ಹಾಸನ ಬಿಜೆಪಿ ಜಿಲ್ಲಾಧ್ಯಕ್ಷನ ಹುಟ್ಟು ಹಬ್ಬದಲ್ಲಿ ರೂಲ್ಸ್ ಬ್ರೇಕ್; ಟಿವಿ9 ವರದಿ ಬೆನ್ನಲ್ಲೇ ಐವರ ವಿರುದ್ಧ ಎಫ್ಐಆರ್ ದಾಖಲು

| Updated By: sandhya thejappa

Updated on: Sep 05, 2021 | 12:07 PM

ಹೆಚ್.ಕೆ.ಸುರೇಶ್ ಅಭಿಮಾನಿ ಬಳಗದ ವಿನಯ್, ನಿಖಿಲ್, ಚಂದನ್, ಪ್ರಣಿತ್, ಶಿವಕುಮಾರ್ ಹಾಗೂ ಇತರರ ವಿರುದ್ಧ ಕೇಸ್ ದಾಖಲಾಗಿದೆ.

ಹಾಸನ ಬಿಜೆಪಿ ಜಿಲ್ಲಾಧ್ಯಕ್ಷನ ಹುಟ್ಟು ಹಬ್ಬದಲ್ಲಿ ರೂಲ್ಸ್ ಬ್ರೇಕ್; ಟಿವಿ9 ವರದಿ ಬೆನ್ನಲ್ಲೇ ಐವರ ವಿರುದ್ಧ ಎಫ್ಐಆರ್ ದಾಖಲು
ಕಠಿಣ ನಿಯಮಗಳ ನಡುವೆ ಹುಟ್ಟು ಹಬ್ಬ ಆಚರಿಸಿಕೊಂಡಿದ್ದ ಬಿಜೆಪಿ ಜಿಲ್ಲಾಧ್ಯಕ್ಷ ಹೆಚ್.ಕೆ.ಸುರೇಶ್
Follow us on

ಹಾಸನ: ಬಿಜೆಪಿ ಜಿಲ್ಲಾಧ್ಯಕ್ಷ ಹೆಚ್.ಕೆ.ಸುರೇಶ್ರವರ (Hullahalli Suresh) ಹುಟ್ಟು ಹಬ್ಬ (Birthday) ಆಚರಣೆ ಪ್ರಕರಣಕ್ಕೆ ಸಂಬಂಧಿಸಿ ಐವರ ವಿರುದ್ಧ ಎಫ್ಐಆರ್ ದಾಖಲಾಗಿದೆ. ಬೇಲೂರು ಪೊಲೀಸ್ ಠಾಣೆಯಲ್ಲಿ ಸುರೇಶ್ ಅಭಿಮಾನಿ ಬಳಗದ ಐವರ ವಿರುದ್ಧ ಕೇಸ್ ದಾಖಲಾಗಿದೆ. ಕೊರೊನಾ ನಿಯಮ ಉಲ್ಲಂಘನೆ, ವಾಹನಗಳ ಸಂಚಾರಕ್ಕೆ ಆಡಚಣೆ ಮಾಡಿದ್ದಾರೆಂದು ಕಂದಾಯ ಇಲಾಖೆ ರೆವಿನ್ಯೂ ಇನ್ಸ್ಪೆಕ್ಟರ್ ಪ್ರಕಾಶ್ ದೂರಿನ ಹಿನ್ನೆಲೆ ಕೇಸ್ ದಾಖಲಾಗಿದೆ.

ಹೆಚ್.ಕೆ.ಸುರೇಶ್ ಅಭಿಮಾನಿ ಬಳಗದ ವಿನಯ್, ನಿಖಿಲ್, ಚಂದನ್, ಪ್ರಣಿತ್, ಶಿವಕುಮಾರ್ ಹಾಗೂ ಇತರರ ವಿರುದ್ಧ ಕೇಸ್ ದಾಖಲಾಗಿದೆ. ಮೊನ್ನೆ ಬೇಲೂರಿನಲ್ಲಿ ಬಿಜೆಪಿ ಜಿಲ್ಲಾಧ್ಯಕ್ಷ ಸುರೇಶ್ ಕೊರೊನಾ ನಿಯಮಗಳನ್ನು ಮರೆತು ಅದ್ದೂರಿಯಾಗಿ ಹುಟ್ಟು ಹಬ್ಬವನ್ನು ಆಚರಿಸಿಕೊಂಡಿದ್ದರು. ಮೆರವಣಿಗೆ, ಡಿಜೆ ಆಯೋಜಿಸಿ ಅವರ ಅಭಿಮಾನಿಗಳು ಸಂಭ್ರಮಿಸಿದ್ದರು. ಜಿಲ್ಲೆಯಲ್ಲಿ ನೈಟ್ ಕರ್ಫ್ಯೂ, ವೀಕೆಂಡ್ ಕರ್ಫ್ಯೂ ಜಾರಿಯಿದ್ದರೂ ನಿಯಮಗಳನ್ನು ಪಾಲಿಸಿರಲಿಲ್ಲ. ಆಡಳಿತ ಪಕ್ಷದ ಜಿಲ್ಲಾಧ್ಯಕ್ಷರ ಬೇಜವಾಬ್ದಾರಿ ವರ್ತನೆಗೆ ಸಾಮಾಜಿಕ ಜಾಲತಾಣದಲ್ಲಿ ತೀವ್ರ ಆಕ್ರೋಶ ವ್ಯಕ್ತವಾಗಿತ್ತು.

ಅಭಿಮಾನಿಗಳು ಮುಂದಿನ ಶಾಸಕ ಹುಲ್ಲಹಳ್ಳಿ ಸುರೇಶ್ ಎಂದು ಘೋಷಣೆ ಕೂಗಿ ಹುಟ್ಟು ಹಬ್ಬವನ್ನು ಸಂಭ್ರಮದಿಂದ ಆಚರಿಸಿದ್ದರು. ಬಿಜೆಪಿ ಜಿಲ್ಲಾಧ್ಯಕ್ಷ ಹುಲ್ಲಹಳ್ಳಿ ಸುರೇಶ್ರವರ ಮೇಲೆ ಅಭಿಮಾನಿಗಳು ಹೂ ಮಳೆ ಸುರಿಸಿದ್ದರು. ಈ ಬಗ್ಗೆ ಟಿವಿ9 ಅಲ್ಲಿ ಸುದ್ದಿ ಪ್ರಸಾರವಾಗಿತ್ತು. ವರದಿ ಪ್ರಸಾರವಾದ ಬೆನ್ನಲ್ಲೇ ಇದೀಗ ಐವರ ವಿರುದ್ಧ ಎಫ್ಐಆರ್ ದಾಖಲಾಗಿದೆ.

ಈ ಬಗ್ಗೆ ನಿನ್ನೆ ಪ್ರತಿಕ್ರಿಯೆ ನೀಡಿದ್ದ ಜಿಲ್ಲಾಧಿಕಾರಿ ಆರ್.ಗಿರೀಶ್, ರೂಲ್ಸ್ ಬ್ರೇಕ್ ಬಗ್ಗೆ ವರದಿ ನೀಡುವಂತೆ ಎಸ್‌ಪಿಗೆ ಸೂಚನೆ ನೀಡಿದ್ದೇವೆ. ಬರ್ತಡೇಯಲ್ಲಿ ಹೆಚ್ಚಿನ ಜನರು ಸೇರಿರುವ ಬಗ್ಗೆ ಮಾಧ್ಯಮಗಳಿಂದ ಮಾಹಿತಿ ಗೊತ್ತಾಗಿದೆ. ಕೊವಿಡ್ ಸಂದರ್ಭದಲ್ಲಿ ಎಲ್ಲರೂ ಜವಾಬ್ದಾರಿಯಿಂದ ವರ್ತನೆ ಮಾಡಬೇಕು. ತಮ್ಮ ವರ್ತನೆ ಮೂಲಕ ಇತರರಿಗೆ ಮಾದರಿಯಾಗಬೇಕು ಅಂತ ಹೇಳಿದ್ದರು.

ಇದನ್ನೂ ಓದಿ

ನೈಟ್ ಕರ್ಫ್ಯೂ ನಡುವೆ ಹಾಸನ ಬಿಜೆಪಿ ಜಿಲ್ಲಾಧ್ಯಕ್ಷನ ಭರ್ಜರಿ ಬರ್ತಡೇ ಪಾರ್ಟಿ; ಸಾಮಾಜಿಕ ಜಾಲತಾಣದಲ್ಲಿ ಜನರ ಆಕ್ರೋಶ

ಬೆಳಗಾವಿಯಲ್ಲಿ ಬಿಜೆಪಿ ಶಾಸಕನ ಹುಟ್ಟು ಹಬ್ಬದ ವಿಡಿಯೋ ವೈರಲ್; ಹೂವಿನ ಮಳೆ ಸುರಿಸಿದ ಪೊಲೀಸರು

(FIR filed against five persons who celebrated HK Suresh birth celebration in hassan)