AQI
Sign In

By signing in or creating an account, you agree with Associated Broadcasting Company's Terms & Conditions and Privacy Policy.

Gruha Lakshmi: ರಾಜ್ಯಾದ್ಯಂತ ಗೃಹಲಕ್ಷ್ಮಿ ಯೋಜನೆಗೆ ಅದ್ದೂರಿ ಚಾಲನೆ: ಆಯಾ ಜಿಲ್ಲೆಗಳಲ್ಲಿ ಹೇಗಿತ್ತು ಸಂಭ್ರಮ

ಗೃಹಲಕ್ಷ್ಮಿ ಯೋಜನೆಗೆ ಅದ್ದೂರಿ ಸ್ವಾಗತ ದೊರೆತಿದೆ. ಮೈಸೂರಿನ ಮಹಾರಾಜ ಕಾಲೇಜು ಮೈದಾನದಲ್ಲಿ ನಡೆದ ಗೃಹ ಲಕ್ಷ್ಮಿ ಯೋಜನೆಗೆ ಕಾಂಗ್ರೆಸ್ ನಾಯಕರಾದ ರಾಹುಲ್ ಗಾಂಧಿ ಮತ್ತು ಮಲ್ಲಿಕಾರ್ಜುನ ಖರ್ಗೆ ಅಧಿಕೃತ ಚಾಲನೆ ನೀಡಿದ್ದಾರೆ. ಅದೇ ರೀತಿಯಾಗಿ ರಾಜ್ಯದ ಇತರೆ ಜಿಲ್ಲೆಗಳಲ್ಲೂ ಸಚಿವರು ಕಾಂಗ್ರೆಸ್​ನ ಮಹತ್ವಾಕಾಂಕ್ಷೆಯ ಯೋಜನೆಯನ್ನು ಉದ್ಘಾಟಿಸಿದ್ದಾರೆ.

Gruha Lakshmi: ರಾಜ್ಯಾದ್ಯಂತ ಗೃಹಲಕ್ಷ್ಮಿ ಯೋಜನೆಗೆ ಅದ್ದೂರಿ ಚಾಲನೆ: ಆಯಾ ಜಿಲ್ಲೆಗಳಲ್ಲಿ ಹೇಗಿತ್ತು ಸಂಭ್ರಮ
ಕಲಬುರಗಿಯಲ್ಲಿ ಗೃಹಲಕ್ಷ್ಮಿ ಯೋಜನೆಗೆ ಚಾಲನೆ ನೀಡಿದ ಸಚಿವ ಪ್ರಿಯಾಂಕ್ ಖರ್ಗೆ
ಗಂಗಾಧರ​ ಬ. ಸಾಬೋಜಿ
|

Updated on:Aug 30, 2023 | 4:29 PM

Share

ಬೆಂಗಳೂರು, ಆಗಸ್ಟ್ 30: ಕಾಂಗ್ರೆಸ್​ ಸರ್ಕಾರದ 5 ಗ್ಯಾರಂಟಿಗಳಲ್ಲಿ ಒಂದಾಗಿರುವ ಮನೆ ಯಜಮಾನಿಗೆ 2 ಸಾವಿರ ರೂ. ನೀಡುವ ಮಹತ್ವಾಕಾಂಕ್ಷೆಯ ಗೃಹ ಲಕ್ಷ್ಮಿ (Gruha Lakshmi Scheme) ಯೋಜನೆಗೆ ಇಂದು ರಾಜ್ಯಾದ್ಯಂತ ಅದ್ದೂರಿ ಸ್ವಾಗತ ದೊರೆತಿದೆ. ಮೈಸೂರಿನ ಮಹಾರಾಜ ಕಾಲೇಜು ಮೈದಾನದಲ್ಲಿ ನಡೆದ ಕಾರ್ಯಕ್ರಮದಲ್ಲಿ ಕಾಂಗ್ರೆಸ್ ನಾಯಕರಾದ ರಾಹುಲ್ ಗಾಂಧಿ ಮತ್ತು ಮಲ್ಲಿಕಾರ್ಜುನ ಖರ್ಗೆ ಅವರು ಗೃಹ ಲಕ್ಷ್ಮಿ ಯೋಜನೆಗೆ ಅಧಿಕೃತ ಚಾಲನೆ ನೀಡಿದ್ದಾರೆ. ಆ ಮೂಲಕ ಲಕ್ಷಾಂತರ ಮಹಿಳೆಯರು ತಮ್ಮೂರಿನಿಂದಲೇ ಮೈಸೂರಿ ಕಾರ್ಯಕ್ರಮವನ್ನ ಕಣ್ತುಂಬಿಕೊಂಡಿದ್ದಾರೆ. ರಾಜ್ಯದ ಇತರೆ ಜಿಲ್ಲೆಗಳಲ್ಲೂ ಸಚಿವರು ಕಾಂಗ್ರೆಸ್​ನ ಮಹತ್ವಾಕಾಂಕ್ಷೆಯ ಯೋಜನೆಯನ್ನ ಉದ್ಘಾಟಿಸಿದ್ದಾರೆ.

ಬಾಗಲಕೋಟೆಯ ಕಟಗೇರಿ ಗ್ರಾಮದ ಇಬ್ಬರು ಮಹಿಳೆಯರ ಜತೆ ರಾಹುಲ್ ಗಾಂಧಿ, ಸಿಎಂ ಸಿದ್ದರಾಮಯ್ಯ ಹಾಗೂ ಡಿಸಿಎ ಡಿಕೆ ಶಿವಕುಮಾರ್​ ಸಂವಾದ ನಡೆಸಿದರು. ಬಸವೇಶ್ವರ ಕಲ್ಯಾಣಮಂಟಪದಲ್ಲಿ ಸ್ಕ್ರೀನ್‌ಎಲ್‌ಇಡಿ ಅಳವಡಿಸಲಾಗಿತ್ತು. ಕೋಟೆಕಲ್ ಗ್ರಾಮದಲ್ಲಿ LED ಪರದೆ ಮೂಲಕ ಜನರು TV9 ವೀಕ್ಷಿಸಿದ್ರು.

ಇದನ್ನೂ ಓದಿ: ಗೃಹಲಕ್ಷ್ಮೀ ಯೋಜನೆ ಕಾರ್ಯಕ್ರಮದಲ್ಲಿ ಕಾಂಗ್ರೆಸ್ ಶಕ್ತಿ ಪ್ರದರ್ಶನ: ಸಿದ್ದರಾಮಯ್ಯ, ರಾಹುಲ್, ಖರ್ಗೆ, ಡಿಕೆ ಶಿವಕುಮಾರ್​ ಹೇಳಿದ್ದೇನು?

ಗದಗ: ನಗರದಲ್ಲಿ ಲಂಬಾಣಿ‌ ಮಹಿಳೆಯರ ಹಾಡು, ನೃತ್ಯದ ಮೂಲಕ ಗೃಹ ಲಕ್ಷ್ಮಿ ಯೋಜನೆಯನ್ನ ಸ್ವಾಗತಿಸಿದರು. ಹಾಡಿನ ಮೂಲಕ ಸರ್ಕಾರಕ್ಕೆ ಅಭಿನಂದನೆ ಸಲ್ಲಿಸಿದರು. ಕೋಲಾರದ ಶಾಂತಿ ಕಲ್ಯಾಣ ಮಂಟಪದಲ್ಲಿ ಮೈಸೂರು ಕಾರ್ಯಕ್ರಮವನ್ನ ನೇರ ಪ್ರಸಾರ ವೀಕ್ಷಣೆಗೆ ಅವಕಾಶ ಕಲ್ಪಿಸಲಾಗಿತ್ತು. ಇತ್ತ ಯಶವಂತಪುರ ಕ್ಷೇತ್ರದಲ್ಲೂ ಬಿಜೆಪಿ ಶಾಸಕ ಎಸ್​.ಟಿ.ಸೋಮಶೇಖರ್​ ಕಾರ್ಯಕ್ರಮ ಆಯೋಜಿಸಿದ್ದರು.

ಬಳ್ಳಾರಿ: ನಗರದ ಪುರಸಭೆ ಮೈದಾನದಲ್ಲಿ ಜಿಲ್ಲಾ ಉಸ್ತುವಾರಿ ಸಚಿವ ನಾಗೇಂದ್ರ ಹಾಗೂ ಬಳ್ಳಾರಿ ನಗರ ಶಾಸಕ ಭರತ್ ರೆಡ್ಡಿ ದೀಪ ಬೆಳಗಿಸುವ ಮೂಲಕ ಗೃಹ ಲಕ್ಷ್ಮಿ ಯೋಜನೆಗೆ ಚಾಲನೆ ನೀಡಿದರು. ಜಿಲ್ಲೆಯಲ್ಲಿ ಗೃಹಲಕ್ಷ್ಮೀ ಯೋಜನೆಗೆ 2.59 ಲಕ್ಷಕ್ಕೂ ಹೆಚ್ಚು ಮಹಿಳೆಯರು ನೋಂದಣಿ ಮಾಡಿಕೊಂಡಿದ್ದಾರೆ.

ಕಲಬುರಗಿ: ಗೃಹ ಲಕ್ಷ್ಮಿ ಉದ್ಘಾಟನಾ ಸಮಾರಂಭದಲ್ಲಿ ಭಾಗವಹಿಸಿದ್ದ ಐಟಿ-ಬಿಟಿ ಸಚಿವ ಪ್ರಿಯಾಂಕ್ ಖರ್ಗೆ ಈ ಯೋಜನೆ ಮಹಿಳೆಯರಿಗೆ ಸೇರಿದ್ದು ಎಂದು ಹೇಳಿದರು ಮತ್ತು ಅವರ ನಿದರ್ಶನದಲ್ಲಿ ಮಹಿಳೆಯೊಬ್ಬರು ಯೋಜನೆಗೆ ಚಾಲನೆ ನೀಡಿದರು.

ಇದನ್ನೂ ಓದಿ: Gruha Lakshmi Launch Live: ದೇಶದಲ್ಲಿ ಇಷ್ಟು ದೊಡ್ಡ ಪ್ರಮಾಣದ ಯೋಜನೆ ಇಲ್ಲ: ಸಿಎಂ ಸಿದ್ದರಾಮಯ್ಯ

ನೆಲಮಂಗಲ: ಬೆಂಗಳೂರು ಗ್ರಾಮಾಂತರ ಜಿಲ್ಲೆಯ ನೆಲಮಂಗಲ ಟೌನ್ ಜಯದೇವ ಕಲ್ಯಾಣ ಮಂಟಪದಲ್ಲಿ ಆಯೋಜಿಸಿದ್ದ ಗೃಹಲಕ್ಷ್ಮಿ ಯೋಜನೆಗೆ ಚಾಲನೆ ನೀಡಲಾಗಿದೆ. ಶಾಸಕ ಶ್ರೀನಿವಾಸ್, ನಗರಸಭೆ ಅಧ್ಯಕ್ಷೆ ಲತಾ ಹೇಮಂತ್ ಕುಮಾರ್, ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ನಾಗರಾಜು ಸೇರಿದಂತೆ ಹಲವು ಗಣ್ಯರು ಸೇರಿದಂತೆ ಸಾವಿರಾರು ಮಹಿಳೆಯರು ಭಾಗಿಯಾಗಿದ್ದರು.

ಧಾರವಾಡ, ಬೆಳಗಾವಿ, ಕಾರವಾರ, ಕಲಬುರಗಿ, ರಾಯಚೂರು ಹಾಗೂ ಶಿವಮೊಗ್ಗ ಸೇರಿದಂತೆ ರಾಜ್ಯದ ಎಲ್ಲಾ ಜಿಲ್ಲೆಗಳಲ್ಲೂ ಗೃಹಲಕ್ಷ್ಮೀ ಯೋಜನೆಗೆ ಅದ್ದೂರಿ ಚಾಲನೆ ಸಿಕ್ಕಿದೆ. ಶಾಸಕರು-ಸಚಿವರು ಹಾಗೂ ಅಧಿಕಾರಿಗಳು ಯೋಜನೆಗೆ ಚಾಲನೆ ನೀಡಿದ್ದಾರೆ.

ರಾಜ್ಯದ ಮತ್ತಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ.

Published On - 4:21 pm, Wed, 30 August 23

ಪ್ರವಾಹದಲ್ಲಿ ಸಿಲುಕಿದ್ದ ಶಾಲಾ ಮಕ್ಕಳನ್ನು ಕಾಪಾಡಿದ ಮುಂಬೈ ಪೊಲೀಸರು
ಪ್ರವಾಹದಲ್ಲಿ ಸಿಲುಕಿದ್ದ ಶಾಲಾ ಮಕ್ಕಳನ್ನು ಕಾಪಾಡಿದ ಮುಂಬೈ ಪೊಲೀಸರು
ಮನೆಗೆ ಬಂದ ಶುಭಾಂಶು ಶುಕ್ಲಾಗೆ ಪ್ರಧಾನಿ ಮೋದಿಯಿಂದ ಅಪ್ಪುಗೆಯ ಸ್ವಾಗತ
ಮನೆಗೆ ಬಂದ ಶುಭಾಂಶು ಶುಕ್ಲಾಗೆ ಪ್ರಧಾನಿ ಮೋದಿಯಿಂದ ಅಪ್ಪುಗೆಯ ಸ್ವಾಗತ
ಜೈಲು ಚೆಕ್ ಪೋಸ್ಟ್ ಬಳಿ ವಿಜಯಲಕ್ಷ್ಮಿ ದರ್ಶನ್​ ಕಾರು ತಡೆದ ಜೈಲು ಸಿಬ್ಬಂದಿ
ಜೈಲು ಚೆಕ್ ಪೋಸ್ಟ್ ಬಳಿ ವಿಜಯಲಕ್ಷ್ಮಿ ದರ್ಶನ್​ ಕಾರು ತಡೆದ ಜೈಲು ಸಿಬ್ಬಂದಿ
ಧರ್ಮಸ್ಥಳ ಪ್ರಕರಣ ತನಿಖೆಯಲ್ಲಿ ಏನೇನಾಯ್ತು? ಗೃಹ ಸಚಿವ ಕೊಟ್ಟ ಮಾಹಿತಿ
ಧರ್ಮಸ್ಥಳ ಪ್ರಕರಣ ತನಿಖೆಯಲ್ಲಿ ಏನೇನಾಯ್ತು? ಗೃಹ ಸಚಿವ ಕೊಟ್ಟ ಮಾಹಿತಿ
ದರ್ಶನ್ ಇಲ್ಲದಿದ್ದರೂ ಈ ವರ್ಷವೇ ಬಿಡುಗಡೆ ಆಗುತ್ತಾ ‘ದಿ ಡೆವಿಲ್’ ಸಿನಿಮಾ?
ದರ್ಶನ್ ಇಲ್ಲದಿದ್ದರೂ ಈ ವರ್ಷವೇ ಬಿಡುಗಡೆ ಆಗುತ್ತಾ ‘ದಿ ಡೆವಿಲ್’ ಸಿನಿಮಾ?
ಅಲೆಗಳ ಅಬ್ಬರಕ್ಕೆ ಕಡಲ ತೀರಕ್ಕೆ ಬಂದ ಡಾಲ್ಫಿನ್ ಮೀನು
ಅಲೆಗಳ ಅಬ್ಬರಕ್ಕೆ ಕಡಲ ತೀರಕ್ಕೆ ಬಂದ ಡಾಲ್ಫಿನ್ ಮೀನು
ರಮ್ಯಾಗೆ ಅಶ್ಲೀಲ ಸಂದೇಶ ಕಳುಹಿಸಿದ ಎಲ್ಲರಿಗೂ ಇದೆ ಮಾರಿ ಹಬ್ಬ
ರಮ್ಯಾಗೆ ಅಶ್ಲೀಲ ಸಂದೇಶ ಕಳುಹಿಸಿದ ಎಲ್ಲರಿಗೂ ಇದೆ ಮಾರಿ ಹಬ್ಬ
ದಾರಿಯುಲ್ಲಿ ಹೋಗುತ್ತಿದ್ದ ವ್ಯಕ್ತಿಯ ಮುಖ ಕಚ್ಚಿದ ಬೀದಿ ನಾಯಿ
ದಾರಿಯುಲ್ಲಿ ಹೋಗುತ್ತಿದ್ದ ವ್ಯಕ್ತಿಯ ಮುಖ ಕಚ್ಚಿದ ಬೀದಿ ನಾಯಿ
ಬೆಂಗಳೂರು: ಮೂರು ತಿಂಗಳಲ್ಲಿ ಮತ್ತೆ ಹೆಬ್ಬಾಳ ಫ್ಲೈಓವರ್ ವಿಸ್ತರಣೆ
ಬೆಂಗಳೂರು: ಮೂರು ತಿಂಗಳಲ್ಲಿ ಮತ್ತೆ ಹೆಬ್ಬಾಳ ಫ್ಲೈಓವರ್ ವಿಸ್ತರಣೆ
ಸಿಎಂ ವಿರುದ್ಧ ಕೊಲೆ ಮಾಡಿದ ಆರೋಪ, ಎಸ್​ಐಟಿ ರಚಿಸ್ತೀರಾ: ಅಶೋಕ್ ಪ್ರಶ್ನೆ
ಸಿಎಂ ವಿರುದ್ಧ ಕೊಲೆ ಮಾಡಿದ ಆರೋಪ, ಎಸ್​ಐಟಿ ರಚಿಸ್ತೀರಾ: ಅಶೋಕ್ ಪ್ರಶ್ನೆ