ವಿದ್ಯಾರ್ಥಿಗಳ ಮತಾಂತರಕ್ಕೆ ಯತ್ನ ಆರೋಪ; ಯುವಕನನ್ನು ಥಳಿಸಿ ಪೊಲೀಸರಿಗೊಪ್ಪಿಸಿದ ಹಿಂದೂ ಕಾರ್ಯಕರ್ತರು

| Updated By: ಆಯೇಷಾ ಬಾನು

Updated on: Mar 18, 2022 | 4:29 PM

ಹಾಸನ ನಗರದ ಗಂಧದ ಕೋಠಿ ಸರ್ಕರಿ ಮಹಿಳಾ ಪದವಿ ಪೂರ್ವ ಹಾಗೂ ಪದವಿ ಕಾಲೇಜುಗಳ ಸಾವಿರಾರು ವಿದ್ಯಾರ್ಥಿಗಳಿಗೆ ಕರಪತ್ರ ಹಂಚಿಕೆ ಮಾಡುತ್ತಿದ್ದ ಹಾಗೂ ಕ್ರೈಸ್ತ ಧರ್ಮದ ಕುರಿತ ಪುಸ್ತಕ ನೀಡಿ ಮತಾಂತರಕ್ಕೆ ಯತ್ನಿಸುತ್ತಿದ್ದ ಯುವಕನನ್ನು ಹಿಂದೂ ಕಾರ್ಯಕರ್ತರು ಪೊಲೀಸರಿಗೊಪ್ಪಿಸಿದ್ದಾರೆ.

ವಿದ್ಯಾರ್ಥಿಗಳ ಮತಾಂತರಕ್ಕೆ ಯತ್ನ ಆರೋಪ; ಯುವಕನನ್ನು ಥಳಿಸಿ ಪೊಲೀಸರಿಗೊಪ್ಪಿಸಿದ ಹಿಂದೂ ಕಾರ್ಯಕರ್ತರು
ವಿದ್ಯಾರ್ಥಿಗಳನ್ನು ಮತಾಂತರಕ್ಕೆ ಯತ್ನ ಆರೋಪ; ಯುವಕನನ್ನು ಥಳಿಸಿ ಪೊಲೀಸರಿಗೊಪ್ಪಿಸಿದ ಹಿಂದೂ ಕಾರ್ಯಕರ್ತರು
Follow us on

ಹಾಸನ: ವಿದ್ಯಾರ್ಥಿಗಳನ್ನು ಮತಾಂತರ(Convert) ಮಾಡಲು ಯತ್ನ ನಡೆಯುತ್ತಿದೆ ಎಂಬ ಆರೋಪ ಕೇಳಿ ಬಂದಿದೆ. ಮತಾಂತರಕ್ಕೆ ಯತ್ನಿಸಿದ ಯುವಕನನ್ನು ಪೊಲೀಸರು ವಶಕ್ಕೆ ಪಡೆದಿದ್ದಾರೆ. ಯುವಕನನ್ನ ಹಿಂದೂ ಕಾರ್ಯಕರ್ತರು(Hindu Activists) ಹಿಗ್ಗಾಮುಗ್ಗ ಥಳಿಸಿ ಪೊಲೀಸರಿಗೊಪ್ಪಿಸಿದ್ದಾರೆ.

ಹಾಸನ ನಗರದ ಗಂಧದ ಕೋಠಿ ಸರ್ಕರಿ ಮಹಿಳಾ ಪದವಿ ಪೂರ್ವ ಹಾಗೂ ಪದವಿ ಕಾಲೇಜುಗಳ ಸಾವಿರಾರು ವಿದ್ಯಾರ್ಥಿಗಳಿಗೆ ಕರಪತ್ರ ಹಂಚಿಕೆ ಮಾಡುತ್ತಿದ್ದ ಹಾಗೂ ಕ್ರೈಸ್ತ ಧರ್ಮದ ಕುರಿತ ಪುಸ್ತಕ ನೀಡಿ ಮತಾಂತರಕ್ಕೆ ಯತ್ನಿಸುತ್ತಿದ್ದ ಯುವಕನನ್ನು ಹಿಂದೂ ಕಾರ್ಯಕರ್ತರು ಪೊಲೀಸರಿಗೊಪ್ಪಿಸಿದ್ದಾರೆ. ಯುವಕ ವಿದ್ಯಾರ್ಥಿನಿಯರನ್ನು ಟಾರ್ಗೆಟ್ ಮಾಡಿ ಮತಾಂತರಕ್ಕೆ ಯತ್ನಿಸುತ್ತಿದ್ದ ಎನ್ನಲಾಗಿದೆ. ವಿದ್ಯಾರ್ಥಿನಿಯರಿಗೆ ಕರಪತ್ರ ಹಂಚುವ ವೇಳೆ ಕೆಲವರು ಯುವಕನನ್ನು ಹಿಡಿದು ಗುಂಪುಕಟ್ಟಿ ಥಳಿಸಿದ್ದಾರೆ. ಭಜರಂಗಿ ಹಿಂಂದೂ‌ ಸಂಘಟನೆ ಕಾರ್ಯಕರ್ತರು ಯುವಕನನ್ನು ಹಿಗ್ಗಾಮುಗ್ಗ ಥಳಿಸಿ ಪೊಲೀಸರಿಗೆ ಒಪ್ಪಿಸಿದ್ದಾರೆ. ಜೊತೆಗೆ ಯುವಕನ ಬಳಿಯಿದ್ದ ನೂರಾರು ಪುಸ್ತಕಗಳನ್ನು ವಶಕ್ಕೆ ಪಡೆದಿದ್ದಾರೆ. ಹಾಸನ ನಗರ ಠಾಣೆ ವ್ಯಾಪ್ತಿಯಲ್ಲಿ ಘಟನೆ ನಡೆದಿದೆ.

ಸರ್ಕಾರಿ ಬಾಲಕಿಯರ ಕಾಲೇಜುಗಳನ್ನೇ ಟಾರ್ಗೆಟ್ ಮಾಡಿ ಕ್ರೈಸ್ತ ಧರ್ಮಕ್ಕೆ ಮತಾಂತರ ಕ್ಕೆ ಯತ್ನಿಸುತ್ತಿದ್ದ ಆರೋಪದಲ್ಲಿ ಯುವಕನೊಬ್ಬನ್ನ ಹಿಡಿದು ಜನರೆ ಪೊಲೀಸರಿಗೊಪ್ಪಿಸಿದ್ದಾರೆ. ಹಾಸನದ ಯುವಕ ಮನು ಎಂಬಾತ ಕಳೆದ ಮೂರು ದಿನಗಳಿಂದ ಆರ್.ಸಿ ರಸ್ತೆಯಲ್ಲಿರುವ ಎರಡು ಬಾಲಕಿಯರ ಸರ್ಕಾರಿ ಪದವಿಪೂರ್ವ ಕಾಲೇಜು ಹಾಗು ಒಂದು ಮಹಿಳಾ ಪದವಿ ಕಾಲೇಜು ವಿದ್ಯಾರ್ಥಿಗಳಿಗೆ ಮತಾಂತರಕ್ಕೆ ಪ್ರಚೋದಿಸೋ ರೀತಿಯ ಪುಸ್ತಕ ಹಂಚುತ್ತಿದ್ದ ಎಂದು ಆರೋಪಿಸಿ ಹಾಸನದ ಭಜರಂಗಿ ಹಿಂದೂ ಪರಿಷತ್ ಕಾರ್ಯಕರ್ತರು ಆತ ಬುಕ್ ಹಂಚುವಾಗಲೆ ಹಿಡಿದು ಪ್ರಶ್ನೆ ಮಾಡಿದ್ದಾರೆ. ಆತನಿಗೆ ಧರ್ಮದೇಟು ನೀಡಿ ಪುಸ್ತಕಗಳನ್ನು ವಶಕ್ಕೆ ಪಡೆದು ಈ ಹಿಂದೆ ಕೂಡ ನೀನು ಇದೇ ರೀತಿಯಲ್ಲಿ ಮಾಡಿದ್ದೆ ಆಗ ನಾವು ಎಚ್ಚರಿಕೆ ನೀಡಿದೆವು ಆದ್ರೆ ಮತ್ತೆ ಅದನ್ನ ಮಾಡುತ್ತಿದ್ದೀಯಾ ಎಂದು ಆಕ್ರೋಶ ಹೊರ ಹಾಕಿದ್ರು, ಈ ಬಗ್ಗೆ ಹಾಸನ ನಗರ ಠಾಣೆಗೆ ದೂರು ನೀಡೋದಾಗಿ ತಿಳಿಸಿದ ಸಂಘಟನೆ ಮುಖಂಡ ಮಧುರವರು, ಇಂತಹ ಘಟನೆಗಳು ಮತ್ತೆ ಮತ್ತೆ ಆಗುತ್ತಿವೆ ಈ ಬಗ್ಗೆ ಕ್ರಮ ಆಗಬೇಕು ಎಂದು ಒತ್ತಾಯ ಮಾಡಿದ್ದಾರೆ. ಈ ಬಗ್ಗೆ ಸ್ವತಃ ಮಾತನಾಡಿರೋ ಯುವಕ ಮನು ನಾನು ಮತಾಂತರಕ್ಕೆ ಯತ್ನ ಮಾಡಿಲ್ಲ. ಕೇವಲ ಕೆಟ್ಟ ಕೆಲಸ ಮಾಡಬಾರದು ಎಂದು ಜಾಗೃತಿ ಮೂಡಿಸೋ ರೀತಿಯ ಮಾಹಿತಿ ಹೊಂದಿರೋ ಪುಸ್ತಕ ಹಂಚಿದ್ದೇನೆ ಎಂದು ತನ್ನ ಮೇಲಿನ ಆರೋಪ ಅಲ್ಲಗಳೆದಿದ್ದಾನೆ.

ಇದನ್ನೂ ಓದಿ: ಅಪ್ಪು ಹುಟ್ಟುಹಬ್ಬ ಮಾಡುವಾಗ ಕುಸಿದು ಬಿದ್ದಿದ್ದ ಅಭಿಮಾನಿ ಹೃದಯಾಘಾತದಿಂದ ಸಾವು; ಅಯ್ಯೋ ವಿಧಿಯೇ..

Hampi: ವಿಶ್ವ ಪರಂಪರೆಯ ತಾಣವಾದ ವಿಜಯನಗರ ಸಾಮ್ರಾಜ್ಯದ ಮೇಲೆ ಕಣ್ಣಿಟ್ಟ ಜಿಯೋ! ಹಂಪಿಯಲ್ಲಿನ್ನು ನೈಜ 4G ಡಿಜಿಟಲ್ ಲೈಫ್‌!

Published On - 2:26 pm, Fri, 18 March 22