ನಮಗೂ ವಿಶೇಷ ಪ್ಯಾಕೇಜ್ ಘೋಷಣೆ ಮಾಡಿ.. ಬಾಡಿಗೆ ಕಟ್ಟಲೂ ನಮ್ಮ ಬಳಿ ಹಣವಿಲ್ಲ, ಸಿಎಂಗೆ ಜಿಮ್ ಮಾಲೀಕರ ಮನವಿ

ಜಿಮ್ ಮಾಲೀಕರಿಗೆ ಹತ್ತು ರೂಪಾಯಿ ಕೂಡ ಆದಾಯ ಬರುತ್ತಿಲ್ಲ. ಇದ್ರಿಂದಾಗಿ ಮನೆ ಬಾಡಿಗೆ, ಪವರ್ ಬಿಲ್, ವಾಟರ್ ಬಿಲ್ ಕಟ್ಟೋಕೆ ಸಾಕಷ್ಟು ಕಷ್ಟವಾಗ್ತಿದೆ. ಸರ್ಕಾರ ಜಿಮ್ ಮಾಲೀಕರಿಗೆ ಒಂದು ಪ್ಯಾಕೇಜ್ ಘೋಷಿಸಬೇಕು ಎಂದು ಮನವಿ.

ನಮಗೂ ವಿಶೇಷ ಪ್ಯಾಕೇಜ್ ಘೋಷಣೆ ಮಾಡಿ.. ಬಾಡಿಗೆ ಕಟ್ಟಲೂ ನಮ್ಮ ಬಳಿ ಹಣವಿಲ್ಲ, ಸಿಎಂಗೆ ಜಿಮ್ ಮಾಲೀಕರ ಮನವಿ
ಜಿಮ್ (ಪ್ರಾತಿನಿಧಿಕ ಚಿತ್ರ)
Ayesha Banu

|

May 19, 2021 | 10:59 AM

ಬೆಂಗಳೂರು: ಕೊರೊನಾ ಲಾಕ್ಡೌನ್ನಿಂದಾಗಿ ಜಿಮ್ ಮಾಲೀಕರು ಸಂಕಷ್ಟಕ್ಕೆ ಸಿಲುಕಿದ್ದಾರೆ. ಹೀಗಾಗಿ ನಮಗೆ ವಿಶೇಷ ಪ್ಯಾಕೇಜ್ ಘೋಷಣೆ ಮಾಡಿ ಎಂದು ರಾಜ್ಯ ಸರ್ಕಾರಕ್ಕೆ ಜಿಮ್ ಮಾಲೀಕ ಪ್ರಸಾದ್ ಮನವಿ ಮಾಡಿಕೊಂಡಿದ್ದಾರೆ.

ಜಿಮ್ ಮಾಲೀಕರಿಗೆ ಹತ್ತು ರೂಪಾಯಿ ಕೂಡ ಆದಾಯ ಬರುತ್ತಿಲ್ಲ. ಇದ್ರಿಂದಾಗಿ ಮನೆ ಬಾಡಿಗೆ, ಪವರ್ ಬಿಲ್, ವಾಟರ್ ಬಿಲ್ ಕಟ್ಟೋಕೆ ಸಾಕಷ್ಟು ಕಷ್ಟವಾಗ್ತಿದೆ. ಸರ್ಕಾರ ಜಿಮ್ ಮಾಲೀಕರಿಗೆ ಒಂದು ಪ್ಯಾಕೇಜ್ ಘೋಷಿಸಬೇಕು. ಕೊನೆ ಪಕ್ಷ ಜಿಮ್ಗಳ ಬಾಡಿಗೆಯನ್ನಾದ್ರೂ ಕಟ್ಟದೇ ಇರೋ ರೀತಿ ಮಾಡಬೇಕು. 350 ರಿಂದ 400 ಜಿಮ್ಗಳು ಮೊದಲನೆ ಕೊರೊನಾ ಅಲೆಯಲ್ಲಿಯೇ ಮುಚ್ಚಿವೆ. ಈ ವರ್ಷ ಮತ್ತೆ 150 ಜಿಮ್ ಕ್ಲೋಸ್ ಆಗಿವೆ. ಇದನ್ನೆಲ್ಲ ಗಮನದಲ್ಲಿಟ್ಟುಕೊಂಡು ಸರ್ಕಾರ ಒಂದು ಕ್ರಮ ತೆಗೆದುಕೊಳ್ಳಬೇಕು. ಜಿಮ್ನಿಂದ ಯಾರಿಗೂ ತೊಂದರೆಯಾಗಿಲ್ಲ.

ಜಿಮ್ನ ಯಾವ ಸಿಬ್ಬಂದಿಗೂ ಕೊರೊನಾ ಬಂದಿಲ್ಲ. ಕೊರೊನಾ ವಿರುದ್ಧ ಹೋರಾಡಲು ಫಿಟ್ ನೆಸ್ ತುಂಬಾ ಮುಖ್ಯ. ಹೀಗಾಗಿ ಜಿಮ್ಗಳನ್ನ ಉಳಿಸುವ ಪ್ರಯತ್ನ ಸರ್ಕಾರ ಮಾಡಬೇಕು. ಜಿಮ್ನ ಓಪನ್ ಮಾಡೋದಕ್ಕೆ ಅವಕಾಶ ಕೊಟ್ರೆ ನಾವು ನಮ್ಮ ಮನೆ ಬಾಡಿಗೆ ಮತ್ತು ಜಿಮ್ ಬಾಡಿಗೆ ಕಟ್ಟಿಕೊಂಡು ಜೀವನ ಮಾಡುತ್ತೇವೆ ಎಂದು ಸರ್ಕಾರಕ್ಕೆ ಜಿಮ್ ಮಾಲೀಕ ಪ್ರಸಾದ್ ಮನವಿ ಮಾಡಿಕೊಂಡಿದ್ದಾರೆ. ಜಿಮ್ಮನ್ನು ನಂಬಿಕೊಂಡು ಜೀವನ ಸಾಗಿಸುತ್ತಿರುವ ಮಂದಿಯ ಕಷ್ಟವನ್ನು ಬಗೆ ಹರಿಸಿ ಎಂದು ಸಿಎಂ ಬಿ.ಎಸ್ ಯಡಿಯೂರಪ್ಪನವರಿಗೆ ಮನವಿ ಮಾಡಿಕೊಂಡಿದ್ದಾರೆ.

ಇದನ್ನೂ ಓದಿ: ಹಾಸನದಲ್ಲಿ ರೈಲಿಗೆ ಸಿಲುಕಿ ಕಾಡಾನೆ ಸಾವು; ರಾತ್ರೋ ರಾತ್ರಿ ತೆರವು ಕಾರ್ಯಾಚರಣೆ ನಡೆಸಿದ ರೈಲ್ವೆ ಇಲಾಖೆ

ತಾಜಾ ಸುದ್ದಿ

Follow us on

Most Read Stories

Click on your DTH Provider to Add TV9 Kannada