ಗೃಹಜ್ಯೋತಿ ಯೋಜನೆ: ಆಗಸ್ಟ್ನಿಂದ ಗ್ರಾಹಕರ ಕೈಸೇರಲಿದೆ ಶೂನ್ಯ ವಿದ್ಯುತ್ ಬಿಲ್
ಕರ್ನಾಟಕ ಕಾಂಗ್ರೆಸ್ ಸರ್ಕಾರದ ಮಹತ್ವದ ಗೃಹಜ್ಯೋತಿ ಯೋಜನೆ ಜುಲೈ ತಿಂಗಳಿನಿಂದ ಆರಂಭವಾಗಿದ್ದು, ಆಗಸ್ಟ್ ತಿಂಗಳಿನಿಂದ ಗ್ರಾಹಕರ ಮನೆಬಾಗಿಲಿಗೆ ಶೂನ್ಯ ವಿದ್ಯುತ್ ಬಿಲ್ ಬರಲಿದೆ.
ಬೆಂಗಳೂರು, ಜುಲೈ 29: ರಾಜ್ಯ ಕಾಂಗ್ರೆಸ್ ಸರ್ಕಾರದ ಮಹತ್ವದ ಗೃಹಜ್ಯೋತಿ ಯೋಜನೆ (Gruha Jyothi Scheme) ಜುಲೈ ತಿಂಗಳಿನಿಂದ ಆರಂಭವಾಗಲಿದ್ದು, ಆಗಸ್ಟ್ ತಿಂಗಳಲ್ಲಿ ಶೂನ್ಯ ಬಿಲ್ ಪಡೆಯಲು ಗ್ರಾಹಕರು ಕಾತರರಾಗಿದ್ದಾರೆ. ಜೂನ್ 25 ರ ಒಳಗಾಗಿ ಅರ್ಜಿ ಸಲ್ಲಿಕೆ ಮಾಡಿರುವ ಫಲಾನುಭವಿಗಳಿಗೆ ಮಾತ್ರ ಉಚಿತ ವಿದ್ಯುತ್ನ ಲಾಭ ದೊರೆಯಲಿದೆ.
ಗೃಹಜ್ಯೋತಿ ಯೋಜನೆಗೆ 1,18,50, 474 ಫಲಾನುಭವಿಗಳು ಅರ್ಜಿ ಸಲ್ಲಿಸಿದ್ದಾರೆ. ಅಂದರೆ ಎರಡೂವರೆ ಕೋಟಿ ಫಲಾನಿಭವಿಗಳ ಪೈಕಿ ಶೇ.60 ರಷ್ಟು ಮಾತ್ರ ಜನರು ಅರ್ಜಿ ಸಲ್ಲಿಸಿದ್ದಾರೆ. ಇನ್ನು ಶೇ.40 ರಷ್ಟು ಗ್ರಾಹಕರು ಅರ್ಜಿ ಸಲ್ಲಿಸಲು ಬಾಕಿ ಉಳಿದಿದ್ದರು. ಜುಲೈ 25 ರ ನಂತರ ಅರ್ಜಿ ಸಲ್ಲಿದ ಫಲಾನುಭವಿಗಳಿಗೆ ಈ ಯೋಜನೆಯ ಲಾಭ ಸೆಪ್ಟೆಂಬರ್ ತಿಂಗಳಲ್ಲಿ ಸಿಗಲಿದೆ.
ಗೃಹಜ್ಯೋತಿ ಅರ್ಜಿ ಸಲ್ಲಿಸಲು ಆಗುತ್ತಿರುವ ಸಮಸ್ಯೆಗಳು
- ಆರ್.ಆರ್ ನಂಬರನಲ್ಲಿರುವ ಹೆಸರು, ಆಧಾರ್ ಹೆಸರು ಹೊಂದಾಣಿಕೆ ಆಗದೇ ಇರುವುದು
- ಶೇಕಡಾ 25ರಷ್ಟು ಕರೆಂಟ್ ಮೀಟರ್ ಪೂರ್ವಿಕರ ಹೆಸರಲ್ಲಿರಲಿದ್ದು, ಈ ಪೈಕಿ ಸಾವನ್ನಪ್ಪಿದವರ ಹೆಸರಿನ ಸಂಖ್ಯೆಯೇ ಹೆಚ್ಚಿದೆ. ಹೀಗಾಗಿ ಮೀಟರ್ ಹೆಸರು ಬದಲಾಯಿಸಲು ಅರ್ಜಿ ಸಂಖ್ಯೆಯಲ್ಲಿ ಹೆಚ್ಚಳವಾಗಿದೆ
- ಆಧಾರ್ಗೆ ನೀಡಿರುವ ಮೊಬೈಲ್ ಸಂಖ್ಯೆ ಅಲಭ್ಯವಾಗಿರುವುದು
- ಬಹುತೇಕ ಜನರು ಮಾಲೀಕರು ಅಂತನೇ ಅರ್ಜಿ ಸಲ್ಲಿಕೆಗೆ ಕಾಯುತ್ತಿದ್ದಾರೆ
- ಎಸ್ಕಾಂಗಳಿಗೆ ಕೊಡಲೇ ಗ್ರಾಹಕರ ಹೆಸರು ಬದಲಾವಣೆಗೆ ಅಸಾಧ್ಯ
- ಉಚಿತ ವಿದ್ಯುತ್ ಪಡೆಯಲು ಹೋಗಿ ಮನೆ ಮಾಲೀಕರಿಗೆ ಅನುಮಾನ ಬಂದರೇ ಎಂಬ ಆತಂಕ
- ಕೆಲವು ಗ್ರಾಹಕರು 200 ಯೂನಿಟ್ಗಿಂತ ಹೆಚ್ಚು ಬಳಕೆ ಮಾಡುತ್ತಿದ್ದಾರೆ
- ಸರ್ಕಾರಿ ಅಧಿಕಾರಿಗಳು ಹಾಗೂ ಶ್ರೀಮಂತರು ಅರ್ಜಿ ಸಲ್ಲಿಸಲ್ಲ
- 40 ಯೂನಿಟ್ ಒಳಗೆ ಬಳಸುವ ಅತಿ ಕಡು ಬಡವರಿಗೆ ಈಗಾಗಲೇ ಸರ್ಕಾರದ ಉಚಿತ ಕರೆಂಟ್ ನೀಡಲಾಗಿದೆ
ಇದನ್ನೂ ಓದಿ: Gruha Jyothi Scheme: ಹಿಂಬಾಕಿ ಉಳಿಸಿಕೊಂಡಿದ್ದರೂ ಗೃಹಜ್ಯೋತಿ ಪ್ರಯೋಜನ ಪಡೆಯಬಹುದು: ಬೆಸ್ಕಾಂ
ಪರಿಹಾರವೇನು?
- ಸದ್ಯಕ್ಕೆ ಮನೆ ಮಾಲೀಕರೂ ಅಂತನೇ ಅರ್ಜಿ ಸಲ್ಲಿಸುವ ಅವಶ್ಯಕತೆಯಿಲ್ಲ
- ಮನೆ ಮಾಲೀಕರು ಲಾಭ ಪಡೆಯಲು ಅರ್ಜಿ ಸಲ್ಲಿಕೆ ವೇಳೆ ಇತರ ಆಯ್ಕೆ ಬಳಸಿಕೊಳ್ಳಬಹುದು
- ತಾತ್ಕಲಿಕವಾಗಿ ಬಾಡಿಗೆದಾರರು ಹಾಗೂ ಸಂಬಂಧಿಗಳು ಅಂತ ಅರ್ಜಿ ಸಲ್ಲಿಸಬಹುದು
- ಮುಂದಿನ ದಿನದಲ್ಲಿ ಆರ್ಆರ್ ನಂಬರ್ ಬದಲಾವಣೆ ನಂತರ ಮಾಲೀಕ ಅಂತ ಬದಲಾಯಿಸಬಹುದು
- ಬಾಡಿಗೆದಾರರು ಆಧಾರ್ ಲಿಂಕ್ ಆಗದಿದ್ದರೆ ಮನೆಯ ಇತರ ಸದಸ್ಯರ ಹೆಸರಿನ ಮೂಲಕವೂ ಅರ್ಜಿ ಸಲ್ಲಿಸಬಹುದು
ರಾಜ್ಯದ ಮತ್ತಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ
Published On - 3:16 pm, Sat, 29 July 23