TV9 ಇಂಪ್ಯಾಕ್ಟ್: ಮೊದಲ ಬಾರಿಗೆ ದ್ಯಾಮುಣಸಿ ಗ್ರಾಮಕ್ಕೆ ಸರ್ಕಾರಿ ಬಸ್ ಸೇವೆ, ಶಾಸಕರಿಗೆ, ಟಿವಿ9ಗೆ ಅಭಿನಂದನೆಗಳ ಮಹಾಪೂರ

ಬಸ್​ಗಳಿಲ್ಲದೆ ಪರದಾಡುತ್ತಿದ್ದ ಜನರಿಗೆ ಕೊನೆಗೂ ಪರಿಹಾರ ಸಿಕ್ಕಿದೆ. ಹಸಿರು ನಿಶಾನೆ ತೋರಿಸುವ ಮೂಲಕ ರೋಣ ಕ್ಷೇತ್ರದ ಶಾಸಕ ಜಿ.ಎಸ್. ಪಾಟೀಲ್ ಸರ್ಕಾರಿ ಬಸ್​ಗೆ ಚಾಲನೆ ನೀಡಿದ್ದಾರೆ. ಈ ಮೂಲಕ ಶಾಸಕರು ಟಿವಿ9 ವರದಿಗೆ ಸ್ಪಂದಿಸಿದ್ದಾರೆ.

TV9 ಇಂಪ್ಯಾಕ್ಟ್: ಮೊದಲ ಬಾರಿಗೆ ದ್ಯಾಮುಣಸಿ ಗ್ರಾಮಕ್ಕೆ ಸರ್ಕಾರಿ ಬಸ್ ಸೇವೆ, ಶಾಸಕರಿಗೆ, ಟಿವಿ9ಗೆ ಅಭಿನಂದನೆಗಳ ಮಹಾಪೂರ
ದ್ಯಾಮುಣಸಿ ಗ್ರಾಮಕ್ಕೆ ಸರ್ಕಾರಿ ಬಸ್ ಸೇವೆ
Follow us
TV9 Web
| Updated By: ಆಯೇಷಾ ಬಾನು

Updated on: Jun 21, 2023 | 1:52 PM

ಗದಗ: ಜಿಲ್ಲೆಯ ದ್ಯಾಮುಣಸಿ ಗ್ರಾಮಕ್ಕೆ‌ ಕೊನೆಗೂ ಸರ್ಕಾರಿ ಬಸ್ ಸಂಚಾರ ಆರಂಭವಾಗಿದ್ದು ವಿದ್ಯಾರ್ಥಿಗಳು, ಗ್ರಾಮಸ್ಥರು ಫುಲ್ ಖುಷಿಯಾಗಿದ್ದಾರೆ. ಸರ್ಕಾರಿ ಬಸ್(Government Bus) ಇಲ್ಲದ ಗ್ರಾಮ ಎಂದು ಟಿವಿ9 ಈ ಬಗ್ಗೆ ವರದಿ ಮಾಡಿತ್ತು(Tv9 Impact). ಟಿವಿ9 ವರದಿ ಬೆನ್ನಲ್ಲೇ ದ್ಯಾಮುಣಸಿ ಗ್ರಾಮಕ್ಕೆ ಸರ್ಕಾರಿ ಬಸ್ ಸಂಚಾರ ಆರಂಭವಾಗಿದೆ. ಗದಗ ಜಿಲ್ಲೆಯ ಗಜೇಂದ್ರಗಡ ತಾಲೂಕಿನ ದ್ಯಾಮುಣಸಿ ಗ್ರಾಮದ ಜನ್ರು ಫುಲ್ ಖುಷ್ ಆಗಿದ್ದಾರೆ.

ಸರ್ಕಾರಿ ಬಸ್​ಗೆ ತೆಂಗಿನ ಗರಿ, ತಳಿರು ತೋರಣ ಕಟ್ಟಿ ಶೃಂಗಾರ

ಮೊದಲ ಬಾರಿಗೆ ಗ್ರಾಮಕ್ಕೆ ಆಗಮಿಸಿದ ಸರ್ಕಾರಿ ಬಸ್​ಗೆ ತೆಂಗಿನ ಗರಿ, ತಳಿರು ತೋರಣ ಕಟ್ಟಿ ಶೃಂಗಾರ ಮಾಡಲಾಗಿದೆ. ಹಸಿರು ನಿಶಾನೆ ತೋರಿಸುವ ಮೂಲಕ ರೋಣ ಕ್ಷೇತ್ರದ ಶಾಸಕ ಜಿ.ಎಸ್. ಪಾಟೀಲ್ ಸರ್ಕಾರಿ ಬಸ್​ಗೆ ಚಾಲನೆ ನೀಡಿದ್ದಾರೆ. ಈ ಮೂಲಕ ಶಾಸಕರು ಟಿವಿ9 ವರದಿಗೆ ಸ್ಪಂದಿಸಿದ್ದಾರೆ. ಜೂನ್ 10 ರಂದು ಟಿವಿ9 ಬಸ್ ಇಲ್ಲದ ಊರು ಎಂಬ ಶಿರ್ಷಿಕೆಯಡಿ ವರದಿ ಪ್ರಸಾರ ಮಾಡಿತ್ತು. ಟಿವಿ9 ವರದಿ ಬಳಿಕ ಶಾಸಕ ಜಿ ಎಸ್ ಪಾಟೀಲ್ ಬಸ್ ವ್ಯವಸ್ಥೆ ಮಾಡುವ ಬಗ್ಗೆ ಭರವಸೆ ನೀಡಿದ್ರು. ಬಸ್ ಸೌಕರ್ಯ ಇಲ್ಲದ ಊರಿಗೆ ಬಸ್ ಸೌಕರ್ಯ ಕಲ್ಪಿಸೋದು ನನ್ನ ಕರ್ತವ್ಯ ಎಂದಿದ್ರು. ಮಾತು ಕೊಟ್ಟಂತೆ ದ್ಯಾಮುಣಸಿ ಗ್ರಾಮಕ್ಕೆ ಶಾಸಕ ಜಿಎಸ್ಪಿ ಬಸ್ ವ್ಯವಸ್ಥೆ ಕಲ್ಪಿಸಿದ್ದಾರೆ.

ಇದನ್ನೂ ಓದಿ: Gadag: ಸರ್ಕಾರಿ ಬಸ್ ಹತ್ತಲು ಬಿಡದ ಮಹಿಳೆಯರು, ಕಿಟಕಿಯಿಂದ ಒಳಗೆ ಹೋದ ಪುರುಷ ಪ್ರಯಾಣಿಕ

ಹಸಿರು ನಿಶಾನೆ ತೋರಿಸಿ ಮಾತನಾಡಿದ ಶಾಸಕ ಜಿ ಎಸ್ ಪಾಟೀಲ್, ಟಿವಿ9 ಕಾಳಜಿ ಬಗ್ಗೆ ಕೊಂಡಾಡಿದ್ದಾರೆ. ಟಿವಿ9 ವರದಿ ಬಳಿಕ ಸಾರಿಗೆ ಅಧಿಕಾರಿಗಳ ಜೊತೆ ಮಾತನಾಡಿ ಸಂಚಾರಕ್ಕೆ ವ್ಯವಸ್ಥೆ ಮಾಡಲಾಗಿದೆ ಅಂತ ಭಾಷಣದಲ್ಲಿ ಹೇಳಿದ್ರು. ಮೊದಲ ಬಾರಿಗೆ ಗ್ರಾಮಕ್ಕೆ ಸರ್ಕಾರಿ ಬಸ್ ಸಂಚಾರ ಆರಂಭಕ್ಕೆ ಗ್ರಾಮಸ್ಥರು, ವಿದ್ಯಾರ್ಥಿಗಳು ಫುಲ್ ಖುಷ್ ಆಗಿದ್ದಾರೆ. ಬಸ್ ಇಲ್ಲದೇ ಎರಡು ಕಿಲೋ‌ಮೀಟರ್ ನಡೆದುಕೊಂಡೇ ವಿದ್ಯಾರ್ಥಿಗಳು ಶಾಲೆಗೆ ಹೋಗುತ್ತಿದ್ದರು.‌ ಕೊನೆಗೂ ವಿದ್ಯಾರ್ಥಿಗಳ, ಗ್ರಾಮಸ್ಥರು ಹಾಗೂ ಮಹಿಳೆಯರ ಉಚಿತ ಪ್ರಯಾಣಕ್ಕೆ ಅನುಕೂಲ ಮಾಡಿಕೊಟ್ಟಿದ್ದಕ್ಕೆ ಟಿವಿ9 ಹಾಗೂ ಶಾಸಕ ಜಿ.ಎಸ್. ಪಾಟೀಲ್ ಅವ್ರಿಗೆ ದ್ಯಾಮುಣಶಿ ಗ್ರಾಮದ ಜನ್ರು ಅಭಿನಂದನೆ ಸಲ್ಲಿಸಿದ್ದಾರೆ.

ಗದಗ ಜಿಲ್ಲೆಗೆ ಸಂಬಂಧಿಸಿದ ಸುದ್ದಿಗಳನ್ನು ಓದಲು ಇದರ ಮೇಲೆ ಕ್ಲಿಕ್ ಮಾಡಿ