ಅಣ್ಣನ ಜೊತೆ ಮನೆಗೆ ವಾಪಸಾಗುತಿದ್ದಾಗ ಹಳ್ಳದಲ್ಲಿ ಕೊಚ್ಚಿ ಹೋದ ಶಾಲಾ ಬಾಲಕಿ; ಹಳಿಯಾಳ ಕೆರೆಯಲ್ಲಿ ಕೊಚ್ಚಿಹೋದ ವ್ಯಕ್ತಿ
ಹೊಸಪೇಟೆ ಕಿರಿಯ ಪ್ರಾಥಮಿಕ ಶಾಲೆಯ ವಿದ್ಯಾರ್ಥಿನಿ ಸುಪ್ರಿತಾ ಶಾಲೆ ಮುಗಿಸಿ ಅಣ್ಣನ ಜೊತೆ ಬರುವಾಗ ಕೊಚ್ಚಿ ಹೋಗಿದ್ದಾಳೆ.
ಚಿಕ್ಕಮಗಳೂರು: ಮಲೆನಾಡಲ್ಲಿ ಮಳೆಯ ಆರ್ಭಟ ಜೋರಾಗಿ ಮುಂದುವರೆದಿದೆ. ಚಿಕ್ಕಮಗಳೂರು ತಾಲೂಕಿನ ಹೊಸಪೇಟೆ ಗ್ರಾಮದಲ್ಲಿ ಮನೆಗೆ ಹೋಗುತ್ತಿದ್ದಾಗ ಶಾಲಾ ಬಾಲಕಿ ಹಳ್ಳದಲ್ಲಿ ಕೊಚ್ಚಿ ಹೋಗಿರುವ ದುರದೃಷ್ಟಕರ ಘಟನೆ ನಡೆದಿದೆ. ಸುಪ್ರಿತಾ ಹಳ್ಳದಲ್ಲಿ ಕೊಚ್ಚಿದ ಹೋದ 7 ವರ್ಷದ ಬಾಲಕಿ. ಹೊಸಪೇಟೆ ಕಿರಿಯ ಪ್ರಾಥಮಿಕ ಶಾಲೆಯ ಒಂದನೇ ತರಗತಿ ವಿದ್ಯಾರ್ಥಿನಿ ಸುಪ್ರಿತಾ ಶಾಲೆ ಮುಗಿಸಿ ಅಣ್ಣನ ಜೊತೆ ಬರುವಾಗ ಕೊಚ್ಚಿ ಹೋಗಿದ್ದಾಳೆ.
ಸ್ಥಳಕ್ಕೆ ಅಗ್ನಿಶಾಮಕ ಸಿಬ್ಬಂದಿ ಸ್ಥಳಕ್ಕೆ ದೌಡಾಯಿಸಿದ್ದು, ಬಾಲಕಿಗಾಗಿ ಶೋಧ ಕಾರ್ಯ ನಡೆದಿದೆ. ಚಿಕ್ಕಮಗಳೂರು ಗ್ರಾಮಾಂತರ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಘಟನೆ ನಡೆದಿದೆ.
ಹಳಿಯಾಳದ ಸಾತ್ನಳ್ಳಿ ಕೆರೆಯಲ್ಲಿ ದುರಂತ: ವ್ಯಕ್ತಿ ಸಾವು
ಕಾರವಾರ: ಮಳೆಯ ಅಬ್ಬರಕ್ಕೆ ಕೆರೆಯ ನೀರಿನಲ್ಲಿ ವ್ಯಕ್ತಿಯೊಬ್ಬರು ಕೊಚ್ಚಿಹೋಗಿದ್ದಾರೆ. ಉತ್ತರ ಕನ್ನಡ ಜಿಲ್ಲೆಯ ಹಳಿಯಾಳದ ಸಾತ್ನಳ್ಳಿ ಕೆರೆಯಲ್ಲಿ ಈ ದುರಂತ ನಡೆದಿದೆ. ಮಂಜುನಾಥ್ ಮೋರೆ ಕೆರೆಯ ನೀರಿನಲ್ಲಿ ಕೊಚ್ಚಿಹೋಗಿ ಸಾವು ಕಂಡ ನತದೃಷ್ಟ ವ್ಯಕ್ತಿ. ಆತನ ಶವಕ್ಕಾಗಿ ಅಗ್ನಿಶಾಮಕ ಸಿಬ್ಬಂದಿಯಿಂದ ಹುಡುಕಾಟ ನಡೆದಿದೆ. ಹಳಿಯಾಳ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
ಡಿವೈಡರ್ ಗೆ ಗುದ್ದಿದ ಬೈಕ್ – ಇಬ್ಬರು ಸ್ಥಳದಲ್ಲೆ ಸಾವು
ಕೊಪ್ಪಲ: ಕುಷ್ಟಗಿ ಹೊರವಲಯದಲ್ಲಿರುವ ಟೋಲ್ ಗೇಟ್ ಬಳಿ ಅಪಘಾತ ಸಂಭವಿಸಿ, ಇಬ್ಬರು ಸ್ಥಳದಲ್ಲೇ ಕೊನೆಯುಸಿರೆಳೆದಿದ್ದಾರೆ. ರೋಡ್ ಡಿವೈಡರ್ ಗೆ ಬೈಕ್ ಗುದ್ದಿದ್ದು, ಇಬ್ಬರು ಸಾವನ್ನಪ್ಪಿದ್ದಾರೆ. ಇಬ್ಬರಿಗೆ ಗಂಭೀರ ಗಾಯಗಳಾಗಿವೆ. ಬೈಕ್ ನಲ್ಲಿ ನಾಲ್ವರು ಬರ್ತಿದ್ರು. ಬೈಕ್ ನಲ್ಲಿದ್ದ 25 ವರ್ಷದ ಯುವಕ ಮತ್ತು 8 ವರ್ಷದ ಬಾಲಕಿ ಮೃತಪಟ್ಟವರು. ಸ್ಥಳಕ್ಕೆ ಕುಷ್ಟಗಿ ಪೊಲೀಸರು ಭೇಟಿ ನೀಡಿ, ಪರಿಶೀಲನೆ ನಡೆಸಿದ್ದಾರೆ.
ಬೆಂಗಳೂರು ಮೂಲದ ವ್ಯಕ್ತಿ ಆತ್ಮಹತ್ಯೆ
ಕೋಲಾರ: ಕುಟುಂಬ ಕಲಹ ಹಿನ್ನೆಲೆ ಗುಂಜೂರು ಮೂಲದ ವ್ಯಕ್ತಿ ಕೋಲಾರದಲ್ಲಿ ಆತ್ಮಹತ್ಯೆ ಮಾಡಿಕೊಂಡಿದ್ದಾರೆ. ಬೆಂಗಳೂರಿನ ಗುಂಜೂರು ಮೂಲದ ಪ್ರಕಾಶ್ (37) ಸಾವನ್ನಪ್ಪಿದವರು. ಕೋಲಾರ ಜಿಲ್ಲೆಯ ಮಾಲೂರು ತಾಲ್ಲೂಕಿನ ಚಿಕ್ಕ ತಿರುಪತಿಯಲ್ಲಿ ತಿರುಮಲ ಲಾಡ್ಜ್‌ನಲ್ಲಿ ನೇಣು ಬಿಗಿದುಕೊಂಡು ಆತ್ಮಹತ್ಯೆಗೆ ಶರಣಾಗಿದ್ದಾರೆ. ಮಾಲೂರು ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
ಇದನ್ನೂ ಓದಿ:
ಅಮೃತ್ ಪೌಲ್ ಕಲ್ಬುರ್ಗಿಯಲ್ಲಿ ಬೆಳಗಿನ ಜಾವ ಸಿಸಿಟಿವಿ ಆಫ್ ಮಾಡಿಸಿ, ಆನ್ಸರ್ ಶೀಟ್ ತಿದ್ದಿಸಿದ್ದಾರೆ – ಗೃಹ ಸಚಿವ ಆರಗ ಜ್ಞಾನೇಂದ್ರ
ಇದನ್ನೂ ಓದಿ: ಭ್ರಷ್ಟಾಚಾರ ಆರೋಪ: ಎಸಿಬಿ ಅಧಿಕಾರಿಗಳಿಂದ IAS ಅಧಿಕಾರಿ ಮಂಜುನಾಥ್ ಬಂಧನ
Published On - 7:16 pm, Mon, 4 July 22