ಹಾಸನ: ಹಾಸನ ಕ್ಷೇತ್ರದಿಂದ ಭವಾನಿ ರೇವಣ್ಣ ಸ್ಪರ್ಧೆಗೆ ಬೆಂಬಲಿಗರ ಒತ್ತಾಯ ವಿಚಾರಕ್ಕೆ ಸಂಬಂಧಿಸಿ ಹಾಸನದಲ್ಲಿ ಭವಾನಿ ಪತಿ ಜೆಡಿಎಸ್ ನಾಯಕ, ಹೆಚ್.ಡಿ.ರೇವಣ್ಣ ಪ್ರತಿಕ್ರಿಯೆ ನೀಡಿದ್ದಾರೆ. ಹಾಸನದಲ್ಲಿ ಯಾರನ್ನ ನಿಲ್ಲಿಸಬೇಕೆಂದು ಪಕ್ಷ ತೀರ್ಮಾನಿಸುತ್ತೆ. MLCಗೂ ಭವಾನಿ ರೇವಣ್ಣರನ್ನ ನಿಲ್ಲಿಸುವಂತೆ ಒತ್ತಾಯಿಸಿದ್ರು. ಭವಾನಿ ಯಾವತ್ತಾದರೂ ಒಂದು ದಿನ ಶಾಸಕರಾಗುತ್ತಾರೆ. ಭವಾನಿ ಮೇಡಂ MLA ಆಗೋದನ್ನ ತಪ್ಪಿಸಲು ಸಾಧ್ಯವಿಲ್ಲ ಎಂದು ಮಾಜಿ ಸಚಿವ ಹೆಚ್.ಡಿ.ರೇವಣ್ಣ ಭವಿಷ್ಯ ನುಡಿದಿದ್ದಾರೆ.
ನಮ್ಮ ಬದಲು ಹೊಳೆನರಸೀಪುರಕ್ಕೆ ಅವರಿಗೆ ಟಿಕೆಟ್ ಕೊಟ್ಟರೆ ನಾ ಕೆಲ್ಸ ಮಾಡ್ತಿನಪ್ಪ, ಅದ್ಕೆನಂತೆ ಇವತ್ತೆ ಆಗ್ತಾರೆ ಅಂತ ನಾ ಹೇಳ್ತಿಲ್ಲ. ಇನ್ನು 5 ವರ್ಷ, ಹತ್ತು ವರ್ಷ ಮುಂದೆ ಆಗಬಹುದು ಯಾವತ್ತಾದ್ರು ಒಂದು ದಿನ ಆಗ್ತಾರೆ. ಭವಾನಿಯವರಿಗೆ ಟಿಕೆಟ್ ಕೊಡಿ ಅಂತ ನಾವ್ಯಾರು ಈಗ ಅರ್ಜಿ ಇಟ್ಕೊಂಡ್ ಹೋಗಿಲ್ಲ. ಜಿ.ಪಂ. ಶಿಕ್ಷಣ ಸ್ಥಾಯಿ ಸಮಿತಿ ಅಧ್ಯಕ್ಷೆಯಾಗಿ ಭವಾನಿ ರೇವಣ್ಣ ಒಳ್ಳೆಯ ಕೆಲಸ ಮಾಡಿದ್ದರು. SSLC ರಿಸಲ್ಟ್ನಲ್ಲಿ ಜಿಲ್ಲೆಯನ್ನ ಪ್ರಥಮ ಸ್ಥಾನಕ್ಕೆ ತಂದರು. ನಕಲು ಮಾಡದೆ ಹಾಸನವನ್ನ ಪ್ರಥಮ ಸ್ಥಾನಕ್ಕೆ ತಂದಿದ್ವಿ ಎಂದರು.
ರೇವಣ್ಣ, ಭವಾನಿ ವಿರುದ್ಧ ಸ್ಪರ್ಧೆಗೆ ನಾನು ರೆಡಿ: ಹಾಸನದಲ್ಲಿ ಸವಾಲು ಹಾಕಿದ ಪ್ರೀತಂಗೌಡ
ಹಾಸನ: ಕರ್ನಾಟಕದಲ್ಲಿ ಹಲವು ಆಶ್ಚರ್ಯಕರ ಸಂಗತಿಗಳು ನಡೆಯಲಿವೆ. ಸ್ವಲ್ಪ ಸಮಯ ಕಾದು ನೋಡಿ ಎಂದು ಬಿಜೆಪಿ ಶಾಸಕ ಪ್ರೀತಂಗೌಡ ಹೇಳಿದರು. ಯಾರು ಯಾವ ಪಕ್ಷಕ್ಕೆ ಸೇರುತ್ತಾರೆ ಎನ್ನುವುದಕ್ಕೆ ಕಾಲವೇ ಉತ್ತರ ಹೇಳಲಿದೆ. ಪಕ್ಷಕ್ಕೆ ಬನ್ನಿ ಎಂದು ನಾವು ಯಾರಿಗೂ ಆಹ್ವಾನ ಪತ್ರಿಕೆ ಕೊಟ್ಟಿಲ್ಲ. ಮುಂದಿನ ದಿನಗಳಲ್ಲಿ ನೀವೆಲ್ಲರೂ ಆಶ್ಚರ್ಯಪಡುವ ಹಲವು ಸಂಗತಿಗಳು ನಡೆಯಲಿವೆ ಎಂದರು. ಹಾಸನದಿಂದ ಸ್ಪರ್ಧಿಸುವಂತೆ ಜೆಡಿಎಸ್ನ ಹಿರಿಯ ನಾಯಕ ಎಚ್.ಡಿ.ರೇವಣ್ಣ ಮತ್ತು ಅವರ ಪತ್ನಿ ಭವಾನಿ ಅವರಿಗೆ ನಾನೇ ಆಹ್ವಾನ ನೀಡುತ್ತೇನೆ. ಅವರು ಸ್ಪರ್ಧಿಸಿದರೆ ನನಗೆ ಸಂತೋಷ. ರೆಡಿಯಾಗಿ ಬರಬೇಕಿದ್ದು ಅವರು, ನಾನು ರೆಡಿಯಾಗಿದ್ದೇನೆ ಎಂದು ಸವಾಲು ಹಾಕಿದರು.
ಹಾಸನದಿಂದ ಯಾರು ಸ್ಪರ್ಧಿಸಬೇಕೆಂದು ತಾಯಿ ಹಾಸನಾಂಬೆ ಮತ್ತು ಪುರದಮ್ಮ ಅವರಿಗೆ ಹೇಳಿದ್ದೇನೆ. ಹಲವು ಶಾಸಕರು ಜೆಡಿಎಸ್ ಪಕ್ಷ ಬಿಡಲಿರುವ ಕುರಿತು ಕೇಳಿಬರುತ್ತಿರುವ ಮಾತುಗಳ ಕುರಿತು ಪ್ರತಿಕ್ರಿಯಿಸಿದ ಅವರು, ಅವರ ಮನೆಯ ಸಮಸ್ಯೆಗಳನ್ನು ಅವರೇ ಬಗೆಹರಿಸಿಕೊಳ್ತಾರೆ ಎಂದಷ್ಟೇ ಮುಗುಂ ಆಗಿ ಉತ್ತರಿಸಿದರು.
ಇದನ್ನೂ ಓದಿ: ಅಲ್ಲಿಗೆ ಬಂದವರು ಯಾರು? ನಾವ್ಯಾರನ್ನೂ ಕಳಿಸಿಲ್ಲ: ದೆಹಲಿ ಶಾಸಕಿಗೆ ಕೇರಳ ಶಿಕ್ಷಣ ಸಚಿವರ ಪ್ರಶ್ನೆ, ಅಷ್ಟಕ್ಕೂ ಆಗಿದ್ದೇನು?
PBKS vs CSK: ಐಪಿಎಲ್ನಲ್ಲಿಂದು ಪಂಜಾಬ್-ಚೆನ್ನೈ ಮುಖಾಮುಖಿ: ಗೆಲ್ಲಲೇ ಬೇಕಾದ ಒತ್ತಡದಲ್ಲಿ ಜಡೇಜಾ ಪಡೆ