ನಮ್ಮದು ಹೋಬಳಿಯಲ್ಲ; ತಾಲೂಕು ಕೇಂದ್ರವಾಗಲಿ ಎಂದು ಪಟ್ಟು ಹಿಡಿದ ಗ್ರಾಮಸ್ಥರು; ಈ ಬಾರಿಯೂ ಚುನಾವಣೆ ಬಹಿಷ್ಕಾರ

| Updated By: ಸಾಧು ಶ್ರೀನಾಥ್​

Updated on: Mar 16, 2021 | 11:37 AM

ಬಾಗಲಕೋಟೆ ಜಿಲ್ಲೆಯ ಜಮಖಂಡಿ ತಾಲೂಕಿನ ಸಾವಳಗಿಯನ್ನು ತಾಲೂಕಾಗಿ ಘೋಷಣೆ ಮಾಡಿ ಎಂದು ಇಲ್ಲಿನ ಗ್ರಾಮಸ್ಥರು ಮನವಿ ಮಾಡಿಕೊಂಡಿದ್ದಾರೆ. ಕೇವಲ ಗ್ರಾಮ ಪಂಚಾಯತಿ ಚುನಾವಣೆ ಅಷ್ಟೇ ಅಲ್ಲ ತಾಲೂಕು ಪಂಚಾಯತಿ, ಜಿಲ್ಲಾ ಪಂಚಾಯತಿ, ವಿಧಾನಸಭೆ, ಲೋಕಸಭೆ ಹೀಗೆ ಎಲ್ಲಾ ಚುನಾವಣೆಯನ್ನು ಬಹಿಷ್ಕಾರ ಮಾಡಿದ್ದಾರೆ.

ನಮ್ಮದು ಹೋಬಳಿಯಲ್ಲ; ತಾಲೂಕು ಕೇಂದ್ರವಾಗಲಿ ಎಂದು ಪಟ್ಟು ಹಿಡಿದ ಗ್ರಾಮಸ್ಥರು; ಈ ಬಾರಿಯೂ ಚುನಾವಣೆ ಬಹಿಷ್ಕಾರ
ಸಾವಳಗಿ ಗ್ರಾಮ ಪಂಚಾಯತಿಯ ಚಿತ್ರಣ
Follow us on

ಬಾಗಲಕೋಟೆ: ಜಿಲ್ಲೆಯ ಸಾವಳಗಿಯನ್ನು ತಾಲೂಕು ಎಂದು ಘೋಷಿಸದ ಹಿನ್ನೆಲೆಯಲ್ಲಿ ಗ್ರಾಮ ಪಂಚಾಯತಿ ಚುನಾವಣೆ ಬಹಿಷ್ಕರಿಸಲು ಸಾವಳಗಿ ಹೋಬಳಿ ಗ್ರಾಮಸ್ಥರು ನಿರ್ಧಾರ ಮಾಡಿದ್ದಾರೆ. ಕಳೆದ ಬಾರಿಯೂ ಕೂಡ ಚುನಾವಣೆಯನ್ನು ಗ್ರಾಮಸ್ಥರು ಬಹಿಷ್ಕರಿಸಿದ್ದರು. ಹೀಗಾಗಿ ಮಾರ್ಚ್ 30ರಂದು ಗ್ರಾಮ ಪಂಚಾಯತಿ ಚುನಾವಣೆ ನಡೆಸಲು ಘೋಷಣೆ ಮಾಡಲಾಗಿತ್ತು. ಆದರೆ ಮತ್ತೆ ಚುನಾವಣೆ ಬಹಿಷ್ಕರಿಸಲು ಗ್ರಾಮಸ್ಥರು ತೀರ್ಮಾನ ಮಾಡಿದ್ದಾರೆ.

ಬಾಗಲಕೋಟೆ ಜಿಲ್ಲೆಯ ಜಮಖಂಡಿ ತಾಲೂಕಿನ ಸಾವಳಗಿಯನ್ನು ತಾಲೂಕಾಗಿ ಘೋಷಣೆ ಮಾಡಿ ಎಂದು ಇಲ್ಲಿನ ಗ್ರಾಮಸ್ಥರು ಮನವಿ ಮಾಡಿಕೊಂಡಿದ್ದಾರೆ. ಕೇವಲ ಗ್ರಾಮ ಪಂಚಾಯತಿ ಚುನಾವಣೆ ಅಷ್ಟೇ ಅಲ್ಲ ತಾಲೂಕು ಪಂಚಾಯತಿ, ಜಿಲ್ಲಾ ಪಂಚಾಯತಿ, ವಿಧಾನಸಭೆ, ಲೋಕಸಭೆ ಹೀಗೆ ಎಲ್ಲಾ ಚುನಾವಣೆಯನ್ನು ಬಹಿಷ್ಕಾರ ಮಾಡಿದ್ದಾರೆ. 11ನೇ ವಾರ್ಡ್​ನ 32 ಸದಸ್ಯರನ್ನು ಹೊಂದಿರುವ ಸಾವಳಗಿ ಗ್ರಾಮ ಪಂಚಾಯತಿಯನ್ನು ತಾಲೂಕು ಮಾಡಲು ಒತ್ತಾಯಿಸಿದ್ದಾರೆ.

savalagi election

ಸಾವಳಗಿಯನ್ನು ತಾಲೂಕಾಗಿ ಘೋಷಿಸಲು ಒತ್ತಾಯ

ಇದನ್ನೂ ಓದಿ:

 ಗ್ರಾಮ ಪಂಚಾಯತಿ ಚುನಾವಣೆಯಲ್ಲಿ ರೋಚಕ ಗೆಲುವು ತಂದು ಕೊಟ್ಟ ಅಂಚೆ ಮತ!

ಇನ್ನೂ ಇಳಿದಿಲ್ಲ ಗ್ರಾಮ ಪಂಚಾಯತಿ ಚುನಾವಣೆ ವೈಷಮ್ಯದ ಕಾವು: ಇಬ್ಬರ ನಡುವಿನ ಜಗಳ, ಓರ್ವನ ಕೊಲೆಯಲ್ಲಿ ಅಂತ್ಯ