ಭಾರತಕ್ಕೆ ಬರಲಿದ್ದಾನೆ ಮೋಸ್ಟ್​ ವಾಂಟೆಡ್​ ಗ್ಯಾಂಗ್​ಸ್ಟರ್ ರವಿಪೂಜಾರಿ

ಬೆಂಗಳೂರು: ಆತ ಮೋಸ್ಟ್ ವಾಂಟೆಡ್ ಗ್ಯಾಂಗ್​ಸ್ಟರ್. ಆತನ ಹೆಸರು ಕೇಳಿದ್ರೆ ಇಡೀ ಅಂಡರ್​ವರ್ಲ್ಡೇ ಶೇಕ್ ಆಗುತ್ತೆ. ಕಂಡವರ ರಕ್ತ ಹೀರಿ ಮೆರೆದಾಡಿದ್ದ. ಅಂಥಾ ಪಾತಕಿಯ ಪಾಪಕ್ಕೆ ಶಾಸ್ತಿ ಮಾಡ್ಬೇಕು ಅಂತಾ ಕಾಯ್ತಿದ್ದ ಖಾಕಿಗೆ ಈಗ ಗುಡ್ ನ್ಯೂಸ್ ಸಿಕ್ಕಿದೆ. ಯಾಕಂದ್ರೆ, ಭಾರತಕ್ಕೆ ಹಸ್ತಾಂತರಕ್ಕಿದ್ದ ಕಾನೂನು ತೊಡಕು ನಿವಾರಣೆಯಾಗಿದೆ. ರವಿ ಪೂಜಾರಿ.. ಭೂಗತ ಪಾತಕಿ.. ಒಂದು ಕಾಲದಲ್ಲಿ ಅಂಡರ್ ವರ್ಲ್ಡ್​ನಲ್ಲಿ ಡಾನ್ ಆಗಿ ಮೆರೀತಿದ್ದ. ಇಡೀ ದುನಿಯಾವನ್ನೇ ತನ್ನ ಬೆರಳ ತುದಿಯಲ್ಲಿಟ್ಟು ಆಟ ಆಡಿಸ್ತಿದ್ದ. ಇಷ್ಟೆಲ್ಲಾ ಮೆರೆದಾಡಿ ಈ […]

ಭಾರತಕ್ಕೆ ಬರಲಿದ್ದಾನೆ ಮೋಸ್ಟ್​ ವಾಂಟೆಡ್​ ಗ್ಯಾಂಗ್​ಸ್ಟರ್ ರವಿಪೂಜಾರಿ

Updated on: Feb 23, 2020 | 7:44 AM

ಬೆಂಗಳೂರು: ಆತ ಮೋಸ್ಟ್ ವಾಂಟೆಡ್ ಗ್ಯಾಂಗ್​ಸ್ಟರ್. ಆತನ ಹೆಸರು ಕೇಳಿದ್ರೆ ಇಡೀ ಅಂಡರ್​ವರ್ಲ್ಡೇ ಶೇಕ್ ಆಗುತ್ತೆ. ಕಂಡವರ ರಕ್ತ ಹೀರಿ ಮೆರೆದಾಡಿದ್ದ. ಅಂಥಾ ಪಾತಕಿಯ ಪಾಪಕ್ಕೆ ಶಾಸ್ತಿ ಮಾಡ್ಬೇಕು ಅಂತಾ ಕಾಯ್ತಿದ್ದ ಖಾಕಿಗೆ ಈಗ ಗುಡ್ ನ್ಯೂಸ್ ಸಿಕ್ಕಿದೆ. ಯಾಕಂದ್ರೆ, ಭಾರತಕ್ಕೆ ಹಸ್ತಾಂತರಕ್ಕಿದ್ದ ಕಾನೂನು ತೊಡಕು ನಿವಾರಣೆಯಾಗಿದೆ.

ರವಿ ಪೂಜಾರಿ.. ಭೂಗತ ಪಾತಕಿ.. ಒಂದು ಕಾಲದಲ್ಲಿ ಅಂಡರ್ ವರ್ಲ್ಡ್​ನಲ್ಲಿ ಡಾನ್ ಆಗಿ ಮೆರೀತಿದ್ದ. ಇಡೀ ದುನಿಯಾವನ್ನೇ ತನ್ನ ಬೆರಳ ತುದಿಯಲ್ಲಿಟ್ಟು ಆಟ ಆಡಿಸ್ತಿದ್ದ. ಇಷ್ಟೆಲ್ಲಾ ಮೆರೆದಾಡಿ ಈ ಪಾತಕಿ ಈಗ ದೂರದ ದೇಶದಲ್ಲಿ ಬಂಧಿಯಾಗಿದ್ದಾನೆ. ಹೇಗಾದ್ರೂ ಮಾಡಿ ಈ ಪಾತಕಿಯನ್ನ ಇಲ್ಲಿಗೆ ತಂದು ಬೆಂಡೆತ್ತಬೇಕು ಅಂತಾ ರೆಡಿಯಾಗಿದ್ದ ಖಾಕಿಗೆ ಈಗ ಸಿಕಿದ್ದು ಗುಡ್​ನ್ಯೂಸ್.

ಶೀಘ್ರದಲ್ಲೇ ಭಾರತಕ್ಕೆ ಭೂಗತ ಪಾತಕಿ ಹಸ್ತಾಂತರ?
ಈ ಮೋಸ್ಟ್ ವಾಂಟೆಡ್ ರವಿ ಪೂಜಾರಿ ಮಾಡದ ಪಾಪದ ಕೃತ್ಯಗಳೇ ಉಳಿದಿಲ್ಲ. ಅಂಡರ್​ವರ್ಲ್ಡ್​ನಲ್ಲಿ ರಕ್ತಪಾತ ಮಾಡಿ ವಿಕೃತಿ ಮೆರೆಯುತ್ತಿದ್ದ. ಇಂಥಾದ್ದೇ ಪಾಪಕೃತ್ಯಗಳಲ್ಲಿ ಭಾಗಿಯಾಗಿದ್ದ ಆರೋಪದಡಿ ದೇಶದ ಹಲವು ಭಾಗಗಳಲ್ಲಿ ಈತನ ಮೇಲೆ 100 ಕ್ಕೂ ಹೆಚ್ಚು ಕೇಸ್​ಗಳಿವೆ. ರಾಜ್ಯದಲ್ಲಿ 49 ಕೇಸ್ ದಾಖಲಾಗಿವೆ.

13 ರೆಡ್​ಕಾರ್ನರ್​ ನೋಟಿಸ್ ಜಾರಿಯಾಗಿತ್ತು. ಹೀಗಾಗಿ, ಮೋಸ್ಟ್ ವಾಂಟೆಡ್ ಕ್ರಿಮಿಯನ್ನ ಭಾರತಕ್ಕೆ ತರಲು ಕಳೆದ ಒಂದು ವರ್ಷದಿಂದ ಖಾಕಿ ಸಾಕಷ್ಟು ಕಸರತ್ತು ನಡೆಸಿತ್ತು. ಕರ್ನಾಟಕ ಸೇರಿದಂತೆ ಬೇರೆ ಬೇರೆ ರಾಜ್ಯದ ಪೊಲೀಸರು ಶತಪ್ರಯತ್ನ ನಡೆಸಿದ್ರು. ಆದ್ರೀಗ ಪೊಲೀಸ್ರ ಪ್ರಯತ್ನ ಫಲ ನೀಡೋ ಕಾಲ ಬಂದಿದೆ. ರವಿ ಪೂಜಾರಿಗೆ ಡ್ರಿಲ್ ಮಾಡೋ ಚಾನ್ಸ್ ಸಿಗಲಿದೆ. ಯಾಕಂದ್ರೆ, ಕಾನೂನು ತೊಡಕು ನಿವಾರಣೆಯಾಗಿದ್ದು, ಶೀಘ್ರದಲ್ಲೇ ಭಾರತಕ್ಕೆ ಹಸ್ತಾರಂತ ಆಗೋ ಸಾಧ್ಯತೆ ಇದೆ.

ಪಾತಕಿ ರೂಟ್ ಕ್ಲಿಯರ್!
ರವಿ ಪೂಜಾರಿ ಆಫ್ರಿಕಾದ ಸೆನೆಗಲ್​ನಲ್ಲಿ ಅಂತೋನಿ ಅನ್ನೋ ಹೆಸರಿನಲ್ಲಿ ನಕಲಿ ಪೌರತ್ವ ಪಡೆದು ವಾಸವಾಗಿದ್ದ. ಈ ಭಾರತದ ಮೋಸ್ಟ್ ವಾಂಟೆಡ್ ಗ್ಯಾಂಗ್​ಸ್ಟರ್ ಆಗಿರೋ ರವಿಪೂಜಾರಿಯನ್ನ 2019ರ ಜ.19ರಂದು ಪಶ್ಚಿಮ ಆಫ್ರಿಕಾದ ಸೆನೆಗಲ್ ದೇಶದಲ್ಲಿ ವಶಕ್ಕೆ ಪಡೆಯಲಾಗಿತ್ತು.

ಆದ್ರೆ, ಸೆನೆಗಲ್, ಭಾರತದ ನಡುವೆ ಒಪ್ಪಂದವಿಲ್ಲದ ಕಾರಣ ರವಿಪೂಜಾರಿ ಭಾರತಕ್ಕೆ ಹಸ್ತಾಂತರ ಮಾಡುವ ಪ್ರಕ್ರಿಯೆ ವಿಳಂಬವಾಗಿತ್ತು. ಜತೆಗೆ ರವಿಪೂಜಾರಿ ಹಸ್ತಾಂತರಕ್ಕೆ ಕಾನೂನು ತೊಡಕು ಎದುರಾಗಿತ್ತು. ಸದ್ಯ ರವಿ ಹಸ್ತಾಂತರಕ್ಕಿದ್ದ ಕಾನೂನು ತೊಡಕು ನಿವಾರಣೆ, ಸದ್ಯದಲ್ಲೇ ಭಾರತಕ್ಕೆ ಹಸ್ತಾಂತರಿಸಲು ತಯಾರಿ ನಡೆದಿದೆ. ಇಂದು ಸಂಜೆ ಹಿರಿಯ ಪೊಲೀಸ್ ಅಧಿಕಾರಿ ನೇತೃತ್ವದ ತಂಡ ಸೆನೆಗಲ್​ ದೇಶಕ್ಕೆ ತೆರಳಲಿದೆ. ಒಂದು ವಾರದಲ್ಲಿ ಭೂಗತ ಪಾತಕಿ ಭಾರತಕ್ಕೆ ಹಸ್ತಾಂತರ ಆಗಲಿದ್ದು, ನೇರವಾಗಿ ಬೆಂಗಳೂರಿಗೆ ಕರೆತರಲು ಕರ್ನಾಟಕ ಪೊಲೀಸರು ತಯಾರಿ ನಡೆಸಿದ್ದಾರೆ. ಇದಕ್ಕೆ ಬೇಕಾದ ದಾಖಲೆಗಳನ್ನು ಪೊಲೀಸ್ರು ಸಿದ್ಧಪಡಿಸಿಕೊಳ್ಳುತ್ತಿದ್ದಾರೆ.

ಸದ್ಯ, ಸೆನೆಗಲ್​ನಲ್ಲಿ ರವಿ ಪೂಜಾರಿಯನ್ನ ಭಾರತಕ್ಕೆ ಹಸ್ತಾಂತರ ಮಾಡುವ ಪ್ರಕ್ರಿಯೆ ಆರಂಭವಾಗಿದ್ದು, ವಿಶೇಷ ನ್ಯಾಯಾಲಯದಲ್ಲಿ ಪ್ರಕರಣದ ವಿಚಾರಣೆ ನಡೀತಿದೆ. ಕೇಂದ್ರ ಗೃಹ ಸಚಿವಾಲಯದಿಂದ ವಿದೇಶಾಂಗ ವ್ಯವಹಾರಗಳ ಇಲಾಖೆಗೆ ಈತನ ಚರಿತ್ರೆ ಹಸ್ತಾಂತರವಾಗಿದ್ದು, ವಿದೇಶಾಂಗ ವ್ಯವಹಾರಗಳ ಇಲಾಖೆಯಿಂದ ಸೆನೆಗಲ್​ನಲ್ಲಿರುವ ಇಂಡಿಯನ್ ಎಂಬಸಿ ಮೂಲಕ ಕೋರ್ಟ್​ಗೆ ಮಾಹಿತಿ ಸಲ್ಲಿಕೆಯಾಗಿದೆ. ಇನ್ನೇನು ಭಾರತಕ್ಕೆ ಭೂಗತ ಪಾತಕಿ ಹಸ್ತಾಂತರ ಆಗಲಿದ್ದು, ಡ್ರಿಲ್ ಮಾಡಲು ಖಾಕಿ ಕಾಯ್ತಿದೆ.

Published On - 7:41 am, Sun, 23 February 20