AQI
Sign In

By signing in or creating an account, you agree with Associated Broadcasting Company's Terms & Conditions and Privacy Policy.

ದತ್ತಮಾಲಾಧಾರಿಗಳನ್ನ ಕುಡುಕರಂತೆ ಬಿಂಬಿಸಿ ಆದೇಶ ವಿಚಾರ: ಹಾಸನ ಜಿಲ್ಲಾಧಿಕಾರಿ ವಿಷಾದ

ಮದ್ಯ ನಿಷೇಧ ಆದೇಶದಲ್ಲಿ ಕುಡುಕರಂತೆ ಬಿಂಬಿಸಿದ ಆರೋಪ ಕೇಳಿಬಂದಿತ್ತು. ಆಕ್ಷೇಪ ಕೇಳಿ ಬಂದ ಹಿನ್ನೆಲೆಯಲ್ಲಿ ಜಿಲ್ಲಾಧಿಕಾರಿ ವಿಷಾದ ವ್ಯಕ್ತಪಡಿಸಿ ಹಾಸನ ಜಿಲ್ಲಾಧಿಕಾರಿ ಆರ್. ಗಿರೀಶ್‌ರಿಂದ ಮಾಧ್ಯಮ ಪ್ರಕಟಣೆ ಹೊರಡಿಸಲಾಗಿದೆ.

ದತ್ತಮಾಲಾಧಾರಿಗಳನ್ನ ಕುಡುಕರಂತೆ ಬಿಂಬಿಸಿ ಆದೇಶ ವಿಚಾರ: ಹಾಸನ ಜಿಲ್ಲಾಧಿಕಾರಿ ವಿಷಾದ
ದತ್ತಪೀಠ (ಪ್ರಾತಿನಿಧಿಕ ಚಿತ್ರ)
TV9 Web
| Edited By: |

Updated on: Dec 18, 2021 | 11:18 PM

Share

ಹಾಸನ: ದತ್ತಮಾಲಾಧಾರಿಗಳನ್ನ ಕುಡುಕರಂತೆ ಬಿಂಬಿಸಿ ಹಾಸನ ಜಿಲ್ಲಾಧಿಕಾರಿ ಆದೇಶ ವಿಚಾರವಾಗಿ ಜಿಲ್ಲಾಧಿಕಾರಿ ಆರ್. ಗಿರೀಶ್ ವಿಷಾದ ವ್ಯಕ್ತಪಡಿಸಿದ್ದಾರೆ. ಕಣ್ತಪ್ಪಿನಿಂದ ಗೊಂದಲ ಆಗಿದೆ ಎಂದು ಹಾಸನ ಜಿಲ್ಲಾಧಿಕಾರಿ ಮಾಧ್ಯಮ ಪ್ರಕಟಣೆಯ ಮೂಲಕ ವಿಷಾದ ವ್ಯಕ್ತಪಡಿಸಿದ್ದಾರೆ. ಸಂಘ, ಸಂಸ್ಥೆಗಳ ಭಾವನೆಗೆ ಧಕ್ಕೆ ತರುವ ಉದ್ದೇಶವಿರಲಿಲ್ಲ. ದತ್ತಮಾಲಾ ಅಭಿಯಾನ ಹಿನ್ನೆಲೆಯಲ್ಲಿ ಮದ್ಯ ನಿಷೇಧಿಸಿ ಆದೇಶ ಮಾಡಲಾಗಿತ್ತು. ಆದರೆ, ಮದ್ಯ ನಿಷೇಧ ಆದೇಶದಲ್ಲಿ ಕುಡುಕರಂತೆ ಬಿಂಬಿಸಿದ ಆರೋಪ ಕೇಳಿಬಂದಿತ್ತು. ಆಕ್ಷೇಪ ಕೇಳಿ ಬಂದ ಹಿನ್ನೆಲೆಯಲ್ಲಿ ಜಿಲ್ಲಾಧಿಕಾರಿ ವಿಷಾದ ವ್ಯಕ್ತಪಡಿಸಿ ಹಾಸನ ಜಿಲ್ಲಾಧಿಕಾರಿ ಆರ್. ಗಿರೀಶ್‌ರಿಂದ ಮಾಧ್ಯಮ ಪ್ರಕಟಣೆ ಹೊರಡಿಸಲಾಗಿದೆ.

ಸಾವಿರಾರು ದತ್ತಮಾಲಾಧಾರಿಗಳು ಬೇಲೂರು ಮೂಲಕ ಚಿಕ್ಕಮಗಳೂರಿನ ದತ್ತಪೀಠಕ್ಕೆ ಹೋಗಲಿದ್ದು, ಬರುವಾಗ ವಾಹನಗಳನ್ನ ನಿಲ್ಲಿಸಿಕೊಂಡು ಮದ್ಯ ಸೇವನೆ ಮಾಡಿಕೊಂಡು, ಅನ್ಯ ಧರ್ಮಗಳ ಧಾರ್ಮಿಕ ಭಾವನೆಗಳಿಗೆ ಧಕ್ಕೆ ಉಂಟಾಗುವಂತೆ ಘೋಷಣೆ ಕೂಗು ಸಾಧ್ಯತೆಯಿದೆ. ಹಾಗಾಗಿ ಮುನ್ನೆಚ್ಚರಿಕೆ ಕ್ರಮವಾಗಿ ಬೇಲೂರು ತಾಲೂಕಿನಾದ್ಯಂತ ಮದ್ಯ ಮಾರಾಟ ನಿಷೇಧಕ್ಕೆ ಹಾಸನ ಡಿಸಿ ಆದೇಶ ಮಾಡಿದ್ದರು. ಇದು ರಾಜ್ಯಾದ್ಯಂತ ಇರುವ ದತ್ತಮಾಲಾಧಾರಿಗಳಲ್ಲಿ ಆಕ್ರೋಶ ಹೆಚ್ಚುವಂತೆ ಮಾಡಿತ್ತು.

ದತ್ತಮಾಲಾಧಾರಿಗಳನ್ನ ಕುಡುಕರೆಂಬಂತೆ ಬಣ್ಣಿಸಿರುವ ಹಾಸನ ಜಿಲ್ಲಾಧಿಕಾರಿ ವಿರುದ್ಧ ಸಿಟಿ ರವಿ ಕಿಡಿಕಾರಿದ್ದರು. ಬಳಸಿರುವ ಭಾಷೆ ಗೌರವ ತರುವಂತದಲ್ಲ. ಅದನ್ನ ನಾನು ಖಂಡಿಸುತ್ತೇನೆ. ಅವಹೇಳನ-ಅಪಮಾನ ಮಾಡುವ ರೀತಿ ಡಿಸಿ ಸರ್ಕ್ಯೂಲರ್ ಹೊರಡಿಸಿದ್ದರು. ಆ ರೀತಿ ಸರ್ಕ್ಯೂಲರ್ ಹೊರಡಿಸಿರುವ ಡಿಸಿ ಅವರಿಗೆ ತಪ್ಪು ಕಲ್ಪನೆ ತೋರಿಸುತ್ತದೆ. ಕೂಡಲೇ ಕ್ಷಮೆಯಾಚಿಸುವಂತೆ ಆಗ್ರಹಿಸುತ್ತೇನೆ ಅಂತಾ ಸಿಟಿ ರವಿ ಹೇಳಿದ್ದರು.

ಇದನ್ನೂ ಓದಿ: ಚಿಕ್ಕಮಗಳೂರಿನಲ್ಲಿ ಸಿಟಿ ರವಿ ಭಿಕ್ಷಾಟನೆ; ಕ್ಷಮೆಯಾಚಿಸುವಂತೆ ಹಾಸನ ಜಿಲ್ಲಾಧಿಕಾರಿಗೆ ಒತ್ತಾಯ

ಇದನ್ನೂ ಓದಿ: Datta Jayanti 2021: ತ್ರಿಮೂರ್ತ ಸ್ವರೂಪಿ ದತ್ತಾತ್ರೇಯ ಜಯಂತಿ ಮಹತ್ವ, ಕಥೆ, ಪೂಜೆ ವಿಧಾನ ತಿಳಿಯಿರಿ