ಬೆಂಗಳೂರು: ಸರ್ಕಾರಿ ಶಾಲೆಗಳಲ್ಲಿ ಸಮವಸ್ತ್ರ ಜಾರಿ ಹಕ್ಕು ಸರ್ಕಾರಕ್ಕಿದೆ. ಹಿಜಾಬ್ (Hijab) ಧರಿಸಿದರೆ ಪರೀಕ್ಷೆಗೆ ಅವಕಾಶವಿಲ್ಲ ಎಂಬ ವಿಚಾರಕ್ಕೆ ಸಂಬಂಧಿಸಿದಂತೆ ಟಿವಿ 9ಗೆ ಸಿಎಫ್ಐ ರಾಜ್ಯಾಧ್ಯಕ್ಷ ಸಾದಿಕ್ ಜಾರತ್ತಾರ್ ಹೇಳಿಕೆ ನೀಡಿದ್ದಾರೆ. ಖಾಸಗಿ ಶಾಲೆಗಳ ಸಮವಸ್ತ್ರದ ಹಕ್ಕು ಸರ್ಕಾರಕ್ಕಿಲ್ಲ. ಸರ್ಕಾರದ ಆದೇಶ, ಶಿಕ್ಷಣ ಸಚಿವರ ನಡೆಗೆ ಸಿಎಫ್ಐ ಖಂಡಿಸುತ್ತದೆ. ಕೂಡಲೇ ಆದೇಶ ಹಿಂಪಡೆಯುವಂತೆ ಸಿಎಫ್ಐ ಆಗ್ರಹ ಮಾಡಿದ್ದು, ಶಿಕ್ಷಣ ಸಚಿವ ನಾಗೇಶ್ ರಾಜೀನಾಮೆಗೆ ಸಿಎಫ್ಐ ಒತ್ತಾಯಿಸುತ್ತಿದೆ ಎಂದು ಹೇಳಿದರು. SSLC ಪರೀಕ್ಷೆಗೆ ಹಿಜಾಬ್ ಬ್ಯಾನ್, ಸಮವಸ್ತ್ರ ಕಡ್ಡಾಯ ಮಾಡಿದೆ. ಸರ್ಕಾರ ಆದೇಶದ ವಿರುದ್ಧ CFI ಮುಸ್ಲಿಂ ಸಂಘಟನೆ ಗರಂ ಆಗಿದ್ದು, ರಾಜ್ಯದ ಅಭಿವೃದ್ಧಿ ಕಡೆಗೆ ಸರ್ಕಾರ ಗಮನಹರಿಸುತ್ತಿದ್ಯೊ ಅಥವಾ ಕೇಶಕೃಪದ ಅಭಿವೃದ್ಧಿ ಗಮನ ಹರಿಸ್ತಿದ್ಯೊ ಬಹಳ ಸ್ಪಷ್ಟವಾಗಿ ರಾಜ್ಯದ ಜನರ ಮುಂದಿಡಬೇಕಿದೆ. 2021-22ರ ಶೈಕ್ಷಣಿಕ ಮಾರ್ಗಸೂಚಿಯಲ್ಲಿ ಹಿಜಾಬ್, ಸಮವಸ್ತ್ರ ವಿಚಾರವೇ ಇರಲಿಲ್ಲ. ನ್ಯಾಯಾಲಯದ ತೀರ್ಪು ಸಮಾಧಾನ ತಂದಿಲ್ಲ. ಹೀಗಾಗಿ ಸುಪ್ರೀಂ ಮೊರೆ ಹೋಗುತ್ತಿರುವಾಗಿ ಈ ಸರ್ಕಾರ ನಮ್ಮನ್ನ ಟೀಕಿಸುತ್ತಿದೆ.
ಸರ್ಕಾರಿ ಶಾಲೆಗಳಲ್ಲಿ ಸಮವಸ್ತ್ರ ಕಡ್ಡಾಯ ಹಕ್ಕು ಸರ್ಕಾರಕ್ಕಿದೆ. ಖಾಸಗಿ ಶಾಲೆಗಳಲ್ಲಿ ಸಮವಸ್ತ್ರ ಕಡ್ಡಾಯ ಮಾಡುವ ಹಕ್ಕು ಸರ್ಕಾರಕ್ಕಿಲ್ಲ. ಹೈಕೋರ್ಟ್ ಈ ರೀತಿಯ ವರ್ಡಿಕ್ಟ್ ನೀಡಿದೆ. ಬಿ.ಸಿ ನಾಗೇಶ್ ವಿದ್ಯಾರ್ಥಿ ವಿರೋಧಿ ಹೇಳಿಕೆ ನೀಡುತ್ತಿದ್ದಾರೆ. ಶಿಕ್ಷಣ ಸಚಿವರಾಗಿ ಬಿ.ಸಿ ನಾಗೇಶ್ ಮುಂದುವರಿಯಲು ನೈತಿಕತೆ ಇಲ್ಲ. ಖಾಸಗಿ ಶಾಲೆಯಲ್ಲಿ ಸಮವಸ್ತ್ರ ಪಾಲನೆ ಆಡಳಿತ ಮಂಡಳಿ ವಿಚಾರಕ್ಕೆ ಬಿಟ್ಟಿದ್ದು ಅಂತ ಕೋರ್ಟೇ ಹೇಳಿದೆ. ಬಿ.ಸಿ ನಾಗೇಶ್ಗೆ ಇಲ್ಲಿ ಮೂಗು ತೂರಿಸುವ ಹಕ್ಕಿಲ್ಲ. ಕೂಡಲೇ ಈ ಆದೇಶವನ್ನ ಹಿಂಪಡೆಯುವಂತೆ ಒತ್ತಾಯ ಮಾಡಲಾಗುವುದು ಎಂದು ಟಿವಿ9ಗೆ ಕ್ಯಾಂಪಸ್ ಫ್ರಂಟ್ ಆಫ್ ಇಂಡಿಯಾ ಸಂಘಟನೆ ರಾಜ್ಯಾಧ್ಯಕ್ಷ ಸಾದಿಕ್ ಜಾರತ್ತಾರ್ ಹೇಳಿದ್ದಾರೆ.
ಇದನ್ನೂ ಓದಿ:
ಭ್ರಮನಿರಸನಗೊಂಡ ಸೈನಿಕರಿಂದ ರಷ್ಯಾದ ಕರ್ನಲ್ ಹತ್ಯೆ: ಉಕ್ರೇನ್ನಲ್ಲಿ ಸತ್ತ ರಷ್ಯಾ ಸೇನಾಧಿಕಾರಿಗಳ ಸಂಖ್ಯೆ 7ಕ್ಕೆ
World Theatre Day: ಅಂಕಪರದೆ; ‘ಮಧುರ ಮಂಡೋದರಿ’ ನೋಡಲು ಶಿರಸಿಗೆ ಬನ್ನಿ