ಜನಸಾಮಾನ್ಯರ ಜೀವನ ಸಹಜ ಸ್ಥಿತಿಗೆ ತರಬೇಕಿದೆ, ಸಭೆಯಲ್ಲಿ ನಿರ್ಧಾರ ಮಾಡುತ್ತೇವೆ: ಗೌರವ್ ಗುಪ್ತಾ

| Updated By: sandhya thejappa

Updated on: Jun 19, 2021 | 11:54 AM

ಬಸ್ ಸಂಚಾರಕ್ಕೆ ಅವಕಾಶ ನೀಡುವ ಬಗ್ಗೆ ಚಿಂತನೆ ನಡೆಸಲಾಗುತ್ತಿದೆ. ಅಂಗಡಿ, ಕೈಗಾರಿಕೆಗಳನ್ನು ಆರಂಭಿಸುವ ಬಗ್ಗೆ ನಿರ್ಧಾರ ಕೈಗೊಳ್ಳಲಾಗುವುದು. ವಾಣಿಜ್ಯ ಮಳಿಗೆ, ಮಾರ್ಕೆಟ್ ಆರಂಭ ಬಗ್ಗೆಯೂ ನಿರ್ಧಾರ ಮಾಡುತ್ತೇವೆ. ಮಾಲ್, ಚಿತ್ರಮಂದಿರ ತೆರೆಯುವ ಬಗ್ಗೆ ತೀರ್ಮಾನಿಸಿಲ್ಲ. ಈ ಬಗ್ಗೆ ನಾವು ಜಾಗರೂಕತೆಯಿಂದ ಹೆಜ್ಜೆ ಇಡಬೇಕಾಗಿದೆ.

ಜನಸಾಮಾನ್ಯರ ಜೀವನ ಸಹಜ ಸ್ಥಿತಿಗೆ ತರಬೇಕಿದೆ, ಸಭೆಯಲ್ಲಿ ನಿರ್ಧಾರ ಮಾಡುತ್ತೇವೆ: ಗೌರವ್ ಗುಪ್ತಾ
ಬಿಬಿಎಂಪಿ ಆಯುಕ್ತ ಗೌರವ್​ ಗುಪ್ತಾ
Follow us on

ಬೆಂಗಳೂರು: ಕೊರೊನಾ ಎರಡನೇ ಅಲೆಯನ್ನು ನಿಯಂತ್ರಿಸಲು ರಾಜ್ಯ ಸರ್ಕಾರ ಲಾಕ್​ಡೌನ್​ ಜಾರಿಗೊಳಿಸಿತ್ತು. ಸದ್ಯ ಸೋಂಕು ನಿಯಂತ್ರಣಕ್ಕೆ ಬರುತ್ತಿರುವ ಕಾರಣ ಹಂತ ಹಂತವಾಗಿ ಅನ್​ಲಾಕ್​ ಪ್ರಕ್ರಿಯೆ ಪ್ರಾರಂಭವಾಗಿದೆ. ಆದರೆ ಇನ್ನು ಕೊರೊನಾ ನಿಯಂತ್ರಣಕ್ಕೆ ಬಾರದ ರಾಜ್ಯದ 11 ಜಿಲ್ಲೆಗಳಲ್ಲಿ ಕಠಿಣ ನಿಯಮಗಳು ಮುಂದುವರೆದಿದೆ. ಯಾವುದೆಕ್ಕೆಲ್ಲಾ ಅನುಮತಿ ನೀಡಬೇಕು ಎನ್ನುವ ಬಗ್ಗೆ ಇಂದು (ಜೂನ್ 19) ನಡೆಯುವ ಸಭೆಯಲ್ಲಿ ನಿರ್ಧಾರವಾಗಲಿದೆ. ಈ ಬಗ್ಗೆ ಪ್ರತಿಕ್ರಿಯೆ ನೀಡಿರುವ ಬಿಬಿಎಂಪಿ ಮುಖ್ಯ ಆಯುಕ್ತ ಗೌರವ್ ಗುಪ್ತಾ, ಜನಸಾಮಾನ್ಯರ ಜೀವನ ಸಹಜ ಸ್ಥಿತಿಗೆ ತರಬೇಕಿದೆ. ಅನುಮತಿ ಬಗ್ಗೆ ಸಭೆಯಲ್ಲಿ ನಿರ್ಧಾರ ಮಾಡುತ್ತೇವೆ ಎಂದು ತಿಳಿಸಿದ್ದಾರೆ.

ಬಸ್ ಸಂಚಾರಕ್ಕೆ ಅವಕಾಶ ನೀಡುವ ಬಗ್ಗೆ ಚಿಂತನೆ ನಡೆಸಲಾಗುತ್ತಿದೆ. ಅಂಗಡಿ, ಕೈಗಾರಿಕೆಗಳನ್ನು ಆರಂಭಿಸುವ ಬಗ್ಗೆ ನಿರ್ಧಾರ ಕೈಗೊಳ್ಳಲಾಗುವುದು. ವಾಣಿಜ್ಯ ಮಳಿಗೆ, ಮಾರ್ಕೆಟ್ ಆರಂಭ ಬಗ್ಗೆಯೂ ನಿರ್ಧಾರ ಮಾಡುತ್ತೇವೆ. ಮಾಲ್, ಚಿತ್ರಮಂದಿರ ತೆರೆಯುವ ಬಗ್ಗೆ ತೀರ್ಮಾನಿಸಿಲ್ಲ. ಈ ಬಗ್ಗೆ ನಾವು ಜಾಗರೂಕತೆಯಿಂದ ಹೆಜ್ಜೆ ಇಡಬೇಕಾಗಿದೆ. ಹೋಟೆಲ್​ಗಳಲ್ಲಿ ಕೂತು ಊಟ ಮಾಡಲು ಅವಕಾಶದ ಕುರಿತು ಇಂದು ನಡೆಯುವ ಸಭೆಯಲ್ಲಿ ನಿರ್ಧಾರವಾಗುವುದು ಎಂದು ಗೌರವ್ ಗುಪ್ತಾ ಸ್ಪಷ್ಟಪಡಿಸಿದ್ದಾರೆ.

ಬಿಬಿಎಂಪಿ ಪರಿಸ್ಥಿತಿಯನ್ನು ಗಂಭೀರವಾಗಿ ಪರಿಗಣಿಸಿದೆ. ಅನ್​ಲಾಕ್​ ಅದ ಮೇಲೆ ಸೋಂಕಿನ ಕಡೆ ಹೆಚ್ಚಿನ ಗಮನ ಹರಿಸಿದ್ದೇವೆ. ನಾಲ್ಕೈದು ದಿನಗಳಿಂದ ಸೋಂಕಿನ ಪ್ರಮಾಣ ಯಥಾಸ್ಥಿತಿ ಇದೆ. ಕೋವಿಡ್ ನಿಯಮ ಪಾಲನೆ ಕಡ್ಡಾಯವಾಗಿದೆ. ಈ ಎಲ್ಲಾ ವಿಚಾರದ ಕುರಿತು ಮುಖ್ಯಮಂತ್ರಿ ಜೊತೆ ಚರ್ಚೆ ಮಾಡಲಾಗುತ್ತದೆ ಎಂದು ತಿಳಿಸಿದ ಅವರು ಜನಸಾಮಾನ್ಯರ ಜೀವನ ಸಹಜ ಸ್ಥಿತಿಗೆ ತರಬೇಕಿದೆ. ಆಸ್ತಿ ತೆರಿಗೆ ವಿನಾಯಿತಿ ಬಗ್ಗೆ ಯಾವುದೇ ಪ್ರಸ್ತಾಪವಿಲ್ಲ ಎಂದು ಹೇಳಿದರು.

ಇದನ್ನೂ ಓದಿ

ಮೆಟ್ರೋ ಸಂಚಾರದ ಬಗ್ಗೆ ಇಂದು ಮಹತ್ವದ ನಿರ್ಧಾರ; ಷರತ್ತುಗಳ ಅನ್ವಯ ಸಾಧ್ಯತೆ

Karnataka Unlock: ಕರ್ನಾಟಕ ಅನ್​ಲಾಕ್​ ಆದರೂ ಈ ನಿಯಮಗಳು ಮುಂದುವರೆಯಲಿವೆ; ಈ ಕೆಳಗಿನ 11 ಜಿಲ್ಲೆಗಳಲ್ಲಿ ವಿಶೇಷ ಮಾರ್ಗಸೂಚಿ ಜಾರಿ

(aurav Gupta said decision regarding the unlock will be taken at CM meeting held today)