ಮತಾಂತರದಿಂದ ರಾಜ್ಯಾದ್ಯಂತ ಕೋಮು ಗಲಭೆ ನಡೆಯುತ್ತಿದೆ: ಗೃಹ ಸಚಿವ ಆರಗ ಜ್ಞಾನೇಂದ್ರ

ಮತಾಂತರ ನಿಷೇಧಿಸಲು ಕಾನೂನು ರಚಿಸುವ ಚರ್ಚೆ ನಡೆಯುತ್ತಿದೆ. ಮುಂದಿನ ದಿನಗಳಲ್ಲಿ ಮತಾಂತರ ನಿಷೇಧಕ್ಕೆ ಸೂಕ್ತ ಕಾನೂನು ತರುತ್ತೇವೆ ಎಂದು ಹಾಸನದ ಹಳೆಬೀಡಿನಲ್ಲಿ ಗೃಹ ಸಚಿವ ಆರಗ ಜ್ಞಾನೇಂದ್ರ ಹೇಳಿಕೆ ನೀಡಿದ್ದಾರೆ.

ಮತಾಂತರದಿಂದ ರಾಜ್ಯಾದ್ಯಂತ ಕೋಮು ಗಲಭೆ ನಡೆಯುತ್ತಿದೆ: ಗೃಹ ಸಚಿವ ಆರಗ ಜ್ಞಾನೇಂದ್ರ
ಗೃಹ ಸಚಿವ ಆರಗ ಜ್ಞಾನೇಂದ್ರ

ಹಾಸನ: ಮತಾಂತರ ಮಾಡಿ ತಮ್ಮ ಸಂಖ್ಯೆ ಹೆಚ್ಚಿಸಿಕೊಳ್ಳುವುದು ಅಧರ್ಮ. ಹಿಂದೂ ಧರ್ಮ ಜಗತ್ತಿನಲ್ಲೇ ಪಾವಿತ್ರ್ಯತೆ ಹೊಂದಿರುವಂತಹದ್ದು, ಮತಾಂತರದಿಂದ ರಾಜ್ಯಾದ್ಯಂತ ಕೋಮು ಗಲಭೆ ನಡೆಯುತ್ತಿದೆ. ಮತಾಂತರಕ್ಕೆ ಶಾಸಕರ ಕುಟುಂಬ ಒಳಗಾಗಿರುವುದು ವಿಪರ್ಯಾಸ. ಇದರಿಂದ ತಾಯಿ ಮಗನೇ ಬೆರಾಗುವಂತೆ ಆಗಿದೆ ಎಂದು ಶಾಸಕ ಗೂಳಿಹಟ್ಟಿ ಶೇಖರ್ ತಾಯಿ ಮತಾಂತರದ ಬಗ್ಗೆ ಹಾಸನದ ಹಳೆಬೀಡಿನಲ್ಲಿ ಗೃಹ ಸಚಿವ ಆರಗ ಜ್ಞಾನೇಂದ್ರ ಬೇಸರ ವ್ಯಕ್ತಡಿಸಿದ್ದಾರೆ.

ಮತಾಂತರ ನಿಷೇಧಿಸಲು ಕಾನೂನು ರಚಿಸುವ ಚರ್ಚೆ ನಡೆಯುತ್ತಿದೆ. ಮುಂದಿನ ದಿನಗಳಲ್ಲಿ ಮತಾಂತರ ನಿಷೇಧಕ್ಕೆ ಸೂಕ್ತ ಕಾನೂನು ತರುತ್ತೇವೆ ಎಂದು ಹಾಸನದ ಹಳೆಬೀಡಿನಲ್ಲಿ ಗೃಹ ಸಚಿವ ಆರಗ ಜ್ಞಾನೇಂದ್ರ ಹೇಳಿಕೆ ನೀಡಿದ್ದಾರೆ.

ಬಳಿಕ ಆರ್​ಎಸ್​ಎಸ್​ ಅನ್ನು ಭಯೋತ್ಪಾದಕರಿಗೆ ಹೋಲಿಕೆ ಮಾಡಿದ ವಿಚಾರಕ್ಕೆ ಸಂಬಂಧಪಟ್ಟಂತೆ ಮಾತನಾಡಿದ ಗೃಹ ಸಚಿವ ಆರಗ ಜ್ಞಾನೇಂದ್ರ, ಯಾವುದೇ ಅಪರಾಧವಾದರೂ ಸರಿಯಾದ ತನಿಖೆ ಸರ್ಕಾರ ನಡೆಸುತ್ತಿದೆ. ಸಿದ್ದರಾಮಯ್ಯನವರಿಗೆ ತಾಲೀಬಾನ್ ಮತ್ತು ಆರ್​ಎಸ್​ಎಸ್​ಗೆ ವ್ಯತ್ಯಾಸ ತಿಳಿದಿಲ್ಲ ಅನಿಸುತ್ತದೆ. ರಾಜಕೀಯ ಕಾರಣಕ್ಕಾಗಿ ಆರ್​ಎಸ್​ಎಸ್​ ಅನ್ನು ಮಧ್ಯಕ್ಕೆ ಎಳೆಯುತ್ತಿದ್ದಾರೆ. ಅವರಿಗೆ ಬೇರೆ ಅಸ್ತ್ರವಿಲ್ಲದೆ ಈ ರೀತಿ ಮಾತನಾಡುತ್ತಿದ್ದಾರೆ ಎಂದು ಹೇಳಿದರು.

ದೇಶ ಮತ್ತು ವ್ಯಕ್ತಿ ಎಂದು ಬಂದಾಗ ಮೊದಲು ದೇಶದ ಪರ ನಿಲ್ಲಬೇಕು ಎಂದು ಆರ್​ಎಸ್​ಎಸ್​ ಹೇಳುತ್ತದೆ. ಈ ರೀತಿ ಹೇಳುವ ಸಂಸ್ಥೆ ಯಾವುದಾದರೂ ಇದ್ದರೆ ಅದು ಆರ್​ಎಸ್​ಎಸ್​ ಮಾತ್ರ ಎಂದು ಗೃಹ ಸಚಿವ ಆರಗ ಜ್ಞಾನೇಂದ್ರ ಹೇಳಿದ್ದಾರೆ.

ಅಂತರಾಷ್ಟ್ರೀಯ ಕಾಫಿ ದಿನದ ಅಂಗವಾಗಿ ನಡೆದ ಕಾರ್ಯಕ್ರಮದಲ್ಲಿ ಭಾಗಿಯಾದ ಗೃಹ ಸಚಿವ ಆರಗ ಜ್ಞಾನೇಂದ್ರ
ಕಾಫಿ ಬೆಳೆಗಾರರ ಸಮಾವೇಶ ಉದ್ಘಾಟಿಸಿ ಮಾತನಾಡಿದ್ದಾರೆ. ಕಾಫಿ ವಹಿವಾಟಿಗೆ ಸಿದ್ದಾರ್ಥ್ ತುಂಬಾ ಶ್ರಮಪಟ್ಟಿದ್ದಾರೆ. ಕಾಫಿ ಬೆಳೆಗಾರರ ಸಂಕಷ್ಟಕ್ಕೆ ರಾಜ್ಯ ಸರ್ಕಾರ ನಿಲ್ಲುತ್ತದೆ ಎಂದು ಹೇಳಿದ್ದಾರೆ.

ಇದನ್ನೂ ಓದಿ:

ಬಳೆ ಮಾರುವ ವ್ಯಕ್ತಿ ಮೇಲೆ ಹಲ್ಲೆ ಖಂಡಿಸಿ ಪ್ರತಿಭಟಿಸಿದ ವ್ಯಕ್ತಿಗೆ ಪಾಕ್ ನಂಟು: ಮಧ್ಯಪ್ರದೇಶದ ಸಚಿವ

ಚಿತ್ರದುರ್ಗ: ಮತಾಂತರ ಆರೋಪ; ಸಾಮಾಜಿಕ ಜಾಲತಾಣದಲ್ಲಿ ಪೋಸ್ಟ್​ ಹಾಕಿ ದೂರಿದ ಬಿಜೆಪಿ ಶಾಸಕ ಗೂಳಿಹಟ್ಟಿ ಶೇಖರ್

Read Full Article

Click on your DTH Provider to Add TV9 Kannada