾರು? ಗಡಿಪಾರಿಗೆ ಆಗ್ರಹಿಸುವವರು ಬನ್ನಿ. ಶಾಸಕ ಅಬ್ಬಯ್ಯ, ತಟಮಗಾರ ಬನ್ನಿ. ಏನು ಸಂವಿಧಾನ ವಿರೋಧಿ ಮಾಡುತ್ತಿದ್ದೀರಿ ಚರ್ಚೆ ಮಾಡೋಣ ಎಂದು ಆಹ್ವಾನಿಸಿದ್ದಾರೆ.
ಇದನ್ನೂ ಓದಿ: ಮಾನನಷ್ಟ ಮೊಕದ್ದಮೆ ಹೂಡುವೆ: ಗುತ್ತಿಗೆದಾರರ ಸಂಘದ ಕಮಿಷನ್ ಆರೋಪಕ್ಕೆ ಸುಧಾಕರ ಗರಂ
ಹಣ್ಣಿನಂಗಡಿ ಮೇಲೆ ನಡೆದ ದಾಂಧಲೆ ಅರೋಪದಲ್ಲಿ ಬಂಧನಕ್ಕೊಳಗಾಗಿರುವ ತಮ್ಮ ಕಾರ್ಯಕರ್ತರನ್ನು ಮುತಾಲಿಕ್ ಭೇಟಿಯಾದರು