Karnataka Budget 2023: ನನಸಾಯಿತು ಡಿಕೆ ಶಿವಕುಮಾರ್​ ಕನಸು; ಕನಕಪುರದಲ್ಲಿ ಹೊಸ ವೈದ್ಯಕೀಯ ಕಾಲೇಜು ಸ್ಥಾಪನೆಗೆ ಬಜೆಟ್​​ನಲ್ಲಿ ಅಸ್ತು

ಉಪಮುಖ್ಯಮಂತ್ರಿ ಡಿಕೆ ಶಿವಕುಮಾರ್​ ಅವರ ಕನಸಾಗಿದ್ದ ಕನಕಪುರದಲ್ಲಿ ವೈದ್ಯಕೀಯ ಕಾಲೇಜು ಸ್ಥಾಪನೆ ನನಸಾಗಿದೆ. ಕನಕಪುರದಲ್ಲಿ ಹೊಸ ವೈದ್ಯಕೀಯ ಕಾಲೇಜು ಸ್ಥಾಪನೆ 2023-24ನೇ ಸಾಲಿನ ಬಜೆಟ್​ನಲ್ಲಿ ಗ್ರೀನ್​ ಸಿಗ್ನಲ್​ ಸಿಕ್ಕಿದೆ.

Karnataka Budget 2023: ನನಸಾಯಿತು ಡಿಕೆ ಶಿವಕುಮಾರ್​ ಕನಸು; ಕನಕಪುರದಲ್ಲಿ ಹೊಸ ವೈದ್ಯಕೀಯ ಕಾಲೇಜು ಸ್ಥಾಪನೆಗೆ ಬಜೆಟ್​​ನಲ್ಲಿ ಅಸ್ತು
ಡಿಕೆ ಶಿವಕುಮಾರ್
Follow us
| Updated By: ವಿವೇಕ ಬಿರಾದಾರ

Updated on:Jul 07, 2023 | 3:58 PM

ಬೆಂಗಳೂರು: ಉಪಮುಖ್ಯಮಂತ್ರಿ ಡಿಕೆ ಶಿವಕುಮಾರ್ (DK Shivakumar)​ ಅವರ ಕನಸಾಗಿದ್ದ ಕನಕಪುರದಲ್ಲಿ ವೈದ್ಯಕೀಯ ಕಾಲೇಜು ಸ್ಥಾಪನೆ ನನಸಾಗಿದೆ. 2023-24ನೇ ಸಾಲಿನ ಬಜೆಟ್ (​Karnataka Budget 2023) ಮಂಡಿಸಿದ ಮುಖ್ಯಮಂತ್ರಿ ಸಿದ್ದರಾಮಯ್ಯ (Siddaramaiah) ಅವರು ರಾಜೀವ್‌ ಗಾಂಧಿ ಆರೋಗ್ಯ ವಿಜ್ಞಾನಗಳ ವಿಶ್ವವಿದ್ಯಾಲಯದ ವತಿಯಿಂದ ರಾಮನಗರ ಜಿಲ್ಲೆಯ ಕನಕಪುರ (Kanakapura) ತಾಲ್ಲೂಕಿನಲ್ಲಿ ಒಂದು ಹೊಸ ವೈದ್ಯಕೀಯ ಕಾಲೇಜನ್ನು ಸ್ಥಾಪಿಸಲಾಗುವುದು ಎಂದು ಹೇಳಿದರು.

ಈ ಹಿಂದೆ ಕನಕಪುರಕ್ಕೆ ಜಾರಿಯಾಗಿದ್ದ ಮೆಡಿಕಲ್​ ಕಾಲೇಜ್​ನ್ನು ಚಿಕ್ಕಬಳ್ಳಾಪುರಕ್ಕೆ ಬಿಎಸ್​ ಯಡಿಯೂರಪ್ಪ ನೇತೃತ್ವದ ಬಿಜೆಪಿ ಸರ್ಕಾರ ಸ್ಥಳಾಂತರಿಸಿತ್ತು. ಇದಾದ ನಂತರ ಕೆರಳಿದ್ದ ಡಿಕೆ ಬ್ರದರ್ಸ್​​​ ಕನಕಪುರಕ್ಕೆ ಮೆಡಿಕಲ್​ ಕಾಲೇಜು ತಂದೇ ತರುತ್ತೇವೆ ಎಂದು ಶಪಥಗೈದಿದ್ದರು. ಅದರಂತೆ ಇದೀಗ ಬಜೆಟ್​​ನಲ್ಲಿ ಕನಕಪುರಕ್ಕೆ ಮೆಡಿಕಲ್​ ಕಾಲೇಜು ದೊರೆತಿದೆ.

ಚಿಕ್ಕಬಳ್ಳಾಪುರಕ್ಕೆ ಎತ್ತಂಗಡಿ ನಂತರ ರಾಜಕೀಯ ಕೆಸೆರಚಾಟ

2019ರಲ್ಲಿ ಚಿಕ್ಕಬಳ್ಳಾಪುರಕ್ಕೆ ಮೆಡಿಕಲ್​ ಕಾಲೇಜು ಎತ್ತಂಗಡಿಯಾದ ನಂತರ ಕೆರಳಿದ್ದ ಡಿಕೆ ಶಿವಕುಮಾರ್​ ನನ್ನ ಪ್ರಾಣ ಹೋದರೂ ಪರವಾಗಿಲ್ಲ, ಮೆಡಿಕಲ್​​ ಕಾಲೇಜು ಮಾತ್ರ ಕೊಡಲ್ಲ ಎಂದಿದ್ದರು. ಇದು ಬಸವಣ್ಣನ ನಾಡು. ಆದರೆ ಬಿಎಸ್​ ಯಡಿಯೂರಪ್ಪ ಅವರು ಅಧಿಕಾರಕ್ಕೆ ಬಂದ ನಂತರ ಮೊದಲ ಕೆಲಸ ಮಾಡಿರುವುದು ಮೆಡಿಕಲ್​ ಕಾಲೇಜು ಸ್ಥಳಾಂತರ ಎಂದು ಕಿಡಿಕಾರಿದ್ದರು.

ಇದನ್ನೂ ಓದಿ: ಬೆಂಗಳೂರಿಗೆ ಬಂಪರ್ ಕೊಡುಗೆ ನೀಡಿದ ಸಿಎಂ ಸಿದ್ದರಾಮಯ್ಯ

ಇತ್ತೀಚಿಗೆ ನಡೆದ ವಿಧಾನಸಭೆ ಚುನಾವಣೆಯಲ್ಲಿ ಡಿಕೆ ಶಿವಕುಮಾರ್​ ಅಭೂತಪೂರ್ವ ಗೆಲವು ಸಾಧಿಸಿದ ನಂತರ ಪ್ರಥಮಬಾರಿಗೆ ತವರು ಕ್ಷೇತ್ರಕ್ಕೆ ಹೋದ ಸಂದರ್ಭದಲ್ಲಿ “ಈ ಹಿಂದೆ ಮೆಡಿಕಲ್​ ಕಾಲೇಜು ಆಗಬೇಕಿತ್ತು. ಬೊಮ್ಮಾಯಿ, ಯಡಿಯೂರಪ್ಪನವರು ಕ್ಯಾನ್ಸಲ್​ ಮಾಡಿ ಚಿಕ್ಕಬಳ್ಳಾಪುರಕ್ಕೆ ತೆಗೆದುಕೊಂಡು ಹೋದರು. ಈಗ ಸಿಎಂಗೆ ಹೇಳಿ ಕ್ಯಾಬಿನೆಟ್​ಗೆ ವಾಪಸ್​ ತರಸಿದ್ದೇನೆ ಎಂದು ಹೇಳಿದ್ದರು.

ಕೆ. ಸುಧಾಕರನ್ನ ಕಿಚಾಯಿಸಿದ್ದ ಡಿಕೆ ಸುರೇಶ್​

ನಮ್ಮ ಜಿಲ್ಲಿಗೆ ಬಂದಿದ್ದ ಮೆಡಿಕಲ್​ ಕಾಲೇಜ್​​ ಅನ್ನು ಸುಧಾಕರ್​ ಅವರು ಚಿಕ್ಕಬಳ್ಳಾಪುರಕ್ಕೆ ಕಿತ್ತುಕೊಂಡು ಹೋದರು. ಮೊದಲು ನಮ್ಮ ಜೊತೆಗೆ ಇದ್ದ ಅವರು ಕಿತ್ತಾಡಿಕೊಂಡು ಬೇರೆ ಕಡೆಗೆ ಹೋದರು. ಮುಂದೆ ಅವರನ್ನೇ ಕರೆದು ಇಲ್ಲಿ ಮೆಡಿಕಲ್​​ ಕಾಲೇಜು ಶಂಕುಸ್ಥಾಪನೆ ಮಾಡಿಸಬೇಕು ಎಂಬುವುದು ನನ್ನ ಆಸೆಯಾಗಿದೆ. ಅವರು ಕಿತ್ತುಕೊಂಡು ಹೋಗಿರುವುದನ್ನು ಅವರಿಂದಲೇ ಸ್ಥಾಪಿಸಬೇಕು ಎಂಬ ಇಚ್ಛೆ ಇದೆ ಎಂದು ಕಿಚಾಯಿಸಿದ್ದರು.

ರಾಜ್ಯದ ಮತ್ತಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ

Published On - 1:43 pm, Fri, 7 July 23