ಕಲಬುರಗಿ ನಗರದಲ್ಲಿ ಹೊಸದಾಗಿ 100 ಆಕ್ಸಿಜನ್ ಬೆಡ್‌ಗಳ ವ್ಯವಸ್ಥೆ

ಕಲಬುರಗಿ ನಗರದಲ್ಲಿ ಹೊಸದಾಗಿ 100 ಬೆಡ್‌ಗಳ ವ್ಯವಸ್ಥೆ ಮಾಡಲಾಗಿದೆ. 11 ICU ಬೆಡ್‌ ಸೇರಿ ಎಲ್ಲ ಬೆಡ್‌ಗಳಿಗೆ ಆಕ್ಸಿಜನ್ ವ್ಯವಸ್ಥೆ ಮಾಡಲಾಗಿದೆ. ಜಿಮ್ಸ್‌ (ಗುಲಬರ್ಗಾ ಇನ್ಸ್‌ಟಿಟ್ಯೂಟ್ ಆಫ್‌ ಮೆಡಿಕಲ್ ಸೈನ್ಸ್)ಕಾಲೇಜು ಆಸ್ಪತ್ರೆ ಕೊವಿಡ್ ಆಸ್ಪತ್ರೆಯಾಗಿ ಬದಲಾಗಿದೆ. ನಿನ್ನೆ ಕಲಬುರಗಿಯಲ್ಲಿ 513 ಜನ ಸೋಂಕಿಗೆ ತುತ್ತಾಗಿದ್ದರು.

ಕಲಬುರಗಿ ನಗರದಲ್ಲಿ ಹೊಸದಾಗಿ 100 ಆಕ್ಸಿಜನ್ ಬೆಡ್‌ಗಳ ವ್ಯವಸ್ಥೆ
ಜಿಮ್ಸ್ ಆಸ್ಪತ್ರೆ‌

ಕಲಬುರಗಿ: ರಾಜ್ಯದಲ್ಲಿ ಕೊರೊನಾ ಮರಣ ಮೃದಂಗ ಭಾರಿಸುತ್ತಿದೆ. ದಿನದಿಂದ ದಿನಕ್ಕೆ ಸಾವಿನ ಸಂಖ್ಯೆ ಹೆಚ್ಚಾಗುತ್ತಿದೆ. ಅದರಲ್ಲೂ ಆಸ್ಪತ್ರೆಗಳಲ್ಲಿ ಕೊರೊನಾ ಸೋಂಕಿತರಿಗೆ ಬೆಡ್ ಸಿಗ್ತಿಲ್ಲ. ಆಕ್ಸಿಜನ್ ಸಿಕ್ತಿಲ್ಲ. ಉಸಿರಾಟದ ಸಮಸ್ಯೆಯಿಂದ ನರಳಿ ನರಳಿ ಪ್ರಾಣ ಬಿಡುತ್ತಿದ್ದಾರೆ. ಏಪ್ರಿಲ್ 18ರಂದು ಕಲಬುರಗಿ ಆಸ್ಪತ್ರೆಗಳಲ್ಲಿ ಬೆಡ್‌ ಕೊರತೆ ಬಗ್ಗೆ ವಿಸ್ತೃತ ವರದಿ ಹಾಗೂ ಆಕ್ಸಿಜನ್ ಬೆಡ್ ಸಿಗದೆ ಮಹಿಳೆ ಪರದಾಟದ ಬಗ್ಗೆ ಟಿವಿ9ನಲ್ಲಿ ವರದಿ ಮಾಡಲಾಗಿತ್ತು. ಸದ್ಯ ಇದಕ್ಕೆ ಸ್ಪಂದಿಸಿ ಜಿಮ್ಸ್‌ ಕಾಲೇಜು ಆಸ್ಪತ್ರೆ ಬೆಡ್‌ಗಳ ವ್ಯವಸ್ಥೆ ಮಾಡಿದೆ.

ನಗರದಲ್ಲಿ ಹೊಸದಾಗಿ 100 ಬೆಡ್‌ಗಳ ವ್ಯವಸ್ಥೆ ಮಾಡಲಾಗಿದೆ. 11 ICU ಬೆಡ್‌ ಸೇರಿ ಎಲ್ಲ ಬೆಡ್‌ಗಳಿಗೆ ಆಕ್ಸಿಜನ್ ವ್ಯವಸ್ಥೆ ಮಾಡಲಾಗಿದೆ. ಜಿಮ್ಸ್‌ (ಗುಲಬರ್ಗಾ ಇನ್ಸ್‌ಟಿಟ್ಯೂಟ್ ಆಫ್‌ ಮೆಡಿಕಲ್ ಸೈನ್ಸ್)ಕಾಲೇಜು ಆಸ್ಪತ್ರೆ ಕೊವಿಡ್ ಆಸ್ಪತ್ರೆಯಾಗಿ ಬದಲಾಗಿದೆ. ನಿನ್ನೆ ಕಲಬುರಗಿಯಲ್ಲಿ 513 ಜನ ಸೋಂಕಿಗೆ ತುತ್ತಾಗಿದ್ದರು.

ಕಲಬುರಗಿ ಜಿಲ್ಲೆಯಲ್ಲಿ ಕೊರೊನಾ ಅಬ್ಬರ ಹೆಚ್ಚಾಗುತ್ತಿದೆ. ಹೀಗಾಗಿ ಒಂದು ಏರಿಯಾದಲ್ಲಿ ಐದಕ್ಕಿಂತ ಹೆಚ್ಚು ಜನರಿಗೆ ಸೋಂಕು ಬಂದ್ರೆ, ಆ ಪ್ರದೇಶವನ್ನು ಮೈಕ್ರೋ ಕಂಟೈನ್ಮೆಂಟ್ ಜೋನ್​ನಾಗಿ ಮಾಡಲಾಗುತ್ತಿದೆ. ಕಲಬುರಗಿ ನಗರದಲ್ಲಿ ಸದ್ಯ ಹನ್ನೊಂದು ಕಡೆ ಮೈಕ್ರೋ ಕಂಟೈನ್ಮೆಂಟ್ ಜೋನ್ ಪ್ರಾರಂಭಿಸಲಾಗಿದೆ. ಸೋಂಕಿತರು ಪತ್ತೆಯಾಗುವ ಮನೆಯ ನೂರು ಮೀಟರ್ ಸುತ್ತಮುತ್ತ ವಾಹನ ಸಂಚಾರ ಮತ್ತು ಜನ ಸಂಚಾರಕ್ಕೆ ನಿರ್ಬಂಧ ವಿಧಿಸಲಾಗಿದೆ. ಕಟ್ಟಿಗೆಯಿಂದ ಮನೆ ಸುತ್ತಮುತ್ತಲಿನ ಪ್ರದೇಶವನ್ನು ಬಂದ್ ಮಾಡಲಾಗುತ್ತಿದೆ.

ಇದನ್ನೂ ಓದಿ: ಕರ್ನಾಟಕ ಲಾಕ್​ಡೌನ್.. ಸರ್ವ ಪಕ್ಷ ಸಭೆಯಲ್ಲಿ ಇಂದು ನಿರ್ಧಾರವಾಗುತ್ತೆ ಬೆಂಗಳೂರು ಭವಿಷ್ಯ

Click on your DTH Provider to Add TV9 Kannada