Hassan: 16 ವರ್ಷದ ಬಾಲಕ ಅನುಮಾನಾಸ್ಪದ ಸಾವು

Hassan News: ವಿದ್ಯುತ್ ಶಾಕ್​​ನಿಂದ ಬಾಲಕ ಮೃತಪಟ್ಟಿರುವ ಶಂಕೆ ವ್ಯಕ್ತವಾಗಿದೆ. ಶವವನ್ನು ಕರೆಗೆ ಹಾಕಿರುವುದಾಗಿ ಕುಟುಂಬಸ್ಥರ ಆರೋಪ ಮಾಡಿದ್ದಾರೆ. ಹೊಳೆನರಸೀಪುರ ನಗರ ಠಾಣೆಯಲ್ಲಿ ಪ್ರಕರಣ ದಾಖಲು ಮಾಡಲಾಗಿದೆ.

Hassan: 16 ವರ್ಷದ ಬಾಲಕ ಅನುಮಾನಾಸ್ಪದ ಸಾವು
ಸಾಂದರ್ಭಿಕ ಚಿತ್ರ

ಹಾಸನ: ಇಲ್ಲಿನ ಹೊಳೆನರಸೀಪುರ ತಾಲೂಕಿನ ಲಕ್ಷ್ಮೀಪುರದಲ್ಲಿ 16 ವರ್ಷದ ಬಾಲಕ‌ ಅನುಮಾನಾಸ್ಪದ ಸಾವು ಪ್ರಕರಣ ಬೆಳಕಿಗೆ ಬಂದಿದೆ. ಬಾಲಕ ಸಾಗರ್​​ ಎಂಬಾತನನ್ನು ಗ್ರಾಮದ ತಿಮ್ಮೇಗೌಡ ಎಂಬವರು ಕರೆದೊಯ್ದಿದ್ದರು. ಶನಿವಾರ ಶಾಲೆಯಿಂದ ಬಾಲಕ ಬಂದ ಬಳಿಕ ಹೊರಗೆ ಕರೆದೊಯ್ದಿದ್ದರು. ತಿಮ್ಮೇಗೌಡನ ಜತೆ ಹೋದ ಬಳಿಕ ಬಾಲಕ ವಾಪಸ್ ಬಂದಿಲ್ಲ. ಗ್ರಾಮದ ಕೆರೆಯಲ್ಲಿ ವಿವಸ್ತ್ರಗೊಳಿಸಿದ ಸ್ಥಿತಿಯಲ್ಲಿ ಇದೀಗ ಬಾಲಕನ ಶವ ಪತ್ತೆಯಾಗಿದೆ.

ವಿದ್ಯುತ್ ದುರಸ್ತಿಗೆ ಬಾಲಕನನ್ನು ಕರೆದೊಯ್ದಿದ್ದ ಆರೋಪ ಕೇಳಿಬಂದಿದೆ. ಈ ವೇಳೆ ವಿದ್ಯುತ್ ಶಾಕ್​​ನಿಂದ ಬಾಲಕ ಮೃತಪಟ್ಟಿರುವ ಶಂಕೆ ವ್ಯಕ್ತವಾಗಿದೆ. ಶವವನ್ನು ಕರೆಗೆ ಹಾಕಿರುವುದಾಗಿ ಕುಟುಂಬಸ್ಥರ ಆರೋಪ ಮಾಡಿದ್ದಾರೆ. ಹೊಳೆನರಸೀಪುರ ನಗರ ಠಾಣೆಯಲ್ಲಿ ಪ್ರಕರಣ ದಾಖಲು ಮಾಡಲಾಗಿದೆ.

ಇದನ್ನೂ ಓದಿ: ಮಡಿಕೇರಿ: ಹೋಂ ಸ್ಟೇನಲ್ಲಿ ತಂಗಿದ್ದ ವೈದ್ಯಕೀಯ ವಿದ್ಯಾರ್ಥಿನಿ ಸಾವು

ಇದನ್ನೂ ಓದಿ: ಬೈಕ್‌ಗೆ ಟಿಪ್ಪರ್ ಡಿಕ್ಕಿ; ತಾಯಿ, ಮಗು ಸ್ಥಳದಲ್ಲೇ ಸಾವು, ಬೈಕ್ ಸವಾರ ಆಸ್ಪತ್ರೆಗೆ ದಾಖಲು

Click on your DTH Provider to Add TV9 Kannada