ಬೆಂಗಳೂರು: ದೈನಂದಿನ ದರ ಪರಿಶೀಲನೆಯಲ್ಲಿ ಚಿನ್ನದ ದರವನ್ನು ಗಮನಿಸಿದಾಗ ಇಂದು ದರ ಕೊಂಚ ಏರಿಕೆಯತ್ತ ಮುಖ ಮಾಡಿದೆ. ಸಾರ್ವಕಾಲಿಕ ಗರಿಷ್ಠ ಮಟ್ಟ ತಲುಪಿದ್ದ ಚಿನ್ನದ ದರ ಈ ವರ್ಷ ಕುಸಿತ ಕಂಡಿರುವುದು ಗ್ರಾಹಕರಿಗೆ ನಿರಾಳ ಸಂಗತಿಯಾಗಿದೆ. ಸಾಮಾನ್ಯವಾಗಿ ದೈನಂದಿನ ದರ ಬದಲಾವಣೆಯಲ್ಲಿ ದರ ಏರು-ಪೇರು ಆಗುವುದನ್ನು ಗಮನಿಸಿ ಚಿನ್ನ ಕೊಳ್ಳುವುದು ಒಳಿತು. ಚಿನ್ನದ ಬೆಲೆ ಕಡಿಮೆಯಾದಾಗ ಬೇಡಿಕೆ ಸಾಮಾನ್ಯವಾಗಿ ಏರುತ್ತದೆ. ಅದು ಸಹಜ ಕೂಡ. ಅಂತೆಯೇ, ಚಿನ್ನದ ದರ ಏರಿಕೆಯತ್ತ ಸಾಗಿದ್ದಾಗ ಕೊಳ್ಳಲು ಜನ ಹಿಂದೇಟು ಹಾಕುವುದೂ ಸಹಜ. ಹೀಗಿದ್ದಾಗ ದರ ಕಡಿಮೆ ಇದೆ ಚಿನ್ನ ಕೊಳ್ಳಿರಿ ಎಂಬುದು ತಜ್ಞರ ಅಭಿಪ್ರಾಯ.
ಅದೆಷ್ಟೋ ವರ್ಷಗಳಿಂದ ಚಿನ್ನ ಕೊಳ್ಳಲೆಂದು ಕೂಡಿಟ್ಟ ಹಣವನ್ನು ವ್ಯಯಿಸಲು ಇದು ಸುಸಮಯ. ಇಂದು 22 ಕ್ಯಾರೆಟ್ 10 ಗ್ರಾಂ ಚಿನ್ನಕ್ಕೆ 42,260 ರೂಪಾಯಿ ಇದೆ. 24 ಕ್ಯಾರೆಟ್ 10 ಗ್ರಾಂ ಚಿನ್ನದ ದರ 46,100 ರೂಪಾಯಿ ಇದೆ. ಹಾಗೆಯೇ 1 ಕೆಜಿ ಬೆಳ್ಳಿ ದರ 65,910 ರೂಪಾಯಿ ಇದೆ.
22 ಕ್ಯಾರೆಟ್ ಚಿನ್ನದ ದರ
1 ಗ್ರಾಂ ಚಿನ್ನ ನಿನ್ನೆ 4,225 ರೂಪಾಯಿಗೆ ಮಾರಾಟವಾಗಿದ್ದು, ಇಂದು 4,226 ರೂಪಾಯಿ ಆಗಿದೆ. 8 ಗ್ರಾಂ ಚಿನ್ನದ ದರ ನಿನ್ನೆ 33,800 ರೂಪಾಯಿ ಇದ್ದು, ಇಂದು 33,808 ರೂಪಾಯಿ ಇದೆ. 10 ಗ್ರಾಂ ಚಿನ್ನಕ್ಕೆ ನಿನ್ನೆ 42,250 ರೂಪಾಯಿ ಇದ್ದು, ಇಂದು 42,260 ರೂಪಾಯಿ ಆಗಿದೆ. ಅಂದರೆ ದೈನಂದಿನ ದರ ಬದಲಾವಣೆಯಲ್ಲಿ 10 ರೂಪಾಯಿಯಷ್ಟು ಏರಿಕೆ ಆಗಿದೆ. ಹಾಗೆಯೇ 100 ಗ್ರಾಂ ಚಿನ್ನ ನಿನ್ನೆ 4,22,500 ರೂಪಾಯಿಗೆ ಮಾರಾಟವಾಗಿದ್ದು ಇಂದು 4,22,600 ರೂಪಾಯಿ ಆಗಿದೆ.
24 ಕ್ಯಾರೆಟ್ ಚಿನ್ನದ ದರ
1 ಗ್ರಾಂ ಚಿನ್ನದ ದರ ನಿನ್ನೆ 4,609 ರೂಪಾಯಿ ಇದ್ದು, ಇಂದು 4,610 ರೂಪಾಯಿ ಆಗಿದೆ. 8 ಗ್ರಾಂ ಚಿನ್ನಕ್ಕೆ ನಿನ್ನೆ 36,872 ರೂಪಾಯಿ ಇದ್ದು, ಇಂದು 36,880 ರೂಪಾಯಿ ಆಗಿದೆ. 10 ಗ್ರಾಂ ಚಿನ್ನದ ದರ ನಿನ್ನೆ 46,090 ರೂಪಾಯಿ ಇದ್ದು, ಇಂದು 46,100 ರೂಪಾಯಿ ನಿಗದಿಯಾಗಿದೆ. ದೈನಂದಿನ ದರ ಬದಲಾವಣೆಯಲ್ಲಿ 10 ರೂಪಾಯಿಯಷ್ಟು ಏರಿಕೆ ಕಂಡಿದೆ. ಹಾಗೆಯೇ 100 ಗ್ರಾಂ ಚಿನ್ನದ ದರ ನಿನ್ನೆ 4,60,900 ರೂಪಾಯಿಯಷ್ಟು ಇದ್ದು, ಇಂದು 4,61,000 ರೂಪಾಯಿ ಇದೆ.
ಬೆಳ್ಳಿ ದರ ಮಾಹಿತಿ
1 ಗ್ರಾಂ ಬೆಳ್ಳಿ ದರ ನಿನ್ನೆ 65.90 ರೂಪಾಯಿ ಇದ್ದು, ಇಂದು 65.91 ರೂಪಾಯಿ ನಿಗದಿಯಾಗಿದೆ. 8 ಗ್ರಾಂ ಬೆಳ್ಳಿ ದರ ನಿನ್ನೆ 527.20 ರೂಪಾಯಿ ಹಾಗೂ ಇಂದು 527.28 ರೂಪಾಯಿ ಇದೆ. 10 ಗ್ರಾಂ ಬೆಳ್ಳಿ ನಿನ್ನೆ 659 ರೂಪಾಯಿಗೆ ಮಾರಾಟವಾಗಿದ್ದು, ಇಂದು 659.10 ರೂಪಾಯಿಗೆ ಏರಿಕೆಯಾಗಿದೆ. 100 ಗ್ರಾಂ ಬೆಳ್ಳಿ ದರ ನಿನ್ನೆ 6,590 ರೂಪಾಯಿ ಇದ್ದು, ಇಂದು 6,591 ರೂಪಾಯಿ ನಿಗದಿಯಾಗಿದೆ. 1ಕೆಜಿ ಬೆಳ್ಳಿ ದರ ನಿನ್ನೆ 65,900 ರೂಪಾಯಿ ಇದ್ದು, ಇಂದು 65,910 ರೂಪಾಯಿ ಆಗಿದೆ.
ಇದನ್ನೂ ಓದಿ: Gold Rate Today: ವಿವಿಧ ನಗರಗಳಿಗೆ ಹೋಲಿಸಿದರೆ ಬೆಂಗಳೂರಿನಲ್ಲಿ ಚಿನ್ನ ದರ ಭಾರೀ ಇಳಿಕೆ; ಹೀಗಿದೆ ಬೆಲೆ
(Gold Rate Today in Bengaluru Chennai Hyderabad Mumbai and Delhi silver price on April 5th 2021)
Published On - 8:42 am, Mon, 5 April 21