Gold Silver Rate Today: ಅಕ್ಷಯ ತೃತೀಯದಂದು ಚಿನ್ನ ಕೊಳ್ಳಿರಿ; ಶುಭ ದಿನದಂದು ಚಿನ್ನ, ಬೆಳ್ಳಿ ದರ ಹೀಗಿದೆ!

|

Updated on: May 14, 2021 | 9:01 AM

Gold Silver Price in Bangalore: ಅಕ್ಷಯ ತೃತೀಯದಂದು ಚಿನ್ನ ಖರೀದಿಸಿ ದಾನ ಮಾಡಿದರೆ ಅದು ದ್ವಿಗುಣಗೊಳ್ಳುತ್ತದೆ ಎಂಬ ಸಾಂಪ್ರದಾಯಿಕ ನಂಬಿಕೆಯ ಜೊತೆಗೆ ಆಚರಣೆ ರೂಢಿಯಲ್ಲಿದೆ. ಹೀಗಿರುವಾಗ ಇಂದು ಚಿನ್ನ ಯಾವ ದರದಲ್ಲಿದೆ? ವಿವಿಧ ನಗರಗಳಲ್ಲಿ ಚಿನ್ನ, ಬೆಳ್ಳಿ ದರ ಎಷ್ಟಿದೆ? ಎಂಬುದನ್ನು ತಿಳಿಯೋಣ.

Gold Silver Rate Today: ಅಕ್ಷಯ ತೃತೀಯದಂದು ಚಿನ್ನ ಕೊಳ್ಳಿರಿ; ಶುಭ ದಿನದಂದು ಚಿನ್ನ, ಬೆಳ್ಳಿ ದರ ಹೀಗಿದೆ!
ಸಾಂದರ್ಭಿಕ ಚಿತ್ರ
Follow us on

ಬೆಂಗಳೂರು: ಇಂದು ಅಕ್ಷಯ ತೃತೀಯ. ಈ ದಿನ ಮಾಡುವ ಕೆಲಸ ಜೀವನದುದ್ದಕ್ಕೂ ಶುಭ ತರುತ್ತದೆ ಎಂಬ ನಂಬಿಕೆ. ಹಾಗಾಗಿ ದಾನ-ಧರ್ಮವನ್ನು ಮಾಡುವವರು ಈ ದಿನ ತಮ್ಮ ಕೈಲಾದಷ್ಟು ದಾನ ಮಾಡುತ್ತಾರೆ. ಈ ಮೂಲಕ ಜೀವನದಲ್ಲಿ ಸುಖ-ಸಮೃದ್ಧಿ ದೊರೆಯುತ್ತದೆ ಎಂಬ ನಂಬಿಕೆ ಅನಾದಿ ಕಾಲದಿಂದಲೂ ಬಂದಿದೆ. ಈ ದಿನ ಚಿನ್ನ ಖರೀದಿಗೆ ಒಳ್ಳೆಯ ದಿನ ಎಂಬುದು ಸಾಮಾನ್ಯವಾಗಿ ಎಲ್ಲರಿಗೂ ತಿಳಿದಿರುವ ಸಂಗತಿ. ಅಷ್ಟು-ಇಷ್ಟು ಅಂತಿಲ್ಲದೇ ತಮ್ಮ ಕೈಲಾದಷ್ಟು ಚಿನ್ನ ಖರೀದಿಸಿ ದಾನ ಮಾಡಿದರೆ ಅದು ದ್ವಿಗುಣಗೊಳ್ಳುತ್ತದೆ ಎಂಬ ಸಾಂಪ್ರದಾಯಿಕ ನಂಬಿಕೆಯ ಜೊತೆಗೆ ಆಚರಣೆ ರೂಢಿಯಲ್ಲಿದೆ. ಹೀಗಿರುವಾಗ ಇಂದು ಚಿನ್ನ ಯಾವ ದರದಲ್ಲಿದೆ. ವಿವಿಧ ನಗರಗಳಲ್ಲಿ ಚಿನ್ನ, ಬೆಳ್ಳಿ ದರ ಎಷ್ಟಿದೆ? ಎಂಬುದನ್ನು ತಿಳಿಯೋಣ.

ಅಕ್ಷಯ ತೃತೀಯ ಅಂದರೆ ಕ್ಷಯ ಇಲ್ಲದ ದಿನ. ಅಂತ್ಯವಿಲ್ಲದ ದಿನ. ಹಾಗೂ ಅಕ್ಷಯ ಎಂಬ ಪದ ಸಂಸ್ಕೃತದಿಂದ ಬಂದಿದ್ದು ಶಾಶ್ವತ ಎಂಬ ಅರ್ಥವನ್ನು ನೀಡುತ್ತದೆ. ಹಾಗಿರುವಾಗ ಇಂದು ಚಿನ್ನ ಖರೀದಿ ಮಾಡಿದರೆ ಸಂಪತ್ತು ನಮ್ಮಲ್ಲಿ ಶಾಶ್ವತವಾಗಿರುತ್ತದೆ ಎಂಬ ನಂಬಿಕೆ ಇದೆ. ಜೊತೆಗೆ ಮನೆಯಲ್ಲಿ ಮದುವೆ-ಸಮಾರಂಭಗಳು ಇರುತ್ತವೆ. ಆಗ ಚಿನ್ನ ಖರೀದಿಸಲೇ ಬೇಕಲ್ಲವೇ? ಮದುವೆಗೆಂದೋ ಅಥವಾ ಮಕ್ಕಳಿಗಾಗಿ ಚಿನ್ನ ಖರೀದಿಸಲು ಯೋಚಿಸುತ್ತಿದ್ದರೆ ಇಂದಿನ ದಿನ (ಅಕ್ಷಯ ತೃತೀಯ) ಶುಭ ದಿನ.

ಕೊರೊನಾ ಸೋಂಕಿನ ಪ್ರಭಾವದಿಂದ ಅಂಗಡಿಗಳೆಲ್ಲಾ ಮುಚ್ಚಲ್ಪಟ್ಟಿದೆ. ಲಾಕ್​ಡೌನ್​ ಜಾರಿಯಲ್ಲಿದ್ದು ಅನಗತ್ಯವಾಗಿ ಹೊರಗಡೆ ಸುತ್ತಾಡುವಂತಿಲ್ಲ. ಹೀಗಿರುವಾಗ ಕೊರೊನಾ ತಡೆಯ ಕಟ್ಟು ನಿಟ್ಟಿನ ಕ್ರಮ ಪಾಲಿಸುತ್ತಾ ಮನೆಯಲ್ಲಿಯೇ ಪೂಜೆ-ಸಮಾರಂಭಗಳನ್ನು ನೆರವೇರಿಸಿ. ಹಾಗೂ ಆನ್​ಲೈನ್​ ಮೂಲಕ ಚಿನ್ನ ಖರೀದಿಗೆ ಅವಕಾಶವಿರುವುದರಿಂದ ಚಿನ್ನ ಕೊಳ್ಳುವ ಕುರಿತು ಚಿಂತಿಸುವ ಅವಶ್ಯವಿಲ್ಲ. ಅದೇ ರೀತಿ ಕಳೆದೆರಡು ದಿನಗಳಿಂದ ಚಿನ್ನದ ದರ ಇಳಿಕೆಯತ್ತ ಸಾಗಿರುವುದರಿಂದ ಚಿನ್ನ ಖರೀದಿಗೆ ಗ್ರಾಹಕರು ಮುಂದಾಗಬಹುದು.

ವಿವಿಧ ನಗರಗಳಲ್ಲಿ ಇನ್ನದ ದರ ಎಷ್ಟಿದೆ ಎಂಬುದನ್ನು ನೋಡುವುದಾದರೆ, ಬೆಂಗಳೂರು ನಗರದಲ್ಲಿ 22 ಕ್ಯಾರೆಟ್ 10 ಗ್ರಾಂ ಚಿನ್ನದ ದರ 44,500 ರೂಪಾಯಿ ಇದೆ. ಹಾಗೆಯೇ 24 ಕ್ಯಾರೆಟ್ 10 ಗ್ರಾಂ ಚಿನ್ನದ ದರ 48,560 ರೂಪಾಯಿ ಇದೆ. ಚೆನ್ನೈನಲ್ಲಿ 22 ಕ್ಯಾರೆಟ್ 10 ಗ್ರಾಂ ಚಿನ್ನದ ದರ 45,000 ರೂಪಾಯಿ ಇದೆ. ಹಾಗೆಯೇ 24 ಕ್ಯಾರೆಟ್ 10 ಗ್ರಾಂ ಚಿನ್ನದ ದರ 49,000 ರೂಪಾಯಿ ಇದೆ.

ಇನ್ನು, ಹೈದರಾಬಾದ್​ನಲ್ಲಿ 2 ಕ್ಯಾರೆಟ್ 10 ಗ್ರಾಂ ಚಿನ್ನದ ದರ 44,500 ರೂಪಾಯಿ ಇದೆ. ಹಾಗೆಯೇ 24 ಕ್ಯಾರೆಟ್ 10 ಗ್ರಾಂ ಚಿನ್ನದ ದರ 48,560 ರೂಪಾಯಿ ಇದೆ. ವಾಣಿಜ್ಯ ನಗರಿ ಮುಂಬೈನಲ್ಲಿ 22 ಕ್ಯಾರೆಟ್ 10 ಗ್ರಾಂ ಚಿನ್ನದ ದರ 44,720 ರೂಪಾಯಿ ಇದ್ದರೆ, 24 ಕ್ಯಾರೆಟ್ 10 ಗ್ರಾಂ ಚಿನ್ನದ ದರ 45,720 ರೂಪಾಯಿ ಇದೆ. ಇನ್ನು, ದೆಹಲಿಯಲ್ಲಿ 22 ಕ್ಯಾರೆಟ್ 10 ಗ್ರಾಂ ಚಿನ್ನದ ದರ 45,900 ರೂಪಾಯಿ ಇದೆ. ಹಾಗೆಯೇ 24 ಕ್ಯಾರೆಟ್ 10 ಗ್ರಾಂ ಚಿನ್ನದ ದರ 49,900 ರೂಪಾಯಿ ಇದೆ.

ವಿವಿಧ ನಗರಗಳಲ್ಲಿ ಬೆಳ್ಳಿ ದರ
ಅಕ್ಷಯಯ ತೃತೀಯದಂದು ಬೆಳ್ಳಿ ದರ ಕೊಂಚ ಇಳಿಕೆಯಾಗಿದೆ. ದೆಹಲಿಯಲ್ಲಿ 1ಕೆಜಿ ಬೆಳ್ಳಿ ದರ 70,500 ರೂಪಾಯಿಗೆ ಇಳಿಕೆಯಾಗಿದೆ. ಹಾಗೆಯೇ ಚೆನ್ನೈನಲ್ಲಿ ದರ ಕುಸಿತದ ನಂತರ 1 ಕೆಜಿ ಬೆಳ್ಳಿ 75,900 ರೂಪಾಯಿ ಆಗಿದೆ. ಹೈದರಾಬಾದ್​ನಲ್ಲಿ 1ಕೆಜಿ ಬೆಳ್ಳಿ ದರ 75,900 ರೂಪಾಯಿ ಇದೆ. ಹಾಗೆಯೇ ಮುಂಬೈನಲ್ಲಿ 1ಕೆಜಿ ಬೆಳ್ಳಿ ದರ 70,500 ರೂಪಾಯಿಗೆ ಇಳಿಕೆಯಾಗಿದೆ. ಇನ್ನು, ಬೆಂಗಳೂರು ನಗರದಲ್ಲಿ 1ಕೆಜಿ ಬೆಳ್ಳಿ ದರ 70,500ರೂಪಾಯಿಗೆ ಇಳಿಕೆಯಾಗಿದೆ.

ಇದನ್ನೂ ಓದಿ: Gold Silver Rate Today: ಗ್ರಾಹಕರಿಗೆ ಗುಡ್​ ನ್ಯೂಸ್​, ಚಿನ್ನದ ದರ ಇಳಿಕೆ; ಬೆಂಗಳೂರಿನಲ್ಲಿ ಚಿನ್ನ ಬೆಲೆ ಎಷ್ಟು ಇಳಿದಿದೆ? ಪರಿಶೀಲಿಸಿ