ಮಕ್ಕಳಾಗದ ದಂಪತಿಗೆ ಗುಡ್ ನ್ಯೂಸ್; ಸರ್ಕಾರಿ ಆಸ್ಪತ್ರೆಗೂ ಬಂತ್ತು IVF ಚಿಕಿತ್ಸೆ
ಸಿಲಿಕಾನ್ ಸಿಟಿ ಬೆಂಗಳೂರಿನ ಜನರಿಗೆ ಆರೋಗ್ಯ ಇಲಾಖೆಯಿಂದ ಗುಡ್ ನ್ಯೂಸ್ ಸಿಕ್ಕಿದೆ. ಮಕ್ಕಳಾಗದ ಬಡ ತಾಯಂದಿರಿಗೆ ಆರೋಗ್ಯ ಇಲಾಖೆ ಹೊಸ ಗಿಫ್ಟ್ ನೀಡಿದ್ದು ರಾಜ್ಯದಲ್ಲಿ ಇದೇ ಮೊದಲ ಬಾರಿಗೆ ಹೊಸ ದುಬಾರಿ ಚಿಕಿತ್ಸೆಯನ್ನ ಸರ್ಕಾರಿ ಆಸ್ಪತ್ರೆಯಲ್ಲಿ ಪರಿಚಯಿಸಲು ಆರೋಗ್ಯ ಇಲಾಖೆ ಮುಂದಾಗಿದೆ. ಅಷ್ಟಕ್ಕೂ ಯಾವುದು ಆ ಹೊಸ ಯೋಜನೆ? ಏನಿದು ಚಿಕಿತ್ಸೆ ಎಂಬ ನಿಮ್ಮ ಕುತೂಹಲಕ್ಕೆ ಇಲ್ಲಿದೆ ಉತ್ತರ. ಓದಿ.
ಬೆಂಗಳೂರು, ಮೇ.07: ಇತ್ತೀಚಿನ ದಿನಗಳಲ್ಲಿ ದಂಪತಿಗಳಿಗೆ (Couple) ನಾನಾ ಕಾರಣಗಳಿಂದ ಮಕ್ಕಳು ಆಗುತ್ತಿಲ್ಲ (Infertility). ತಡವಾಗಿ ಮದುವೆ, ಜೀವನದಲ್ಲಿನ ಕಮಿಟ್ ಮೆಂಟ್, ಆರ್ಥಿಕತೆ, ಗಂಡ ಹೆಂಡತಿಯರ ನಡುವಿನ ಕೆಲಸದ ಒತ್ತಡ ಸೇರಿದಂತೆ ನಾನಾ ಕಾರಣಗಳಿಂದ ಹೆಚ್ಚು ದಂಪತಿಗಳಿಗೆ ಮಕ್ಕಳಾಗುತ್ತಿಲ್ಲ. ಮಕ್ಕಳಾಗದೆ ಕಂಗಾಲಾಗಿದ್ದಾರೆ. ಹೀಗಾಗಿ ಮಕ್ಕಳನ್ನ ಪಡೆಯಲು ಸಾಕಷ್ಟು ಪೋಷಕರು ಐವಿಎಫ್ ನಂತಹ ಚಿಕಿತ್ಸೆ ಮೊರೆ ಹೋಗ್ತಿದ್ದಾರೆ. ಆದರೆ ಇದಕ್ಕೆ ಖಾಸಗಿ ಆಸ್ಪತ್ರೆಗಳಲ್ಲಿ ಲಕ್ಷಾಂತರ ರೂಪಾಯಿ ಖರ್ಚು ಮಾಡಬೇಕಿದ್ದು ಬಡ ಹಾಗೂ ಮದ್ಯಮ ವರ್ಗದವರಿಗೆ ಈ ಚಿಕಿತ್ಸೆ ಪಡೆಯೋದು ಕಷ್ಟವಾಗಿದೆ. ಎಷ್ಟೋ ಪೋಷಕರು ಇದೇ ಕಾರಣಕ್ಕೆ ಮಕ್ಕಳು ಪಡೆಯಲು ಸಾಧ್ಯವಾಗದೆ ಸಂಕಷ್ಟ ಎದುರಿಸುವಂತಾಗಿದೆ. ಇಂತಹ ಪೋಷಕರಿಗೆ ಈಗ ಆರೋಗ್ಯ ಇಲಾಖೆ ಗಿಫ್ಟ್ ನೀಡಲು ಮುಂದಾಗಿದೆ.
ಮಕ್ಕಳಿಲ್ಲ ಅಂತ ಬೇಜಾರಿನಲ್ಲಿದ್ದವರಿಗೆ ಟೆನ್ಷನ್ ಬೇಡ. ಬರೀ ಹಣ ಇದ್ದವರಿಗೆ ಮಾತ್ರ ಸಿಗುತ್ತಿದ್ದ IVF ಚಿಕಿತ್ಸೆ, ಇನ್ಮುಂದೆ ಬಡ ಹಾಗೂ ಮಧ್ಯಮ ವರ್ಗದವರಿಗೂ ಲಭ್ಯ ವಾಗ್ತಿದೆ. ಇಷ್ಟು ದಿನ ಮಗು ಪಡೆಯಲು ಸಾಧ್ಯವಾಗದವರು IVF ಚಿಕಿತ್ಸೆ ಪಡೆಯಲು ಖಾಸಗಿ ಆಸ್ಪತ್ರೆ ಮೊರೆ ಹೋಗಬೇಕಿತ್ತು. ಇದಕ್ಕೆ ಲಕ್ಷ ಲಕ್ಷ ಹಣ ಖರ್ಚು ಮಾಡಬೇಕಿತ್ತು. ಆದರೆ ಇನ್ಮುಂದೆ ಚಿಂತೆ ಬೇಡ. ಯಾಕೆಂದ್ರೆ ಸರ್ಕಾರದಿಂದ ಮಕ್ಕಳಾಗದವರಿಗೆ ಐವಿಎಫ್ ಚಿಕಿತ್ಸೆ ಅವಶ್ಯ ಇದ್ದವರಿಗೆ ಕಡಿಮೆ ವೆಚ್ಚದಲ್ಲಿ ಈ ಚಿಕಿತ್ಸೆಯನ್ನ ಸರ್ಕಾರಿ ಆಸ್ಪತ್ರೆಯಲ್ಲಿ ನೀಡಲು ಆರೋಗ್ಯ ಇಲಾಖೆ ಮುಂದಾಗಿದೆ.
ಇಷ್ಟು ದಿನ ಮಕ್ಕಳು ಮಾಡಿಕೊಳ್ಳಲು ಆಸೆ ಇದ್ರೂ ಅದರ ಚಿಕಿತ್ಸೆಗೆ ಲಕ್ಷಾಂತರ ರೂಪಾಯಿ ಹಣ ಬೇಕು. ಹೀಗಾಗಿ ಅನೇಕರು ಮಕ್ಕಳು ಪಡೆಯಲು ಹಿಂದೇಟು ಹಾಕ್ತಿದ್ರು. ಸದ್ಯ ಬಹಳ ಬೇಡಿಕೆ ಇರೋ IVF ಚಿಕಿತ್ಸೆ ಈಗ ಕಡಿಮೆ ವೆಚ್ಚದಲ್ಲಿ ಸಿಗುತ್ತಿದೆ. ಯಾರು ಬೇಕಾದರೂ IVF ಚಿಕಿತ್ಸೆ ಪಡೆಯಬಹುದಾಗಿದೆ.
ಇದನ್ನೂ ಓದಿ: ಪ್ರಜ್ವಲ್ ರೇವಣ್ಣ ಪ್ರಕರಣದ ಬಗ್ಗೆ ಮೊದಲ ಬಾರಿ ಮಾತನಾಡಿದ ಮೋದಿ, ಹೇಳಿದ್ದೇನು?
ಸರ್ಕಾರಿ ಆಸ್ಪತ್ರೆಯಲ್ಲಿ ಶುರುವಾಗ್ತಿದೆ IVF ಸೌಲಭ್ಯ
ಪ್ರಾಥಮಿಕ ಹಂತದಲ್ಲಿ ಕೆಸಿ ಜನರಲ್ ಆಸ್ಪತ್ರೆಯಲ್ಲಿ ಈ ಚಿಕಿತ್ಸೆ ಶುರುವಾಗ್ತಿದೆ. IVF ಚಿಕಿತ್ಸೆ ಅಂದ್ರೆ ಅಂಡಾಣು ಮತ್ತು ವೀರ್ಯಾಣುವನ್ನು ದೇಹದ ಹೊರಗೆ ಫಲ ನೀಡಲು ಇಡಲಾಗುವುದು ಬಳಿಕ ಮಹಿಳೆ ಗರ್ಭಾಶಯಕ್ಕೆ ಇಂಜೆಕ್ಟ್ ಮಾಡುವ ಪ್ರಕ್ರಿಯೆಯನ್ನು ಐವಿಎಫ್ ಚಿಕಿತ್ಸೆ ಎನ್ನಲಾಗುತ್ತೆ. ಸದ್ಯ ಇದು ಬಡ ಹಾಗೂ ಮದ್ಯಮ ವರ್ಗದವರಿಗೆ ಸರ್ಕಾರಿ ಆಸ್ಪತ್ರೆಗಳಲ್ಲಿ ಬರ್ತಿರೋದು ವರವಾಗಲಿದೆ ಎಂದಿದ್ದಾರೆ ಕೆ.ಸಿ. ಜನರಲ್ ಆಸ್ಪತ್ರೆ ವೈದ್ಯಕೀಯ ಅಧೀಕ್ಷಕಿ ಡಾ ಇಂದಿರಾ.
ಒಟ್ನಲ್ಲಿ ಇಷ್ಟು ದಿನ ಬಡವರಿಗೆ ನಿಲುಕದ ಕನಸ್ಸಾಗಿದ್ದ ಐವಿಎಫ್ ಚಿಕಿತ್ಸೆ ಈಗ ಬಡ ಜನರಿಗೂ ಸಿಗಲಿದ್ದು ಸಂಕಷ್ಟದಲ್ಲಿರುವ ಬಡ ಪೋಷಕರಿಗೆ ವರದಾನವಾಗಲಿದೆ. ಆದ್ರೆ ಇದು ಎಷ್ಟರ ಮಟ್ಟಿಗೆ ಸರ್ಕಾರಿ ಆಸ್ಪತ್ರೆಗಳಲ್ಲಿ ಜಾರಿಯಾಗುತ್ತೆ ಅಂತಾ ಕಾದು ನೋಡಬೇಕಿದೆ.
ರಾಜ್ಯದ ಪ್ರಮುಖ ಸುದ್ದಿಗಳನ್ನು ಓದಲು ಇದರ ಮೇಲೆ ಕ್ಲಿಕ್ ಮಾಡಿ
Published On - 7:21 am, Tue, 7 May 24