ಪದವಿ ವ್ಯಾಸಂಗದಲ್ಲಿ ಕನ್ನಡ ಪಠ್ಯ ವಿಷಯವನ್ನು ಒಂದು ವರ್ಷಕ್ಕೆ ಮಿತಿಗೊಳಿಸಿದರೆ ಸರ್ಕಾರ ತೀವ್ರ ಪ್ರತಿರೋಧ ಎದುರಿಸಬೇಕಾಗುತ್ತದೆ: ಬರಗೂರು ರಾಮಚಂದ್ರಪ್ಪ

ಉನ್ನತ ಶಿಕ್ಷಣ ಪಠ್ಯಕ್ರಮ ರಚನೆ ಕಾರ್ಯಪಡೆ ಉಪಸಮಿತಿಯ ಈ ಪ್ರಸ್ತಾವನೆಯನ್ನು ರಾಜ್ಯ ಬಂಡಾಯ ಸಾಹಿತ್ಯ ಸಂಘಟನೆಯು ತೀವ್ರವಾಗಿ ವಿರೋಧಿಸಿ ಉನ್ನತ ಶಿಕ್ಷಣ ಖಾತೆ ಸಚಿವರೂ ಆಗಿರುವ ಉಪಮುಖ್ಯಮಂತ್ರಿ ಅಶ್ವತ್ಥ್ ನಾರಾಯಣ ಆವರಿಗೆ ಪ್ರತ್ರವನ್ನು ಬರೆದು ಸದರಿ ಪ್ರಸ್ತಾವನೆಯನ್ನು ತಿರಸ್ಕರಿಸದಿದ್ದರೆ ಸಂಘಟಿತ ಪ್ರತಿರೋಧ ಎದುರಿಸಬೇಕಾಗುತ್ತದೆ ಎಂದು ಎಚ್ಚರಿಸಿದೆ.

ಪದವಿ ವ್ಯಾಸಂಗದಲ್ಲಿ ಕನ್ನಡ ಪಠ್ಯ ವಿಷಯವನ್ನು ಒಂದು ವರ್ಷಕ್ಕೆ ಮಿತಿಗೊಳಿಸಿದರೆ ಸರ್ಕಾರ ತೀವ್ರ ಪ್ರತಿರೋಧ ಎದುರಿಸಬೇಕಾಗುತ್ತದೆ: ಬರಗೂರು ರಾಮಚಂದ್ರಪ್ಪ
ಪ್ರೊಫೆಸರ್ ಬರಗೂರು ರಾಮಚಂದ್ರಪ್ಪ
Follow us
TV9 Web
| Updated By: ಅರುಣ್​ ಕುಮಾರ್​ ಬೆಳ್ಳಿ

Updated on: Jun 17, 2021 | 7:06 PM

ಬೆಂಗಳೂರು:  ಕೇಂದ್ರ ಸರ್ಕಾರವು ಕಳೆದ ವರ್ಷ ಜಾರಿಗೊಳಿಸಿದ ಹೊಸ ಶಿಕ್ಷಣ ನೀತಿಯನ್ವಯ ಇನ್ನು ಮೇಲೆ ಅಂದರೆ 2021-22 ಶೈಕ್ಷಣಿಕ ಸಾಲಿನಿಂದ ಪದವಿ ವ್ಯಾಸಂಗವು ನಾಲ್ಕು ವರ್ಷ ಅವಧಿಯದ್ದಾಗಲಿದೆ. ಇದುವರೆಗೆ ವತ್ತಿಪರ ಕೋರ್ಸುಗಳನ್ನು ಹೊರತುಪಡಿಸಿ ಉಳಿದೆಲ್ಲ ಪದವಿ ವ್ಯಾಸಂಗಗಳು ಮೂರು ವರ್ಷ ಅವಧಿಯವಾಗಿರುತ್ತಿದ್ದವು ಅಥವಾ 6 ಸೆಮಿಸ್ಟರ್​ಗಳಲ್ಲಿ ಪದವಿ ವ್ಯಾಸಂಗ ಕೊನೆಗೊಳ್ಳುವ ವ್ಯವಸ್ಥೆಯಿತ್ತು. ಪಿಯುಸಿ ಪಾಸು ಮಾಡುವ ವಿದ್ಯಾರ್ಥಿಗಳು ಕಲೆ, ವಾಣಿಜ್ಯ ಮತ್ತು ವಿಜ್ಞಾನ ಸ್ಟ್ರೀಮ್​ಗಳಲ್ಲಿ ಪದವಿಗೆ ದಾಖಲಾತಿ ಪಡೆದರೆ, ಈ ಮೊದಲು ಈ ವ್ಯಾಸಂಗ ಮಾಡಿದವರಿಗಿಂತ ಒಂದು ವರ್ಷ ಜಾಸ್ತಿ ಓದಬೇಕು.

ಅದು ಸರಿ, ಈ ಬಗ್ಗೆ ವಿದ್ಯಾರ್ಥಿಗಳಾಗಲೀ ಅಥವಾ ಪೋಷಕರಾಗಲಿ ವಿರೋಧ ಪ್ರಕಟಿಸುತ್ತಿಲ್ಲ. ಕೋವಿಡ್-19 ಪಿಡುಗು ಜನರ ಬದುಕನ್ನು ಅಲ್ಲೋಲ ಕಲ್ಲೋಲಗೊಳಿಸಿರುವ ಹಿನ್ನೆಲೆಯಲ್ಲಿ ಪ್ರಾಯಶ: ಅವರೆಲ್ಲ ಇದರ ಬಗ್ಗೆ ಜಾಸ್ತಿ ಯೋಚಿಸಿರಲಾರರು. ಅಲ್ಲದೆ ಪಿಯು ಓದುತ್ತಿರುವ ಮಕ್ಕಳು ಮತ್ತು ಅವರ ಪೋಷಕರು ಇದುವರೆಗೆ ಪರೀಕ್ಷೆಗಳು ಯಾವಾಗ ನಡೆಯಲಿವೆ ಎಂಬ ಯೋಚನೆಲ್ಲಿದ್ದರು. ಸರ್ಕಾರ ಪರೀಕ್ಷೆಗಳನ್ನು ನಡೆಸದಿರುವ ನಿರ್ಧಾರ ತೆಗೆದುಕೊಂಡಿರುವುದು ಬಹಳಷ್ಟು ವಿದ್ಯಾರ್ಥಿಗಳಿಗೆ ಗೊಂದಲಕ್ಕೆ ದೂಡಿದೆ. ವೃತ್ತಿಪರ ಕೋರ್ಸ್​ಗಳಿಗೆ ಸೇರಬೇಕೆಂಬ ಮಹದಾಸೆ ಇಟ್ಟುಕೊಂಡಿರುವವರು ಪ್ರತಭಾನ್ವಿತರಾಗಿದ್ದರೂ ಸೀಟು ಸಿಗುತ್ತದೋ ಇಲ್ಲವೋ ಎಂಬಚಿಂತೆಯಲ್ಲಿದ್ದಾರೆ.

Baraguru letter

ಬರಗೂರು ರಾಮಚಂದ್ರಪ್ಪನವರ ಪತ್ರ

ಓಕೆ, ವಿಷಯಕ್ಕೆ ಬರೋಣ. ನಾಲ್ಕು ವರ್ಷದ ಹೊಸ ನಿಯಮ ಯಾಕೆ ಜಾರಿಗೊಳಿಸಲಾಗಿದೆ ಎನ್ನುವುದಕ್ಕೆ ಕೇಂದ್ರ ಶಿಕ್ಷಣ ಇಲಾಖೆ ಹಲವಾರು ಕಾರಣಗಳನ್ನು ಮುಂದಿಡುತ್ತದೆ. ಅವುಗಳನ್ನು ನಾವಿಲ್ಲಿ ಚರ್ಚಿಸಿವುದು ಬೇಡ. ಅದರೆ ಚರ್ಚೆಯ ವಿಷಯವೇನೆಂದರೆ, ಹೊಸ ಪಠ್ಯಕ್ರಮದ ಪ್ರಕಾರ ನಾಲ್ಕು ವರ್ಷಗಳ ಪದವಿ ವ್ಯಾಸಂಗದಲ್ಲಿ ಕನ್ನಡವೂ ಸೇರಿದಂತೆ ಬೇರೆ ಬಾಷೆಗಳನ್ನು ಅಭ್ಯಾಸ ಮಾಡುವವರು ಕೇವಲ ಮೊದಲ ವರ್ಷ ಮಾತ್ರ ಅವುಗಳನ್ನು ಓದಲಿದ್ದಾರೆ. ನಮ್ಮ ಕನ್ನಡದ ಹುಡುಗ/ಹುಡುಗಿಯರು ಪದವಿಯಲ್ಲಿ ಕೇವಲ ಎರಡು ಸೆಮಿಸ್ಟರ್​ಗಳಲ್ಲಿ ಮಾತ್ರ ಭಾಷೆಯನ್ನು ಅಭ್ಯಾಸ ಮಾಡಲಿದ್ದಾರೆ. ಉನ್ನತ ಶಿಕ್ಷಣ ಪಠ್ಯಕ್ರಮ ರಚನೆ ಕಾರ್ಯಪಡೆ ಉಪಸಮಿತಿಯ ಈ ಪ್ರಸ್ತಾವನೆಯನ್ನು ರಾಜ್ಯ ಬಂಡಾಯ ಸಾಹಿತ್ಯ ಸಂಘಟನೆಯು ತೀವ್ರವಾಗಿ ವಿರೋಧಿಸಿ ಉನ್ನತ ಶಿಕ್ಷಣ ಖಾತೆ ಸಚಿವರೂ ಆಗಿರುವ ಉಪಮುಖ್ಯಮಂತ್ರಿ ಅಶ್ವತ್ಥ್ ನಾರಾಯಣ ಆವರಿಗೆ ಪ್ರತ್ರವನ್ನು ಬರೆದು ಸದರಿ ಪ್ರಸ್ತಾವನೆಯನ್ನು ತಿರಸ್ಕರಿಸದಿದ್ದರೆ ಸಂಘಟಿತ ಪ್ರತಿರೋಧ ಎದುರಿಸಬೇಕಾಗುತ್ತದೆ ಎಂದು ಎಚ್ಚರಿಸಿದೆ.

ಸಂಘಟನೆಯ ಪರವಾಗಿ ಪತ್ರ ಬರೆದಿರುವ ಹಿರಿಯ ಬಂಡಾಯ ಸಾಹಿತಿ ಪ್ರೊಫೆಸರ್ ಬರಗೂರು ರಾಮಚಂದ್ರನಪ್ಪನವರು, ಉನ್ನತ ಶಿಕ್ಷಣ ಪಠ್ಯಕ್ರಮ ರಚನೆಗೆ ನೇಮಿಸಲಾಗಿದ್ದ ಕಾರ್ಯಪಡೆಯ ಉಪ ಸಮಿತಿ ಸಲ್ಲಿಸಿರುವ ಪ್ರಸ್ತಾವನೆಯಲ್ಲಿ ಕನ್ನಡವೂ ಸೇರಿದಂತೆ ಎಲ್ಲ ಭಾಷಾ ಪಠ್ಯ ವಿಷಯವನ್ನು ಕೇವಲ ಒಂದು ವರ್ಷಕ್ಕೆ ಅಂದರೆ ಎರಡು ಸೆಮಿಸ್ಟರ್​ಗಳಿಗೆ ಮಾತ್ರ ಮಿತಿಗೊಳಿಸಿರುವುದು ಬೇರೆ ಬಾಷೆಗಳೂ ಸೇರಿದಂತೆ ಕನ್ನಡ ಭಾಷೆಗೆ ಆಗಿರುವ ಅನ್ಯಾಯ ಎಂದು ಹೇಳಿದ್ದಾರೆ.

ಹಿಂದೆ ಮೂರು ವರ್ಷಗಳ ಪದವಿ ವ್ಯಾಸಂಗದಲ್ಲಿ 2 ವರ್ಷ ಅಂದರೆ ನಾಲ್ಕು ಸೆಮಿಸ್ಟರ್​ಗಳಲ್ಲಿ ಕನ್ನಡಾದಿ ವಿಷಯ ಬೋಧನೆಗೆ ಅವಕಾಶವಿತ್ತು. ಈಗ ಪದವಿಯನ್ನು 4 ವರ್ಷದ ಅವಧಿಗೆ ವಿಸ್ತರಿಸಿರುವುದರಿಂದ 2 ವರ್ಷಗಳ ಭಾಷಾ ಬೋಧನೆಯನ್ನು 3 ವರ್ಷಗಳಿಗೆ ವಿಸ್ತರಿಸಿಬೇಕಿತ್ತು. ಕಡೇ ಪಕ್ಷ2 ವರ್ಷಗಳ ಅವಧಿಯನ್ನಾದರೂ ಉಳಿಸಿಕೊಳ್ಳಬೇಕಿತ್ತು. ಅದನ್ನು ಒಂದು ವರ್ಷಕ್ಕೆ ಮಿತಿಗೊಳಿಸಿರುವುದು ಖಂಡನೀಯ ಎಂದು ರಾಮಚಂದ್ರಪ್ಪನವರು ತಮ್ಮ ಪತ್ರದಲ್ಲಿ ತಿಳಿಸಿದ್ದಾರೆ.

ಪತ್ರದಲ್ಲಿ ಮುಂದುವರೆದು ಹೇಳಿರುವ ಪ್ರೊಫೆಸರ್ ರಾಮಚಂದ್ರಪ್ಪನವರು, ಯಾವುದೇ ವಿಶೇಷ ವಿಷಯದಲ್ಲಿ ಪದವಿ ವ್ಯಾಸಂಗ ಮಾಡುವವರಿಗೆ ಕನ್ನಡ ಭಾಷೆ, ಸಾಹಿತ್ಯದ ಸಾಮಾನ್ಯ ಪರಿಚಯ ಕಡ್ಡಾಯವಾಗಿ ಇರಬೇಕು ಎಂದು ಹೇಳಿದ್ದಾರೆ. ಇದು ಕೇವಲ ಕನ್ನಡಾಭಿಮಾನದ ಪ್ರಶ್ನೆಯಲ್ಲ. ಯಾವುದೇ ವ್ಯಾಸಂಗಗಳಲ್ಲಿ ಸಾಂಸ್ಕೃತಿಕ ಅರಿವು ಮೂಡಿಸಿ ಮಾನವೀಯ ಮೌಲ್ಯಗಳನ್ನು ನೆಲೆಗೊಳಿಸಲು ಕನ್ನಡ ಭಾಷೆ, ಸಾಹಿತ್ಯಗಳ ಸಂಕ್ಷಿಪ್ತ ಪರಿಚಯವು ಪೂರಕವಾಗುತ್ತದೆ. ಶಿಕ್ಷಣವನ್ನು ಸಾಂಸ್ಕೃತಿಕ ಜನಪರ ಪ್ರಜ್ಞೆಯ ನೆಲೆಯಲ್ಲೂ ಪರಿಭಾವಿಸಬೇಕು, ಅಂತ ಅವರು ಹೇಳಿದ್ದಾರೆ.

ಈ ಹಿನ್ನೆಲೆಯಲ್ಲಿ 4 ವರ್ಷಗಳ ಪದವಿ ಕೋರ್ಸ್​ನಲ್ಲಿ ಕನ್ನಡ ವಿಷಯವನ್ನು 3 ವರ್ಷ ಬೋಧಿಸಲು ತೀರ್ಮಾನ ತೆಗೆದುಕೊಳ್ಳಬೇಕೆಂದು ರಾಮಚಂದ್ರಪ್ಪನವರು ಸಚಿವರಿಗೆ ಮನವಿ ಮಾಡಿದ್ದು ಒಂದು ವೇಳೆ ಮನವಿಯನ್ನು ಕಡೆಗಣಿಸಿ ಕನ್ನಡ ಭಾಷೆಯನ್ನು ಕೇವಲ 1 ವರ್ಷ ಮಾತ್ರ ಬೋಧಿಸುವ ತೀರ್ಮಾನ ತೆಗೆದುಕೊಂಡರೆ ಸಂಘಟಿತ ಪ್ರತಿರೋಧ ಎದಿರಿಸಬೇಕಾಗುತ್ತದೆ ಎಂದು ಎಚ್ಚರಿಸಿದ್ದಾರೆ.

ಉನ್ನತ ಶಿಕ್ಷಣ ಪಠ್ಯಕ್ರಮ ರಚನೆ ಕಾರ್ಯಪಡೆ ಉಪಸಮಿತಿಯ ಪ್ರಸ್ತಾವನೆಯನ್ನು ಸರ್ಕಾರ ಅಂಗೀಕರಿಸಿದರೆ, ಕನ್ನಡ ಭಾಷೆಯನ್ನು ಅಭ್ಯಾಸ ಮಾಡಲಿಚ್ಛೆಯುಳ್ಳ ವಿದ್ಯಾರ್ಥಿಗಳಿಗೆ ತುಂಬಾ ಅನ್ಯಾಯವಾಗಲಿದೆ. ಕನ್ನಡ ಪರ ಸಂಘಟನೆಗಳಿಗೆ ಪ್ರಾಯಶಃ ಸದರಿ ಪ್ರಸ್ತಾವನೆ ಗಮನಕ್ಕೆ ಬಂದಂತಿಲ್ಲ. ಆದರೆ ಬರಗೂರು ರಾಮಚಂದ್ರಪ್ಪನವರ ಪತ್ರ ಎಲ್ಲರನ್ನು ಜಾಗೃಗೊಳಿಸಿವುದರ ಜೊತೆಗೆ ಸರ್ಕಾರಕ್ಕೆ ಮುಂದಾಗಬಹುದಾದ ಪರಿಣಾಮಗಳ ಕುರಿತು ಎಚ್ಚರಿಕೆ ನೀಡಿದೆ.

ಇದನ್ನೂ ಓದಿ: ಪಿಯುಸಿ ಪಾಸಾದವರೆಲ್ಲರೂ ಸಿಇಟಿ ಬರೆಯಬಹುದು, ಅಕ್ಟೋಬರ್ ಮೊದಲ ವಾರದಲ್ಲಿ ಪದವಿ ತರಗತಿಗೆ ದಾಖಲಾತಿ: ಡಿಸಿಎಂ ಅಶ್ವತ್ಥ್ ನಾರಾಯಣ

ಕೈ ತುತ್ತಿನ ಹಿಂದಿರುವ ಮಹತ್ವದ ಬಗ್ಗೆ ನಿಮಗೆ ಗೊತ್ತಾ?
ಕೈ ತುತ್ತಿನ ಹಿಂದಿರುವ ಮಹತ್ವದ ಬಗ್ಗೆ ನಿಮಗೆ ಗೊತ್ತಾ?
ವಿಷ್ಣು, ಗಣೇಶನ ಲಹರಿ ಇರುವ ಈ ದಿನದ ರಾಶಿ ಭವಿಷ್ಯ ಹೇಗಿದೆ ತಿಳಿಯಿರಿ
ವಿಷ್ಣು, ಗಣೇಶನ ಲಹರಿ ಇರುವ ಈ ದಿನದ ರಾಶಿ ಭವಿಷ್ಯ ಹೇಗಿದೆ ತಿಳಿಯಿರಿ
2025ರ ಸರ್ಕಾರಿ ಕ್ಯಾಲೆಂಡರ್ ಹೇಗಿರುತ್ತದೆ? ಇಲ್ಲಿದೆ ನೋಡಿ ವಿಡಿಯೋ
2025ರ ಸರ್ಕಾರಿ ಕ್ಯಾಲೆಂಡರ್ ಹೇಗಿರುತ್ತದೆ? ಇಲ್ಲಿದೆ ನೋಡಿ ವಿಡಿಯೋ
ಹಿಮದಿಂದ ತುಂಬಿದ ಕಣಿವೆಯಲ್ಲಿ ಚಿರತೆಗಳ ಕುಣಿದಾಟ
ಹಿಮದಿಂದ ತುಂಬಿದ ಕಣಿವೆಯಲ್ಲಿ ಚಿರತೆಗಳ ಕುಣಿದಾಟ
ನಾಸಿಕ್‌ನಲ್ಲಿ 11 ವರ್ಷದ ಬಾಲಕಿ ಮೇಲೆ ಬೀದಿನಾಯಿಗಳ ದಾಳಿ; ವಿಡಿಯೋ ಇಲ್ಲಿದೆ
ನಾಸಿಕ್‌ನಲ್ಲಿ 11 ವರ್ಷದ ಬಾಲಕಿ ಮೇಲೆ ಬೀದಿನಾಯಿಗಳ ದಾಳಿ; ವಿಡಿಯೋ ಇಲ್ಲಿದೆ
ಕಷ್ಟ ಬಂದರೆ ಪ್ರಸಾದ ತಿಂದು ಬದುಕ್ತೀನಿ, ಯಾರ ಜತೆಗೂ ಹೋಗಿ ಇರಲ್ಲ: ರಚಿತಾ
ಕಷ್ಟ ಬಂದರೆ ಪ್ರಸಾದ ತಿಂದು ಬದುಕ್ತೀನಿ, ಯಾರ ಜತೆಗೂ ಹೋಗಿ ಇರಲ್ಲ: ರಚಿತಾ
ದಲಿತ ಸಮುದಾಯದ ಸಮಸ್ಯೆಗಳ ಚರ್ಚೆಗೆ ಮೀಟಿಂಗ್ ಕರೆದಿದ್ದಾರೆ: ಮಹಾದೇವಪ್ಪ
ದಲಿತ ಸಮುದಾಯದ ಸಮಸ್ಯೆಗಳ ಚರ್ಚೆಗೆ ಮೀಟಿಂಗ್ ಕರೆದಿದ್ದಾರೆ: ಮಹಾದೇವಪ್ಪ
ಕಾಂಗ್ರೆಸ್ 135 ಸ್ಥಾನ ಪಡೆಯುವಲ್ಲಿ ಶಿವಕುಮಾರ್ ಪಾತ್ರ ದೊಡ್ಡದು: ವಿಶ್ವನಾಥ್
ಕಾಂಗ್ರೆಸ್ 135 ಸ್ಥಾನ ಪಡೆಯುವಲ್ಲಿ ಶಿವಕುಮಾರ್ ಪಾತ್ರ ದೊಡ್ಡದು: ವಿಶ್ವನಾಥ್
ಚುನಾಯಿತ ಪ್ರತಿನಿಧಿಗಳ ಅನುಪಸ್ಥಿತಿಯಲ್ಲಿ ಪಾಲಿಕೆ ಅಧಿಕಾರಿಗಳದ್ದೇ ಪಾರಮ್ಯ
ಚುನಾಯಿತ ಪ್ರತಿನಿಧಿಗಳ ಅನುಪಸ್ಥಿತಿಯಲ್ಲಿ ಪಾಲಿಕೆ ಅಧಿಕಾರಿಗಳದ್ದೇ ಪಾರಮ್ಯ
ಧಾರ್ಮಿಕ ಕೇಂದ್ರಗಳಲ್ಲಿ ಎಲ್ಲರೂ ಸರಿಸಮಾನರು : ಉಪರಾಷ್ಟ್ರಪತಿ
ಧಾರ್ಮಿಕ ಕೇಂದ್ರಗಳಲ್ಲಿ ಎಲ್ಲರೂ ಸರಿಸಮಾನರು : ಉಪರಾಷ್ಟ್ರಪತಿ