ಜೈಲು ಅಧಿಕಾರಿಗಳ ಬಳಿ ಹೊಟ್ಟೆ ನೋವೆಂದು ಅಳಲು ತೋಡಿಕೊಂಡ ಶಾಸಕ ಹೆಚ್​.ಡಿ.ರೇವಣ್ಣ

| Updated By: ಆಯೇಷಾ ಬಾನು

Updated on: May 09, 2024 | 12:30 PM

ಶಾಸಕ ಹೆಚ್.ಡಿ.ರೇವಣ್ಣ ಹೊಟ್ಟೆ ನೋವಿನಿಂದ ಬಳಲುತ್ತಿದ್ದಾರೆ. ಜೈಲಾಧಿಕಾರಿಗಳ ಬಳಿ ಹೊಟ್ಟೆ ನೋವೆಂದು ಅಳಲು ತೋಡಿಕೊಂಡಿದ್ದಾರೆ. 3-4 ಬಾರಿ ಹೊಟ್ಟೆ ನೋವೆಂದು ತಿಳಿಸಿದ್ರಿಂದ ಜೈಲ್ ಆಸ್ಪತ್ರೆ ವೈದ್ಯರು ರೇವಣ್ಣಗೆ ಚಿಕಿತ್ಸೆ ನೀಡಿದ್ದಾರೆ. ಇನ್ನು ಬೆಂಗಳೂರಿನ ಜನಪ್ರತಿನಿಧಿಗಳ ವಿಶೇಷ ಕೋರ್ಟ್ ಮಧ್ಯಾಹ್ನ 2.45ಕ್ಕೆ ಜಾಮೀನು ಅರ್ಜಿ ವಿಚಾರಣೆ ನಡೆಸಲಿದೆ.

ಜೈಲು ಅಧಿಕಾರಿಗಳ ಬಳಿ ಹೊಟ್ಟೆ ನೋವೆಂದು ಅಳಲು ತೋಡಿಕೊಂಡ ಶಾಸಕ ಹೆಚ್​.ಡಿ.ರೇವಣ್ಣ
ಹೆಚ್​ಡಿ ರೇವಣ್ಣ
Follow us on

ಬೆಂಗಳೂರು, ಮೇ.09: ಕಿಡ್ನ್ಯಾಪ್ ಕೇಸ್​ನಲ್ಲಿ ಜೈಲುಪಾಲಾಗಿರುವ ಶಾಸಕ ಹೆಚ್.ಡಿ.ರೇವಣ್ಣ (HD Revanna) ಅವರು ಹೊಟ್ಟೆ ನೋವಿನಿಂದ ಬಳಲುತ್ತಿದ್ದಾರೆ. ಜೈಲಾಧಿಕಾರಿಗಳ ಬಳಿ ಹೊಟ್ಟೆ ನೋವೆಂದು ಅಳಲು ತೋಡಿಕೊಂಡಿದ್ದಾರೆ. ಬೆಳಗ್ಗೆ ಪುಳಿಯೋಗರೆ ನೀಡಿದ್ರು H.D.ರೇವಣ್ಣ ತಿಂದಿಲ್ಲ. 3-4 ಬಾರಿ ಹೊಟ್ಟೆ ನೋವೆಂದು ತಿಳಿಸಿದ್ರಿಂದ ಜೈಲ್ ಆಸ್ಪತ್ರೆ ವೈದ್ಯರು ರೇವಣ್ಣಗೆ ಚಿಕಿತ್ಸೆ ನೀಡಿದ್ದಾರೆ ಎಂಬ ಮಾಹಿತಿ ಸಿಕ್ಕಿದೆ.

ಹಾಸನ ಸಂಸದ ಪ್ರಜ್ವಲ್​ ರೇವಣ್ಣ ಅಶ್ಲೀಲ ವಿಡಿಯೋ ಪ್ರಕರಣ ಸಾಕಷ್ಟು ಸದ್ದು ಮಾಡುತ್ತಿದೆ. ರಾಜ್ಯಪಾಲರನ್ನ ಭೇಟಿ ಮಾಡಿ ಜೆಡಿಎಸ್ ನಿಯೋಗ ದೂರು ನೀಡಲಿದೆ. ಮಧ್ಯಾಹ್ನ 3 ಗಂಟೆಗೆ ಕುಮಾರಸ್ವಾಮಿ ನೇತೃತ್ವದಲ್ಲಿ ರಾಜ್ಯಪಾಲರ ಭೇಟಿ ಆಗಲಿದ್ದಾರೆ. SIT ತನಿಖೆ ಪಾರದರ್ಶಕವಾಗಿ ನಡೆಯುತ್ತಿಲ್ಲವೆಂದು ರಾಜ್ಯಪಾಲರಿಗೆ ಕಂಪ್ಲೆಂಟ್ ಕೊಡಲಿದ್ದಾರೆ.

ಇನ್ನು ಪರಪ್ಪನ ಅಗ್ರಹಾರ ಜೈಲುಪಾಲಾಗಿರೋ ರೇವಣ್ಣಗೆ ಜಾಮೀನು ಸಿಗುತ್ತಾ? ಇಲ್ಲ ಮತ್ತೆ ಜೈಲೇ ಗಟ್ಟಿ ಆಗುತ್ತಾ ಅನ್ನೋ ಕುತೂಹಲ ಮೂಡಿದೆ. ರೇವಣ್ಣ ಬೇಲ್​​ ಅರ್ಜಿ ವಿಚಾರಣೆ ನಡೆಸಿರೋ ಕೋರ್ಟ್ ಮಧ್ಯಾಹ್ನಕ್ಕೆ ವಿಜಾರಣೆ ಮುಂದೂಡಿದೆ. ಇದೀಗ ಮತ್ತೆ ಬೆಂಗಳೂರಿನ ಜನಪ್ರತಿನಿಧಿಗಳ ವಿಶೇಷ ಕೋರ್ಟ್ ಮಧ್ಯಾಹ್ನ 2.45ಕ್ಕೆ ಜಾಮೀನು ಅರ್ಜಿ ವಿಚಾರಣೆ ನಡೆಸಲಿದೆ.

ಇದನ್ನೂ ಓದಿ:ಪರಪ್ಪನ ಅಗ್ರಹಾರ ಜೈಲಿನಲ್ಲಿ ಒಂದು ರಾತ್ರಿ ಕಳೆದ ರೇವಣ್ಣ: ಹೀಗಿದೆ ಐಷಾರಾಮಿ ರಾಜಕಾರಣಿಯ ಸೆರೆವಾಸ!

ಎಸ್ಐಟಿ ಪರ ವಾದ ಮಂಡನೆಗೆ ಸರ್ಕಾರ ಇಬ್ಬರು ಹೆಚ್ಚುವರಿ ವಿಶೇಷ ಅಭಿಯೋಜಕರನ್ನು ನೇಮಿಸಿದೆ. ಎಸ್​ಪಿಪಿಗಳಾಗಿ ಅಶೋಕ್ ಎನ್. ನಾಯಕ್, ಜಾಯನಾ ಕೊಥಾರಿ ನೇಮಕ ಮಾಡಲಾಗಿದೆ. ಇನ್ನು ಹೆಚ್.ಡಿ.ರೇವಣ್ಣ ಪರ ಸಿ.ವಿ.ನಾಗೇಶ್ ವಾದ ಮಂಡಿಸಿದ್ದಾರೆ. ಕಿಡ್ನ್ಯಾಪ್ ಪ್ರಕರಣದಲ್ಲಿ ಹೆಚ್.ಡಿ.ರೇವಣ್ಣ ಪಾತ್ರವಿಲ್ಲವೆಂದು ವಾದ ಮಾಡಿದ್ದಾರೆ. ಮಹಿಳೆ ಪತ್ತೆಯಾಗಿರುವ ಅಂಶ ಪ್ರಧಾನವಾಗಿ ಉಲ್ಲೇಖ ಮಾಡಿರುವ ಸಾಧ್ಯತೆ ಇದೆ. ಅನಾರೋಗ್ಯದ ಅಂಶಗಳನ್ನು ಪ್ರಸ್ತಾಪಿಸಿರುವ ಸಾಧ್ಯತೆ ಇದೆ. ಈಗಾಗಲೇ ಬಂಧನ ರಾಜಕೀಯ ಪ್ರೇರಿತ ಎಂದು ಹೆಚ್.ಡಿ.ರೇವಣ್ಣ ಹೇಳಿದ್ದಾರೆ.

ಈವರೆಗಿನ ತನಿಖೆ ಆಧರಿಸಿ ಎಸ್ಐಟಿ ಆಕ್ಷೇಪಣೆ ಸಲ್ಲಿಸಿದೆ. ಹೊಸದಾಗಿ ಎಸ್​ಪಿಪಿಗಳಾಗಿ ನೇಮಕಗೊಂಡಿದ್ದೇವೆ. ಸೋಮವಾರದವರೆಗೆ ಕಾಲಾವಕಾಶ ಕೋರಿ ಅಶೋಕ್ ಎನ್. ನಾಯಕ್, ಜಾಯನಾ ಕೊಥಾರಿ ಮನವಿ ಮಾಡಿದ್ದಾರೆ. ಮೊದಲು ಆಕ್ಷೇಪಣೆ ಸಲ್ಲಿಸಿ, ಮಧ್ಯಾಹ್ನದವರೆಗೆ ಕಾಲಾವಕಾಶ ನೀಡುತ್ತೇವೆ. ಹೊಸದಾಗಿ ಎಸ್​ಪಿಪಿ ಆದಾಗಲೆಲ್ಲಾ ವಿಚಾರಣೆ ಮುಂದೂಡಲಾಗಲ್ಲ ಎಂದು ವಿಚಾರಣೆಯನ್ನು ಮಧ್ಯಾಹ್ನ 2.45ಕ್ಕೆ ಮುಂದೂಡಿ ಜಡ್ಜ್ ಸಂತೋಷ್ ಗಜಾನನ ಭಟ್ ಅವರು ಸೂಚನೆ ನೀಡಿದ್ದಾರೆ.

ರಾಜ್ಯದ ಪ್ರಮುಖ ಸುದ್ದಿಗಳನ್ನು ಓದಲು ಇದರ ಮೇಲೆ ಕ್ಲಿಕ್ ಮಾಡಿ