ಸಶಸ್ತ್ರ ಸಂಘರ್ಷ ಕೊನೆಗೊಳಿಸಿದ ಐತಿಹಾಸಿಕ ಸಾಧನೆಯ ಮಹತ್ವದ ಘಳಿಗೆ: ಈ ಶಾಂತಿ ಪ್ರಕ್ರಿಯೆಯಲ್ಲಿ ಗುರುದೇವರು
ಕೊಲಂಬಿಯಾದ ಬೊಗೋಟಾದ ಐಕಾನಿಕ್ ಪ್ಲಾಜಾ ಲಾ ಸಂತಾ ಮಾರಿಯಾದಲ್ಲಿ ಸಾವಿರಾರು ಜನರು ಜಮಾಯಿಸಿ, ಗುರುದೇವ ಶ್ರೀ ಶ್ರೀ ರವಿ ಶಂಕರ್ ರವರೊಂದಿಗೆ 11ನೇ ಅಂತರರಾಷ್ಟ್ರೀಯ ಯೋಗ ದಿನವನ್ನು ಅತ್ಯಂತ ಆತ್ಮೀಯವಾಗಿ ಆಚರಿಸಿದರು. ಈ ವರ್ಷದ ಉತ್ಸವಕ್ಕೆ ವಿಶೇಷ ಮಹತ್ವವಿತ್ತು—ಇದು ಕೊಲಂಬಿಯಾ ದೇಶಕ್ಕೆ ಶಾಂತಿ ದೊರೆತು ನಿಖರವಾಗಿ ಹತ್ತನೇ ವರ್ಷ.

ಕೊಲಂಬಿಯಾದ ಬೊಗೋಟಾದ ಐಕಾನಿಕ್ ಪ್ಲಾಜಾ ಲಾ ಸಂತಾ ಮಾರಿಯಾದಲ್ಲಿ ಸಾವಿರಾರು ಜನರು ಜಮಾಯಿಸಿ, ಗುರುದೇವ ಶ್ರೀ ಶ್ರೀ ರವಿ ಶಂಕರ್ ರವರೊಂದಿಗೆ 11ನೇ ಅಂತರರಾಷ್ಟ್ರೀಯ ಯೋಗ ದಿನವನ್ನು ಅತ್ಯಂತ ಆತ್ಮೀಯವಾಗಿ ಆಚರಿಸಿದರು. ಈ ವರ್ಷದ ಉತ್ಸವಕ್ಕೆ ವಿಶೇಷ ಮಹತ್ವವಿತ್ತು. ಇದು ಕೊಲಂಬಿಯಾ ದೇಶಕ್ಕೆ ಶಾಂತಿ ದೊರೆತು ನಿಖರವಾಗಿ ಹತ್ತನೇ ವರ್ಷ. ಹತ್ತು ವರ್ಷಗಳ ಹಿಂದೆ, ಕೊಲಂಬಿಯಾ ಸರ್ಕಾರ ಮತ್ತು ಫಾರ್ಕ್ (FARC) ಗೆರಿಲ್ಲಾ ಗುಂಪು ಶಾಂತಿ ಒಪ್ಪಂದಕ್ಕೆ ಸಹಿ ಹಾಕಿ, ದಶಕಗಳ ಕಾಲದ ಸಶಸ್ತ್ರ ಸಂಘರ್ಷವನ್ನು ಕೊನೆಗೊಳಿಸಿದ ಐತಿಹಾಸಿಕ ಸಾಧನೆಯ ಮಹತ್ವದ ಘಳಿಗೆ ಇದಾಗಿತ್ತು. ಈ ಶಾಂತಿ ಪ್ರಕ್ರಿಯೆಯಲ್ಲಿ ಗುರುದೇವರು ಪ್ರಮುಖ ಪಾತ್ರವಹಿಸಿದ್ದರು.
ಬೊಗೋಟಾದ ಯೋಗ ದಿನಾಚರಣೆಯಲ್ಲಿ ಸಭೆಯನ್ನು ಉದ್ದೇಶಿಸಿ ಮಾತನಾಡಿದ ಗುರುದೇವರು, “ನಾವು ಯೋಗವನ್ನು ಕೇವಲ ದೈಹಿಕ ವ್ಯಾಯಾಮ ಎಂದು ತಪ್ಪಾಗಿ ಗ್ರಹಿಸಬಾರದು. ಅದು ನಮ್ಮ ಮನಸ್ಸಿನ ಸ್ಥಿತಿ” ಎಂದು ನೆನಪಿಸಿದರು. ಸಾಮಾನ್ಯ ಯೋಗ ಶಿಷ್ಟಾಚಾರವನ್ನು ರಚಿಸಿದ ಮೊದಲ ಸಮಿತಿಯ ಅಧ್ಯಕ್ಷತೆಯನ್ನು ಗುರುದೇವರು ವಹಿಸಿದ್ದರು. ಗುರುದೇವರು ನೀಡಿರುವ ಜಾಗತಿಕ ಕೊಡುಗೆಗಳಲ್ಲಿ ಒಂದಾಗಿರುವ ಇದು ಬಹುಮಂದಿಗೆ ತಿಳಿಯದ ವಿಚಾರ. ಈಗ ಪ್ರಪಂಚದಾದ್ಯಂತ ಅನುಸರಿಸಲಾಗುತ್ತಿರುವ ಸಮಗ್ರ ಅನುಕ್ರಮವಾದ, ಸಾಮಾನ್ಯ ಯೋಗ ಶಿಷ್ಟಾಚಾರ (ಕಾಮನ್ ಯೋಗ ಪ್ರೋಟೋಕಾಲ್) ರಚಿಸಿದ್ದು ಇದೇ ಸಮಿತಿ ಎಂದರು.
“ವಿಶ್ವದ ಜನಸಂಖ್ಯೆಯ ಕನಿಷ್ಠ ಮೂರನೇ ಒಂದು ಭಾಗದಷ್ಟು ಜನರು ಈಗ ಈ ಪ್ರೋಟೋಕಾಲ್ ಅನುಸರಿಸುತ್ತಿದ್ದಾರೆ ಎಂದು ನನಗೆ ತುಂಬಾ ಸಂತೋಷವಾಗಿದೆ. ಆದರೆ ಮಾನಸಿಕ ಆರೋಗ್ಯದ ಕ್ಷೇತ್ರದಲ್ಲಿ ನಮ್ಮ ಕೆಲಸ ಇಲ್ಲಿಗೆ ಮುಕ್ತಾಯವಾಗಿಲ್ಲ — ಇದು ಪ್ರಾರಂಭವಷ್ಟೇ,” ಎಂದು ಗುರುದೇವ್ ಹೇಳಿದರು.
ಈ ಕಾರ್ಯಕ್ರಮದಲ್ಲಿ ಉಪಸ್ಥಿತರಾಗಿದ್ದ ಬೊಗೋಟಾದ ಸಂಸ್ಕೃತಿ ಸಚಿವಾಲಯದ, ಸಂಸ್ಕೃತಿ ಮತ್ತು ಸಾಂಸ್ಕೃತಿಕ ಜ್ಞಾನ ನಿರ್ವಹಣಾ ವೀಕ್ಷಣಾಲಯದ ನಿರ್ದೇಶಕರು, “ಕಳೆದ ಕೆಲವು ವಾರಗಳಲ್ಲಿ ದೇಶದಲ್ಲಿ ಹೆಚ್ಚಾದ ಉದ್ವಿಗ್ನತೆಯ ನಡುವೆ, ಈ ದಿನಾಚರಣೆಯು, ನಮ್ಮ ಮನಸ್ಸಿನ ಹೊರೆಯನ್ನು ಕಡಿಮೆ ಮಾಡಲು ಹಾಗೂ ಬೊಗೋಟಾದ ಎಲ್ಲಾ ಜನರಿಗೆ ಸಕಾರಾತ್ಮಕ ಸಂದೇಶವನ್ನು ಕಳುಹಿಸಲು ಸೂಕ್ತ ಸಮಯದಲ್ಲಿ ಬಂದಿದೆ” ಎಂದು ಅಭಿಪ್ರಾಯಪಟ್ಟರು.
2015ರಲ್ಲಿ, ಬಹುತೇಕ ಅಸಾಧ್ಯವೆಂದು ಭಾವಿಸಲಾದ ಕೆಲಸವನ್ನು ಗುರುದೇವರು ಕೈಗೊಂಡರು. ಸುಮಾರು ಐವತ್ತು ವರ್ಷಗಳ ಕಾಲ, FARC ಬಂಡುಕೋರರು ಮತ್ತು ಕೊಲಂಬಿಯಾದ ಸರ್ಕಾರದ ನಡುವೆ ಘೋರ ಯುದ್ಧ ನಡೆಯುತ್ತಿತ್ತು. ಎರಡೂ ಕಡೆಯ ನಡುವಿನ ಅಪನಂಬಿಕೆ ಉತ್ತುಂಗದಲ್ಲಿದ್ದಾಗ ಮತ್ತು ಬಹು ಕದನ ವಿರಾಮಗಳು ವಿಫಲವಾದ ಸಮಯದಲ್ಲಿ, ಗುರುದೇವರು ಫಾರ್ಕ್ ನಾಯಕರೊಂದಿಗೆ ಮೂರು ದಿನಗಳ ಸಂವಾದ ನಡೆಸಿ, ಅಹಿಂಸೆಯ ಮಾರ್ಗ ಸ್ವೀಕರಿಸುವಂತೆ ಮತ್ತು ದೇಶದ ಭವಿಷ್ಯಕ್ಕಾಗಿ ವಿಶಾಲ ದೃಷ್ಟಿಕೋನವನ್ನು ಅಳವಡಿಸಿಕೊಳ್ಳುವಂತೆ ಅವರನ್ನು ಒತ್ತಾಯಿಸಿದರು. ಈ ಸಂವಾದವು ಫಲಕಾರಿಯಾಗಿ, ಫಾರ್ಕ್ ಒಂದು ವರ್ಷದ ಏಕಪಕ್ಷೀಯ ಕದನ ವಿರಾಮವನ್ನು ಘೋಷಿಸಿತು —ಆ ವರ್ಷದ ಕೊನೆಯಲ್ಲಿ ಅಂತಿಮ ಒಪ್ಪಂದಕ್ಕೆ ದಾರಿ ಮಾಡಿಕೊಟ್ಟ ಅಭೂತಪೂರ್ವ ಹೆಜ್ಜೆ ಇದು.
ಇಂದು, ದಶಕದ ನಂತರ, ಗುರುದೇವರು ಕೊಲಂಬಿಯಾಕ್ಕೆ ಹಿಂದಿರುಗಿದ್ದು ಕೇವಲ ಇದರ ಸ್ಮರಣಾರ್ಥವಾಗಿಯಲ್ಲ; ಹೆಚ್ಚು ಶಾಂತಿಯುತ ಮತ್ತು ಒಗ್ಗಟ್ಟಿನ ದಕ್ಷಿಣ ಅಮೆರಿಕದ ಹೊಸ ದೃಷ್ಟಿಕೋನವನ್ನು ನೀಡಲು ಬಂದಿದ್ದಾರೆ. ಬೊಗೋಟಾ, ಮೆಡೆಲಿನ್ ಹಾಗೂ ಕಾರ್ಟಾಜೆನಾದಲ್ಲಿ, ಸಂಸದರು, ಉದ್ಯಮಿಗಳು ಹಾಗೂ ಶಿಕ್ಷಣ ತಜ್ಞರನ್ನು ಭೇಟಿಯಾಗಿ, ಅನೇಕರಿಗೆ ಧ್ಯಾನದ ಆಳವಾದ ಅನುಭವವನ್ನು ಪರಿಚಯಿಸಿದರು. ಕೊಲಂಬಿಯಾ ಸಂಸತ್ತಿನಲ್ಲಿಯೂ ಅವರು ಭಾಷಣ ನೀಡಿ, “ದುಃಖದಿಂದ ಮುಕ್ತವಾದ ಜಗತ್ತು, ಹೆಚ್ಚು ಪ್ರೀತಿಯ, ಸಂತೋಷದಾಯಕ ಮತ್ತು ಶಾಂತಿಯುತವಾದ ಜಗತ್ತು – ಇದು ಅಸಾಧ್ಯವೆನ್ನಿಸಬಹುದು, ಆದರೆ ಪ್ರತಿ ಬದಲಾವಣೆ ಕನಸಿನಿಂದಲೇ ಪ್ರಾರಂಭವಾಗುತ್ತದೆ. ನಾವು ಈ ಕನಸು ಕಾಣತೊಡಗಿದಲ್ಲಿ, ಖಂಡಿತವಾಗಿಯೂ ಅದನ್ನು ನನಸಾಗಿಸಬಹುದು” ಎಂದರು.
ಜೂನ್ 20ರಂದು, ಗುರುದೇವರಿಗೆ, ಅವರ ಶಿಸ್ತು, ಸಮರ್ಪಣೆ ಮತ್ತು ಉತ್ತಮ ಸಮಾಜವನ್ನು ನಿರ್ಮಿಸಲು ಅಚಲ ಕೊಡುಗೆಗಾಗಿ, ಕೊಲಂಬಿಯಾದ ಅತ್ಯುನ್ನತ ಗೌರವಗಳಲ್ಲಿ ಒಂದಾದ ‘ಬೊಲಿವರ್ ಗವರ್ನರೇಟ್ ಸಿವಿಲ್ ಮೆರಿಟ್ ಪದಕ’ವನ್ನು ನೀಡಿ ಗೌರವಿಸಲಾಯಿತು. ಕಾರ್ಟಾಜೆನಾ ಡಿ ಇಂಡಿಯಾಸ್‌ನ ಮೇಯರ್ ಡುಮೆಕ್ ಟರ್ಬೆ ಪಾಜ್ ಸಹ, ಜಗತ್ತಿನಲ್ಲಿ ಶಾಂತಿ ಮತ್ತು ಸಂತೋಷವನ್ನು ಉತ್ತೇಜಿಸುವಲ್ಲಿ ಗುರುದೇವರ ಕಾರ್ಯಗಳಿಗೆ ಅಭಿನಂದನೆ ಸಲ್ಲಿಸಿದರು.
2016ರ ನವದೆಹಲಿಯಲ್ಲಿ ನಡೆದ ಆರ್ಟ್ ಆಫ್ ಲಿವಿಂಗ್ ನ ವಿಶ್ವ ಸಾಂಸ್ಕೃತಿಕ ಉತ್ಸವದಲ್ಲಿ ಭಾಗವಹಿಸಿದ್ದ ಚಲನಚಿತ್ರ ನಿರ್ಮಾಪಕಿ ಮತ್ತು ಛಾಯಾಗ್ರಾಹಕಿ ಲಿಕಾ ಗವೀಶ್, ಮಾಜಿ ಅಧ್ಯಕ್ಷ ಸ್ಯಾಂಟೋಸ್ ಅವರು ಶಾಂತಿ ಪ್ರಕ್ರಿಯೆಯಲ್ಲಿ ಗುರುದೇವರ ಪಾತ್ರದ ಬಗ್ಗೆ ಮಾತನಾಡುವುದನ್ನು ಕೇಳಿ ಭಾವುಕರಾದರು. “ನನ್ನ ಸಂಗಾತಿ ಯುದ್ಧಪ್ರದೇಶಗಳಲ್ಲಿ ಚಿತ್ರೀಕರಣ ಮಾಡುತ್ತಿದ್ದರು. ಅದು ಎಷ್ಟು ಕಷ್ಟಕರವಾಗಿದೆ ಎಂದು ನಾನು ನೋಡಿದ್ದೇನೆ. ಆ ಪ್ರದೇಶದಲ್ಲಿ ಶಾಂತಿಯನ್ನು ತರುವಲ್ಲಿ ಗುರುದೇವ್ ಪಾತ್ರ ವಹಿಸಿದ್ದಾರೆ ಎಂದು ಕೇಳಿ ನನ್ನ ಹೃದಯ ತಟ್ಟಿತ್ತು. ಜಗತ್ತು ಅವರಿಗೆ ನಿಜಕ್ಕೂ ಬಹಳ ಕೃತಜ್ಞರಾಗಿರಬೇಕು” ಎಂದು ಹೇಳಿದರು.




