ದೋಷ ನಿವಾರಣೆ ಪೂಜೆಗೆಂದು ಬಂದಿದ್ದ ಮಹಿಳೆ ಮೇಲೆ ಅತ್ಯಾಚಾರ, ದೇಗುಲದ ಪೂಜಾರಿ ಅರೆಸ್ಟ್

| Updated By: ಕಿರಣ್ ಹನುಮಂತ್​ ಮಾದಾರ್

Updated on: Jul 30, 2024 | 10:00 PM

ಇತ್ತೀಚೆಗೆ ಅತ್ಯಾಚಾರ ಪ್ರಕರಣಗಳು ಹೆಚ್ಚಾಗಿ ಬೆಳಕಿಗೆ ಬರುತ್ತಿವೆ. ಅದರಂತೆ ಇದೀಗ ಮಹಿಳೆ ಮೇಲೆ ಆತ್ಯಾಚಾರವೆಸಗಿದ್ದ ಆರೋಪದಡಿ ಹಾಸನ ಜಿಲ್ಲೆಯ ಅರಸೀಕೆರೆಯಲ್ಲಿರುವ ಪ್ರಸಿದ್ದ ಪುರದಮ್ಮ ದೇವಾಲಯದ ಪೂಜಾರಿ ದಯಾನಂದ್(39) ಎಂಬಾತನನ್ನು ಬಾಗಲಗುಂಟೆ ಠಾಣೆಯ ಪೊಲೀಸರು(Bagalgunte Police Station) ಬಂಧಿಸಿದ್ದಾರೆ.

ದೋಷ ನಿವಾರಣೆ ಪೂಜೆಗೆಂದು ಬಂದಿದ್ದ ಮಹಿಳೆ ಮೇಲೆ ಅತ್ಯಾಚಾರ, ದೇಗುಲದ ಪೂಜಾರಿ ಅರೆಸ್ಟ್
ಪೂಜಾರಿ ಅರೆಸ್ಟ್
Follow us on

ಬೆಂಗಳೂರು, ಜು.30: ಮಹಿಳೆ ಮೇಲೆ ಆತ್ಯಾಚಾರವೆಸಗಿದ್ದ ಆರೋಪದಡಿ ಹಾಸನ ಜಿಲ್ಲೆಯ ಅರಸೀಕೆರೆಯಲ್ಲಿರುವ ಪುರದಮ್ಮ
ದೇವಾಲಯದ ಪೂಜಾರಿ ದಯಾನಂದ್(39) ಎಂಬಾತನನ್ನು ಬಾಗಲಗುಂಟೆ ಠಾಣೆಯ ಪೊಲೀಸರು(Bagalgunte Police Station) ಬಂಧಿಸಿದ್ದಾರೆ. ಕೆಲ ದಿನಗಳ ಹಿಂದೆ ದೋಷ ನಿವಾರಣೆಗಾಗಿ ಪೂಜೆ ಮಾಡುತ್ತೇನೆಂದು ಹಣ ಪಡೆದಿದ್ದ ಪೂಜಾರಿ, ಬಳಿಕ ಮಹಿಳೆ ಕರೆಸಿಕೊಂಡು ಆತ್ಯಾಚಾರ ಮಾಡಿರುವ ಆರೋಪ ಕೇಳಿಬಂದಿತ್ತು. ಈ ಕುರಿತು ಮಹಿಳೆ ನೀಡಿದ ದೂರಿನ್ವಯ ಬಾಗಲಗುಂಟೆ ಠಾಣೆಯಲ್ಲಿ ಆತ್ಯಾಚಾರ ಪ್ರಕರಣ ದಾಖಲಾಗಿತ್ತು. ಈ ಸಂಬಂಧ ಇದೀಗ ಆರೋಪಿ ದಯಾನಂದ್​ನನ್ನು ಪೊಲೀಸರು ಬಂಧಿಸಿದ್ದಾರೆ.

ಘಟನೆ ವಿವರ

ಮಾಂತ್ರಿಕನಾಗಿದ್ದ ಮತ್ತು ಹಸ್ತರೇಖೆ ನೋಡಿ ಜ್ಯೋತಿಷ್ಯ ಹೇಳ್ತಿದ್ದ ಆರೋಪಿ ದಯಾನಂದ್

ಅರಸೀಕೆರೆ ಬಳಿಯ ಗೊಲ್ಲರಹಳ್ಳಿ ಕುರುಗುಂದ ಗ್ರಾಮ ಪಂಚಾಯಿತಿಯ ಸದಸ್ಯನಾಗಿರುವ ಆರೋಪಿ ದಯಾನಂದ್, 26 ವರ್ಷದ ಯುವತಿ ಪುರದಮ್ಮ ದೇವಸ್ಥಾನಕ್ಕೆ ಹೋಗಿದಾಗ ಪರಿಚಯ ಮಾಡಿಕೊಂಡಿದ್ದ. ಮಾಂತ್ರಿಕನಾಗಿದ್ದ ಮತ್ತು ಹಸ್ತರೇಖೆ ನೋಡಿ ಜ್ಯೋತಿಷ್ಯ ಹೇಳುತ್ತಿದ್ದ ಪೂಜಾರಿ ದಯಾನಂದ್‌ಗೆ ಮದುವೆಯಾಗಿ ಎರಡು ಮಕ್ಕಳಿದ್ದಾರೆ. ಇನ್ನು ಯುವತಿಗೆ ಮದುವೆಯ‌ಾಗುವ ಕಂಟಕವಿದೆ‌ ಎಂದು ದಯಾನಂದ್ ಹೇಳಿದ್ದಾನೆ. ಯುವತಿಯಿಂದ ಆಗಾಗ ಹಣ ಪಡೆಯುತ್ತಿದ್ದ ಪೂಜಾರಿ ಕಂ ಜ್ಯೋತಿಷಿ. ಒಂದು‌ ಲಕ್ಷಕ್ಕಿಂತ ಹೆಚ್ಚು ಹಣ ಪಡೆದಿದ್ದ ಆರೋಪ ದಯಾನಂದ್ ಮೇಲಿದೆ. ಜೊತೆಗೆ ನಗ್ನ ವಿಡಿಯೋ ಫೋಟೋಗಳನ್ನು ಇಟ್ಟುಕೊಂಡಿದ್ದ ಆರೋಪಿ. ನಂತರ ಹಣ ನೀಡದೆ ಇದ್ದಲ್ಲಿ ಆ ಫೋಟೋ ವಿಡಿಯೋವನ್ನು ಸೋಷಿಯಲ್ ಮಿಡಿಯಾದಲ್ಲಿ ಹರಿಬಿಡುವುದಾಗಿ ಬ್ಲಾಕ್ ಮೇಲ್ ಮಾಡಿದ್ದಾನಂತೆ. ಈ ಕುರಿತು ಸಂತ್ರಸ್ಥೆ ಬಾಗಲಗುಂಟೆ ಪೊಲೀಸ್ ಠಾಣೆಗೆ ದೂರು ನೀಡಿದ್ದರು.
ಸದ್ಯ ಪೊಲೀಸರು ಆರೋಪಿಯನ್ನು ಬಂಧಿಸಿದ್ದಾರೆ.

ನಂದಿನಿ ಲೇಔಟ್​ನಲ್ಲಿ ಅಪರಿಚಿತ ವ್ಯಕ್ತಿ ಶವ ಪತ್ತೆ

ಬೆಂಗಳೂರು: ನಗರದ ನಂದಿನಿ ಲೇಔಟ್​ನಲ್ಲಿ ನೇಣು ಬಿಗಿದ ಸ್ಥಿತಿಯಲ್ಲಿ ಅಪರಿಚಿತ ವ್ಯಕ್ತಿಯ ಶವವೊಂದು ಪತ್ತೆಯಾಗಿದೆ. ಮೃತದೇಹವನ್ನು ಎಂಎಸ್ ರಾಮಯ್ಯ ಆಸ್ಪತ್ರೆಗೆ ರವಾನೆ ಮಾಡಲಾಗಿದ್ದು, ಆತ್ಮಹತ್ಯೆಯೋ, ಕೊಲೆಯೋ ಎನ್ನುವುದು ಇನ್ನು ತಿಳಿದು ಬಂದಿಲ್ಲ. ನಂದಿನಿ ಲೇಔಟ್ ಪೊಲೀಸ್ ಠಾಣೆಯಲ್ಲಿ ಅಸಹಜ ಸಾವು ಪ್ರಕರಣ ಎಂದು ದಾಖಲಾಗಿದ್ದು, ತನಿಖೆ ನಡೆಸುತ್ತಿದ್ದಾರೆ.

ಇದನ್ನೂ ಓದಿ:ಮಹಿಳೆಗೆ ಮಂಪರು ಔಷಧ ನೀಡಿ, ಸಹಚರನ ಜತೆ ಸೇರಿ ರಿಯಲ್​ ಎಸ್ಟೇಟ್​ ಉದ್ಯಮಿಯಿಂದ ಅತ್ಯಾಚಾರ

ಸಾಲಬಾದೆ ತಾಳಲಾರದೆ ರೈತ ಆತ್ಮಹತ್ಯೆಗೆ ಶರಣು

ಯಾದಗಿರಿ: ಹುಣಸಗಿ ತಾಲೂಕಿನ ಅಗ್ನಿ ಗ್ರಾಮದಲ್ಲಿ ಸಾಲಭಾದೆ ತಾಳಲಾರದೆ ರೈತನೋರ್ವ ಸಾವನ್ನಪ್ಪಿದ ಘಟನೆ ನಡೆದಿದೆ. ಗುರಪ್ಪ ಸಗರ(40) ಆತ್ಮಹತ್ಯೆ ಮಾಡಿಕೊಂಡ ರ್ದುದೈವಿ. ಕರ್ಣಾಟಕ ಬ್ಯಾಂಕ್​ನಲ್ಲಿ 7 ಲಕ್ಷ ರೂ. ಸಾಲ ಮಾಡಿದ್ದ ಗುರಪ್ಪ, ಬಾಕಿ‌ ಮೊತ್ತ ಸೇರಿ 16 ಲಕ್ಷ ರೂ. ಪಾವತಿಸುವಂತೆ ಬ್ಯಾಂಕ್ ನೋಟಿಸ್ ನೀಡಿತ್ತು. ನೋಟಿಸ್ ನೋಡಿ ರೈತ ನೇಣಿಗೆ ಶರಣಾಗಿದ್ದಾನೆ. ಈ ಕುರಿತು ಕೆಂಭಾವಿ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಪ್ರಕರಣ ದಾಖಲಾಗಿದೆ.

ರಾಜ್ಯದ ಮತ್ತಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ

Published On - 9:48 pm, Tue, 30 July 24