ಸರ್ಕಾರದಿಂದ ರಾಜ್ಯ, ಜಿಲ್ಲಾ ಮಟ್ಟದಲ್ಲಿ ನಾರಾಯಣ ಗುರುಗಳ ಜಯಂತಿ ಆಚರಣೆ ಮಾಡಲಾಗುವುದು: ಸಿಎಂ ಸಿದ್ದರಾಮಯ್ಯ
ಜಾತಿಯಿಂದ ಯಾರು ದೊಡ್ಡವರಲ್ಲ ಅವರ ಗುಣಗಳಿಂದ ದೊಡ್ಡವರು ಎಂದು ಬಸವಣ್ಣ ಹೇಳಿದ್ದರು. ಅದನ್ನೇ ಪ್ರತಿಪಾದನೆ ಮಾಡಿದವರು ನಾರಾಯಣ ಗುರುಗಳು. ಅಂತಹ ಸಮಾಜ ಸುಧಾರಕರ ಜಯಂತಿಯನ್ನು ರಾಜ್ಯ ಸರ್ಕಾರದಿಂದ ರಾಜ್ಯ, ಜಿಲ್ಲಾ ಮಟ್ಟದಲ್ಲಿ ಆಚರಿಸಲಾಗುತ್ತಿದೆ. ನಾರಾಯಣ ಗುರುಗಳ ಜಯಂತಿ ಆಚರಿಸುವಂತೆ ಸಚಿವ ಮಧು ಬಂಗಾರಪ್ಪಗೆ ಹೇಳಿದ್ದೆ ಎಂದು ಸಿಎಂ ಸಿದ್ದರಾಮಯ್ಯ ಹೇಳಿದ್ದಾರೆ.
ಬೆಂಗಳೂರು, ಆಗಸ್ಟ್ 31: ರಾಜ್ಯ ಸರ್ಕಾರದಿಂದ ರಾಜ್ಯ, ಜಿಲ್ಲಾ ಮಟ್ಟದಲ್ಲಿ ಸಮಾಜ ಸುಧಾರಕರ ನಾರಾಯಣ ಗುರುಗಳ ಜಯಂತಿ ಆಚರಿಸಲಾಗುತ್ತಿದೆ ಎಂದು ಮುಖ್ಯಮಂತ್ರಿ ಸಿದ್ದರಾಮಯ್ಯ (Siddaramaiah) ಹೇಳಿದರು. ನಗರದಲ್ಲಿ ಮಾಧ್ಯಮದವರೊಂದಿಗೆ ಮಾತನಾಡಿದ ಅವರು, ನಾರಾಯಣ ಗುರುಗಳ ಜಯಂತಿ ಆಚರಿಸುವಂತೆ ಸಚಿವ ಮಧು ಬಂಗಾರಪ್ಪಗೆ ಹೇಳಿದ್ದೆ. ಜಾತಿ ವ್ಯವಸ್ಥೆ ಹೋಗಬೇಕು, ಸಮಸಮಾಜ ನಿರ್ಮಾಣವಾಗಬೇಕು. ಬುದ್ಧ, ಬಸವ, ಕನಕದಾಸರು ಕಂದಾಚಾರ, ಮೌಢ್ಯಗಳನ್ನು ಧಿಕ್ಕರಿಸಿದ್ದರು. ನಾರಾಯಣ ಗುರುಗಳು ಕೇರಳದಲ್ಲಿ ಇಳವ ಜಾತಿಯಲ್ಲಿ ಹುಟ್ಟಿದವರು ಎಂದು ಹೇಳಿದ್ದಾರೆ.
ಕೇರಳದಲ್ಲಿ ಅಸ್ಪೃಶ್ಯತೆ ಇತ್ತು. ನಾರಾಯಣ ಗುರುಗಳು ಅದನ್ನು ಅನುಭವಿಸಿದರು. ಶೂದ್ರರನ್ನು ದೇವಸ್ಥಾನಕ್ಕೆ ಬಿಡಲಿಲ್ಲವೆಂದರೆ ನೀವು ದೇವಸ್ಥಾನ ಕಟ್ಕೊಳ್ಳಿ. ಕೇರಳದಲ್ಲಿ ಇದೇ ರೀತಿ 60 ದೇವಸ್ಥಾನ ನಿರ್ಮಾಣ ಮಾಡಿದ್ದರು. ನಾನೊಮ್ಮೆ ಕೇರಳದ ದೇವಸ್ಥಾನಕ್ಕೆ ಹೋಗಿದ್ದಾಗ ಬಟ್ಟೆ ತೆಗೆದು ಬನ್ನಿ ಅಂದ್ದರು. ನಾನು ಇಲ್ಲಿಂದಲೇ ಕೈಮುಗಿಯುತ್ತೇನೆ ಎಂದು ಹೇಳಿ ಹೊರಟುಬಂದುಬಿಟ್ಟೆ ಎಂದರು.
ದೇವರ ದೃಷ್ಟಿಯಲ್ಲಿ ಇದು ಅವಮಾನಿಯ ಆಚರಣೆ. ಜಡತ್ವದಿಂದ ಕೂಡಿದ ನಮ್ಮ ದೇಶದ ಜಾತಿ ವ್ಯವಸ್ಥೆ ಸರಿ ಇಲ್ಲ. ನಮ್ಮ ದೇಶದಲ್ಲಿ 5 ವರ್ಣಗಳಿವೆ. ನಾರಾಯಣ ಗುರುಗಳು ಪಟ್ಟ ಬದ್ದ ಹಿತಾಸಕ್ತಿ ವಿರುದ್ಧ ಮತಡದೇನೆ ಶೂದ್ರರಿಗೆ ಬೇರೆ ದೇವಸ್ಥಾನ ನಿರ್ಮಾಣಕ್ಕೆ ಸಲಹೆ ಕೊಟ್ಟರು. ಅಕ್ಷರ ಸಂಸ್ಕೃತಿಯಿಂದ ವಂಚಿತರಾದವರು ಶೂದ್ರರು. ಸ್ವಾತಂತ್ರ್ಯ ಬಂದು 76 ವರ್ಷ ಆದರೂ ಈಗಲೂ ಜಾತಿ ವ್ಯವಸ್ಥೆ ಹಾಗೆ ಇದೆ ಎಂದು ಹೇಳಿದರು.
ಸಂಘಟನೆ ಮಾಡಿ ಬಲಾಯಿತರಾಗಿ, ವಿದ್ಯೆ ಕಲಿಯಿರಿ, ಸ್ವತಂತ್ರರಾಗಿ ಎಂದು ನಾರಾಯಣ ಗುರುಗಳು ಹೇಳಿದ್ದರು. ಯಾರು ಮಾನವೀಯತೆ ಬೇಳಸಿಕೊಳ್ಳುತ್ತಾರೆ ಅವರು ವಿಶ್ವ ಮಾನವರು. ಯಾರು ಮಾನವೀಯತೆ ಬೇಳಸಿಕೊಳ್ಳಲ್ಲ ಅವರು ಅಲ್ಪ ಮಾನವರು. ಗುರುಗಳ ವಿದ್ಯಾ ಪೀಠವನ್ನು ಮಂಗಳೂರು ವಿಶ್ವ ವಿದ್ಯಾಲಯದಲ್ಲಿ ಮಾಡಿದ್ದೀನಿ ಎಂದು ತಿಳಿಸಿದರು.
ಇದನ್ನೂ ಓದಿ: ಬಿಎಲ್ ಸಂತೋಷ್ ಇದ್ದ ಸಭೆಗೆ ಎಸ್ಟಿ ಸೋಮಶೇಖರ್, ಹೆಬ್ಬಾರ್, ರೇಣುಕಾಚಾರ್ಯ ಗೈರು
ಮನುಷ್ಯ ಜಾತಿ ತಾನೊಂದೆ ವಲಂ ಅನ್ನೋದನ್ನ ನಾರಾಯಣ ಗುರುಗಳು ಹೇಳಿದ್ದರು. ಜಾತಿಯಿಂದ ಯಾರು ದೊಡ್ಡವರಲ್ಲ ಅವರ ಗುಣಗಳಿಂದ ದೊಡ್ಡವರು ಎಂದು ಬಸವಣ್ಣ ಹೇಳಿದ್ದರು. ಅದನ್ನೇ ಪ್ರತಿಪಾದನೆ ಮಾಡಿದವರು ನಾರಾಯಣ ಗುರುಗಳು. ಜಾತಿ ಸುಲಭವಾಗಿ ಹೋಗಲ್ಲ. ಬಸವಾದಿ ಶರಣರು ಜಾತಿ ವ್ಯವಸ್ಥೆ ಹೋಗಲು ಅಂತರಜಾತಿ ಮದುವೆ ಮಾಡಿದರು.
ಆರ್ಥಿಕವಾಗಿ ಶಕ್ತಿ ಇದ್ದರೆ, ಯಾರು ಹೆಣ್ಣು ಕೊಡಲ್ಲ ಅಂತಾರೆ. ಹೀಗಾಗಿ ಎಲ್ಲರೂ ಓದಿಕೊಳ್ಳಬೇಕು. ಹಿಂದೆ ಉಳಿಯಲು ಕಾರಣವೇನು ಅಂತಾ ಯೋಚಿಸಬೇಕು. ಅನ್ಯಾಯ ಹೇಳಿಕೊಳ್ಳಲು, ನ್ಯಾಯ ಕೇಳಲು ಎಲ್ಲರಿಗೂ ಧ್ವನಿ ಬರಬೇಕು ಎಂದು ಹೇಳಿದರು.
ರಾಜ್ಯದ ಮತ್ತಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ.