ದೇಶದ ಸುದ್ದಿ ಮಾಧ್ಯಮ ಜಗತ್ತಿನಲ್ಲಿ ಮುಕುಟಪ್ರಾಯವಾಗಿರುವ ಟಿವಿ9 ನೆಟ್ವರ್ಕ್ಗೆ ಮತ್ತೊಂದು ಗರಿ ಮೂಡಿದೆ. ಟಿವಿ9 ನೆಟ್ವರ್ಕ್ ಚಾನೆಲ್ಗಳ ಯೂಟ್ಯೂಬ್ ವಿಡಿಯೋ ವೀಕ್ಷಣೆ ಸಂಖ್ಯೆ ದೇಶದಲ್ಲಿ ನಂಬರ್ 1 ಸ್ಥಾನ ಅಲಂಕರಿಸಿದೆ. ಯೂಟ್ಯೂಬ್ ಕಾಮ್ಸ್ಕೋರ್ ರೇಟಿಂಗ್ನಲ್ಲಿ ಇತರೆ ಚಾನೆಲ್ಗಳಿಂದ ಅಗಾಧವಾಗಿ ಬೆಳೆದುನಿಂತಿದೆ ಟಿವಿ9 ನೆಟ್ವರ್ಕ್.
ಜೂನ್ ತಿಂಗಳ ಕಾಮ್ಸ್ಕೋರ್ ವರದಿಯ ಪ್ರಕಾರ ಟಿವಿ9 ನೆಟ್ವರ್ಕ್ನ (TV9 Network) ಒಟ್ಟು 6 ಭಾಷೆಗಳಲ್ಲಿ ಹೊರಬರುತ್ತಿರುವ ಸಮಗ್ರ ಯೂಟ್ಯೂಬ್ ವಿಡಿಯೋಗಳ ಒಟ್ಟು ವೀಕ್ಷಣೆ ಸಂಖ್ಯೆ 680 ಮಿಲಿಯನ್. ಕಳೆದ ಮೂರು ತಿಂಗಳಿನಿಂದ ಏರುಗತಿಯಲ್ಲಿ ಸಾಗಿದ್ದ ಟಿವಿ9 ನೆಟ್ವರ್ಕ್ ಬಳಗದ ಯೂಟ್ಯೂಬ್ ವಿಡಿಯೋಗಳ (Youtube Videos No.1) ಒಟ್ಟು ವೀಕ್ಷಣೆ ಜೂನ್ ತಿಂಗಳಲ್ಲಿ ನಂಬರ್ 1 ಸ್ಥಾನಕ್ಕೆ ಹೈ ಜಂಪ್ ಮಾಡಿದೆ. ಈ ಬಗ್ಗೆ ಟಿವಿ 9 ಗ್ರೂಪ್ ಸಿಇಒ ಬರುನ್ ದಾಸ್ (TV9 Group CEO Barun Das) ಟ್ವೀಟ್ ಮಾಡಿ ಸಂತಸ ಹಂಚಿಕೊಂಡಿದ್ದಾರೆ.
ಈ ಮಧ್ಯೆ, ಭಾರತದ ಅತ್ಯಂತ ದೊಡ್ಡಸುದ್ದಿ ಪ್ರಸಾರಕರ ಒಕ್ಕೂಟವಾದ ರಾಷ್ಟ್ರೀಯ ಸುದ್ದಿ ಪ್ರಸಾರಕರ ಒಕ್ಕೂಟಕ್ಕೆ(News Broadcasters Federation- NBF) ಟಿವಿ9 ನೆಟ್ವರ್ಕ್ ಸೇರ್ಪಡೆಗೊಂಡಿದೆ. ಟಿವಿ 9 ಗ್ರೂಪ್ ಸಿಇಒ ಬರುನ್ ದಾಸ್ ಅವರು ಎನ್ಬಿಎಫ್ ಆಡಳಿತ ಮಂಡಳಿ (NBF Governing Board) ಉಪಾಧ್ಯಕ್ಷರಾಗಿ ನೇಮಕಗೊಂಡಿರುವುದು ಸಂತಸ ವಿಚಾರವಾಗಿದೆ.
ಇನ್ನು ಕನ್ನಡದ ಮಟ್ಟಿಗೆ ಹೇಳುವುದಾರೆ ಟಿವಿ9 ಕನ್ನಡ ಯೂಟ್ಯೂಬ್ ಚಾನೆಲ್ ಮತ್ತು ವೆಬ್ಸೈಟ್ ಸಹ ನಂಬರ್ 1 ಸ್ಥಾನದಲ್ಲಿ ವಿಜೃಂಭಿಸುತ್ತಿದ್ದು, ಸಮೀಪದ ಪ್ರತಿಸ್ಪರ್ಧಿಗಳಿಂದ ಭಾರೀ ಅಂತರವನ್ನು ಕಾಯ್ದುಕೊಂಡಿದೆ.
Also Read:
NBF: ರಾಷ್ಟ್ರೀಯ ಸುದ್ದಿ ಪ್ರಸಾರಕರ ಒಕ್ಕೂಟಕ್ಕೆ ಸೇರ್ಪಡೆಗೊಂಡ ಟಿವಿ9 ಸಮೂಹ
TV9 Kannada: ಡಿಜಿಟಲ್ ಮಾಧ್ಯಮ ಕ್ಷೇತ್ರದಲ್ಲಿ ಟಿವಿ9 ಕನ್ನಡ ಅಗ್ರಸ್ಥಾನ, ಸಮಸ್ತ ಕನ್ನಡಿಗರಿಗೆ ಧನ್ಯವಾದ
WOW!! TV9 Network emerges No. 1 in video views on Youtube as per June Comscore report. 680 MN VIEWS! I am sure some friends will start burning midnight oil strategising how to stall Comscore ratings! pic.twitter.com/NVdg7U7iMU
— Barun Das (@justbarundas) August 20, 2021
(Great news Tv9 network emerges no.1 as Videos views in Youtube June Comscore report)