AQI
Sign In

By signing in or creating an account, you agree with Associated Broadcasting Company's Terms & Conditions and Privacy Policy.

ಹಾಸನ: ಕುಮಾರಣ್ಣನಿಗೆ ಒಂದೂವರೆ ಲಕ್ಷ ಬೆಲೆಬಾಳುವ ಜೋಡೆತ್ತು ಗಿಫ್ಟ್ ಕೊಟ್ಟ ನಾಗರಹಳ್ಳಿ ಗ್ರಾಮಸ್ಥರು

ಪಂಚರತ್ನ ಯಾತ್ರೆ ವೇಳೆ ಗಂಡಸಿಗೆ ಬಂದ ಹೆಚ್​ಡಿ ಕುಮಾರಸ್ವಾಮಿ ಅವರಿಗೆ ನಾಗರಹಳ್ಳಿಯ ಗ್ರಾಮಸ್ಥರು ಒಂದೂವರೆ ಲಕ್ಷ ಬೆಲೆಬಾಳುವ ಜೋಡೆತ್ತುಗಳನ್ನ ಗಿಫ್ಟ್ ಆಗಿ ನೀಡಿದ್ದಾರೆ.

ಹಾಸನ: ಕುಮಾರಣ್ಣನಿಗೆ ಒಂದೂವರೆ ಲಕ್ಷ ಬೆಲೆಬಾಳುವ ಜೋಡೆತ್ತು ಗಿಫ್ಟ್ ಕೊಟ್ಟ ನಾಗರಹಳ್ಳಿ ಗ್ರಾಮಸ್ಥರು
ಜೋಡೆತ್ತು
ಆಯೇಷಾ ಬಾನು
|

Updated on:Mar 14, 2023 | 3:27 PM

Share

ಹಾಸನ: ಹಾಸನ ಜಿಲ್ಲೆ ಅರಸೀಕೆರೆ ಕ್ಷೇತ್ರದಲ್ಲಿ ಮಾಜಿ ಸಿಎಂ ಕುಮಾರಸ್ವಾಮಿ(HD Kumaraswamy) ನೇತೃತ್ವದಲ್ಲಿ ಪಂಚರತ್ನ ಯಾತ್ರೆ(Pancharatna Yatra) ನಡೆಯುತ್ತಿದ್ದು ರೈತರು ತಮ್ಮ ನೆಚ್ಚಿನ ನಾಯಕನಿಗೆ ಭರ್ಜರಿ ಗಿಫ್ಟ್ ನೀಡಿದ್ದಾರೆ. ಗಂಡಸಿ ಹೋಬಳಿಯ ನಾಗರಹಳ್ಳಿಯ ಗ್ರಾಮಸ್ಥರು ಒಂದೂವರೆ ಲಕ್ಷ ಬೆಲೆಬಾಳುವ ಜೋಡೆತ್ತುಗಳನ್ನ(Oxen) ಗಿಫ್ಟ್ ಆಗಿ ನೀಡಿದ್ದಾರೆ.

ಪಂಚರತ್ನ ಯಾತ್ರೆ ಗಂಡಸಿಗೆ ಬಂದಾಗ ಎತ್ತುಗಳನ್ನ ಅಲಂಕಾರ ಮಾಡಿ ಹೆಚ್​ಡಿ ಕುಮಾರಸ್ವಾಮಿಗೆ ಗಿಫ್ಟ್ ಆಗಿ ನೀಡಿದ್ದಾರೆ. ಹಳ್ಳಿಕಾರ್ ತಳಿಯ ಜೋಡೆತ್ತುಗಳನ್ನೆ ರೈತನ ಮಗ ಕುಮಾರಸ್ವಾಮಿಗೆ ಗಿಫ್ಟ್ ಕೊಡಬೇಕೆಂದು ನಾಗರಹಳ್ಳಿ ಗ್ರಾಮದ ಜನರು ಒಟ್ಟಾಗಿ ಹಣ ಸಂಗ್ರಹ ಮಾಡಿ, ಎತ್ತುಗಳನ್ನು ಖರೀದಿ ಮಾಡಿದ್ದಾರೆ. ಕುಮಾರಸ್ವಾಮಿ ಮೇಲಿನ ಪ್ರೀತಿಯಿಂದ ಎತ್ತುಗಳನ್ನ ಉಡುಗೊರೆಯಾಗಿ ನೀಡಲು ತೀರ್ಮಾನ ಮಾಡಿದ ಗ್ರಾಮಸ್ಥರು, ಕುಮಾರಸ್ವಾಮಿ ಸಿಎಂ ಆಗಲಿ ಎಂದು ಶುಭ ಹಾರೈಸಿ ಜಾನುವಾರುಗಳನ್ನು ಕೊಡುಗೆಯಾಗಿ ನೀಡಿದ್ದಾರೆ.

ಇದನ್ನೂ ಓದಿ: ಕಳ್ಳತನಕ್ಕೆ ಪೊಲೀಸ್ ಕಾನ್ಸ್​ಟೇಬಲ್​ನಿಂದ ಸಹಾಯ ಆರೋಪ; ಪೇದೆ ಯಲ್ಲಪ್ಪ ಸಸ್ಪೆಂಡ್

ಗಂಡಸಿಯಲ್ಲಿ ನೆರೆದಿದ್ದ ಸಹಸ್ರಾರು ಜನರ ಸಮ್ಮುಖದಲ್ಲಿ ನಡೆದ ಪಂಚರತ್ನ ಯಾತ್ರೆಯ ಪ್ರಚಾರ ಸಭೆ ಮುಗಿದ ಬಳಿಕ‌ ನಾಗರಹಳ್ಳಿ ಗ್ರಾಮಸ್ಥರು ಎತ್ತುಗಳನ್ನ ಕುಮಾರಸ್ವಾಮಿಗೆ ಹಸ್ತಾಂತರ ಮಾಡಿದ್ರು, ಎತ್ತುಗಳನ್ನ ಸ್ವೀಕಾರ ಮಾಡಿದ ಕುಮಾರಸ್ವಾಮಿ ರೈತರ ಅಭಿಮಾನಕ್ಕೆ ಧನ್ಯವಾದ ಹೇಳಿದರು. ಎತ್ತುಗಳನ್ನ ಕುಮಾರಸ್ವಾಮಿ ಅವರ ಕೇತಗಾನಹಳ್ಳಿಯ ತೋಟದ ಮನೆಗೆ ಬಿಟ್ಟು ಬರುವುದಾಗಿ ರೈತರು ಹೇಳಿದ್ದು, ಕುಮಾರಸ್ವಾಮಿ ಮುಂದಿನ ಸಿಎಂ ಆಗಲಿ ಎಂದು ಶುಭ ಹಾರೈಸಿದ್ದಾರೆ.

ವರದಿ: ಮಂಜುನಾಥ ಕೆಬಿ, ಟಿವಿ9 ಹಾಸನ

Published On - 3:27 pm, Tue, 14 March 23