Hassan: ಆನೆ ಮಾನವ ಸಂಘರ್ಷ ನಿಯಂತ್ರಿಸುವಲ್ಲಿ ವಿಫಲ: ಸಕಲೇಶಪುರ ವಲಯದ ಬೇಜವಾಬ್ದಾರಿ ಅರಣ್ಯಾಧಿಕಾರಿ ಶಿಲ್ಪಾ ಅಮಾನತು

ಜಿಲ್ಲೆಯ ಸಕಲೇಶಪುರ ವಲಯ ಅರಣ್ಯಾಧಿಕಾರಿ ಶಿಲ್ಪಾ ಅವರನ್ನ ಕರ್ತವ್ಯಲೋಪ ಸೇರಿದಂತೆ ಸರಣಿ ಆರೋಪ ಹಿನ್ನಲೆ ಅಮಾನತು ಮಾಡಲಾಗಿದೆ.

Hassan: ಆನೆ ಮಾನವ ಸಂಘರ್ಷ ನಿಯಂತ್ರಿಸುವಲ್ಲಿ ವಿಫಲ: ಸಕಲೇಶಪುರ ವಲಯದ ಬೇಜವಾಬ್ದಾರಿ ಅರಣ್ಯಾಧಿಕಾರಿ ಶಿಲ್ಪಾ ಅಮಾನತು
ಅರಣ್ಯಾಧಿಕಾರಿ ಶಿಲ್ಪಾ
Edited By: ಕಿರಣ್ ಹನುಮಂತ್​ ಮಾದಾರ್

Updated on: Jan 12, 2023 | 8:07 AM

ಹಾಸನ: ಸಿಬ್ಬಂದಿಗಳನ್ನು ನಿಯಂತ್ರಿಸುವಲ್ಲಿ, ಅರಣ್ಯ ಅಪರಾಧ ಪ್ರಕರಣಗಳ ತನಿಖೆ ನಡೆಸುವಲ್ಲಿ ವಿಫಲತೆಯನ್ನ ಹೊಂದಿದ್ದ ಅರಣ್ಯಾಧಿಕಾರಿ ಶಿಲ್ಪಾ ಅವರಿಗೆ ನೀಡಿದ ಭೌತಿಕ ಹಾಗೂ ಆರ್ಥಿಕ ಪ್ರಗತಿಯನ್ನು ಸಾಧಿಸಿಲ್ಲ. ಹಾಗೂ ಸಾರ್ವಜನಿಕರೊಂದಿಗೆ ಸಮನ್ವಯ ಸಾಧಿಸಿಕೊಂಡು ಆನೆ ಮಾನವ ಸಂಘರ್ಷ ನಿಯಂತ್ರಿಸುವಲ್ಲಿ ಕೂಡ ವಿಫಲತೆಯನ್ನ ಹೊಂದಿದ್ದಾರೆ. ಅಧಿಕಾರಿ ಸಿಬ್ಬಂದಿ ವರ್ಗದವರ ನಡುವೆ ಭಿನ್ನಾಭಿಪ್ರಾಯ ಉಂಟಾಗಲು, ವಿಭಾಗದ ಹಾಗೂ ವಲಯದ ಆಡಳಿತಾತ್ಮಕ ಸಮಸ್ಯೆ ಉಂಟಾಗಲು ನೇರ ಕಾರಣಕರ್ತರಾಗಿರುವುದರ ಜೊತೆಗೆ ಕರ್ತವ್ಯ ಲೋಪ ಹಿನ್ನೆಲೆ ಪ್ರಧಾನ ಮುಖ್ಯ ಅರಣ್ಯ ಸಂರಕ್ಷಣಾಧಿಕಾರಿ ಕಚೇರಿಯಿಂದ ಅಮಾನತು ಆದೇಶ ಬಂದಿದೆ.

ಮೇಲಾಧಿಕಾರಿಗಳ ಯಾವುದೇ ಸೂಚನೆ ಹಾಗೂ ಆದೇಶ ಪತ್ರಗಳಿಗೆ ಹೇಗೆ ಉತ್ತರಿಸಬೇಕು ಎಂಬ ತಮ್ಮ ಕಾರ್ಯಶೈಲಿಯನ್ನು ತಿದ್ದುಕೊಂಡಿಲ್ಲ, ಜವಾಬ್ದಾರಿಯುತ ಸ್ಥಾನದಲ್ಲಿರುವ ಸಮವಸ್ತ್ರಧಾರಿ ಅಧಿಕಾರಿಯವರು ಆಡಳಿತಾತ್ಮಕ ಗಂಭೀರ ವಿಷಯಗಳ ಬಗ್ಗೆ ಗಮನ ಹರಿಸದೇ ಸರ್ಕಾರಿ ಸ್ವತ್ತನ್ನು ರಕ್ಷಣೆ ಮಾಡುವಲ್ಲಿ ವಿಫಲರಾಗಿರುವುದರ ಜೊತೆಗೆ ಆರ್ಥಿಕ ನಷ್ಟ ಉಂಟು ಮಾಡಿದ್ದು, ಕೇಂದ್ರ ಸ್ಥಾನದಲ್ಲಿದ್ದಲ್ಲಿ ಈ ಕರ್ತವ್ಯ ಲೋಪಗಳಿಗೆ ಸಂಬಂಧಿಸಿದ ಪೂರಕ ಸಾಕ್ಷ್ಯಗಳನ್ನು ನಾಶಪಡಿಸುವ ಸಾಧ್ಯತೆ ಇದೆಯೆಂದು ಉಲ್ಲೇಖಿಸಿ ಹಾಗೂ ಪೂರಕ ಸರ್ಕಾರಿ ಪರ ಸಾಕ್ಷ್ಯಗಳಿಗೆ ಬೆದರಿಕೆ ಒಡ್ಡುವ ಸಾಧ್ಯತೆ ಬಗ್ಗೆಯು ಆರೋಪವಿದ್ದು ಇಲಾಖಾ ವಿಚಾರಣೆಯನ್ನು ಬಾಕಿ ಇರಿಸಿ, ಸಕಲೇಶಪುರ ವಲಯದ ಕರ್ತವ್ಯದಿಂದ ಅಮಾನತ್ತುಗೊಳಿಸಿ ಆದೇಶ ಹೊರಡಿಸಲಾಗಿದೆ.

ಇನ್ನಷ್ಟು ರಾಜ್ಯ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್​ ಮಾಡಿ

TV9 Web

TV9 Kannada

Read More
Loading...
Unable to load recommendations.
Follow Us