ಹಾಸನ, ಆ.15: ಕೆರೆಯಲ್ಲಿ ಮುಳುಗಿ ಓರ್ವ ಅಪ್ರಾಪ್ತ ಸೇರಿ ಇಬ್ಬರು ದಾರುಣವಾಗಿ ಸಾವನ್ನಪ್ಪಿದ ಘಟನೆ ಹಾಸನ ಜಿಲ್ಲೆಯ ಬೇಲೂರು(Belur) ತಾಲ್ಲೂಕಿನ ಬಳ್ಳೂರು ಗ್ರಾಮದ ದೊಡ್ಡಕೆರೆಯಲ್ಲಿ ನಡೆದಿದೆ. ಶ್ರೀಕಾಂತ್ (15) ಹಾಗೂ ವಿಜಯ್ (18) ಮೃತ ದುರ್ದೈವಿಗಳು. ಕೆರೆಗೆ ಮೀನು ಹಿಡಿಯಲು ತೆರಳಿದ್ದ ವೇಳೆ ದಿಢೀರ್ ಮಳೆ ಬಂದಿದೆ. ತಕ್ಷಣ ರಕ್ಷಣೆ ಪಡೆಯಲು ಕೆರೆಯ ಪಕ್ಕದಲ್ಲಿದ್ದ ಮರದ ಕೆಳಗೆ ಇಬ್ಬರು ನಿಂತಿದ್ದರು.
ಈ ಸಂದರ್ಭದಲ್ಲಿ ವಿಜಯ್ ಎಂಬಾತನ ಒಂದು ಕಾಲಿನ ಚಪ್ಪಲಿ ಕೆರೆಗೆ ಬಿದ್ದಿದ್ದು, ಶ್ರೀಕಾಂತ್ ಚಪ್ಪಲಿ ತೆಗೆದುಕೊಳ್ಳಲು ನೀರಿಗೆ ಇಳಿದಿದ್ದಾನೆ. ಕೆರೆಯಲ್ಲಿ ಹೂಳು, ಗಿಡ, ಗಂಟೆಗಳು ಬೆಳೆದಿದ್ದರಿಂದ ಕೆರೆಯ ನೀರಲ್ಲಿ ಶ್ರೀಕಾಂತ್ ಸಿಲುಕಿ ಒದ್ದಾಡಿದ್ದಾನೆ. ಕೂಡಲೇ ಶ್ರೀಕಾಂತ್ ರಕ್ಷಣೆಗೆ ವಿಜಯ್ ತೆರಳಿದ್ದು, ಈಜು ಬಾರದಿದ್ದರಿಂದ ಕೆರೆಯಲ್ಲಿ ಮುಳುಗಿ ಇಬ್ಬರು ಅಸುನೀಗಿದ್ದಾರೆ. ಇದೀಗ ಮುಳುಗು ತಜ್ಞರು ಸ್ಥಳಕ್ಕಾಗಮಿಸಿ ಇಬ್ಬರ ಮೃತದೇಹವನ್ನ ಹೊರತೆಗೆಯಲಾಗಿದೆ. ಇನ್ನು ಮಕ್ಕಳನ್ನು ಕಳೆದುಕೊಂಡು ಪೋಷಕರ ಆಕ್ರಂದನ ಮುಗಿಲು ಮುಟ್ಟಿದ್ದು, ಬೇಲೂರು ಪೊಲೀಸ್ ಠಾಣೆ ವ್ಯಾಪ್ತಿಯಲ್ಲಿ ಘಟನೆ ನಡೆದಿದೆ.
ಇದನ್ನೂ ಓದಿ:ಆನ್ಲೈನ್ ಗೇಮ್ ಗೀಳಿಗೆ ಕುಟುಂಬವೇ ಸರ್ವನಾಶ! ಸಾಲಗಾರರ ಕಾಟಕ್ಕೆ ಹೆದರಿ ಮಗಳು, ಮಡದಿಯೊಂದಿಗೆ ಆತ್ಮಹತ್ಯೆ
ಆನೇಕಲ್: ಗ್ಯಾರೇಜ್ನಿಂದ ಮನೆಗೆ ಟಾಟಾ ಇಂಡಿಕಾ ಕಾರು ತರುವಾಗ ಹೊತ್ತಿ ಉರಿದ ಘಟನೆ ಆನೇಕಲ್ನ ಕೋರ್ಟ್ ಹಿಂಭಾಗದಲ್ಲಿ ನಡೆದಿದೆ. ಕೋರ್ಟ್ ಹಿಂಭಾಗದ ಸರ್ಕಾರಿ ಸಾರ್ವಜನಿಕ ಬಾಲಕರ ವಿಧ್ಯಾರ್ಥಿ ನಿಲಯದ ಬಳಿ ಬರುತ್ತಿದ್ದಂತೆ ಧಿಡೀರನೆ ಕಾರಿನಲ್ಲಿ ಬೆಂಕಿ ಕಾಣಿಸಿಕೊಂಡು ಕೆಲವೇ ಕ್ಷಣಗಳಲ್ಲಿ ಧಗಧಗನೇ ಸುಟ್ಟು ಕರಕಲಾಗಿದೆ. ಕಾರಿನಿಂದ ಇಳಿದು ಚಾಲಕ ಬಚಾವ್ ಆಗಿದ್ದಾನೆ. ಗ್ಯಾರೇಜ್ ನಿಂದ ಮನೆಗೆ ತೆಗೆದುಕೊಂಡು ಬರುವಾಗ ಈ ಘಟನೆ ನಡೆದಿದೆ. ಸ್ಥಳಕ್ಕೆ ಅಗ್ನಿಶಾಮಕ ಠಾಣಾ ತಂಡ ಆಗಮಿಸಿ ಬೆಂಕಿ ನಂದಿಸಿದ್ದಾರೆ.
ರಾಜ್ಯದ ಮತ್ತಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ
Published On - 7:27 pm, Thu, 15 August 24